NEWS AND PHOTO DATE: 30--6--2018

NEWS AND PHOTO DATE: 30--6--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 30--6--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 30--6--2018
ಲಿಂಕ್ : NEWS AND PHOTO DATE: 30--6--2018

ಓದಿ


NEWS AND PHOTO DATE: 30--6--2018

ತಿಂಗಳ ಒಳಗಾಗಿ ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಂಪರ್ಕ ಕಲ್ಪಿಸಿ
**************************************************************
ಕಲಬುರಗಿ,ಜೂ.30.(ಕ.ವಾ.)-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿನ ಕಲಬುರಗಿ ಜಿಲ್ಲೆಯ ಹಲವು ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಂಪರ್ಕವಿಲ್ಲದೆ ಒಲೆಯ ಮೇಲೆ ಅಡುಗೆ ಮಾಡುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ಕೂಡಲೆ ಜಿಲ್ಲೆಯ ಅಂತಹ 126 ಅಂಗನವಾಡಿ ಕೇಂದ್ರಗಳಿಗೆ ಗ್ಯಾಸ್ ಸಂಪರ್ಕ ಒದಗಿಸಿ ಒಂದು ತಿಂಗಳ ಒಳಗಾಗಿ ಆಯೋಗಕ್ಕೆ ವರದಿ ಸಲ್ಲಿಸಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ವಿ.ಬಿ.ಪಾಟೀಲ ಹೇಳಿದರು.
ಅವರು ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜನಿಸುವ ಪ್ರತಿಯೊಬ್ಬ ಮಗುವಿಗೂ ಪೌಷ್ಠಿಕ ಆಹಾರ ದೊರಕಬೇಕು ಮತ್ತು ಅನ್ನಭಾಗ್ಯ, ಬಿಸಿಯೂಟ, ಅಂಗನವಾಡಿಯಲ್ಲಿ ಮಾತೃಪೂರ್ಣದಂತಹ ಮಹತ್ವಪೂರ್ಣ ಯೋಜನೆಗಳಲ್ಲಿ ನೀಡಲಾಗುತ್ತಿರುವ ಆಹಾರ ಸಾಮಗ್ರಿಗಳು ಸಮರ್ಪಕವಾಗಿ ಜಾರಿಯಾಗುತ್ತಿದೆಯೆ ಎಂಬುದನ್ನು ಪರಿಶೀಲಿಸುವುದು ಮತ್ತು ಈ ಸಂಬಂಧ ಆಗಾಗ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದು ಮತ್ತು ಅಪೌಷ್ಠಿಕತೆ ನಿವಾರಿಸುವುದೆ ಆಯೋಗದ ಮುಖ್ಯ ಉದ್ದೇಶವಾಗಿದೆ. ಅದರಂತೆ ಆಯೋಗವು ರಾಜ್ಯಾದ್ಯಂತ ಸಂಚರಿಸಿ ಯೋಜನೆಗಳಲ್ಲಿನ ಲೋಪದೋಷಗಳನ್ನು ಅಧಿಕಾರಿಗಳಿಂದ ಪಡೆದು ಸರ್ಕಾರಕ್ಕೆ ಸೂಕ್ತ ಶಿಫಾರಸ್ಸು ಮಾಡಲಾಗುವುದೆಂದು ತಿಳಿಸಿದರು.
ಆಯೋಗವು ಕಳೆದ ಮೂರು ದಿನಗಳಿಂದ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರ. ಶಾಲೆ, ವಸತಿ ನಿಲುಯಗಳಿಗೆ ಭೇಟಿ ನೀಡಿ ಅಲ್ಲಿನ ಹಲವು ಸಮಸ್ಯೆಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ. ಹಡಗಿಲಹಾರುತಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿನ ಕಾರ್ಯಕರ್ತೆ ಗೈರಾಗಿದ್ದದರು, ಅಲ್ಲದೆ ಕಾರ್ಯಕರ್ತೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರು ನೀಡಿದ್ದು, ಕೂಡಲೆ ಸದರಿ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತ್ತು ಮಾಡಬೇಕು. ಅಲ್ಲದೆ ಕಲಬುರಗಿ ನಗರದ ಮೆಟ್ರಿಕ್ ನಂತರ ಮಹಿಳಾ ವಸತಿ ನಿಲಯಕ್ಕೆ ಭೇಟಿ ನೀಡಿದಾದ 56 ವಿದ್ಯಾರ್ಥಿಗಳಿಗೆ ಕೇವಲ 30 ಬೆಡ್‍ಗಳನ್ನು ಪೂರೈಸಲಾಗುತ್ತಿದೆ. ಕೆಲ ವಿದ್ಯಾರ್ಥಿಗಳು ನೆಲದ ಮೇಲೆ ಮಲಗುತ್ತಿದ್ದಾರೆ. ಕೂಡಲೆ ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಆಹಾರ ಗೋದಾಮುಗಳಲ್ಲಿ ಮಾನವ ಸೇವನೆಗೆ ಯೋಗ್ಯವಿಲ್ಲದ ಆಹಾರ ದಾನ್ಯಗಳನ್ನು ವಿಲೇವಾರಿ ಅಥವಾ ನಾಶ ಮಾಡಲು ಸರ್ಕಾರದ ಆದೇಶವಿದ್ದು, ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಆಹಾರ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಅಪೌಷ್ಠಿಕತೆ ನಿವಾರಣೆ ಕುರಿತು ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಅವರ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸಬೇಕು ಹಾಗೂ ಸಂಪೂರ್ಣವಾಗಿ ಅಪೌಷ್ಠಿಕತೆ ನಿವಾರಣೆ ನಿಟ್ಟಿನಲ್ಲಿ ಇದೇ ಜುಲೈ 1 ರಿಂದ ರಾಷ್ಟ್ರೀಯ ಪೌಷ್ಠಿಕಾಂಶ ಮಿಷನ್ ಜಾರಿಯಾಗುತ್ತಿದ್ದು, ಅಧಿಕಾರಿಗಳು ಸನ್ನಧರಾಗಿರಬೇಕು. ಅಪೌಷ್ಠಿಕತೆ ನಿವಾರಣೆಯಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ ಹೆಚ್ಚಾಗಿದೆ. ಆದರೆ ಈ ಎರಡು ಇಲಾಖೆಗಳು ಒಟ್ಟಾಗಿ ಸಮನ್ವಯತೆಯಿಂದ ಕೆಲಸ ನಿರ್ವಹಿಸದೆ ಇರುವುದು ದುರಾದೃಷ್ಠಕರ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು ಪ್ರತಿ 2 ತಿಂಗಳಿಗೊಮ್ಮೆ ವೈದ್ಯರು ಅಂಗನವಾಡಿಗೆ ತೆರಳಿ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕೆಂದು ಆದೇಶವಿದ್ದರು ಅದು ಇಲ್ಲಿ ಪಾಲನೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಗಮನಹರಿಸಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ ಆಯೋಗದ ಇನ್ನಿತರ ಸದಸ್ಯರಾದ ಹೆಚ್.ವಿ.ಶಿವಶಂಕರ, ಡಿ.ಜಿ.ಹಸಬಿ, ಬಿ.ಎ.ಮಹಮ್ಮದ ಅಲಿ, ಮಂಜುಳಾಬಾಯಿ ಅವರುಗಳು ಮಾತನಾಡಿ ಅಪೌಷ್ಠಿಕತೆ ನಿವಾರಣೆ ನಿಟ್ಟಿನಲ್ಲಿ ಆಯೋಗದ ಮಹತ್ವದ ಈ ಸಭೆಗೆ ಗೈರು ಹಾಜರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಗೈರು ಹಾಜರಿಯನ್ನು ಅಧಿಕೃತವಾಗಿ ದಾಖಲಿಸಿಲಾಗುವುದು. ಪಡಿತರ ಅಂಗಡಿ ಹಂತದಲ್ಲಿ ಆಹಾರ ಜಾಗೃತಿ ಸಭೆ ಮತ್ತು ಅಂಗನವಾಡಿ ಹಂತದಲ್ಲಿ ಬಾಲ ವಿಕಾಸ ಸಭೆ ಕಡ್ಡಾಯವಾಗಿ ನಡೆಸಬೇಕು. ಜಿಲ್ಲೆಯ ಎಲ್ಲ ಪಡಿತರ ಅಂಗಡಿಗಳಿಗೆ ಪಿ.ಓ.ಎಸ್ ಅಳವಡಿಸಬೇಕು ಮತ್ತು ಆಹಾರ ಅದಾಲತ್ ಕಡ್ಡಾಯವಾಗಿ ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ ಮಾತನಾಡಿ ಆಹಾರ ಆಯೋಗವು ಕಳೆದ ಎರಡ್ಮೂರು ದಿನಗಳಿಂದ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಆಹಾರಕ್ಕೆ ಸಂಬಂಧಿಸಿದಂತೆ ಕೆಲ ನ್ಯೂನತೆಗಳನ್ನು ಸರಿಪಡಿಸುವಂತೆ ತಿಳಿಸಿದ್ದು, ಂಬಂಧಪಟ್ಟ ಅಧಿಕಾರಿಗಳು ಆಯೋಗದ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಊಚಿಸಿದರು. ಇನ್ನು ಮುಂದೆ ವಸತಿ ನಿಲಯಗಳಿಗೆ ತಾವು ಖುದಾಗಿ ಅನಿರೀಕ್ಷಿತವಾಗಿ ಭೇಟಿ ನೀಡುತ್ತೇನೆ ಎಂದ ಜಿಲ್ಲಾಧಿಕಾರಿಗಳು ತಹಶೀಲ್ದಾರರು ಮತ್ತು ಸಹಾಯಕ ಆಯುಕ್ತರು ಸಹ ಪ್ರತಿವಾರ 2-3 ವಸತಿ ನಿಲಯಗಳೀಗೆ ಭೇಟಿ ನೀಡುವಂತೆ ನಿರ್ದೇಶಿಸಿದರು. ಜಿಲ್ಲೆಯ 983 ಪಡಿತರ ಅಂಗಡಿಗಳ ಪೈಕಿ 983 ಅಂಗಡಿಯಲ್ಲಿ ಪಿ.ಓ.ಎಸ್. ಅಳವಡಿಸಿದ್ದು, ಪಿ.ಓ.ಎಸ್ ಅಳವಡಿಕೆಯಲ್ಲಿ ಇದು ರಾಜ್ಯದಲ್ಲಿಯೆ ಕಲಬುರಗಿ ಜಿಲ್ಲೆ ಅಗ್ರಸ್ಥಾನದಲ್ಲಿದೆ ಎಂದರು.
ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಅರುಣಕುಮಾರ ಸಂಗಾವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ, ಅಳತೆ ಮತ್ತು ತೂಕ ಇಲಾಖೆ, ಕರ್ನಾಟಕ ರಾಜ್ಯ ಆಹಾರ ನಿಗಮ, ಆರೋಗ್ಯ ಇಲಾಖೆಯ ಅಧಿಕಾರಿಗಳು, ತಾಲೂಕಾ ಸಿ.ಡಿ.ಪಿ.ಓಗಳು ಸೇರಿದಂತೆ ಇನ್ನೀತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಾರ್ತಾ ಇಲಾಖೆಯ ಮನೋಹರ ಹೊಸಮನಿ ವಯೋನಿವೃತ್ತಿ
******************************************************
ಕಲಬುರಗಿ,ಜೂ.30.(ಕ.ವಾ.)-ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಹಿರಿಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹೋಹರ ಹೊಸಮನಿ ಅವರು ಶನಿವಾರ ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ವಾರ್ತಾ ಭವನದಲ್ಲಿ ಇಲಾಖೆಯ ವತಿಯಿಂದ ಆತ್ಮೀಯವಾಗಿ ಬೀಳ್ಕೋಡಲಾಯಿತು.
ಅವರು ವಾರ್ತಾ ಇಲಾಖೆಯಲ್ಲಿ 1985ರಲ್ಲಿ ವಾಹನ ಚಾಲಕರಾಗಿ ಸೇವೆಗೆ ಸೇರಿ ತದನಂತರ ಹಿರಿಯ ವಾಹನ ಚಾಲಕರಾಗಿ ಮುಂಬಡ್ತಿ ಹೊಂದಿ ಕಲಬುರಗಿ ಮತ್ತು ರಾಯಚೂರ ಜಿಲ್ಲೆಯ ಕಚೇರಿಗಳಲ್ಲಿ ಸುಮಾರು 33 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದಾರೆ.
ವಯೋನಿವೃತ್ತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಿದ ಸರಳ ಸಮಾರಂಭದಲ್ಲಿ ನಿವೃತ್ತ ವಾರ್ತಾ ಇಲಾಖೆಯ ಉಪನಿರ್ದೇಶಕ ಜಿ. ಚಂದ್ರಕಾಂತ ಸೇರಿದಂತೆ ಸಿಬ್ಬಂದಿ ವರ್ಗವು ಮನೋಹರ ಹೊಸಮನಿ ಹಾಗೂ ಅವರ ಧರ್ಮ ಪತ್ನಿಯನ್ನು ಸತ್ಕರಿಸಿ ಹಾಗೂ ನೆನಪಿನ ಕಾಣಿಕೆ ನೀಡಿ ಹಾರ್ದಿಕವಾಗಿ ಬೀಳೋಡಲಾಯಿತು.
ಜುಲೈ 3ರಂದು ವಿಶ್ವ ಪರಿಸರ ದಿನಾಚರಣೆ
*************************************
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ-ಸಸಿ ನೆಡುವ ಕಾರ್ಯಕ್ರಮ
****************************************************
ಕಲಬುರಗಿ,ಜೂ.30.(ಕ.ವಾ.)-ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಪರಿಸರ ವಿಜ್ಞಾನ ವಿಭಾಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಅರಣ್ಯ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ-2018” ಅಂಗವಾಗಿ ಮಂಗಳವಾರ ಜುಲೈ 3ರಂದು ಬೆಳಿಗ್ಗೆ 10 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅದೇ ರೀತಿ ಅಂದು ಬೆಳಿಗ್ಗೆ 10.30 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ. ಆರ್. ಲಕ್ಷ್ಮೀನಾರಾಯಣ, ಕಲಬುರಗಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ಚವ್ಹಾಣ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ವೆಂಕಟೇಶ ಶೇಖರ ಅತಿಥಿಗಳಾಗಿ ಪಾಲ್ಗೊಳ್ಳುವರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಪ್ರಭುರಾಜ ಕಾಂತ, ವಿದ್ಯಾವಿಷಯಕ ಸದಸ್ಯ ಡಾ. ಬಿ.ಪಿ. ಬುಳ್ಳಾ ಅತಿಥಿಗಳಾಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಆರ್. ನಿರಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. “ಪ್ಲಾಸ್ಟಿಕ್ ಮಾಲಿನ್ಯ ಹಿಮ್ಮೆಟ್ಟಿಸಿ” ಎಂಬುದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಘೋಷ ವಾಕ್ಯವಾಗಿದೆ.
ಇಂದ್ರಧನುಷ ಲಸಿಕಾ ಅಭಿಯಾನದಡಿ ತರಬೇತಿ
*******************************************
ಕಲಬುರಗಿ,ಜೂ.30.(ಕ.ವಾ.)-ಕಲಬುರಗಿಯ ಅಶೋಕ ನಗರ, ಹಿರಾಪೂರ, ಮಾಣಿಕೇಶ್ವರಿ, ಶಹಾಬಜಾರ, ತಾರಫೈಲ, ಸೇಂಟ ಜಾನ್ಸ, ಮಕ್ತಂಪೂರ, ಶಿವಾಜಿನಗರ, ತಾಜನಗರ, ನ್ಯೂ ರಹಮತ ನಗರ ಮತ್ತು ಖಾನಾಪೂರ, ನಗರ ಆರೋಗ್ಯ ಕೇಂದ್ರಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಇಂದ್ರಧನುಷ ನಗರ ಲಸಿಕಾ ಅಭಿಯಾನದಡಿ ಗರ್ಭಿಣಿ ಸ್ತ್ರೀಯರು, 0-2 ವರ್ಷ ಮತ್ತು 5-6 ವರ್ಷದ ಮಕ್ಕಳನ್ನು ಸಮೀಕ್ಷೆ ಮಾಡುವ ಕುರಿತು ತರಬೇತಿ ಏರ್ಪಡಿಸಲಾಗಿತ್ತು. ತರಬೇತಿ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು ಮತ್ತು ಲಸಿಕಾ ಮೇಲ್ವಿಚಾರಕರು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕಿಯರ
*******************************************
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಸೂಚನೆ
****************************************************
ಕಲಬುರಗಿ,ಜೂ.30.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲಪುರ ಹಾಗೂ ಆಳಂದ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ/ ಸಹಾಯಕಿಯರ ಗೌರವಧನದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜೇವರ್ಗಿ, ಅಫಜಲಪುರ ಮತ್ತು ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಸದರಿ ಅಭ್ಯರ್ಥಿಗಳು ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಕುರಿತು ಈ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ವಾಸಸ್ಥಳ, ವಯಸ್ಸು ಮತ್ತು ಮತ್ತಿತರ ಯಾವುದಾದರೂ ತಕರಾರು/ಆಕ್ಷೇಪಣೆಗಳು ಸಲ್ಲಿಸಲು ಬಯಸಿದ್ದಲ್ಲಿ 2018ರ ಜುಲೈ 9ರೊಳಗೆ ಲಿಖಿತ ರೂಪದಲ್ಲಿ ಆಯಾ ತಾಲೂಕುಗಳ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸುವಂತೆ ಜೇವರ್ಗಿ, ಅಫಜಲಪುರ ಮತ್ತು ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರತ್ಯೇಕವಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ/ ಸಹಾಯಕಿಯರ ಗೌರವಧನದ ಹುದ್ದೆಗಳಿಗೆ ಅಭ್ಯರ್ಥಿಗಳು ಸಲ್ಲಿಸಿರುವ ದಾಖಲಾತಿಗಳ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಮಾಡಲಾಗಿದೆ. ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಪುರಸ್ಕರಿಸಲಾಗುವುದಿಲ್ಲ ಅಂಗನವಾಡಿ ಕಾರ್ಯಕರ್ತೆಯರ/ ಸಹಾಯಕೀಯರ ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳಾಗಿರುವ ಜೇವರ್ಗಿ, ಅಫಜಲಪುರ ಹಾಗೂ ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ
******************************************
ವಿರೋಧಿ ದಿನದ ಅಂಗವಾಗಿ ಅರಿವು ಕಾರ್ಯಕ್ರಮ
******************************************
ಕಲಬುರಗಿ,ಜೂ.30.(ಕ.ವಾ.)-ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಈಶ್ಯಾನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ (ಜೂನ್ 30ರಂದು) ಅಂತರರಾಷ್ಟೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆ ಮನೋವೈದ್ಯ ಡಾ. ವಿಜಯೇಂದ್ರ ಮಾನಸಿಕ ಕಾಯಿಲೆಗಳ ಲಕ್ಷಣಗಳು, ಗುರುತಿಸುವಿಕೆ, ಸಲಹೆ ಮತ್ತು ಚಿಕಿತ್ಸೆ, ಮಾದಕ ವಸ್ತುಗಳಿಂದಾಗುವ ದುಷ್ಟಪರಿಣಾಮಗಳು ಕುರಿತು ವಿವರವಾಗಿ ಉಪನ್ಯಾಸ ನೀಡಿದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಾರ್ಮಿಕ ಕಲ್ಯಾಣ ಅಧಿಕಾರಿ ವಿ ಶಂಕರಪ್ಪ, ಪ್ರಭಾರಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ. ಖಾದ್ರಿ, ಮನ:ಶಾಸ್ತ್ರಜ್ಞ ಸಂತೋಷಿ ಗೋಳ, ನರ್ಸಿಂಗ ಸಿಬ್ಬಂದಿ ಸುರೇಖಾ, ಆಪ್ತಸಮಾಲೋಚಕರಾದ ರೇಖಾ, ಲಕ್ಷ್ಮಣರಾವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಮಾಜ ಕಾರ್ಯಕರ್ತ ನಾಗರಾಜ ಎನ್. ಬಿರಾದಾರ, ನಾಗರಾಜ ಎನ್. ಬಿರಾದರ ಕಾರ್ಯಕ್ರಮ ನಿರೂಪಿಸಿದರು.





ಹೀಗಾಗಿ ಲೇಖನಗಳು NEWS AND PHOTO DATE: 30--6--2018

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 30--6--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 30--6--2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-30-6-2018.html

Subscribe to receive free email updates:

0 Response to "NEWS AND PHOTO DATE: 30--6--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ