ಶೀರ್ಷಿಕೆ : ಕೊರಳಮಾಲೆ
ಲಿಂಕ್ : ಕೊರಳಮಾಲೆ
ಕೊರಳಮಾಲೆ
ಎದೆಯ ಭಾವ ನುಡಿದೆ ನೀನೇ
ಅಂದು ನನ್ನ ಶ್ಯಾಮನೇ......!
ಜಡದ ಒಳಗೂ ನುಡಿವ ವೀಣೆ
ಅಹುದೇ ನನ್ನ ಜೀವವೇ....?
ಮನದ ಮುಗಿಲಲಂದು ನಕ್ಕೆ
ಹರಿಸಿ ಹಾಲು ಹುಣ್ಣಿಮೆ....!!
ಒಡೆದ ಚೂರು ಚುಕ್ಕಿಯಾಗಿ
ಹೊಳೆಯುವೆ ಇಂದು ಕಣ್ಣಿಗೆ..?
ನಿನ್ನ ಒಲುಮೆಯ ಕರೆಗೆ
ಕರಗಿ ಹರಿದಳಂದು ಯಮುನೆ..
ಮೂಕ ಧೇನು ಬಳಸಿ ನೀನು...!
ಮರೆತೆಯೇನು ನಿನ್ನನೇ.....?
ಮುಳ್ಳ ಮೊನೆಯ ಬಾಳು ನನದು
ನೋವ ಮರೆಸಿ ನಗಿಸಿದೆಯಾ...?
ಹೂವ ಮನಕೆ ಜೇನ ಸುರಿಸಿ
ಬಳಸಿ ಒಲವ ತೆಕ್ಕೆಯಾದೆಯಾ?
ಕಾಡ ಕುಸುಮವಾಗಿ ನಾನು
ಏಳು ಜನುಮಕೂ ಕಾಯುವೆ
ಅರಳಿ ನಗುವ ಆತ್ಮ ಸುಮದೊಳು
ಮಾಲೆಯಾಗಿ ಮರಳುವೇ...
ಹೀಗಾಗಿ ಲೇಖನಗಳು ಕೊರಳಮಾಲೆ
ಎಲ್ಲಾ ಲೇಖನಗಳು ಆಗಿದೆ ಕೊರಳಮಾಲೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊರಳಮಾಲೆ ಲಿಂಕ್ ವಿಳಾಸ https://dekalungi.blogspot.com/2018/07/blog-post_14.html

0 Response to "ಕೊರಳಮಾಲೆ"
ಕಾಮೆಂಟ್ ಪೋಸ್ಟ್ ಮಾಡಿ