ನಿನಗೇಕಿಂದು ನನ್ನ ನೆನಪಾಗುವುದಿಲ್ಲ??

ನಿನಗೇಕಿಂದು ನನ್ನ ನೆನಪಾಗುವುದಿಲ್ಲ?? - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ನಿನಗೇಕಿಂದು ನನ್ನ ನೆನಪಾಗುವುದಿಲ್ಲ??, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ನಿನಗೇಕಿಂದು ನನ್ನ ನೆನಪಾಗುವುದಿಲ್ಲ??
ಲಿಂಕ್ : ನಿನಗೇಕಿಂದು ನನ್ನ ನೆನಪಾಗುವುದಿಲ್ಲ??

ಓದಿ


ನಿನಗೇಕಿಂದು ನನ್ನ ನೆನಪಾಗುವುದಿಲ್ಲ??

ಪದ್ಮಜಾ ಜೋಯಿಸ್ 
ನಿನಗೇಕಿಂದು ನನ್ನ 
ನೆನಪಾಗುವುದಿಲ್ಲ,??

ಅದೊಂದು ಕಾಲದಲ್ಲಿ
ಸುಳಿಯುವ ಕೋಲ್ಮಿಂಚಿಗೆ
ದಡಬಡಿಸುವ ಗುಡುಗಿಗೆ 
ಸಿಡಿದ ಸಿಡಿಲಿನಾರ್ಭಟದಿಂದ
ಬೆಚ್ಚಿದೆಯಾ ಬೆದರಿದೆಯಾ
ಎಂದು ಮರಮರಳಿ ಸಾಂತ್ವನಿಸುತ್ತಿದ್ದ
ನಿನ್ನ ದನಿ ಇಂದೇಕೆ ಮೌನವಾಗಿದೆ ??
ನಿನಗೇಕೆ ನೆನಪಾಗುವುದಿಲ್ಲ??
ಅಮಾಸ್ಯೆಯ ಕಾರಿರುಳಲ್ಲಿ
ನಿಃಶ್ಯಬ್ಧ ನೀರವ ರಾತ್ರಿಗಳಲ್ಲಿ
ಒಂಟಿ ಭೂತ ಬಂಗಲೆಯಲ್ಲಿ
ಸಾಕುನಾಯಿಯ ಆಸರೆಯಲ್ಲಿ
ಏಕಾಂತ ಬದುಕುವ ನನ್ನ 
ನೆನಪಲಿ ರಾತ್ರಿಯೆಲ್ಲಾ ಬೆಚ್ಚಿ 
ಕನವರಿಸಿ ಮಾತಿಗೆ ಭೇಟಿಗೆ 
ಕಾತರಿಸುತ್ತಿದ್ದ ಜೀವವಿಂದು
ಇಷ್ಟೇಕೆ ನಿಷ್ಕರುಣಿಯಾಗಿದೆ ??


ನಿನಗಿಂದು ನೆನಪಾಗುವುದಿಲ್ಲವೆ ??
ಆಗಸ ಕವುಚಿಬಿದ್ದಂತೆ
ಭೋರೆಂದು ಸುರಿವ ಮಳೆ
ಗದಗುಡಿಸುವ ಚಳಿ
ಮರಗಟ್ಟಿಸುವ ನಿಶೆ
ದಡಭಡನೆ಼ಂದು ಭಯ 
ತರುವ ಕಿಟಕಿಯ ಗಾಜುಗಳು
ಬೆದರಿ ಓಡೋಡಿ ಬಂದು
ಬಾಹುಗಳಲಿ ಅಡಗಿಸಿ
ಎದೆಗೊರಗಿಸಿಕೊಂಡು
ಭರವಸೆ ತುಂಬುತ್ತಿದ್ದ
ಜೀವವಿಂದು ಹೇಗೆ ಮರೆತಿದೆ ??

ನಿನಗಿದೆಲ್ಲ ನೆನಪಿಲ್ಲವೆ ??
ಅದೇ ಒಂಟಿ ಮನೆ
ಅದೇ ಏಕಾಂತ
ಕಂಗೆಡಿಸುವ ಕರಾಳ ಕತ್ತಲು
ಮಳೆಯ ಆರ್ಭಟ
ಗಾಳಿಯ ಭೋರ್ಗರೆತ
ಭಯದಲ್ಲಿ ತತ್ತರಿಸುವ ಜೀವ
ನಿನ್ನಪ್ಪುಗೆ ಬಯಸುವ ತನು
ನಿನ್ನಾಸರೆಗಾಗಿ ಚಡಪಡಿಸುವ ಮನ
ಕಾತರಿಸಿ ಧಾವಿಸುವ ಕರುಣಾರ್ದ್ರ
ಹೃದಯವಿಂದು ಹೇಗೆ ಮರೆತಿದೆ ??


ನಿನಗೇಕಿಂದು ನನ್ನ 
ನೆನಪಾಗುವುದಿಲ್ಲ ???


ಹೀಗಾಗಿ ಲೇಖನಗಳು ನಿನಗೇಕಿಂದು ನನ್ನ ನೆನಪಾಗುವುದಿಲ್ಲ??

ಎಲ್ಲಾ ಲೇಖನಗಳು ಆಗಿದೆ ನಿನಗೇಕಿಂದು ನನ್ನ ನೆನಪಾಗುವುದಿಲ್ಲ?? ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ನಿನಗೇಕಿಂದು ನನ್ನ ನೆನಪಾಗುವುದಿಲ್ಲ?? ಲಿಂಕ್ ವಿಳಾಸ https://dekalungi.blogspot.com/2018/07/blog-post_23.html

Subscribe to receive free email updates:

0 Response to "ನಿನಗೇಕಿಂದು ನನ್ನ ನೆನಪಾಗುವುದಿಲ್ಲ??"

ಕಾಮೆಂಟ್‌‌ ಪೋಸ್ಟ್‌ ಮಾಡಿ