ಶೀರ್ಷಿಕೆ : News and photo Date: 29-06-2018
ಲಿಂಕ್ : News and photo Date: 29-06-2018
News and photo Date: 29-06-2018
ಕಚೇರಿಯಲ್ಲಿ ಗುಣಮಟ್ಟದ ಕರ್ತವ್ಯ ರೂಢಿಸಿಕೊಳ್ಳಲು ಸಲಹೆ
****************************************************
ಕಲಬುರಗಿ,ಜೂ.29.(ಕ.ವಾ.)-ಕಚೇರಿಗಳಲ್ಲಿ ಗುಣಮಟ್ಟದ ಕರ್ತವ್ಯ ನಿರ್ವಹಿಸುವುದು ಅಧಿಕಾರಿಗಳನ್ನು ಅವಲಂಬಿಸಿರುತ್ತದೆ. ಅಧಿಕಾರಿ ಮತ್ತು ಸಿಬ್ಬಂದಿಗಳೆಲ್ಲರೂ ಗುಣಮಟ್ಟದ ಕರ್ತವ್ಯ ನಿರ್ವಹಿಸುವ ರೂಢಿ ಮಾಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಸಲಹೆ ನೀಡಿದರು.
ಅವರು ಶುಕ್ರವಾರ ಕಲಬುರಗಿ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯಿಂದ ಆಯೋಜಿಸಿದ್ದ ಸಾಂಖ್ಯಿಕ ತಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಜನ್ಮ ದಿನಾಚರಣೆ ಹಾಗೂ ಸಾಂಖ್ಯಿಕ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಕಚೇರಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ ಎಂದರೆ ಆ ಕಚೇರಿಯಲ್ಲಿ ಗುಣಮಟ್ಟದ ಸೇವೆ ನೀಡುತ್ತಿದ್ದಾರೆ ಎಂದರ್ಥ. ಇದರಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ. ಎಲ್ಲ ಇಲಾಖೆಗಳ ಪ್ರಗತಿ ಅಂಕಿ ಸಂಖ್ಯೆಗಳನ್ನು ನಿಖರವಾಗಿ ಸಂಗ್ರಹಿಸಿದ್ದಲ್ಲಿ ಗುಣಮಟ್ಟದಿಂದ ಕೂಡಿರುವ ಜಿಲ್ಲೆಯ ವರದಿಯನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ ಎಂದರು.
ಗುರುಕುಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಂತೋಷ ಹಿರೇಮಠ ಅವರು ಆಡಳಿತಾತ್ಮಕ ಅಂಕಿ ಅಂಶಗಳ ಗುಣಮಟ್ಟ ಖಾತ್ರಿ ಕುರಿತು ಉಪನ್ಯಾಸ ನೀಡಿ, ಸರ್ಕಾರ ಅಥವಾ ಖಾಸಗಿಯವರು ಯಾವುದೇ ಯೋಜನೆ ಪ್ರಾರಂಭಿಸಬೇಕಾದಲ್ಲಿ ಯೋಜನೆಗೆ ಸಂಬಂಧಿಸಿದ ಮೂಲಭೂತ ಅಂಕಿ ಅಂಶಗಳ ಅವಶ್ಯಕತೆ ಇರುತ್ತದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಕೈಗೊಳ್ಳುವವರು ಸಂಶೋಧನಾ ವರದಿಯನ್ನು ನಿಗದಿತ ಅವಧಿಯೊಳಗೆ ಬಿಡುಗಡೆ ಮಾಡಬೇಕು ಅಲ್ಲದೇ ವರದಿಯ ಗುಣಮಟ್ಟ ಖಾತರಿ ಪಡಿಸಬೇಕು ಎಂದರು
ಇತ್ತೀಚೆಗೆ ಸಂಗ್ರಹಿಸಲಾಗುತ್ತಿರುವ ಹಾಗೂ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳು ನಿಖರ ಹಾಗೂ ಗುಣಮಟ್ಟದಿಂದ ಕೂಡಿಲ್ಲವಾದ್ದರಿಂದ ಅಂಕಿ ಅಂಶಗಳ ಮೇಲೆ ಅಪನಂಬಿಕೆ ವ್ಯಕ್ತವಾಗುತ್ತಿದೆ. ಅಂಕಿ ಅಂಶಗಳನ್ನು ಸಂಗ್ರಹಿಸುವಾಗ ಪ್ರಸ್ತುತತೆ, ಪ್ರವೇಶಿಸುವಿಕೆ, ಸಮಯೋಚಿತ, ನಿಖರತೆ ಹಾಗೂ ಸುಸಂಬಂಧತೆ ಅಂಶಗಳನ್ನು ಒಳಗೊಂಡಿರಬೇಕು. ಯಾವುದೇ ಉದ್ಯೋಗ ಮುಂದುವರೆಯಬೇಕಾದರೆ ಅವರ ಉತ್ಪನ್ನಗಳಲ್ಲಿ ಗುಣಮಟ್ಟ ಹೇಗೆ ಪ್ರಾಮುಖ್ಯತೆ ವಹಿಸುತ್ತದೆಯೋ ಅದೇ ರೀತಿ ಕಚೇರಿಗಳಲ್ಲಿ ಅಂಕಿ ಸಂಖ್ಯೆಗಳ ದಾಖಲೆ ಗುಣಮಟ್ಟದಿಂದ ಕೂಡಿರುವುದು ಪ್ರಾಮುಖ್ಯತೆ ಪಡೆಯುತ್ತದೆ ಎಂದರು.
ಉದ್ಯೋಗದಲ್ಲಿ ಗುಣಮಟ್ಟ ಕಾಯ್ದುಕೊಂಡವರಿಗೆ ಸಿಕ್ಸ್ ಸಿಗ್ಮಾ ಎಂಬ ಗುಣಮಟ್ಟದ ಪ್ರಮಾಣಪತ್ರ ನೀಡಲಾಗುವುದು. ಭಾರತದಲ್ಲಿ ಈ ಪ್ರಮಾಣಪತ್ರವು ಮುಂಬಯಿಯಲ್ಲಿ ಎಲ್ಲ ಕಚೇರಿ ಮತ್ತು ಅವಶ್ಯಕತೆಯಿದ್ದಲ್ಲಿ ಮನೆಯಿಂದ ಆಹಾರದ ಡಬ್ಬಗಳನ್ನು ಸಂಗ್ರಹಿಸಿ ತಲುಪಿಸುವ ಡಬ್ಬಾವಾಲಾ ಸರ್ವಿಸ್‍ಗೆ ದೊರೆತಿದೆ. ಗುಣಮಟ್ಟದ ಪ್ರಮಾಣಪತ್ರ ಪಡೆಯುವುದು ಕೇವಲ ಗುಣಮಟ್ಟದಿಂದ ಮಾತ್ರ ಸಾಧ್ಯ ಅದು ಪದವಿಯಿಂದಲ್ಲ ಎಂದು ವಿವರಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಯಗಲಾಪುರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಜಂಟಿ ನಿರ್ದೇಶಕ ಬಸವರಾಜ ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ತೋಟಗಾರಿಕೆ ಉಪನಿರ್ದೇಶಕ ಮಹ್ಮದ್ ಅಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆಯ ಸಹಾಯಕ ನಿರ್ದೇಶಕ ಸಿಮಿಯೋನ ಎಸ್. ತುಮಕೂರಕರ ಅವರು ಸಾಂಖ್ಯಿಕ ತಜ್ಞ ಪ್ರೊ. ಪಿ.ಸಿ. ಮಹಾಲನೋಬಿಸ್ ಅವರ ಪರಿಚಯ ನೀಡಿದರು.

ಜುಲೈ 2ರಂದು ಕ್ಷಯರೋಗದ ಸೇವೆಗಳು ಮನೆಬಾಗಿಲವರೆಗೆ ಕಾರ್ಯಕ್ರಮ
****************************************************************
ಉದ್ಘಾಟನೆ
*************
ಕಲಬುರಗಿ,ಜೂ.29.(ಕ.ವಾ.)-ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಇವುಗಳ ಸಂಯುಕ್ತಾಶ್ರಯದಲ್ಲಿ “ಸಕ್ರಿಯ ಕ್ಷಯರೋಗ ಪ್ರಕರಣ ಕಂಡು ಹಿಡಿಯುವುದು ಮತ್ತು ಕ್ಷಯರೋಗದ ಸೇವೆಗಳು ಮನೆಬಾಗಿಲವರೆಗೆ” ತಲುಪಿಸುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಇದೇ ಜುಲೈ 2ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ತಾಜನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಮಹಾನಗರ ಪಾಲಿಕೆಯ ಉಪಮಹಾಪೌರ ಪುತಲಿ ಬೇಗಂ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಂ.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಕಲಬುರಗಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ|| ರಾಜೇಂದ್ರ ಭಾಲ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಕ್ರಿಯ ಕ್ಷಯರೋಗ ಪ್ರಕರಣ ಕಂಡು ಹಿಡಿಯುವುದು ಮತ್ತು ಕ್ಷಯರೋಗದ ಸೇವೆಗಳು ಮನೆಬಾಗಿಲವರೆಗೆ” ತಲುಪಿಸುವ ಕಾರ್ಯಕ್ರಮವನ್ನು ಜುಲೈ 2 ರಿಂದ 13ರವರೆಗೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಜುಲೈ 2ರಂದು ಅಪ್ರೆಂಟಿಶಿಪ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ
***********************************************************
ಕಲಬುರಗಿ,ಜೂ.29.(ಕ.ವಾ.)-ರಾಮನಗರ ಜಿಲ್ಲೆಯ ಬಿಡದಿಯ ಮೆ|| ಟೊಯೊಟೊ ಕಿರ್ಲೋಸ್ಕರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಐ.ಟಿ.ಐ. ವೃತ್ತಿಯ ಫಿಟ್ಟರ್, ಎಲೆಕ್ಟ್ರಿಶಿಯನ್, ವೆಲ್ಡರ್, ಎಂ.ಎಂ.ವಿ., ಟರ್ನರ್, ಡಿಜೇಲ್ ಮೆಕ್ಯಾನಿಕ್ ಮತ್ತು ಟಿಡಿಎಂ ವೃತ್ತಿಗಳಲ್ಲಿ ಅಪ್ರೆಂಟಿಶಿಪ್ ತರಬೇತಿಗಾಗಿ 2018ರ ಜುಲೈ 2ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಎಂ.ಎಸ್.ಕೆ.ಮಿಲ್ ರಸ್ತೆಯ ಪುರುಷರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಲಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಪ್ರಾಚಾರ್ಯರು ತಿಳಿಸಿದ್ದಾರೆ.
ಮೇಲ್ಕಂಡ ಐಟಿಐ ವೃತ್ತಿಗಳಲ್ಲಿ ಕನಿಷ್ಠ ಶೇ. 50ರಷ್ಟು ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಅಂಕ ಪಡೆದು ಪಾಸಾದ 18ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಎನ್.ಸಿ.ವಿ.ಟಿ.ಗೆ ಒಂದು ವರ್ಷ, ಎಸ್.ಸಿ.ವಿ.ಟಿ.ಗೆ ಎರಡು ವರ್ಷ ಅಪ್ರೆಂಟಿಶಿಪ್ ತರಬೇತಿ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ತಮ್ಮ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಮೇಲ್ಕಂಡ ದಿನಾಂಕದಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸೂಚನಾ ಫಲಕವನ್ನು ನೋಡಬೇಕು ಹಾಗೂ ದೂರವಾಣಿ ಸಂಖ್ಯೆ 080-66292103ನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

ವಾಜಪೇಯಿ ವಸತಿ ಯೋಜನೆಗಾಗಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಜೂ.29.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ 2017-18ನೇ ಸಾಲಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ ಕಲಬುರಗಿ ದಕ್ಷಿಣ ವಿಧಾನಸಭಾ ಮತಕ್ಷೇತ್ರಕ್ಕೆ ಹೆಚ್ಚುವರಿಯಾಗಿ 75 ಗುರಿ ನಿಗದಿಪಡಿಸಲಾಗಿದೆ. ಇದಕ್ಕಾಗಿ ಅರ್ಹ ವಸತಿ ರಹಿತ ಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನಮೂರ್ತಿ ತಿಳಿಸಿದ್ದಾರೆ.
ಒಟ್ಟು 75 ಫಲಾನುಭವಿಗಳ ಪೈಕಿ 68 ಸಾಮಾನ್ಯ ವರ್ಗ ಹಾಗೂ 7 ಅಲ್ಪಸಂಖ್ಯಾತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಿಗದಿತ ಅರ್ಜಿ ನಮೂನೆಗಳನ್ನು ಮಹಾನಗರ ಪಾಲಿಕೆ ಕಚೇರಿಯಿಂದ ಪಡೆದು ಸಂಪೂರ್ಣ ವಿವರವನ್ನು ಭರ್ತಿ ಮಾಡಿ ಅರ್ಜಿಯೊಂದಿಗೆ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಚಾಲ್ತಿ ವರ್ಷದ ಖಾತಾ ಪ್ರತಿ ಹಾಗೂ ಕರ ಪಾವತಿಸಿದ ರಸೀದಿ, ಆಧಾರ ಕಾರ್ಡ ಪ್ರತಿ, ಚುನಾವಣಾ ಗುರುತಿನ ಚೀಟಿ ಪ್ರತಿ (ದಕ್ಷಿಣ ಮತಕ್ಷೇತ್ರ), ಪಡಿತರ ಚೀಟಿ, ಪಾಸಪೋರ್ಟ್ ಸೈಜಿನ ಭಾವಚಿತ್ರ, ಇತ್ತೀಚಿನ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕಲಬುರಗಿ ನಗರದಲ್ಲಿ ಮನೆ ಇಲ್ಲ ಎಂಬುದರ ಕುರಿತು 20ರೂ.ಗಳ ಛಾಪಾ ಕಾಗದ ಮೇಲೆ ಕೋರ್ಟ ಅಫಿಡೇವಿಟ್ ಮಾಡಿಸಿದ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿಯನ್ನು 2018ರ ಜುಲೈ 28ರೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ವಸತಿ ಶಾಖೆಯಲ್ಲಿ ಖುದ್ದಾಗಿ ಸಲ್ಲಿಸಬೇಕು.
ನಿಗದಿಪಡಿಸಿದ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿಯಲ್ಲಿ ಅಪೂರ್ಣ ಮಾಹಿತಿ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರಪಾಲಿಕೆಯ ವಸತಿ ಶಾಖೆಯನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೌಲಾನಾ ಆಜಾದ ಆಂಗ್ಲಮಾಧ್ಯಮ ವಸತಿ ರಹಿತ ಶಾಲೆ:
*************************************************
ಆರನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
*****************************************
ಕಲಬುರಗಿ,ಜೂ.29.(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಲಬುರಗಿಯ ಮಹಿಬೂಬ ನಗರದಲ್ಲಿ ಪ್ರಾರಂಭಿಸಲಾದ ಮೌಲಾನಾ ಆಜಾದ್ ಆಂಗ್ಲಮಾಧ್ಯಮ ಮಾದರಿ ವಸತಿ ರಹಿತ ಶಾಲೆಯಲ್ಲಿ 2018-19ನೇ ಸಾಲಿನಲ್ಲಿ ಖಾಲಿಯಿರುವ 6ನೇ ತರಗತಿ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಸಿಖ್ ಮತ್ತು ಪಾರ್ಸಿ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯ ವಿದ್ಯಾರ್ಥಿಗಳಿಗೆ ಶೇ. 75 ಹಾಗೂ ಇತರೆ ಸಮುದಾಯದ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ. ಅರ್ಜಿ ನಮೂನೆಯನ್ನು ವಸತಿ ಶಾಲೆಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ ಜುಲೈ 10 ರೊಳಗಾಗಿ ಕಲಬುರಗಿಯ ಮಹಿಬೂಬ ನಗರದಲ್ಲಿರುವ ಮೌಲಾನಾ ಆಜಾದ್ ಆಂಗ್ಲಮಾಧ್ಯಮ ವಸತಿ ರಹಿತ ಮಾದರಿ ಶಾಲೆಯ ಕಾರ್ಯಾಲಯದಲ್ಲಿ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ:
*******************************
ಖಾಲಿಯಿರುವ ಸ್ಥಾನಗಳ ಭರ್ತಿಗಾಗಿ ಅರ್ಜಿ ಆಹ್ವಾನ
*********************************************
ಕಲಬುರಗಿ,ಜೂ.29.(ಕ.ವಾ.)-ಕಲಬುರಗಿ ಉತ್ತರ (ಕಾಳಗನೂರ) ಪ.ಜಾತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2018-19ನೇ ಸಾಲಿಗಾಗಿ 7 ಮತ್ತು 8ನೇ ತರಗತಿಗಳಲ್ಲಿ ಖಾಲಿಯಿರುವ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಆಸಕ್ತ ವಿದ್ಯಾರ್ಥಿಗಳು ಖುದ್ದಾಗಿ ವಸತಿ ಶಾಲೆ ಬಂದು ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಜುಲೈ 6ರೊಳಗೆ ಅರ್ಜಿ ಸಲ್ಲಿಸಬೇಕು. ಜುಲೈ 9 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.
ಖಾಲಿಯಿರುವ ತರಗತಿ ಮತ್ತು ಪ್ರವರ್ಗವಾರು ಸ್ಥಾನಗಳ ವಿವರ ಇಂತಿದೆ. ಈ ವಸತಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಒಟ್ಟು 10 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ ಎಸ್.ಸಿ.-9 ಮತ್ತು ಎಸ್.ಟಿ.-1 ಸ್ಥಾನಗಳು ಖಾಲಿ ಇರುತ್ತದೆ. 8ನೇ ತರಗತಿಯಲ್ಲಿ ಒಟ್ಟು 16 ಸ್ಥಾನಗಳು ಖಾಲಿಯಿದ್ದು, ಇದರಲ್ಲಿ ಎಸ್.ಸಿ.-10, ಎಸ್.ಟಿ.-4, ಪ್ರವರ್ಗ-1 ರವರಿಗೆ-1, ಪ್ರವರ್ಗ 2(ಬಿ)-1 ಸ್ಥಾನಗಳು ಖಾಲಿ ಇರುತ್ತದೆ.

ಹೀಗಾಗಿ ಲೇಖನಗಳು News and photo Date: 29-06-2018
ಎಲ್ಲಾ ಲೇಖನಗಳು ಆಗಿದೆ News and photo Date: 29-06-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 29-06-2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-29-06-2018.html

0 Response to "News and photo Date: 29-06-2018"
ಕಾಮೆಂಟ್ ಪೋಸ್ಟ್ ಮಾಡಿ