News and photo Date: 04--06--2018

News and photo Date: 04--06--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo Date: 04--06--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo Date: 04--06--2018
ಲಿಂಕ್ : News and photo Date: 04--06--2018

ಓದಿ


News and photo Date: 04--06--2018

ಸಮಗ್ರ ಕೃಷಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ
*********************************************
ಕಲಬುರಗಿ,ಜೂ.04.(ಕ.ವಾ.)-ಜಿಲ್ಲೆಯಾದ್ಯಂತ ಪ್ರಥಮ ಹಂತವಾಗಿ ಜೂನ್ 4ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಚಾಲನೆ ನೀಡಿದರು.
ಜೂನ್ 4, 5 ಮತ್ತು 6ರಂದು ಪ್ರಥಮ ಹಂತವಾಗಿ 17 ಹೋಬಳಿಗಳಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ಜರುಗುವುದು. ಅಫಜಲಪುರ ತಾಲೂಕಿನ ಅಫಜಲಪುರ ಮತ್ತು ಆತನೂರ ರೈತ ಸಂಪರ್ಕ ಕೇಂದ್ರ, ಆಳಂದ ತಾಲೂಕಿನ ಆಳಂದ ಮತ್ತು ನಿಂಬರಗಾ ರೈತ ಸಂಪರ್ಕ ಕೇಂದ್ರ, ಚಿಂಚೋಳಿ ತಾಲೂಕಿನ ಚಿಂಚೋಳಿ ಮತ್ತು ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರ, ಚಿತ್ತಾಪುರ ತಾಲೂಕಿನ ಚಿತ್ತಾಪುರ, ನಾಲವಾರ, ಶಹಾಬಾದ ರೈತ ಸಂಪರ್ಕ ಕೇಂದ್ರ, ಕಲಬುರಗಿ ತಾಲೂಕಿನ ಕಲಬುರಗಿ, ಪಟ್ಟಣ, ಮಹಾಗಾಂವ ರೈತ ಸಂಪರ್ಕ ಕೇಂದ್ರ, ಜೇವರ್ಗಿ ತಾಲೂಕಿನ ಜೇವರ್ಗಿ, ಅಂದೋಲಾ, ಇಜೇರಿ ರೈತ ಸಂಪರ್ಕ ಕೇಂದ್ರ ಹಾಗೂ ಸೇಡಂ ತಾಲೂಕಿನ ಸೇಡಂ ಮತ್ತು ಮುಧೋಳ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಜರುಗಿಸಲಾಗುವುದು.
ದ್ವಿತೀಯ ಹಂತವಾಗಿ ಜೂನ್ 7 ರಿಂದ 9ರವರೆಗೆ 15 ಹೋಬಳಿಗಳಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಫಜಲಪುರ ತಾಲೂಕಿನ ಕರಜಗಿ, ಆಳಂದ ತಾಲೂಕಿನ ಮಾದನಹಿಪ್ಪರಗಾ, ಖಜೂರಿ, ನರೋಣಾ, ಚಿಂಚೋಳಿ ತಾಲೂಕಿನ ಸುಲೇಪೇಟ್, ಕೋಡ್ಲಿ, ಚಿತ್ತಾಪುರ ತಾಲೂಕಿನ ಕಾಳಗಿ, ಮಾಡಬೂಳ, ಕಲಬುರಗಿ ತಾಲೂಕಿನ ಔರಾದ್, ಕಮಲಾಪುರ, ಫರಹತಾಬಾದ, ಜೇವರ್ಗಿ ತಾಲೂಕಿನ ಯಡ್ರಾಮಿ, ನೆಲೋಗಿ, ಸೇಡಂ ತಾಲೂಕಿನ ಕೋಡ್ಲಾ ಹಾಗೂ ಅಡಕಿ ರೈತ ಸಂಪರ್ಕ ಕೇಂದ್ರಗಳಲ್ಲಿ ಜರುಗುವುದು.
ಈ ಅಭಿಯಾನದಲ್ಲಿ ರೈತರಿಗೆ ಕೃಷಿ, ಕೃಷಿಯೇತರ ಚಟುವಟಿಕೆ, ಬೆಳೆ ವಿಮೆ, ಕೃಷಿ ಸಾಲ ಬಗ್ಗೆ ವಿವರ ಮಾಹಿತಿಯನ್ನು ತಲುಪಿಸಲು ಕೃಷಿ ಇಲಾಖೆಯಿಂದ ಕರಪತ್ರಗಳನ್ನು ಮುದ್ರಿಸಿ ಎಲ್ಲ ರೈತರಿಗೆ ಮಾಹಿತಿ ನೀಡಲಾಗುವುದು. ಅಭಿಯಾನದ ಮೊದಲ ಮತ್ತು ಎರಡನೇ ದಿನ ಗ್ರಾಮ ಪಂಚಾಯಿತಿಗಳಲ್ಲಿ ಸಮಗ್ರ ಕೃಷಿ ಮಾಹಿತಿ ಘಟಕದೊಂದಿಗೆ ರೈತರಿಗೆ ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ, ಕೃಷಿ ತಾಂತ್ರಿಕತೆಗಳ ಅಳವಡಿಕೆ ಕುರಿತು ಪ್ರಾತ್ಯಕ್ಷಿಕೆ ಮತ್ತು ರೈತರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು. ಮೂರನೇ ದಿನ ಹೋಬಳಿ ಕೇಂದ್ರ ಸ್ಥಾನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ವಿಜ್ಞಾನಿಗಳೊಂದಿಗೆ ರೈತರ ಸಂವಾದ ನಡೆಸಲಾಗುವುದು. ಇದಕ್ಕಾಗಿ ಒಟ್ಟು 17 ವಾಹನಗಳನ್ನು ಸಿದ್ಧಪಡಿಸಲಾಗಿದ್ದು, ವಾಹನಗಳು ಎಲ್ಲ ಗ್ರಾಮಗಳಿಗೆ ಸಂಚರಿಸಿ ಮಾಹಿತಿ ನೀಡುವುದು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಕೃಷಿ ಇಲಾಖೆ ಉಪ ನಿರ್ದೇಶಕ ಸಮದ್ ಪಟೇಲ್, ಉಪನಿರ್ದೇಶಕ ಬಾಲರಾಜ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಉಪ್ಪಾರ, ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೇವಣಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುವರ್ಣಾ ಬಿ ಯದ್ಲಾಪುರ ಪಾಲ್ಗೊಂಡಿದ್ದರು. ಇದೇ ಸಮಯದಲ್ಲಿ ಕೃಷಿ ಇಲಾಖೆಯಿಂದ ಹೊರತಂದಿರುವ ವಿವಿಧ ಯೋಜನೆಗಳ ಕರಪತ್ರ ಮತ್ತು ಪೋಸ್ಟರ್‍ಗಳನ್ನು ಬಿಡುಗಡೆ ಮಾಡಲಾಯಿತು.
ಮತದಾರರು ಒಂದೆ ಭಾಷೆಯಲ್ಲಿ ಮತ ಚಲಾಯಿಸಲು ಸೂಚನೆ
******************************************************
ಕಲಬುರಗಿ,ಜೂ.04.(ಕ.ವಾ.)-ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನದಲ್ಲಿ ಮತದಾರರು ಮಾನ್ಯತೆ ಪಡೆದ ಭಾಷೆಯ ಪೈಕಿ ಒಂದೆ ಬಗೆಯ ಸಂಖ್ಯೆಗಳಿಂದ ಪ್ರಾಶಸ್ತ್ಯ ಮತಗಳನ್ನು ಚಲಾಯಿಸಬೇಕು. ಈ ನಿಟ್ಟಿನಲ್ಲಿ ಪ್ರತಿ ಮತಗಟ್ಟೆಯಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಬೇಕೆಂದು ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಪಂಕಜಕುಮಾರ ಪಾಂಡೆ ತಿಳಿಸಿದರು.
ಅವರು ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು, ಗಣಕಯಂತ್ರ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಮತ ಎಣಿಕೆ ವಿಧಾನ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿ, ಮತದಾರರು ಮತಗಟ್ಟೆಗಳಲ್ಲಿ ನೀಡುವ ನೆರಳೆ ಬಣ್ಣದ ಸ್ಕೇಚ್ ಪೇನ್‍ನಿಂದ ಇಂಗ್ಲೀಷ, ಕನ್ನಡ, ಹಿಂದಿ, ಉರ್ದು, ರೋಮನ್‍ಗಳಂತಹ ಮಾನ್ಯತೆ ಪಡೆದ ಭಾಷೆಗಳ ಯಾವುದಾದರೂ ಒಂದು ಭಾಷೆಯ ನಂಬರುಗಳಲ್ಲಿ ಪ್ರಾಶಸ್ತ್ಯ ಮತಗಳನ್ನು ಚಲಾಯಿಸಬೇಕು. ಹಲವು ಬಗೆಯ ಭಾಷೆಗಳ ನಂಬರುಗಳ ಮೂಲಕ ಮತ ಚಲಾಯಿಸಿದ್ದಲ್ಲಿ ಅಂತಹ ಮತ ಅನರ್ಹವಾಗುವುದು ಎಂದರು.
ಮತದಾನದಂದು ಚಲಾಯಿಸಿದ ಒಟ್ಟು ಪುರಸ್ಕøತ ಮತಗಳ ಪೈಕಿ ಅರ್ಧಕ್ಕಿಂತ ಒಂದು ಮತ ಹೆಚ್ಚಿಗೆ ಪಡೆದ ಅಭ್ಯರ್ಥಿಗಳು ಈಶಾನ್ಯ ಪದವೀಧರರ ಕ್ಷೇತ್ರಕ್ಕೆ ಚುನಾಯಿತರಾಗುತ್ತಾರೆ. ಮತ ಎಣಿಕೆ ಮಾಡುವಾಗ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಅಭ್ಯರ್ಥಿಯು ಪಡೆದ್ದಲ್ಲಿ ಅವರನ್ನು ಜಯಶಾಲಿಯನ್ನಾಗಿ ಘೋಷಿಸಲಾಗುವುದು. ಇಲ್ಲದಿದ್ದಲ್ಲಿ ಮತ ಎಣಿಕೆಯಲ್ಲಿ ಅತೀ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಯನ್ನು ರದ್ದುಗೊಳಿಸಿ ಅವರ ಪ್ರಾಶಸ್ತ್ಯ ಮತಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಿ ಅಭ್ಯರ್ಥಿಗಳ ಹೆಸರಿಗೆ ಕೂಡಿಸಲಾಗುವುದು. ಆಗಲೂ ಅರ್ಧಕ್ಕಿಂತ ಹೆಚ್ಚು ಮತಗಳು ಒಬ್ಬ ಅಭ್ಯರ್ಥಿಗೆ ಬರದಿದ್ದರೆ ಮತ ಎಣಿಕೆಯಲ್ಲಿ ಅತೀ ಕಡಿಮೆ ಮತಗಳನ್ನು ಪಡೆದ ಅಭ್ಯರ್ಥಿಯನ್ನು ರದ್ದುಗೊಳಿಸಿ ಅವರ ಪ್ರಾಶಸ್ತ್ಯ ಮತಗಳಲ್ಲಿ ಮೂರನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಿ ಅಭ್ಯರ್ಥಿಗಳ ಹೆಸರಿಗೆ ಕೂಡಿಸಲಾಗುವುದು. ಈ ರೀತಿ ಒಬ್ಬ ಅಭ್ಯರ್ಥಿ ಅರ್ಧಕ್ಕಿಂತ ಹೆಚ್ಚು ಮತಗಳನ್ನು ಪಡೆಯುವವರೆಗೆ ಕೈಗೊಳ್ಳಲಾಗುವುದು ಎಂದರು.
ಮಾಸ್ಟರ್ ಟ್ರೇನರ್ ಕಾಲೇಜು ಶಿಕ್ಷಣ ಇಲಾಖೆ ಸಹ ಪ್ರಾಧ್ಯಾಪಕ ಡಾ|| ಶಶಿಶೇಖರ ರೆಡ್ಡಿ ತರಬೇತಿ ನೀಡಿ, ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗಾಗಿ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗುವುದು. ಮತ ಪೆಟ್ಟಿಗೆ ತೆರೆದ ನಂತರ ಚಲಾವಣೆಯಾದ ಮತಗಳೊಂದಿಗೆ ಮತ ಪೆಟ್ಟಿಗೆಯಲ್ಲಿರುವ ಮತಗಳ ಹೊಂದಾಣಿಕೆ ಬಗ್ಗೆ ಪರಿಶೀಲಿಸಿ 25 ಮತಗಳ ಬಂಡಲ್ ತಯಾರಿಸಿಕೊಂಡು ಡ್ರಮ್ ಸುಪರವೈಜರ್‍ಗೆ ನೀಡಬೇಕು. ಡ್ರಮ ಸುಪರವೈಜರ್ ಎಲ್ಲ ಬಂಡಲಗಳನ್ನು ಮಿಶ್ರಣ ಮಾಡಿ ಒಂದೊಂದು ಟೇಬಲ್‍ಗೆ ಒಂದು ಸಾವಿರ ಮತಗಳನ್ನು ನೀಡಬೇಕು. ಮತ ಎಣಿಕೆ ಸುಪರವೈಜರ್ ತಮ್ಮ ಟೇಬಲಿನ ಮೇಲೆ ಒಟ್ಟು 10 ಅಭ್ಯರ್ಥಿಗಳ ಮತಗಳನ್ನು ವಿಂಗಡಿಸಲು, ನೋಟಾ, ಅನರ್ಹ ಹಾಗೂ ಸಂಶಯಾಸ್ಪದ ಮತಗಳನ್ನು ಹಾಕಲು ಒಟ್ಟು 13 ಬಾಕ್ಸ್‍ಗಳನ್ನು ವ್ಯವಸ್ಥೆಗಳ ವ್ಯವಸ್ಥೆ ಮಾಡಿಕೊಂಡು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಆಯಾ ಅಭ್ಯರ್ಥಿಗಳಿಗೆ ಸೇರಿಸಬೇಕು. ನಂತರ ಪ್ರಥಮ ಪ್ರಾಶಸ್ತ್ಯದ 50 ಮತಗಳ ಬಂಡಲ್‍ಗಳನ್ನು ಮಾಡಿ ಮುಖ್ಯ ಪಾರ್ಸಲ್‍ನಲ್ಲಿ ಚುನಾವಣಾಧಿಕಾರಿಗಳಿಗೆ ನೀಡಬೇಕು ಎಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಸೇಡಂ ಸಹಾಯಕ ಆಯುಕ್ತೆ ಡಾ|| ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕಲಬುರಗಿ ಸಹಾಯಕ ಆಯುಕ್ತ ಉಮೇಶ್ಚಂದ್ರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ, ಎಲ್ಲ ತಾಲೂಕಿನ ತಹಶೀಲ್ದಾರರು ಪಾಲ್ಗೊಂಡಿದ್ದರು.
ಈಶಾನ್ಯ ಪದವೀಧರರ ಮತಕ್ಷೇತ್ರ
*******************************
ಒಟ್ಟು 82054 ಮತದಾರರು ಹಾಗೂ 157 ಮತಗಟ್ಟೆಗಳು
***************************************************
ಕಲಬುರಗಿ,ಜೂ.04.(ಕ.ವಾ.)-ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯ ಮತದಾನವು ಜೂನ್ 8ರಂದು ಬೆಳಗಿನ 8 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಕ್ಷೇತ್ರದಲ್ಲಿ ಒಟ್ಟು 82054 ಪದವೀಧರ ಮತದಾರರಿದ್ದು, ಮತದಾನಕ್ಕಾಗಿ 157 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣಾಧಿಕಾರಿ ಪಂಕಜಕುಮಾರ ಪಾಂಡೆ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ 20737 (ಪುರುಷರು-14666, ಮಹಿಳೆ-6068, ಇತರೆ-3), ಬೀದರ ಜಿಲ್ಲೆಯಲ್ಲಿ 11416 (ಪುರುಷರು-8063, ಮಹಿಳೆ-3353), ದಾವಣಗೆರೆ ಜಿಲ್ಲೆಯ ಹರಪನಹಳ್ಳಿ-1252 (ಪುರುಷರು-977, ಮಹಿಳೆ-275), ಕಲಬುರಗಿ ಜಿಲ್ಲೆಯಲ್ಲಿ 23145 (ಪುರುಷರು-15146, ಮಹಿಳೆ-7996, ಇತರೆ-3), ಯಾದಗಿರಿ ಜಿಲ್ಲೆಯಲ್ಲಿ 5159 (ಪುರುಷರು-3901, ಮಹಿಳೆ-1258 ), ಕೊಪ್ಪಳ ಜಿಲ್ಲೆಯಲ್ಲಿ 8338 (ಪುರುಷರು-6196, ಮಹಿಳೆ-2141, ಇತರೆ-1) ಹಾಗೂ ರಾಯಚೂರ ಜಿಲ್ಲೆಯಲ್ಲಿ 12007 (ಪುರುಷರು-8903, ಮಹಿಳೆ-3103, ಇತರೆ-1)ಮತದಾರರು ಸೇರಿದಂತೆ ಒಟ್ಟು 82054 (ಪುರುಷರು-57852, ಮಹಿಳೆ-24194, ಇತರೆ-8) ಮತದಾರರು ಇದ್ದಾರೆ.
ಮತದಾನಕ್ಕಾಗಿ ಜಿಲ್ಲೆಯಾದ್ಯಂತ 138 ಮುಖ್ಯ ಹಾಗೂ 19 ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು 157 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಬಳ್ಳಾರಿ 36 (30 ಮುಖ್ಯ, 6 ಸಹಾಯಕ), ಬೀದರ 23 (22 ಮುಖ್ಯ, 1 ಸಹಾಯಕ), ದಾವಣಗೆರೆ ಹರಪನಹಳ್ಳಿ 2 (1 ಮುಖ್ಯ, 1 ಸಹಾಯಕ), ಕಲಬುರಗಿ 46 (40 ಮುಖ್ಯ, 6 ಸಹಾಯಕ), ಯಾದಗಿರಿ 13 (12 ಮುಖ್ಯ, 1 ಸಹಾಯಕ), ಕೊಪ್ಪಳ 10 (6 ಮುಖ್ಯ, 4 ಸಹಾಯಕ), ರಾಯಚೂರ 27 (27 ಮುಖ್ಯ).
ಈಶಾನ್ಯ ಪದವೀಧರ ಮತಕ್ಷೇತ್ರದ ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳು ಇದ್ದಾರೆ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಡಾ. ಚಂದ್ರಶೇಖರ ಬಿ. ಪಾಟೀಲ, ಜಾತ್ಯತೀತ ಜನತಾ ದಳದ ಎನ್ ಪ್ರತಾಪ್ ರೆಡ್ಡಿ, ಭಾರತೀಯ ಜನತಾ ಪಾರ್ಟಿಯ ಕೆ.ಬಿ.ಶ್ರೀನಿವಾಸ್, ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್, ಪಕ್ಷೇತರರಾದ ನಿಂಗಯ್ಯ ಮಠ, ಅಶೋಕ್ ಕುಮಾರ್ ಮಾನುರ್ಪೆ, ಡಾ. ರಜಾಕ್ ಉಸ್ತಾದ, ರಮೇಶ್ ಶಾಸ್ತ್ರಿ, ಡಾ. ರಾಹುಲ್ ಬ. ತಮ್ಮನ ಹಾಗೂ ಎಲ್. ಪಿ. ಸುಭಾಷ್ ಚಂದ್ರ ನಾಯಕ ಇವರು ಕಣದಲ್ಲಿದ್ದಾರೆ.
ಈಶಾನ್ಯ ಪದವೀಧರ ಮತಕ್ಷೇತ್ರದ ಮತ ಎಣಿಕೆಯು ಜೂನ್ 12ರಂದು ಬೆಳಿಗ್ಗೆ 8 ಗಂಟೆಯಿಂದ ಕಲಬುರಗಿ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ನಡೆಯುವುದು.
ಜೂ.5ರಂದು ಜೇವರ್ಗಿ ಪಟ್ಟಣದಲ್ಲಿ ಮಿನಿ ಮ್ಯಾರಾಥಾನ್-ಪ್ಲಾಸ್ಟಿಕ್ ನಿಷೇಧ
****************************************************************
ಕಾರ್ಯಕ್ರಮ
***********
ಕಲಬುರಗಿ,ಜೂ.04.(ಕ.ವಾ.)-ಜೇವರ್ಗಿ ಪುರಸಭೆಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇದೇ ಜೂನ್ 5 ರಂದು ಜೇವರ್ಗಿ ಪಟ್ಟಣದಲ್ಲಿ ಮಿನಿ ಮ್ಯಾರಾಥಾನ್, ಸಸಿ ನೆಡುವ ಕಾರ್ಯಕ್ರಮ, ತ್ಯಾಜ್ಯ ವಿಂಗಡಣೆ ಮತ್ತು ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಜೇವರ್ಗಿ ಪಟ್ಟಣದ ಎಲ್ಲ ಸಾರ್ವಜನಿಕರು, ಎನ್‍ಎಸ್‍ಎಸ್ ಸ್ವಯಂ ಸೇವಾ ಸಂಘಗಳು ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.
ಸೇಡಂ: ಅಂಗನವಾಡಿ ಕಾರ್ಯಕರ್ತೆಯರ-ಸಹಾಯಕಿಯರ
***************************************************
ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಸೂಚನೆ
*****************************************************
ಕಲಬುರಗಿ,ಜೂ.04.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರ/ ಸಹಾಯಕಿಯರ ಗೌರವಧನದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಆಯ್ಕೆ ಪಟ್ಟಿಗೆ ಯಾರಾದರು ಆಕ್ಷೇಪಣೆ ಸಲ್ಲಿಸಲು ಬಯಸಿದ್ದಲ್ಲಿ ದಾಖಲೆದೊಂದಿಗೆ 2018ರ ಜೂನ್ 11ರೊಳಗಾಗಿ ಲಿಖಿತ ರೂಪದಲ್ಲಿ ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕೆಂದು ಸೇಡಂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ನಿಯಮಗಳ ಪ್ರಕಾರ ಅಭ್ಯರ್ಥಿಗಳು ಸಲ್ಲಿಸಿರುವ ಶೈಕ್ಷಣಿಕ ದಾಖಲಾತಿಗಳ ಆಧಾರದ ಮೇಲೆ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದ್ದು, ಸದರಿ ಅಭ್ಯರ್ಥಿಗಳು ತಾತ್ಕಾಲಿಕವಾಗಿ ಆಯ್ಕೆಯಾಗಿರುವುದಕ್ಕೆ ವಿದ್ಯಾರ್ಹತೆ, ವಾಸಸ್ಥಳ, ವಯಸ್ಸು, ಇನ್ನಿತರ ಯಾವುದಾದರೂ ತಕರಾರುಗಳು ಇದ್ದಲ್ಲಿ ಮೇಲ್ಕಂಡ ಅವಧಿಯೊಳಗಾಗಿ ಲಿಖಿತ ರೂಪದಲ್ಲಿ ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅವಧಿ ಮೀರಿ ಬರುವ ಆಕ್ಷೇಪಣೆಗಳನ್ನು ಪುರಸ್ಕರಿಸಲಾಗುವುದಿಲ್ಲ ಎಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 26-27ರಂದು ಕುಂದುಕೊರತೆ ನಿವಾರಣೆ ಸಭೆ
**********************************************
ಕಲಬುರಗಿ,ಜೂ.04.(ಕ.ವಾ.)-ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದವರ ದೂರುಗಳ ಕುರಿತು 2018ರ ಜುಲೈ 26 ಹಾಗೂ 27ರಂದು ಬೆಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದವರ ದೂರುಗಳನ್ನು ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಇ-ಮೇಲ್ ಮೂಲಕ ಜೂನ್ 10ರೊಳಗೆ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ
**********************************************************************
ಕಲಬುರಗಿ,ಜೂ.04.(ಕ.ವಾ.)-ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ಅರಣ್ಯ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ 5ರಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕಟ್ಟೀಮನಿ, ವಲಯ ಅರಣ್ಯಾಧಿಕಾರಿ ಗುಂಡುಸಿಂಗ್ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ. ಹಿರೇಮಠ ಉಪಸ್ಥಿತರಿರುವರು.
ಜೂನ್ 6ರಂದು ಕಡವು ನಡೆಸುವ ಹಕ್ಕು ಹರಾಜು
*********************************************
ಕಲಬುರಗಿ,ಜೂ.04.(ಕ.ವಾ.)-ಕಲಬುರಗಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವಲಯ ವ್ಯಾಪಿಯಲ್ಲಿ ಬರುವ ಕಡವುಗಳನ್ನು 2018-19ನೇ ಸಾಲಿನ 2018ರ ಏಪ್ರಿಲ್ 1 ರಿಂದ 2019ರ ಮಾರ್ಚ್ 1ರವರೆಗಿನ ಅವಧಿಯಲ್ಲಿ ಇಲಾಖೆಯಿಂದ ಒದಗಿಸುವ ಅಥವಾ ಸ್ವಂತ ಮರದ/ ಫೈಬರ್, ಉಕ್ಕಿನ ಯಂತ್ರ ಚಾಲಿತ ನಾವೆ ಅಥವಾ ಮೂಗ ನಾವೆಯನ್ನು ಇಟ್ಟು ಕಡವು ನಡೆಸುವ ಹಕ್ಕಿನ ಬಹಿರಂಗ ಹರಾಜು ಕಲಬುರಗಿಯ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಕಡವು ನಿರೀಕ್ಷಕರ ಕಚೇರಿಯಲ್ಲಿ 2018ರ ಜೂನ್ 6ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಕಲಬುರಗಿ ವಲಯದ ಕಡವು ನಿರೀಕ್ಷಕ ಜಿ.ಆರ್. ಸಂಗಾವಿ ತಿಳಿಸಿದ್ದಾರೆ.
ಆಯಾ ತಾಲೂಕಿನ ಕಡವುಗಳ ವಿವರ ಇಂತಿದೆ. ಜೇವರ್ಗಿ ತಾಲೂಕು: ಹನ್ನೂರ-ಬೆಳಗುಂಪಾ, ಕೊಲ್ಲೂರು-ಹೊತ್ತಿನಮಡು, ದುದ್ದಣಗಿ-ತಾರಾಪುರ, ಮಲ್ಲಾ(ಬಿ)-ಕುಲಕುಂದಾ, ಹೊತ್ತಿನಮಡು-ಕೊಲ್ಲೂರು, ಮಲ್ಲಾ(ಕೆ)-ಮಳಗ, ಹೊನ್ನಾಳ-ತುನ್ನೂರು, ರಾಜವಾಳ-ಕಡಬೂರ, ಮೈನಾಳ-ನೆಲೋಗಿ, ನಾಗನೂರು-ಯಕಂಚಿ. ಅಫಜಲಪುರ ತಾಲೂಕು: ಉಡಚಣ-ರೋಡಗಿ, ಕಡÀಣಿ-ಹಿರಿಯಾಳ, ಹವಳಗಾ-ಕುಮಸಿ, ಹಿರಿಯಾಳ-ಕಡಣಿ, ಭೋಸಗಾ-ಕಡಣಿ, ಟಾಕಾಳಿ-ಭೋಸಗಾ, ಉಮರ್ಗಿ-ಕೂಡ್ಲಗಿ, ಶಿವೂರು-ಕ್ಯಾದಗಿ ಗುಳನೂರು-ಮುನಟಗಾ, ಹುಲ್ಲೂರು-ಗಡ್ಡೇವಾಡ, ಮಂಗಳೂರು-ಬ್ಯಾಡಗಿ. ಚಿತ್ತಾಪುರ ತಾಲೂಕು: ಯನಗುಂಟಾ-ಹೊನಗುಂಟಾ.
ಉಚ್ಛ ನ್ಯಾಯಾಲಯವು 2005ರ ಫೆಬ್ರವರಿ 25ರಂದು ನೀಡಿದ ತೀರ್ಪಿನಂತೆ ಎಲ್ಲಾ ಗ್ರಾಮ ಪಂಚಾಯಿತಿ/ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡವುಗಳಲ್ಲಿ ಹರಿಗೋಲು ಸೇವೆಯನ್ನು ರದ್ದುಪಡಿಸಿರುವುದರಿಂದ ಮರದ/ಫೈಬರ್/ಉಕ್ಕಿನ ಯಂತ್ರ ಚಾಲಿತ ನಾವೆ ಅಥವಾ ಮೂಗ ನಾವೆಯನ್ನು ಇಟ್ಟು ಕಡವು ನಡೆಸುವ ಗುತ್ತಿಗೆದಾರರು ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹತೆಯುಳ್ಳವರಾಗಿರುತ್ತಾರೆ.
ಈ ಹರಾಜಿಗೆ ಸಂಬಂಧಿಸಿದಂತೆ ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯದ ಕಡವು ನಿರೀಕ್ಷಕರ ಕಾರ್ಯಾಲಯ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಕೇರ್ ಆಫ್ ಶಾಂತ ಕೆ. ಚಿಲ್ಲರಗಿ, ಮನೆ. ನಂ. 11-1801, ಎರಡು ಮತ್ತು ಮೂರನೇ ಬಸ್ ಡಿಪೋ, ಎಸ್.ಬಿ. ಕಾಲೇಜು ರಸ್ತೆ, ವಿದ್ಯಾನಗರ ಕಲಬುರಗಿ ಕಚೇರಿಯನ್ನು (ಕಚೇರಿ ದೂರವಾಣಿ ಸಂಖ್ಯೆ 08472-271354) ಹಾಗೂ ಮೊಬೈಲ್ ಸಂಖ್ಯೆ 9880783800ನ್ನು ಸಂಪರ್ಕಿಸಲು ಕೋರಿದೆ.
ಕೆ.ಎಂ.ಎಫ್.ದಿಂದ ಪರಿಕರ ವಿತರಣೆ ಕಾರ್ಯಕ್ರಮ
********************************************
ಕಲಬುರಗಿ,ಜೂ.04.(ಕ.ವಾ.)-ಕಲಬುರಗಿ, ಬೀದರ ಹಾಗೂ ಯಾದಗಿರಿ ಹಾಲು ಒಕ್ಕೂಟದಿಂದ ಹಸುಗಳಿಗೆ ಕೃತಕ ಗರ್ಭಧಾರಣೆ ತರಬೇತಿ ಪಡೆದ 33 ಜನರಿಗೆ ಸಾಂಕೇತಿಕವಾಗಿ ಪರಿಕರವನ್ನು ವಿತರಿಸುವ ಕಾರ್ಯಕ್ರಮವನ್ನು ಶನಿವಾರ ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕೆ.ಎಂ.ಎಫ್. (ಪ.ಸಂ.) ನಿರ್ದೇಶಕ ಡಾ. ಡಿ.ಎನ್. ಹೆಗಡೆ ಅವರು ಹಸುಗಳಿಗೆ ಕೃತಕ ಗರ್ಭಧಾರಣೆ ತರಬೇತಿ ಪಡೆದ ಕಾರ್ಯಕರ್ತರು ಪ್ರತಿ ತಿಂಗಳು 1000 ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಬೇಕು. ಪಶು ಆಹಾರ ಮತ್ತು ಖನಿಜ ಮಿಶ್ರಣ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲು ಮತ್ತು ತರಬೇತಿ ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಚಂದ್ರಶೇಕರ ಕಮಕೇರಿ, 33 ಜನರಿಗೆ ಹಸುಗಳ ಕೃತಕ ಗರ್ಭಧಾರಣೆ ತರಬೇತಿ ನೀಡಿ ಅವರಿಗೆ ಕೃತಕ ಗರ್ಭಧಾರಣೆ ಪರಿಕರ ನೀಡಲು ಶ್ರಮಿಸಿದ ಒಕ್ಕೂಟದ ಎಲ್ಲ ಅಧಿಕಾರಿಗಳಿಗೆ ಶ್ಲಾಘಿಸಿದರು. ಧಾರವಾಡದ ಪ್ರಾಂತೀಯ ನಿರ್ದೇಶಕ ಡಾ.ಜಿ.ವಿ. ಹೆಗಡೆ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಳಂದ ತಾಲೂಕಿನ ಹೆಬಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕವಿತಾ ಬೆಳಂ ಹಾಗೂ ಬೀದರ ಜಿಲ್ಲೆಯ ಕಮಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಧನರಾಜ ಅವರನ್ನು ಸನ್ಮಾನಿಸಲಾಯಿತು. ಡಾ. ಮನೋಹರ ಕುಲಕರ್ಣಿ ಸ್ವಾಗತಿಸಿದರು. ಪಿ.ಎನ್. ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಕಾಂಬಳೆ ವಂದಿಸಿದರು.
ಜೂನ್ 5ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ,ಜೂ.04.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ನೃಪತುಂಗ, 11ಕೆ.ವಿ. ಐಟಿ ಪಾರ್ಕ್, 11ಕೆ.ವಿ. ಬ್ರಹ್ಮಪುರ ಫೀಡರ್‍ಗಳ ಮೇಲೆ ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಜೂನ್ 5ರಂದು ಬೆಳಗಿನ 10ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ ನೃಪತುಂಗಾ ಫೀಡರ್: ಜಿ.ಡಿ.ಎ. ಕೋಟನೂರ ಪ್ರದೇಶ, ನ್ಯೂ ಓಝಾ ಲೇಔಟ್, ಧನಶೆಟ್ಟಿ ನಗರ, ಸ್ಲಂಬೋರ್ಡ್ ವಸತಿ ಗೃಹಗಳು ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳು.
11ಕೆ.ವಿ ಐ.ಟಿ.ಪಾರ್ಕ್ ಫೀಡರ್: ಸಂತೋಷ ಕಾಲೋನಿ, ವರ್ಗಿಸ್ ಅಪಾರ್ಟ್‍ಮೆಂಟ್, ಮಾಣಿಕ ಪ್ರಭು ಕಾಲೋನಿ, ಐ.ಟಿ.ಪಾರ್ಕ್, ನಂದಗೋಕುಲ ಮತ್ತು ಜಯತೀರ್ಥ ಕಲ್ಯಾಣ ಮಂಟಪ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಬ್ರಹ್ಮಪೂರ ಫೀಡರ್: ಶಹಬಜಾರ, ಶೆಟ್ಟಿಕಾಂಪ್ಲೆಕ್ಸ್, ಗದ್ಲೆಗಾಂವ, ಶಹಬಜಾರ ನಾಕಾ, ಶಹ ಬಜಾರ ಜಿ.ಡಿ.ಎ., ಕೈಲಾಶ ನಗರ, ಮಾಣೀಕೇಶ್ವರಿ ಕಾಲೋನಿ, ಲಾಲಗೇರಿ, ಗಂಗಾನಗರ, ಅಗ್ನಿಶಾಮಕ ದಳ, ಜನತಾ ಲೇಔಟ್, ಕಾಳೆ ಲೇಔಟ್, ಮಹಾಲಕ್ಷ್ಮೀ ಲೇಔಟ್, ಚೌಡೇಶ್ವರಿ ಕಾಲೋನಿ, ಎನ್.ಆರ್. ಕಾಲೋನಿ, ಬಾಳೆ ಲೇಔಟ್, ಅಗ್ರಿಕಲ್ಚರ್ ಲೇಔಟ್, ಜಿ.ಡಿ.ಎ. ವಕ್ಕಲಗೇರಾ, ಜಿ.ಡಿ.ಎ. ಶಹಬಜಾರ, ಹರಿಜನ ವಾಡಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು.





ಹೀಗಾಗಿ ಲೇಖನಗಳು News and photo Date: 04--06--2018

ಎಲ್ಲಾ ಲೇಖನಗಳು ಆಗಿದೆ News and photo Date: 04--06--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo Date: 04--06--2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-04-06-2018.html

Subscribe to receive free email updates:

0 Response to "News and photo Date: 04--06--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ