ಶೀರ್ಷಿಕೆ : ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ
ಲಿಂಕ್ : ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ
ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ
ಕೊಪ್ಪಳ ಜು. 24 (ಕರ್ನಾಟಕ ವಾರ್ತೆ): ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆಯಡಿ ಅರ್ಹ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ವಾಸವಾಗಿರುವ ವಿದ್ಯುತ್ ಮಗ್ಗ ನೇಕಾರರು, ವೈಂಡಿಂಗ್ ಮತ್ತು ವಾರ್ಪಿಂಗ್ ಉದ್ಯೋಗದಲ್ಲಿ ತೊಡಗಿರುವ 18 ರಿಂದ 50 ವಯಸ್ಸಿನೊಳಗಿನ ಕಾರ್ಮಿಕರಿಗೆ ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ವಿಮಾ ಯೋಜನೆಗಳಡಿ ನೋಂದಾಯಿಸಿಕೊಳ್ಳಬಹುದಾಗಿದ್ದು, ಹಾಗೂ 51 ರಿಂದ 59 ವಯಸ್ಸಿನೊಳಗಿನ ವಿದ್ಯುತ್ ಮಗ್ಗ ನೇಕಾರರು/ ಕಾರ್ಮಿಕರು ಹಿಂದಿನ ಸಾಲಿನ ವಿದ್ಯುತ್ ಮಗ್ಗ ನೇಕಾರರ ಗುಂಪು ವಿಮಾ ಯೋಜನೆಯಡಿ ಭಾಗವಹಿಸಿದ್ದಲ್ಲಿ ಮಾತ್ರ ನವೀಕರಿಸಿಕೊಂಡು ಆಮ್ ಆದ್ಮಿ ಬೀಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ. ವಂತಿಕೆ ಹಣ ರೂ.80/-, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ, ತಮ್ಮ ವಯಸ್ಸಿನ ದೃಢೀಕರಣ ಪತ್ರ, ನಾಮಿನಿಯ ಆಧಾರ್ ಕಾರ್ಡ ಗಳೊಂದಿಗೆ ಅರ್ಜಿ ಫಾರ್ಮ್ ತುಂಬಿ ಆಗಸ್ಟ್. 20 ರೊಳಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಕೊಪ್ಪಳ ಕಛೇರಿಗೆ ಅಥವಾ ಸ್ಥಳೀಯ ವಿದ್ಯುತ್ ಮಗ್ಗ ನೇಕಾರ ಸಹಕಾರಿ ಸಂಘಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನೇಕಾರರ ಸ್ಥಳ ಪರಿಶೀಲಿಸಿ ಯೋಜನೆಯ ಮಾರ್ಗಸೂಚಿಯಂತೆ ಅರ್ಹತೆ ಬಗ್ಗೆ ದೃಢಪಡಿಸಿಕೊಂಡು ಸದಸ್ಯತ್ವ ಮಾಡಿಕೊಳ್ಳಲಾಗುವದು. ಈ ವಿಮಾ ಅವಧಿಯು 2019ರ ಮೇ. 31 ಕ್ಕೆ ಕೊನೆಗೊಳ್ಳುತ್ತದೆ.
ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ವಿಮಾ ಯೋಜನೆಗಳಡಿ ಇರುವ ವಿಮಾದಾರರು ಸ್ವಾಭಾವಿಕ ಸಾವು ಅಥವಾ ಅಪಘಾತದಿಂದ ಸಾವಾದಲ್ಲಿ ಅಥವಾ ಖಾಯಂ ಅಂಗವಿಕಲರಾದಲ್ಲಿ ರೂ.2,00,000/-, ಭಾಗಶಃ ಅಂಗವಿಕಲರಾದಲ್ಲಿ ರೂ.1,00,000/- ಪರಿಹಾರವಿರುತ್ತದೆ. ಆಮ್ ಆದ್ಮಿ ಬೀಮಾ ಯೋಜನೆಯಡಿಯಿರುವ ವಿಮಾದಾರರು ಸ್ವಾಭಾವಿಕ ಸಾವು ಅಪ್ಪಿದಲ್ಲಿ ರೂ.60,000/-, ಅಪಘಾತದಿಂದ ಸಾವು ಅಪ್ಪಿದಲ್ಲಿ ಅಥವಾ ಖಾಯಂ ಅಂಗವಿಕಲರಾದಲ್ಲಿ ರೂ.1,50,000/-, ಭಾಗಶಃ ಅಂಗವಿಕಲರಾದಲ್ಲಿ ರೂ.75,000/- ಪರಿಹಾರವಿರುತ್ತದೆ. ಇಲಾಖೆಯ ಯೋಜನೆಯಡಿಯಲ್ಲಿ ಭಾಗವಹಿಸಿದ ವಿಮಾದಾರರ 9 ರಿಂದ 12 ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಇಬ್ಬರು ಮಕ್ಕಳಿಗೆ ವಾರ್ಷಿಕವಾಗಿ ತಲಾ ರೂ.1200/- ವಿದ್ಯಾರ್ಥಿವೇತನ ಸೌಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಪಂಚಾಯತ್, ಕೊಪ್ಪಳ ಡಿ.ಐ.ಸಿ ಕಂಪೌಂಡ, ನಗರಸಭೆ ಎದುರುಗಡೆ ಕೊಪ್ಪಳ ದೂರವಾಣಿ ಸಂಖ್ಯೆ 08539-230069, ಮತ್ತು ಕಾರ್ಯದರ್ಶಿ, ಭಾಗ್ಯನಗರ ವಿದ್ಯುತ್‍ಮಗ್ಗ ನೇಕಾರರ ಉತ್ಪಾದಕ ಮತ್ತು ಮಾರಾಟ ಸಹಕಾರ ಸಂಘ ನಿ., ಭಾಗ್ಯನಗರ, ತಾ.ಕೊಪ್ಪಳ ಮೊ.ಸಂ. 9845050979ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/07/blog-post_27.html
0 Response to "ವಿದ್ಯುತ್ ಮಗ್ಗ ನೇಕಾರರಿಗೆ ವಿಮಾ ಯೋಜನೆ : ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ