ಶೀರ್ಷಿಕೆ : news and photos date; 20-6-2018
ಲಿಂಕ್ : news and photos date; 20-6-2018
news and photos date; 20-6-2018
ಲೋಕಾಯುಕ್ತ ಎಸ್.ಪಿ. ಅವರಿಂದ ತಹಶೀಲ್ದಾರ ಕಚೇರಿಗೆ ಭೇಟಿ
********************************************************
ಕಲಬುರಗಿ,ಜೂ.20.(ಕ.ವಾ.)-ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಸವರಾಜ.ಬಿ.ಕಡಕೋಳ ಅವರು ಬುಧವಾರ ಕಲಬುರಗಿ ನಗರದ ತಹಶೀಲ್ದಾರ ಕಚೇರಿಗೆ ಆಕಸ್ಮಿಕವಾಗಿ ಭೇಟಿ ನೀಡಿ ಅಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಅವರು ಸಾರ್ವಜನಿಕರು ಸಲ್ಲಿಸಿದ ಅಹವಾಲುಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ಅರ್ಜಿದಾರರ ಕೆಲಸಗಳನ್ನು ಕೂಡಲೇ ಪರಿಹರಿಸಲು ಸೂಚಿಸಿದರು. ಅಲ್ಲಿ ಹಾಜರಿದ್ದ ಅರ್ಜಿದಾರರಿಗೆ ತಮ್ಮ ಕೆಲಸಗಳು ವಿಳಂಬವಾದಲ್ಲಿ, ಲೋಕಾಯುಕ್ತ ಕಛೇರಿಗೆ ಸಂಪರ್ಕಿಸಲು ತಿಳಿಸಿದರು. ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲು ಮತ್ತು ಸಾರ್ವಜನಿಕರ ಕುಂದುಕೊರತೆಗಳ ವಹಿಯನ್ನು ನಿರ್ವಹಿಸಲು ತಹಶೀಲ್ದಾರ ವೇದವ್ಯಾಸರವರಿಗೆ ತಿಳಿಸಿದರು.
ನಂತರ ನಗರದ ಉಪ ನೋಂದಣಾಧಿಕಾರಿಗಳ ಕಛೇರಿಗೆ ಭೇಟಿ ನೀಡಿ, ಅಲ್ಲಿ ಹಾಜರಿದ್ದ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಪೊಲೀಸ್ ಕಾನ್ಸ್‍ಟೇಬಲ್‍ಗಳ ನೇಮಕಾತಿ ಪ್ರಕ್ರಿಯೆ
ಸಹಿಷ್ಣುತೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ ಜೂನ್ 28ಕ್ಕೆ ಮುಂದೂಡಿಕೆ
ಕಲಬುರಗಿ,ಜೂ.20.(ಕ.ವಾ.)-ಹೈದ್ರಾಬಾದ ಕರ್ನಾಟಕ ಪ್ರದೇಶ ವೃಂದದ ಕೆ.ಎಸ್.ಆರ್.ಪಿ. ಘಟಕದ ವಿಶೇಷ ಮೀಸಲು ಪೊಲೀಸ್ ಕಾನ್ಸ್‍ಟೇಬಲ್‍ಗಳ ನೇಮಕಾತಿ ಪ್ರಕ್ರಿಯೆಯ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.)ಯನ್ನು ಕಾರಣಾಂತರದಿಂದ ಇದೇ ಜೂನ್ 28 ಹಾಗೂ 29ಕ್ಕೆ ಮುಂದೂಡಲಾಗಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕ ಎಸ್. ಮುರುಗನ್ ಅವರು ತಿಳಿಸಿದ್ದಾರೆ.
ಇದೇ ಜೂನ್ 22 ರಂದು ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಜೂನ್ 22 ಹಾಗೂ 23ರಂದು ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.) ಪರೀಕ್ಷೆಗೆ ಹಾಜರಾಗಬೇಕಾದ ಅಭ್ಯರ್ಥಿಗಳು ಕ್ರಮವಾಗಿ ಜೂನ್ 28 ಹಾಗೂ 29 ರಂದು ಕಲಬುರಗಿ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಡೆಯುವ ಈ ಪರೀಕ್ಷೆಗೆ ಹಾಜರಾಗಬೇಕು.
ಈ ಹಿಂದೆ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಢ್ರ್ಯತೆ ಪರೀಕ್ಷೆ (ಇಟಿ ಆಂಡ್ ಪಿಎಸ್.ಟಿ.) ಪರೀಕ್ಷೆಯ ದಿನಾಂಕವನ್ನು ಜೂನ್ 18 ರಿಂದ 27 ರವರೆಗೆ (ಜೂನ್ 24ರ ಸಾರ್ವಜನಿಕ ರಜೆಯನ್ನು ಹೊರತುಪಡಿಸಿ) ಒಟ್ಟು 9 ದಿನಗಳ ಕಾಲ ಜಿಲ್ಲಾ ಸಶಸ್ತ್ರ ಪೊಲೀಸ್ ಮೈದಾನದಲ್ಲಿ ನಿಗದಿಪಡಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ.

ಜೂನ್ 22ರಂದು ಪ್ರಗತಿ ಪರಿಶೀಲನಾ ಸಭೆ
*************************************
ಕಲಬುರಗಿ,ಜೂ.20.(ಕ.ವಾ.)-ಕಲಬುರಗಿ ತಾಲೂಕಿನ ಗ್ರಾಮೀಣ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಜೂನ್ 22ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಗ್ರಾಮೀಣ ಮತಕ್ಷೇತ್ರಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಈ ಸಭೆಗೆ ತಪ್ಪದೇ ಹಾಜರಾಗಬೇಕೆಂದು ಕಲಬುರಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇಕಾರರ ವಸತಿ ಕಾರ್ಯಗಾರ ಯೋಜನೆಯಡಿ ಅರ್ಜಿ ಆಹ್ವಾನ
*******************************************************
ಕಲಬುರಗಿ,ಜೂ.20.(ಕ.ವಾ.)-ಪ್ರಸಕ್ತ 2018-19ನೇ ಸಾಲಿನ ರಾಜ್ಯ ವಲಯ ವಸತಿ ಕಾರ್ಯಗಾರ ಯೋಜನೆಯಡಿ ಶೇಕಡಾ 50ರಷ್ಟು ವಾರ್ಷಿಕ ಆದಾಯ ಹೊಂದಿರುವ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ನೇಕಾರಿಕೆಯಲ್ಲಿ ತೊಡಗಿರುವ ವಸತಿ ರಹಿತ ನೇಕಾರರಿಗೆ ವಸತಿ ಕಾರ್ಯಗಾರ ನಿರ್ಮಿಸಿಕೊಳ್ಳಲು ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೇಕಾರರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯನ್ನು ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಅನುಷ್ಟಾನಗೊಳಿಸಲಾಗುವುದು. ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ 1,20,000 ರೂ. ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 1,00,000 ರೂ. ಹೀಗೆ ಒಟ್ಟು 2,20,000 ರೂ. ಗಳ ಸಹಾಯಧನ ನೀಡಲಾಗುತ್ತದೆ. ಗ್ರಾಮೀಣದ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ 3,00,000 ರೂ. ಮತ್ತು ನಗರ ಪ್ರದೇಶದ ಫಲಾನುಭವಿಗಳಿಗೆ 3,25,000 ರೂ. ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿ ವಂತಿಕೆ ರೂ. 25000/- ಸ್ವತಃ ಫಲಾನುಭವಿಗಳು ಭರಿಸಬೇಕು.
ಫಲಾನುಭವಿಗಳು ಕನಿಷ್ಠ್ಟ 400 ಚದರ ಅಡಿ ನಿವೇಶನ ಹೊಂದಿರಬೇಕು, ಅರ್ಜಿ ನಮೂನೆಗಳನ್ನು ಕಲಬುರಗಿ ಜಿಲ್ಲಾ ಪಂಚಾಯತ್, ಕೈಮಗ್ಗ ಮತ್ತು ಜವಳಿ ಇಲಾಖೆ, ಉಪ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ನಿವೇಶನ ದಾಖಲಾತಿಗಳು, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆಧಾರ ಕಾರ್ಡ್ ನಕಲು ಪ್ರತಿ, ಸ್ಥಳೀಯ ಪ್ರಾಧಿಕಾರ ಗ್ರಾಮ ಪಂಚಾಯಿತಿಯಿಂದ ನೀಡಿದ ನೀರಪೇಕ್ಷಣಾ ಪ್ರಮಾಣಪತ್ರಗಳನ್ನು ಲಗತ್ತಿಸಿ ಜೂನ್ 30 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, 1ನೇ ಮಹಡಿ, ಜೇವರ್ಗಿ ಕ್ರಾಸ್, ಎಂ.ಎಸ್.ಕೆ ಮೀಲ್ ರೋಡ್ ಕಲಬುರಗಿ-585 102 ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-278629 ನ್ನು ಸಂಪರ್ಕಿಸಲು ಕೋರಲಾಗಿದೆ.

ಕಾರ್ಮಿಕ ನ್ಯಾಯಾಲಯದಲ್ಲಿ ನೈರ್ಮಲ್ಯ ಸೇವೆ ಪಡೆಯಲು ಟೆಂಡರ್ ಆಹ್ವಾನ
******************************************************************
ಕಲಬುರಗಿ,ಜೂ.20.(ಕ.ವಾ.)-ಕಲಬುರಗಿ ಕಾರ್ಮಿಕ ನ್ಯಾಯಾಲಯದಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಸೇವೆಯನ್ನು ನಿರ್ವಹಿಸಲು ಅರ್ಹ ಹೊರಗುತ್ತಿಗೆ ಏಜೆನ್ಸಿಯವರಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕಾರ್ಮಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ.
ಟೆಂಡರ್ ಅರ್ಜಿಯನ್ನು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ 10,000 ರೂ. ಡಿಮ್ಯಾಂಡ್ ಡ್ರಾಫ್ಟ್‍ನ್ನು ಡಿಸ್ಟಿಕ್ಟ್ ಜಡ್ಜ್ ಆಂಡ್ ಪ್ರೀಸೈಡಿಂಗ್ ಆಫೀಸರ್, ಲೇಬರ್ ಕೋರ್ಟ ಕಲಬುರಗಿ ಇವರ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು. ನಿಗದಿತ ನಮೂನೆಯ ಅರ್ಜಿಯನ್ನು ಜಿಲ್ಲಾ ನ್ಯಾಯಾಲಯದ hಣಣಠಿ://eಛಿouಡಿಣs.gov.iಟಿ/ಞಚಿಟಚಿbuಡಿಚಿgi ವೆಬ್‍ಸೈಟ್‍ದಿಂದ ಪಡೆದು ಭರ್ತಿ ಮಾಡಿ ಜೂನ್ 25 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಟೆಂಡರಿನ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಜಿಲ್ಲಾ ಕಾರ್ಮಿಕ ನ್ಯಾಯಾಲಯದ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಸೀವಿಂಗ್ ಮಶೀನ್ ಆಪರೇಟರ್ ತರಬೇತಿಗೆ ಅರ್ಜಿ ಆಹ್ವಾನ
**************************************************
ಕಲಬುರಗಿ,ಜೂ.20.(ಕ.ವಾ.)-ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2018-19ನೇ ಸಾಲಿನ ನೂತನ ಜವಳಿ ನೀತಿ ಯೋಜನೆಯಡಿ 45 ದಿನಗಳ ಅವಧಿಯ ಸೀವಿಂಗ್ ಮಶೀನ್ ಆಪರೇಟರ್ ತರಬೇತಿಗಾಗಿ ಕಲಬುರಗಿ ಜಿಲ್ಲೆಯ ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶದ ನಿರುದ್ಯೋಗಿ ಯುವಕ, ಯವತಿಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ತರಬೇತಿ ಪಡೆಯಲು ಕನಿಷ್ಠ ವಿದ್ಯಾರ್ಹತೆ 5ನೇ ತರಗತಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ನಿಗದಿತ ಅರ್ಜಿ ನಮೂನೆಗಳನ್ನು ತಾಲ್ಲೂಕು ಕೇಂದ್ರಗಳಲ್ಲಿರುವ ತರಬೇತಿ ಸಂಸ್ಥೆಗಳಿಂದ ಪಡೆದು ದಾಖಲಾತಿಗಳನ್ನು ಲಗತ್ತಿಸಿ ತರಬೇತಿ ಕೇಂದ್ರದಲ್ಲಿ ಸಲ್ಲಿಸಬೇಕು. ತರಬೇತಿಯನ್ನು ತಾಲ್ಲೂಕು ಕೇಂದ್ರಗಳಲ್ಲಿರುವ ತರಬೇತಿ ಸಂಸ್ಥೆಗಳಲ್ಲಿ ನೀಡಲಾಗುತ್ತಿದೆ. ತರಬೇತಿ ನಂತರ ಗಾರ್ಮೆಂಟ್ಸ್ ಉದ್ದಿಮೆಗಳಲ್ಲಿ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದಾಗಿದೆ. ತರಬೇತಿ ಕೇಂದ್ರದ ಹೆಸರು ಹಾಗೂ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳ ವಿವರ ಕೆಳಕಂಡಂತೆ ಇರುತ್ತದೆ.
ತರಬೇತಿ ಕೇಂದ್ರದ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, 1ನೇ ಮಹಡಿ, ಜೇವರ್ಗಿ ಕ್ರಾಸ್, ಎಂ.ಎಸ್.ಕೆ ಮೀಲ್ ರೋಡ್ ಕಲಬುರಗಿ-585 102 ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-278629ನ್ನು ಸಂಪರ್ಕಿಸಲು ಕೋರಲಾಗಿದೆ.

ಅವರಾದ (ಬಿ) ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
************************************************************************
ಕಲಬುರಗಿ,ಜೂ.20.(ಕ.ವಾ.)-ಕಲಬುರಗಿ ತಾಲೂಕಿನ ಅವರಾದ(ಬಿ) ಆಂಗ್ಲ ಮಾಧ್ಯಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 7, 8, 9 ಮತ್ತು 10 ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳನ್ನು ಪ್ರವೇಶ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಶಾಲೆಗೆ ಖುದ್ದಾಗಿ ಬಂದು ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ತಮ್ಮ ಶಾಲಾ ಮುಖ್ಯ ಗುರುಗಳಿಂದ ದೃಢೀಕರಿಸಿ ಇದೇ ಜೂನ್ 28 ರೊಳಗಾಗಿ ಅವರಾದ (ಬಿ) ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಲ್ಲಿಸಬೇಕು. ಪ್ರವೇಶ ಪರೀಕ್ಷೆಯು ಜುಲೈ 5 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅವರಾದ (ಬಿ) ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಹಾಗೂ ಮೊಬೈಲ್ ಸಂಖ್ಯೆ 9743458245ನ್ನು ಸಂಪರ್ಕಿಸಲು ಕೋರಲಾಗಿದೆ.
ಚಿತ್ತಾಪುರ: ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಜೂ.20.(ಕ.ವಾ.)-ಪ್ರಸಕ್ತ 2018-19 ನೇ ಸಾಲಿಗೆ ಚಿತ್ತಾಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿತ್ತಾಪುರ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಚಿತ್ತಾಪುರ, ಕಾಳಗಿ, ಹೆಬ್ಬಾಳ, ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಚಿತ್ತಾಪುರ, ಚಿತ್ತಾಪುರ ಟೌನ್ ಮತ್ತು ವಾಡಿ (ಜಂ) ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಚಿತ್ತಾಪುರ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಹಾಗೂ ಸಂಬಂಧಪಟ್ಟ ವಸತಿ ನಿಲಯದ ನಿಲಯ ಪಾಲಕರಿಗೆ ಜುಲೈ 20 ರೊಳಗೆ ಸಲ್ಲಿಸಬೇಕು. ನವೀಕರಣ ವಿದ್ಯಾರ್ಥಿಗಳು ಸಹ ಎಲ್ಲ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ವಸತಿ ನಿಲಯದ ನಿಲಯ ಪಾಲಕರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚಿತ್ತಾಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ: ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
ಕಲಬುರಗಿ,ಜೂ.20.(ಕ.ವಾ.)-ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ಸಾಮಾನ್ಯ ಹಾಗೂ ಮಾದರಿ ವಿದ್ಯಾರ್ಥಿ ನಿಲಯಗಳಿಗೆ ಪ್ರಸಕ್ತ 2018-19 ನೇ ಸಾಲಿಗೆ ಖಾಲಿಯಿರುವ ಸ್ಥಾನಗಳಿಗೆ ಪ್ರವೇಶಕ್ಕಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-1, 2ಎ, 2ಬಿ, 3ಎ, 3ಬಿ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.

ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ 2.50 ಲಕ್ಷ ರೂ. ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗದವರಿಗೆ 1 ಲಕ್ಷ ರೂ.ಗಳ ಆದಾಯ ಮಿತಿ ಹೊಂದಿರಬೇಕು. ವಿದ್ಯಾರ್ಥಿಗಳು ಇಲಾಖೆಯ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಆನ್‍ಲೈನ್ ಅರ್ಜಿ ಪ್ರತಿ ಹಾಗೂ ಅಪಲೋಡ್ ಮಾಡಲಾದ ದಾಖಲಾತಿಗಳ ಪ್ರತಿಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿ ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಜುಲೈ 23ರೊಳಗಾಗಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.
ವಿದ್ಯಾರ್ಥಿ ನಿಲಯಗಳ ವಿವರ, ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್‍ಸೈಟ್‍ನ್ನು ಅಥವಾ ಕಲಬುರಗಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು, ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಯಾದಲ್ಲಿ bಛಿತಿ.hosಣeಟs@ಞಚಿಡಿಟಿಚಿಣಚಿಞಚಿ.gov.iಟಿ ಇ-ಮೇಲ್ ವಿಳಾಸವನ್ನು ಅಥವಾ ಸಹಾಯವಾಣಿ ಸಂಖ್ಯೆ 080-8050370006ನ್ನು ಸಂಪರ್ಕಿಸಲು ಕೋರಲಾಗಿದೆ.
ವಾಹನ ಬಾಡಿಗೆಗಾಗಿ ಇ-ಟೆಂಡರ್ ಆಹ್ವಾನ
ಕಲಬುರಗಿ,ಜೂ.20.(ಕ.ವಾ.)-ಕಲಬುರಗಿ ಜಿಲ್ಲಾ ಗ್ರಂಥಾಲಯ ವ್ಯಾಪ್ತಿಯಲ್ಲಿ ಬರುವ ಶಾಖಾ ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ 2018-19ನೇ ಸಾಲಿಗೆ ಪರಿವೀಕ್ಷಣೆ ಹಾಗೂ ಪುಸ್ತಕ ಸಾಗಾಣಿಕೆಗಾಗಿ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಇ-ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ತಿಳಿಸಿದ್ದಾರೆ.
ಅರ್ಹತೆ, ನಿಬಂಧನೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಜಿಲ್ಲಾ ಕೇಂದ್ರ ಗ್ರಂಥಾಲಯ, 3ನೇ ಮಹಡಿ, ಕೊಠಡಿ ಸಂಖ್ಯೆ 26, ವಿಕಾಸ ಸೌಧ, ಕಲಬುರಗಿ ಇವರನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-221069ನ್ನು ಸಂಪರ್ಕಿಸಲು ಕೋರಿದೆ.
ನಿಜಶರಣ ಅಂಬಿಗರ ಚೌಡಯ್ಯ ನಿಗಮ:
ಅರಿವು ಶೈಕ್ಷಣಿಕ ಸಾಲ ಮಂಜೂರಾತಿಗಾಗಿ ಅರ್ಜಿ ಆಹ್ವಾನ
ಕಲಬುರಗಿ,ಜೂ.20.(ಕ.ವಾ.)-ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದಿಂದ 2018-19ನೇ ಸಾಲಿಗೆ ಅರಿವು/ಶೈಕ್ಷಣಿಕ ಸಾಲ ಯೋಜನೆಯಡಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವಿವಿಧ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ಅರ್ಹ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಸಾಲ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಗಮದಿಂದ ಬೆಸ್ತ, ಕಬ್ಬಲಿಗ, ಕೋಲಿ, ಗಂಗಾಮತ, ಮೊಗವೀರ ಮತ್ತು ಇದರ ಉಪಜಾತಿಗಳಿಗೆ ಸೇರಿದ (ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಪ್ರವರ್ಗ-1ರ ಕ್ರ.ಸಂ.6ಎ ಯಿಂದ “ಎಕೆ” ರವರೆಗಿನ ಜಾತಿಗಳಿಗೆ) ವಿದ್ಯಾರ್ಥಿಗಳ ವ್ಯಾಸಂಗಕ್ಕೆ, ಕೋರ್ಸಿನ ವಾಸ್ತವಿಕ ವೆಚ್ಚ ಅಥವಾ ವಾರ್ಷಿಕ ಗರಿಷ್ಠ 1 ಲಕ್ಷ ರೂ. ಗಳಂತೆ ಶೇ.2ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಲಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ ಮೂಲಕ ಅಥವಾ ಮೆರಿಟ್ ಆಧಾರದ ಮೇಲೆ ಸೀಟು ಪಡೆದು ಈ ಕೆಳಕಂಡ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಬೇಕು.
ಬಿ.ಇ., ಎಂ.ಬಿ.ಬಿ.ಎಸ್., ಬಿ.ಯೂ.ಎಂ.ಎಸ್., ಬಿ.ಡಿ.ಎಸ್., ಬಿ.ಎ.ಎಂ.ಎಸ್., ಬಿ.ಎಚ್.ಎಂ.ಎಸ್., ಎಂ.ಬಿ.ಎ., ಎಂ.ಟೆಕ್., ಎಂ.ಇ., ಎಂ.ಡಿ., ಪಿಹೆಚ್.ಡಿ., ಬಿ.ಸಿ.ಎ./ಎಂ.ಸಿ.ಎ., ಎಂ.ಎಸ್.ಆಗ್ರ್ರಿಕಲ್ಚರ್, ಬಿ.ಎಸ್‍ಸಿ. ನರ್ಸಿಂಗ್, ಬಿ.ಫಾರಂ/ಎಂ.ಫಾರಂ, ಬಿ.ಎಸ್‍ಸಿ. ಪ್ಯಾರಾ ಮೆಡಿಕಲ್, ಬಿ.ಎಸ್‍ಸಿ. ಬಯೋಟೆಕ್ನಾಲಜಿ, ಬಿ.ಟೆಕ್, ಬಿ.ಪಿ.ಟಿ., ಬಿ.ವಿ.ಎಸ್.ಸಿ/ಎಂ.ವಿ.ಎಸ್.ಸಿ., ಬಿ.ಎನ್.ಎಂ., ಬಿ.ಹೆಚ್.ಎಮ್., ಎಂ.ಡಿ.ಎಸ್., ಎಂ.ಎಸ್.ಡಬ್ಲ್ಯೂ, ಎಲ್.ಎಲ್.ಎಂ., ಎಂ.ಎಫ್.ಎ., ಎಂ.ಎಸ್‍ಸಿ. ಬಯೋ ಟೆಕ್ನಾಲಜಿ ಮತ್ತು ಎಂ.ಎಸ್‍ಸಿ.ಎಜಿ.
ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನವು 3.50ಲಕ್ಷ ರೂ.ಗಳ ಮಿತಿಯೊಳಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಕೋಣೆ ಸಂಖ್ಯೆ: 22, ಮೂರನೇ ಮಹಡಿ, ವಿಕಾಸ ಭವನ, ಮಿನಿ ವಿಧಾನ ಸೌಧ ಕಲಬುರಗಿ ಕಚೇರಿಯನ್ನು ಹಾಗೂ ದೂರವಾಣಿ ಸಂಖ್ಯೆ 08472-278635ನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರುಣಕುಮಾರ ಜಾಧವರವರಿಗೆ ಪಿಹೆಚ್.ಡಿ.
******************************************
ಕಲಬುರಗಿ,ಜೂ.20.(ಕ.ವಾ.)-ಸಾಮಾಜಿಕ ಕಾರ್ಯ ವಿಷಯದಲ್ಲಿ “ಆ್ಯನ್ ಎಕ್ಸ್‍ಪ್ಲೋರೇಟಿವ್ ಸ್ಟಡಿ ಟು ಆ್ಯಸ್ಸೆಸ್ ದಿ ಪರ್ಸನಲ್ ಹೈಜೀನ್ ಪ್ರ್ಯಾಕ್ಟಿಸ್ ಅಮಾಂಗ್ ಎಲ್ಡರ್ಲಿ ವಿತ್ ಸ್ಪೆಷಲ್ ರೆಫರೆನ್ಸ್ ಟು ಲಂಬಾಣಿ ಕಮ್ಯುನಿಟಿ ”(ಂಓ ಇಘಿPಐಔಖಂಖಿIಗಿಇ SಖಿUಆಙ ಖಿಔ ಂSSಇSS ಖಿಊಇ PಇಖSಔಓಂಐ ಊಙಉIಇಓಇ PಖಂಅಖಿIಅಇ ಂಒಔಓಉ ಇಐಆಇಖಐಙ WIಖಿಊ SPಇಅIಂಐ ಖಇಈಇಖಇಓಅಇ ಖಿಔ ಐಂಒಃಂಓI ಅಔಒಒUಓIಖಿಙ) ಎಂಬ ಪ್ರಬಂಧ ಮಂಡಿಸಿದ್ದಕ್ಕಾಗಿ ಅರುಣಕುಮಾರ ಜಾಧವ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯವು ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಸೋಶಿಯಲ್ ವರ್ಕ ಸಂಶೋಧನಾ ವಿಭಾಗದ ಮಾರ್ಗದರ್ಶಕ ಡಾ.ಕೆ.ಎಸ್. ಮಾಲಿಪಾಟೀಲ್ ಅವರ ಮಾರ್ಗದರ್ಶನದಲಿ ಅವರು ಈ ಪ್ರಬಂಧವನ್ನು ಮಂಡಿಸಿದ್ದರು.

ಹೀಗಾಗಿ ಲೇಖನಗಳು news and photos date; 20-6-2018
ಎಲ್ಲಾ ಲೇಖನಗಳು ಆಗಿದೆ news and photos date; 20-6-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photos date; 20-6-2018 ಲಿಂಕ್ ವಿಳಾಸ https://dekalungi.blogspot.com/2018/06/news-and-photos-date-20-6-2018.html

0 Response to "news and photos date; 20-6-2018"
ಕಾಮೆಂಟ್ ಪೋಸ್ಟ್ ಮಾಡಿ