ಶೀರ್ಷಿಕೆ : ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ!
ಲಿಂಕ್ : ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ!
ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ!
ಡಾ. ಅಶೋಕ್. ಕೆ. ಆರ್.
ಕ್ಯಾಮೆರಾ ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಸ್ವಲ್ಪ ದಿನದ ಮಟ್ಟಿಗೆ ಖರೀದಿಯನ್ನು ಮುಂದೂಡಿ. ಹವ್ಯಾಸಿ ಫೋಟೋಗ್ರಾಫರುಗಳಿಗೆಂದೇ ವಿಶೇಷವಾದ ಕ್ಯಾಮೆರಾವೊಂದು ಇನ್ನೇನು ಮಾರುಕಟ್ಟೆಯಲ್ಲಿ ಲಭಿಸಲಿದೆ. ನಿಸರ್ಗದ ಚಿತ್ರಗಳಿಂದ ಹಿಡಿದು ದೂರದ ಚಂದ್ರನ ಮೇಲಿನ ಕುಳಿಗಳನ್ನೂ ಸುಸ್ಪಷ್ಟವಾಗಿ ಚಿತ್ರೀಕರಿಸಲು ಸಹಾಯ ಮಾಡುವ ಕ್ಯಾಮೆರಾವೊಂದನ್ನು ನಿಕಾನ್ ಪರಿಚಯಿಸಿದೆ. ಅದುವೇ ನಿಕಾನ್ ಪಿ 1000. ಸೂಪರ್ ಜೂಮ್ ಕ್ಯಾಮೆರಾಗಳಲ್ಲಿ ಹೊಸತೊಂದು ವರ್ಗವನ್ನೇ ಈ ಕ್ಯಾಮೆರಾ ಸೃಷ್ಟಿಸಲಿದೆ.
ಸೂಪರ್ ಜೂಮ್ ಕ್ಯಾಮೆರಾಗಳೆಂದರೆ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳಷ್ಟೇ. ಡಿ.ಎಸ್.ಎಲ್.ಆರ್ ಗಳಲ್ಲಿರುವಂತೆ ಇದರಲ್ಲಿ ಲೆನ್ಸ್ ಬದಲಿಸುವ ಅವಶ್ಯಕತೆಯಿರುವುದಿಲ್ಲ. ಡಿ.ಎಸ್.ಎಲ್.ಆರ್ ಗಳಷ್ಟು ಸ್ಪಷ್ಟ ಚಿತ್ರಗಳು ಇದರಲ್ಲಿ ಮೂಡುವುದಿಲ್ಲವಾದರೂ ನಿಮ್ಮೊಳಗಿನ ಕ್ಯಾಮೆರಾಮೆನ್ ಉತ್ತಮನಾಗಿದ್ದರೆ, ಕೋನಗಳನ್ನು ನಿಮ್ಮದೇ ಶೈಲಿಯಲ್ಲಿ ಕಲೆ ನಿಮಗೆ ಕರಗತವಾಗಿದ್ದರೆ ಅಥವಾ ಅಪರೂಪಕ್ಕೆ ಚಿತ್ರ ತೆಗೆಯುವ ಹವ್ಯಾಸಿ ನೀವಾಗಿದ್ದರೆ ದುಬಾರಿ ಬೆಲೆಯ ಪದೇ ಪದೇ ಲೆನ್ಸುಗಳ ಖರೀದಿಗೆ ಹಣ ಬೇಡುವ ಡಿ.ಎಸ್.ಎಲ್.ಆರ್ ಗಿಂತ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾಗಳು ಉತ್ತಮ.
ಕ್ಯಾಮೆರಾಗಳ ಬಗ್ಗೆ ಮತ್ತಷ್ಟು ಅರಿಯಲು ಇಲ್ಲಿ ಕ್ಲಿಕ್ಕಿಸಿ
50ಎಕ್ಸ್ ಜೂಮ್ ಅನ್ನು ಮೊದಲಿಗೆ ಪರಿಚಯಿಸಿದ್ದು ಕೆನಾನ್ ಎಸ್.ಎಕ್ಸ್ 50. ನಂತರದಲ್ಲಿ ಸೋನಿ 60 ಎಕ್ಸ್ ಜೂಮಿನ ಸೋನಿ ಡಿ.ಎಸ್.ಸಿ ಹೆಚ್ 400 ಅನ್ನು ಪರಿಚಯಿಸಿತು. ಕೆನಾನ್ ಮತ್ತು ನಿಕಾನ್ ಕಂಪನಿಗಳು ಕೂಡ 60 - 65 ಎಕ್ಸ್ ಝೂಮಿನ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಬಿಟ್ಟಿತು. ನಿಕಾನ್ ಒಂದೆಜ್ಜೆ ಮುಂದೆ ಹೋಗಿ ನಿಕಾನ್ ಪಿ 900 ಎಂಬ ಸೂಪರ್ ಜೂಮ್ ಕ್ಯಾಮೆರಾವನ್ನು ಮಾರುಕಟ್ಟೆಗೆ ಪರಿಚಯಿಸಿತು. ಈ ಕ್ಯಾಮೆರಾದಲ್ಲಿದ್ದಿದ್ದು 83 ಎಕ್ಸ್ ಜೂಮ್. ಈ ಕ್ಯಾಮೆರಾಗೆ ಸರಿಸಾಟಿಯಾಗುವಂತಹ ಕ್ಯಾಮೆರಾವನ್ನು ಬೇರೆ ಕಂಪನಿಗಳು ಪರಿಚಯಿಸುವ ಮೊದಲೇ ನಿಕಾನ್ 125 ಎಕ್ಸ್ ಜೂಮ್ ಇರುವ ನಿಕಾನ್ ಪಿ 1000 ಅನ್ನು ಪರಿಚಯಿಸಿದೆ.
ಏನಿದು ಎಕ್ಸ್ ಜೂಮ್?
ಡಿ.ಎಸ್.ಎಲ್.ಆರ್ ಜೊತೆಗೆ ಸಾಮಾನ್ಯವಾಗಿ ನೀಡಲಾಗುವ ಕಿಟ್ ಲೆನ್ಸ್ ಎಂದರೆ 18 - 55 ಎಂ.ಎಂ ಲೆನ್ಸ್. ಈಗ ಕೆಲವೊಂದು ಕ್ಯಾಮೆರಾಗಳ ಜೊತೆಯಲ್ಲಿ 18 - 135 ಎಂ.ಎಂ ಲೆನ್ಸ್ ಲಭ್ಯವಿದೆ. ನಿಕಾನ್ ಪಿ 1000ನಲ್ಲಿರುವ 125ಎಕ್ಸ್ ಜೂಮನ್ನು ಎಂ.ಎಂ ಲೆಕ್ಕದಲ್ಲಿ ಹೇಳುವುದಾದರೆ ಅದು 3000 ಎಂ.ಎಂಗೆ ಸಮಾನ! ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೆಲೆಯ (ಆರರಿಂದ ಹತ್ತು ಲಕ್ಷ) ಡಿ.ಎಸ್.ಎಲ್.ಆರ್ ಲೆನ್ಸುಗಳ ಗರಿಷ್ಠ ಎಂ.ಎಂ 800.
ನಿಕಾನ್ ಬಿ 700 ಕ್ಯಾಮೆರಾದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.
ನಿಕಾನ್ ಪಿ 1000 ವಿಶೇಷತೆಗಳು.
24ಎಂ.ಎಂನಿಂದ 3000ಎಂ.ಎಂವರೆಗೆ ಹರಡಿಕೊಳ್ಳುವ ನಿಕಾರ್ ಲೆನ್ಸ್ ಹೊಂದಿರುವ ಕ್ಯಾಮೆರಾವನ್ನು ಮಳೆಗಾಲದಲ್ಲಿ ಜಲಪಾತದ ಚಿತ್ರ ತೆಗೆಯಲೂ ಬಳಸಬಹುದು, ಜಲಪಾತದ ಮತ್ತೊಂದು ಬದಿಯಲ್ಲಿ ಕುಳಿತಿರುವ ಪಕ್ಷಿ ಚಿತ್ರವನ್ನು ತೆಗೆಯಲೂ ಬಳಸಬಹುದು. ಇಷ್ಟೊಂದು ಜೂಮ್ ಹೇಗೆ ಸಾಧ್ಯವಾಗುತ್ತದೆ ಎಂದರೆ ಕ್ಯಾಮೆರಾದಲ್ಲಿನ ಸೆನ್ಸಾರಿನ ಗಾತ್ರ (1/2.3 ಇಂಚು ಅಥವಾ 0.28ಸೆ.ಮಿ) ಡಿ.ಎಸ್.ಎಲ್.ಆರ್ ಗೆ (3.73 - 8.6 ಸೆ.ಮಿ) ಹೋಲಿಸಿದಾಗ ತುಂಬಾ ಚಿಕ್ಕದಾಗಿರುತ್ತದೆ. ಚಿಕ್ಕ ಸೆನ್ಸಾರಿನ ಕಾರಣದಿಂದ ಚಿತ್ರದ ಗುಣಮಟ್ಟದಲ್ಲಿ ಕೊಂಚ ರಾಜಿ ಮಾಡಿಕೊಳ್ಳಲೇಬೇಕು. ನಿಕಾನ್ ಪಿ 1000 ಕ್ಯಾಮೆರಾದಲ್ಲಿ ಮತ್ತಷ್ಟು ಜೂಮ್ ಮಾಡಲು ಡಿಜಿಟಲ್ ಜೂಮ್ ಬಳಸಬಹುದು. ಇದನ್ನು ಬಳಸಿ 12,000 ಎಂ.ಎಂನಷ್ಟು ಜೂಮ್ ಮಾಡಬಹುದಾದರೂ ಚಿತ್ರದ ಗುಣಮಟ್ಟ ಪೂರ್ಣವಾಗಿ ಹಾಳಾಗುತ್ತದೆ.
ನಿಕಾನ್ ಪಿ 900 ಕ್ಯಾಮೆರಾದಲ್ಲಿ ಇದ್ದ ಒಂದು ಕೊರತೆಯೆಂದರೆ ರಾ ಫಾರ್ಮ್ಯಾಟಿನಲ್ಲಿ ಚಿತ್ರ ತೆಗೆಯುವ ಅವಕಾಶ ಇಲ್ಲದೇ ಹೋಗಿದ್ದು. ಆ ಕೊರತೆಯನ್ನು ನಿಕಾನ್ ಪಿ 1000 ನೀಗಿಸಿದೆ. ರಾ ಫಾರ್ಮ್ಯಾಟಿನಲ್ಲಿ ಚಿತ್ರ ತೆಗೆಯುವುದರಿಂದ ಚಿತ್ರವನ್ನು ಉತ್ತಮಗೊಳಿಸುವ ಸಾಧ್ಯತೆಗಳು ಹೆಚ್ಚಾಗಿ ಚಿತ್ರದ ಗುಣಮಟ್ಟ ಹೆಚ್ಚುತ್ತದೆ.
ಚಿತ್ರ ತೆಗೆಯುವುದಕ್ಕಷ್ಟೇ ಅಲ್ಲದೆ ವೀಡಿಯೋ ಮಾಡಲೂ ಇದು ಉತ್ತಮ ಕ್ಯಾಮೆರಾ. 4ಕೆ ಯು.ಹೆಚ್.ಡಿ (ಅಲ್ಟ್ರಾ ಹೆಚ್.ಡಿ) ವೀಡಿಯೋಗಳನ್ನು ಇದರಲ್ಲಿ ಚಿತ್ರೀಕರಿಸಬಹುದು.
ಪ್ರಮುಖ ತಾಂತ್ರಿಕ ಅಂಶಗಳು:
16 ಮೆಗಾಪಿಕ್ಸೆಲ್ ಸೆನ್ಸಾರ್.
ಮಾನಿಟರ್ ಗಾತ್ರ: 8.1 ಸೆ.ಮಿ. ಪೂರ್ಣವಾಗಿ ತಿರುಗಿಸಬಲ್ಲ ಮಾನಿಟರ್ ಇದರಲ್ಲಿದೆ.
ಅಪರ್ಚರ್: ಎಫ್/ 2.8-8
ಶಟರ್ ವೇಗ: 1/4000 - 1/30 ಸೆಕೆಂಡುಗಳು. ಬಲ್ಬ್ ಮೋಡ್ ಆಯ್ಕೆ ಕೂಡ ಇದೆ.
ಐ.ಎಸ್.ಒ: 100 - 1600, 3200, 6400
ಇಷ್ಟೆಲ್ಲ ವಿಶೇಷತೆಗಳಿರುವ ನಿಕಾನ್ ಪಿ 1000 ಕ್ಯಾಮೆರಾದ ಬೆಲೆ ಕಡಿಮೆಯಿರುವುದಿಲ್ಲ. ನಿಕಾನ್ ಪಿ 900 ಕ್ಯಾಮೆರಾದ ಬೆಲೆ ಮೂವತ್ತು ಸಾವಿರದ ಆಸುಪಾಸಿನಲ್ಲಿತ್ತು. ನಿಕಾನ್ ಪಿ 900 ಕ್ಯಾಮೆರಾದಲ್ಲಿ ರಾ ಫಾರ್ಮ್ಯಾಟ್ ಸೌಲಭ್ಯವಿರಲಿಲ್ಲ, 4ಕೆ ಯು.ಹೆಚ್.ಡಿ ವೀಡಿಯೋ ಚಿತ್ರೀಕರಣದ ಸೌಲಭ್ಯವಿರಲಿಲ್ಲ, 83 ಎಕ್ಸ್ ಜೂಮ್ ಮಾತ್ರವಿತ್ತು. 125ಎಕ್ಸ್ ಜೂಮ್ ಹೊಂದಿರುವ ನಿಕಾನ್ ಪಿ 1000 ಕ್ಯಾಮೆರಾದ ಬೆಲೆ ಐವತ್ತು ಅರವತ್ತು ಸಾವಿರದ ಆಸುಪಾಸಿನಲ್ಲಿರಬಹುದೆಂದು ಅಂದಾಜಿಸಲಾಗಿದೆ.
ಚಿತ್ರ ಮೂಲ: nikon.co.in
ಹೀಗಾಗಿ ಲೇಖನಗಳು ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ!
ಎಲ್ಲಾ ಲೇಖನಗಳು ಆಗಿದೆ ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ! ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ! ಲಿಂಕ್ ವಿಳಾಸ https://dekalungi.blogspot.com/2018/07/1000.html
0 Response to "ನಿಕಾನ್ ಪಿ 1000: ಸೂಪರ್ ಜೂ.......ಮ್ ಕ್ಯಾಮೆರ!"
ಕಾಮೆಂಟ್ ಪೋಸ್ಟ್ ಮಾಡಿ