ಬಾಲಕನ ಪೋಷಕರ ಪತ್ತೆಗಾಗಿ ಮನವಿ

ಬಾಲಕನ ಪೋಷಕರ ಪತ್ತೆಗಾಗಿ ಮನವಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಾಲಕನ ಪೋಷಕರ ಪತ್ತೆಗಾಗಿ ಮನವಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಾಲಕನ ಪೋಷಕರ ಪತ್ತೆಗಾಗಿ ಮನವಿ
ಲಿಂಕ್ : ಬಾಲಕನ ಪೋಷಕರ ಪತ್ತೆಗಾಗಿ ಮನವಿ

ಓದಿ


ಬಾಲಕನ ಪೋಷಕರ ಪತ್ತೆಗಾಗಿ ಮನವಿ


ಕೊಪ್ಪಳ ಜು. 10 (ಕರ್ನಾಟಕ ವಾರ್ತೆ): ಕೊಪ್ಪಳದ ವಿಜಯನಗರ ಬಡಾವಣೆ ಹತ್ತಿರ ಜು. 06 ರಂದು ಸುಮಾರು 14 ವರ್ಷ ವಯಸ್ಸಿನ ಬುದ್ದಿಮಾಂದ್ಯ ಬಾಲಕನು ಪತ್ತೆಯಾಗಿದ್ದು, ಬಾಲಕನ ಪೋಷಕರ ಪತ್ತೆಗಾಗಿ ಸಹಕರಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
    ವಿಜಯನಗರ ಬಡಾವಣೆ ಹತ್ತಿರ ಜು. 06 ರಂದು ಬೆಳಿಗ್ಗೆ 6-45 ಗಂಟೆ ಸುಮಾರಿಗೆ ಅಂದಾಜು 14 ವರ್ಷ ವಯಸ್ಸಿನ ಬುದ್ದಿಮಾಂದ್ಯ ಬಾಲಕ ತಿರುಗಾಡುತ್ತಿದ್ದನ್ನು ಗಮನಿಸಿದ ಸುನೀಲ್‍ಕುಮಾರ ಎ.ಎಂ ವೈದ್ಯಕೀಯ ವಿಜ್ಞಾನ ಸಂಸ್ಥೆ ಕೊಪ್ಪಳ ಅವರು, ಬಾಲಕನ್ನು ರಕ್ಷಣೆ ಮಾಡಿ, ಬಾಲಮಂದಿರಕ್ಕೆ ದಾಖಲಿಸಿರುತ್ತಾರೆ.  ಬಾಲಕನನ್ನು ಸಮಾಲೋಚಿಸಿದಾಗ ಬಾಲಕನು ಮಾನಸಿಕ ಅಸಾಮಾನ್ಯ ಮತ್ತು ಪೋಷಕರ ನಿರ್ಲಕ್ಷ್ಯತನದಿಂದ ಮನೆ ಬಿಟ್ಟಿರಬಹುದು.  ಈ ಬಾಲಕನು ಬುದ್ದಿಮಾಂದ್ಯನಾಗಿದ್ದು, ಮಾತನಾಡಲು ಸಹ ಬಂದಿರುವುದಿಲ್ಲ ಎಂಬುದನ್ನು ಗಮನಿಸಲಾಗಿದೆ.  ಬಾಲಕನನ್ನು ಜಿಲ್ಲಾ ಆಸ್ಪತ್ರೆ ಮಾನಸಿಕ ತಜ್ಞರಲ್ಲಿ ಆರೋಗ್ಯ ತಪಾಸಣೆ ಮಾಡಿಸಿದಾಗ ವೈದ್ಯರು, ಬಾಲಕನು ಬುದ್ದಿಮಾಂದ್ಯನಾಗಿರುತ್ತಾನೆ ಎಂಬುದಾಗಿ ವರದಿ ನೀಡಿದ್ದಾರೆ.
ಬಾಲಕನ ವಿವರ : ಬಾಲಕನಿಗೆ ಮಾತನಾಡಲು ಬಾರದೇ ಇದ್ದ ಕಾರಣ ಬಾಲಕನ ಹಾಗೂ ಪೊಷಕರ ಹೆಸರು ತಿಳಿದು ಬಂದಿರುವುದಿಲ್ಲ.  ಬಾಲಕನಿಗೆ ಮಾತನಾಡಲು ಬರುವುದಿಲ್ಲ ಆದರೆ ಕನ್ನಡ ಮತ್ತು ಹಿಂದಿ ಭಾಷೆಗೆ ಸ್ಪಂದಿಸುತ್ತಾನೆ.  ಜಾತಿ ಮುಸ್ಲಿಂ ಎಂದು ಊಹಿಸಬಹುದಾಗಿದೆ.  ಅಂದಾಜು 14 ವರ್ಷ, ತೂಕ-28 ಕೆ.ಜಿ., 147 ಸೆಂ.ಮೀ. ಎತ್ತರ, ಕೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಮುಖದ ಎಡ ಬಾಗದಲ್ಲಿ ಕಲೆಯ ಗುರುತು ಮತ್ತು ತೆಲೆಯ ಹಿಂಭಾಗದಲ್ಲಿ ಗಾಯದ ಕಲೆಗಳ ಗುರುತುಗಳಿವೆ.  ಬಾಲಕನು ಸದ್ಯ ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸರಕಾರಿ ಬಾಲಕರ ಬಾಲಮಂದಿರ (ವಿಜಯನಗರ ಬಡಾವಣೆ, ಅನ್ನಪೂರ್ಣೇಶ್ವರಿ ದೇವಸ್ಥಾನ ಹಿಂದುಗಡೆ ಕಿನ್ನಾಳ ರಸ್ತೆ ಕೊಪ್ಪಳ ದೂ.ಸಂ. 08539-225030 7259351515, 9972524215,) ಇಲ್ಲಿ ಇದ್ದು, ಬಾಲಕನ ಪೋಷಕರ ಪತ್ತೆಗಾಗಿ ಸಹಕರಿಸುವಂತೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ಕೋರಿದ್ದಾರೆ.


ಹೀಗಾಗಿ ಲೇಖನಗಳು ಬಾಲಕನ ಪೋಷಕರ ಪತ್ತೆಗಾಗಿ ಮನವಿ

ಎಲ್ಲಾ ಲೇಖನಗಳು ಆಗಿದೆ ಬಾಲಕನ ಪೋಷಕರ ಪತ್ತೆಗಾಗಿ ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಕನ ಪೋಷಕರ ಪತ್ತೆಗಾಗಿ ಮನವಿ ಲಿಂಕ್ ವಿಳಾಸ https://dekalungi.blogspot.com/2018/07/blog-post_61.html

Subscribe to receive free email updates:

0 Response to "ಬಾಲಕನ ಪೋಷಕರ ಪತ್ತೆಗಾಗಿ ಮನವಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ