ಶೀರ್ಷಿಕೆ : ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್"
ಲಿಂಕ್ : ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್"
ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್"
ಕೊಪ್ಪಳ ಜು. 26 (ಕರ್ನಾಟಕ ವಾರ್ತೆ): ಮಾಜಿ ಸೈನಿಕರು ಹಾಗೂ ಅವಲಂಭಿತರ ಪಿಂಚಿಣಿಯ ಬಗ್ಗೆ ಇರುವ ತೊಂದರೆಯನ್ನು ನಿವಾರಿಸಲು "ಪಿಂಚಣಿ ಅದಾಲತ್"ನ್ನು ಮೈಸೂರಿನಲ್ಲಿ ಆಯೋಜಿಸಲಾಗಿದ್ದು, ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರು ಹಾಗೂ ಅವಲಂಭಿತರು ಭಾಗವಹಿಸಬಹುದಾಗಿದೆ.
"ಪಿಂಚಣಿ ಅದಾಲತ್" ಆಗಸ್ಟ್. 23 ಮತ್ತು 24 ರಂದು ಮೈಸೂರಿನಲ್ಲಿ ನಡೆಯಲಿದೆ. ಪಿಂಚಣಿಯಲ್ಲಿ ತಾರತಮ್ಯ ಇರುವ ಮಾಜಿ ಸೈನಿಕರು ಮತ್ತು ಅವರ ಅವಲಂಭಿತರು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ಇವರಲ್ಲಿ ಅರ್ಜಿ ಫಾರಂ ಅನ್ನು ತುಂಬಿ ಎಸ್.ಕೆ. ಶರ್ಮಾ, ದಿ ಪೆನ್‍ಷನ್ ಅದಾಲತ್ ಆಫೀಸರ್, ಆಫೀಸ್ ಆಪ್ ದಿ ಪಿ.ಸಿ.ಡಿ.ಎ (ಪೆನ್‍ಷನ್) ದ್ರುಪಾದಿ ಘಾಟ, ಅಲಹಬಾದ್-211014, ಇ-ಮೇಲ್ ಛಿಜಚಿ-ಚಿಟbಜ@.ಟಿiಛಿ.iಟಿ ಫ್ಯಾಕ್ಸ್ ನಂ. 0532-2421873, ಇಲ್ಲಿಗೆ ಸಲ್ಲಿಸಬೇಕು ಎಂದು ಬಾಗಲಕೋಟ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಜಿ ಸೈನಿಕರ ಹಾಗೂ ಅವಲಂಭಿತರ ಪಿಂಚಣಿ : ಯಾವುದೇ ತೊಂದರೆ ಇದಲ್ಲಿ ಸಂಪರ್ಕಿಸಿ
************************
ಕೊಪ್ಪಳ ಜು. 25 (ಕರ್ನಾಟಕ ವಾರ್ತೆ): ಮಾಜಿ ಸೈನಿಕರು, ಮಾಜಿ ಸೈನಿಕರ ಪತ್ನಿ ಹಾಗೂ ಅವಲಂಭಿತರ ಪಿಂಚಿಣಿಯ ಬಗ್ಗೆ ಯಾವುದೇ ತೊಂದರೆಗಳು ಇದ್ದಲ್ಲಿ, ಬಾಗಲಕೋಟ ಜಿಲ್ಲೆಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಸಂಪರ್ಕಿಸಿ ಎಂದು ಇಲಾಖಾ ಉಪನಿರ್ದೆಶಕರು ತಿಳಿಸಿದ್ದಾರೆ.
ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ನೆಲೆಸಿರುವ ಮಾಜಿ ಸೈನಿಕರು, ಮೃತ ಮಾಜಿ ಸೈನಿಕರ ಪತ್ನಿಯರು ಹಾಗೂ ಅವಲಂಭಿತರು ತಮ್ಮ ಪಿಂಚಿಣಿಯ ಬಗ್ಗೆ ಯಾವುದೇ ತೊಂದರೆಗಳು ಇದ್ದಲ್ಲಿ, ಡಿಸ್ಚಾರ್ಜ ಪುಸ್ತಕ, ಐಕಾರ್ಡ, ಪಿಪಿಓ ಮತ್ತು ಪಿಂಚಣಿ ಪಡೆಯುತ್ತಿರುವ ಬ್ಯಾಂಕ ಪಾಸ್‍ಬುಕ್‍ನೊಂದಿಗೆ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಬಾಗಲಕೋಟ ಇವರ ಕಾರ್ಯಾಲಯಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.
ಹೀಗಾಗಿ ಲೇಖನಗಳು ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್"
ಎಲ್ಲಾ ಲೇಖನಗಳು ಆಗಿದೆ ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್" ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್" ಲಿಂಕ್ ವಿಳಾಸ https://dekalungi.blogspot.com/2018/07/blog-post_59.html
0 Response to "ಮಾಜಿ ಸೈನಿಕರ ಹಾಗೂ ಅವಲಂಭಿತರ ತೊಂದರೆಗಳ ನಿವಾರಣೆಗೆ "ಪಿಂಚಣಿ ಅದಾಲತ್""
ಕಾಮೆಂಟ್ ಪೋಸ್ಟ್ ಮಾಡಿ