NEWS AND PHOTO DATE: 01-06-2018

NEWS AND PHOTO DATE: 01-06-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 01-06-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 01-06-2018
ಲಿಂಕ್ : NEWS AND PHOTO DATE: 01-06-2018

ಓದಿ


NEWS AND PHOTO DATE: 01-06-2018

ಜೂನ್ 2ರಂದು ವಿಶ್ವ ರೆಡ್‍ಕ್ರಾಸ್ ದಿನಾಚರಣೆ
******************************************
ಕಲಬುರಗಿ,ಜೂ.01.(ಕ.ವಾ.)-ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ರೆಡ್‍ಕ್ರಾಸ್ ದಿನಾಚರಣೆಯನ್ನು ಜೂನ್ 2ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿ ನಗರದ ರಿಂಗ್ ರಸ್ತೆಯ ಹೊಸ ಆರ್.ಟಿ.ಓ. ಹತ್ತಿರದ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಕಲಬುರಗಿ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಲಬುರಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಗುದಗೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕಲಬುರಗಿ ತಾಜ್‍ಸುಲ್ತಾನಪುರ ಕೆ.ಎಸ್.ಆರ್.ಪಿ. ಕಮಾಂಡೆಂಟ್ ಬಸವರಾಜ ಜಿಳ್ಳೆ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಕಿಶನ್ ಠಾಕೂರ ಸನ್ಮಾನಿತರಾಗಿ ಆಗಮಿಸುವರು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಉಪ ಸಭಾಪತಿ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸುವರು.
ಆರನೇ ತರಗತಿ ಪ್ರವೇಶಕ್ಕಾಗಿ ಜೂನ್ 9 ರಿಂದ 13ರವರೆಗೆ ಕೌನ್ಸಿಲಿಂಗ್
**************************************************************
ಕಲಬುರಗಿ,ಜೂ.01.(ಕ.ವಾ.)-ಕಲಬುರಗಿ ಜಿಲ್ಲೆಯ ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ 2018-19ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾದ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 2018ರ ಜೂನ್ 9 ರಿಂದ 13ರ ವರೆಗೆ ಕಲಬುರಗಿ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿರುವ ಕನ್ನಡ ಭವನದಲ್ಲಿ (ಬಾಪುಗೌಡ ದರ್ಶನಾಪುರ ರಂಗಮಂದಿರ) ಕೌನ್ಸಿಲಿಂಗ್ ನಡೆಸಲಾಗುವುದೆಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವರ್ಗವಾರು ಕೌನ್ಸಿಲಿಂಗ್ ನಡೆಯುವ ದಿನಾಂಕ ಮತ್ತು ಸಮಯದ ವಿವರ: ಜೂನ್ 9ರಂದು ಬೆಳಿಗ್ಗೆ 9.30 ಗಂಟೆಗೆ ಅಂಗವಿಕಲರು, ಅಲೆಮಾರಿ, ಅರೆ ಅಲೆಮಾರಿ, ಸಫಾಯಿ ಕರ್ಮಚಾರಿ ಮಕ್ಕಳು, ಆಶ್ರಮ ಶಾಲೆ ಮಕ್ಕಳು, ಮಾಜಿ ಸೈನಿಕರು, ಯೋಜನಾ ನಿರಾಶ್ರಿತರು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಹಾಗೂ ಅಂದು ಬೆಳಿಗ್ಗೆ 11.30 ಗಂಟೆಗೆ ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಯಲಿದೆ.
ಜೂನ್ 10ರಂದು ಬೆಳಿಗ್ಗೆ 9.30 ಗಂಟೆಗೆ ಪರಿಶಿಷ್ಟ ಜಾತಿಯ ಹೆಣ್ಣು ಮಕ್ಕಳಿಗೆ, ಜೂನ್ 11ರಂದು ಬೆಳಿಗ್ಗೆ 9.30 ಗಂಟೆಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ, ಜೂನ್ 12ರಂದು ಬೆಳಿಗ್ಗೆ 9.30 ಗಂಟೆಗೆ ಪ್ರವರ್ಗ-2ಎ, 2ಬಿ, 2ಎ ಮತ್ತು 3ಬಿ ವಿದ್ಯಾರ್ಥಿಗಳಿಗೆ, ಜೂನ್ 13ರಂದು ಬೆಳಿಗ್ಗೆ 9.30 ಗಂಟೆಗೆ ಎಲ್ಲ ಪ್ರವರ್ಗದ ಕಾಯ್ದಿರಿಸಿದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನಡೆಯಲಿದೆ.
ಪ್ರವರ್ಗವಾರು ಕಟ್ ಆಫ್ ಅಂಕಗಳ ವಿವರ: ಪರಿಶಿಷ್ಟ ಪಂಗಡ (ಗಂಡು-5, ಹೆಣ್ಣು-7), ಸಾಮಾನ್ಯ ವರ್ಗ (ಹೆಣ್ಣು-82), ಪ್ರವರ್ಗ-1 (ಗಂಡು-70, ಹೆಣ್ಣು-66), ಪರಿಶಿಷ್ಠ ಜಾತಿ (ಗಂಡು-43, ಹೆಣ್ಣು-29),ಪ್ರವರ್ಗ-2ಎ (ಗಂಡು-69, ಹೆಣ್ಣು-62), ಪ್ರವರ್ಗ-2ಬಿ (ಗಂಡು-57, ಹೆಣ್ಣು-56), ಪ್ರವರ್ಗ-3ಎ (ಗಂಡು-53, ಹೆಣ್ಣು-56), ಪ್ರವರ್ಗ-3ಬಿ (ಗಂಡು-73, ಹೆಣ್ಣು-71).
ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಇಲಾಖೆಯ ತಿತಿತಿ.ಞಡಿies.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ. ಕೌನ್ಸಿಲಿಂಗ್ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ನಿಗದಿತ ದಿನಾಂಕದಂದು ಖುದ್ದಾಗಿ ಪಾಲಕರೊಂದಿಗೆ ಮೂಲಕ ದಾಖಲಾತಿಗಳೊಂದಿಗೆ ನಿಗದಿತ ಸಮಯಕ್ಕೆ ಕೌನ್ಸಿಲಿಂಗ್ ಸ್ಥಳದಲ್ಲಿ ಹಾಜರಾಗಬೇಕು. ಆಯ್ಕೆಯಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವೈಯಕ್ತಿಕವಾಗಿ ಕೌನ್ಸಿಲಿಂಗ್‍ಗೆ ಹಾಜರಾಗಲು ತಿಳುವಳಿಕೆ ಪತ್ರವನ್ನು ಅಂಚೆ ಮೂಲಕ ರವಾನಿಸಲಾಗಿದೆ. ತಿಳುವಳಿಕೆ ಪತ್ರ ತಲುಪದೇ ಇದ್ದಲ್ಲಿ ಅರ್ಹ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಮತ್ತು ಮೂಲ ದಾಖಲೆಯೊಂದಿಗೆ ಕೌನ್ಸಿಲಿಂಗ್ ಸ್ಥಳಕ್ಕೆ ಹಾಜರಾಗಬೇಕು.
ಜೂನ್ 13 ರಂದು ಹೆಚ್ಚುವರಿ ಪಟ್ಟಿಯಲ್ಲಿರುವ ವಿದ್ಯಾರ್ಥಿಗಳಿಗೆ ಪ್ರವರ್ಗವಾರು ಸ್ಥಾನಗಳು ಲಭ್ಯವಿದ್ದಲ್ಲಿ ಮಾತ್ರ ಆದ್ಯತಾನುಸಾರ ಕೌನ್ಸಿಲಿಂಗ್‍ಗಾಗಿ ಪರಿಗಣಿಸಲಾಗುವುದು. ಕಟ್ ಆಫ್ ರ್ಯಾಂಕ್ ಹಾಗೂ ಆಯ್ಕೆ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ: ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
****************************************************
ಕಲಬುರಗಿ,ಜೂ.01.(ಕ.ವಾ.)-ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ, ಇಂದಿರಾ ಗಾಂಧಿ ವಸತಿ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಜೂನ್ 2 ರಿಂದ 8ರವರೆಗೆ ಕಲಬುರಗಿ ಐವಾನ್‍ಶಾಹಿ ರಸ್ತೆಯ (ಮಿನಿ ವಿಧಾನಸೌಧ ಎದುರಿಗೆ) ಇರುವ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಾರ್ಯಾಲಯದಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಜೂನ್ 11ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆ: ಅರ್ಜಿ ಆಹ್ವಾನ
****************************************************************
ಕಲಬುರಗಿ,ಜೂ.01.(ಕ.ವಾ.)-ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನಾ ಯೋಜನೆಯಡಿ 208-19ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದು ಗ್ರಾಮೀಣ ಪ್ರದೇಶದಲ್ಲಿ ಅತೀ ಸಣ್ಣ ಕೈಗಾರಿಕೆ ಸ್ಥಾಪಿಸಿ ಸ್ವಯಂ ಉದ್ಯೋಗ ಕೈಗೊಳ್ಳಲು ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಯುವಕ/ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ವಿವಿಧ ಬ್ಯಾಂಕುಗಳಿಂದ ಗರಿಷ್ಠ 10 ಲಕ್ಷ ರೂ. ಮೊತ್ತದವರೆಗೆ ಸಾಲ ಪಡೆದು ಅತಿ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಯೋಜನಾ ವೆಚ್ಚ 5 ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಯೋಜನೆಗಳನ್ನು ಸ್ಥಾಪಿಸಲು ಅಭ್ಯರ್ಥಿಗಳು ಕÀನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಸಾಮಾನ್ಯ ವರ್ಗದವರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಠ 35 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಮಹಿಳೆಯರು, ಮಾಜಿಸೈನಿಕರು ಮತ್ತು ಅಂಗವಿಕಲರು ಕನಿಷ್ಠ 18 ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. ಈ ಯೋಜನೆಯಡಿ ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯಾವುದೇ ಆದಾಯ ಮಿತಿ ಇರುವುದಿಲ್ಲ. ಸಾಲ ಪಡೆಯಲಿಚ್ಛಿಸುವ ಗ್ರಾಮೀಣ ಅಭ್ಯರ್ಥಿಗಳು ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ದಲ್ಲಿ ಜೂನ್ 1 ರಿಂದ ಜೂನ್ 30ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಬೇಕು.
ಈ ಯೋಜನೆಯಲ್ಲಿ ಹೊಸದಾಗಿ ಸಾಲ ಮಂಜೂರಾತಿ ಪಡೆದು ಪ್ರಾರಂಭಿಸುವ ಹೊಸ ಘಟಕಗಳಿಗೆ ಮಾತ್ರ ಸಹಾಯಧನ ಲಭ್ಯವಿರುತ್ತದೆ. ವಿಸ್ತರಣೆ, ಆಧುನೀಕರಣ, ವೈವಿದ್ಧೀಕರಣ ಘಟಕಗಳಿಗೆ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಇರುವುದಿಲ್ಲ. ಪಿ.ಎಂ.ಇ.ಜಿ.ಪಿ., ಕೆ.ಎಸ್.ಇ.ಎಸ್. ಯೋಜನೆಯಲ್ಲಿ ಸಾಲ ಸೌಲಭ್ಯಗಳನ್ನು ಪಡೆದಿದ್ದಲ್ಲಿ ಅರ್ಹತೆ ಇರುವುದಿಲ.್ಲ ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರ ಕಚೇರಿಯನ್ನು ಹಾಗೂ ದೂರವಾಣಿ ಸಂ. 08472-223988, 221637ಗಳನ್ನು ಸಂಪರ್ಕಿಸಲು ಕೋರಿದೆ.
ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
******************************************
ಕಲಬುರಗಿ,ಜೂ.01.(ಕ.ವಾ.)-ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಲಬುರಗಿ (ಹಾಗರಗಾ) ಫಿಲ್ಟರ್‍ಬೆಡ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ (ಇಂಗ್ಲೀಷ ಮಾಧ್ಯಮ) ಶಾಲೆಯಲ್ಲಿ ಖಾಲಿಯಿರುವ ಕೆಳಕಂಡ ವಿಷಯಗಳ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಕನ್ನಡ, ಇಂಗ್ಲೀಷ ಭಾಷಾ ಶಿಕ್ಷಕರು ಹಾಗೂ ಸಮಾಜ ವಿಜ್ಞಾನ ಶಿಕ್ಷಕರ ತಲಾ ಒಂದು ಹುದ್ದೆಗೆ ಬಿ.ಎ. ಬಿಇಡಿ (ಟಿ.ಇ.ಟಿ.) ಹಾಗೂ ವಿಜ್ಞಾನ ಶಿಕ್ಷಕರ ಒಂದು ಹುದ್ದೆಗೆ ಬಿ.ಎಸ್.ಸಿ. ಬಿಇಡಿ (ಟಿಇಟಿ) ಪಾಸಾಗಿರಬೇಕು. ಟಿ.ಇ.ಟಿ. ಪಾಸಾದ ಅಭ್ಯರ್ಥಿಗಳಿಗೆ ಪ್ರಥಮಾಧ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಜಿಡಿಎ ಕಾಲೋನಿ, 4ನೇ ಅಡ್ಡರಸ್ತೆ, ಫಿಲ್ಟರ್ ಬೆಡ್ ಏರಿಯಾ, 23ನೇ ವಾರ್ಡ ಕಲಬುರಗಿ-585104 ಹಾಗೂ ಮೊಬೈಲ್ ಸಂಖ್ಯೆ 9886238765, 8217355571ಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಜೂನ್ 2ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
********************************************
ಕಲಬುರಗಿ,ಜೂ.01.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಆಳಂದ ಕಾಲೋನಿ, 11ಕೆ.ವಿ. ರಾಮಮಂದಿರ, 11ಕೆ.ವಿ. ಪೊಲೀಸ್ ಕಾಲೋನಿ ಹಾಗೂ 11ಕೆ.ವಿ. ಮೀಜುಗುರಿ ಫೀಡರ್‍ಗಳ ಮೇಲೆ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಂಡಿರುವ ಪ್ರಯುಕ್ತ ಜೂನ್ 2ರಂದು ಬೆಳಗಿನ 10ರಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11ಕೆ.ವಿ. ಆಳಂದ ಕಾಲೋನಿ ಫೀಡರ್: ಚಿಂಚೋಳಿ ಲೇಔಟ್, ಚೊರ ಬಜಾರ, ಫಿಲ್ಟರ್ ಬೆಡ್ , ಚೆಕ್ ಪೋಸ್À್ಟ, ಶಿವಾ ದಾಲ್‍ಮಿಲ್ , ರಾಮತೀರ್ಥ, ರಾಣೇಶಪೀರ್ ದರ್ಗಾ, ವಿಶ್ವರಾಥ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯ್ಯೋಧ್ಯಾ ನಗರ, ಲಕ್ಷ್ಮೀ ನಗರ, ಎಂ.ಜಿ. ಟಿ.ಟಿ, ಆಶ್ರಯ ಕಾಲೋನಿ, ದುಬೈ ಕಾಲೋನಿ, ಅಹ್ಮದ್ ನಗರ ಫಿ.ಎಫ್. ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕಸ್ತೂರಿ ನಗರ, ಖಾದ್ರಿ ಚೌಕ್, ಸ್ವರ್ಗೆಶ ನಗರ, ಕಡಗಂಚಿ ಮಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ರಾಮಮಂದಿರ ಫೀಡರ್: ಸಿ.ಬಿ.ಐ. ಕಾಲೋನಿ, ಸದಾಶಿವನಗರ, ನವಜೀವನ ಸೊಸೈಟಿ, ಕಲ್ಮಣಕರ್ ಲೇಔಟ್, ರಾಮಮಂದಿರ, ಕರುಣೇಶ್ವರ ನಗರ, ನವಣಿ ಲೇಔಟ್, ಸಂಗಮೇಶ್ವರ ಲೇಔಟ್, ದೇವಾನಗರ, ಓಜಾ ಕಾಲೋನಿ, ವಿವೇಕಾನಂದ ಕಾಲೋನಿ, ಲಕ್ಷ್ಮೀನಾರಾಯಣ ಲೇಔಟ್, ಶಿವಶಕ್ತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ. ಪೊಲೀಸ್ ಕಾಲೋನಿ ಫೀಡರ್: ರಾಜಾಪುರ್, ನಾಯ್ಡು ಲೇಔಟ್, ಪಿ.ಡಬ್ಲ್ಯೂ.ಡಿ. ಕ್ವಾರ್ಟರ್ಸ್, ನೃಪತುಂಗಾ ಕಾಲೋನಿ, ಪ್ರಶಾಂತನಗರ ಬಿ, ಶಾಹಾಬಾದ ಶಕ್ತಿನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
11 ಕೆ.ವಿ. ಮೀಜುಗುರಿ ಫೀಡರ್: ಕರ್ನಾಟಕ ಐಸ್ ಪ್ಯಾಕ್ಟರಿ, ತಾಜ್ ಐಸ್ ಪ್ಯಾಕ್ಟರಿ, ನಯಾ ಮೊಹಲ್ಲಾ, ಹಜ್ ಕಮಿಟಿ ಹಿಂದುಗಡೆ, ಮೀಜುಗುರಿ ವಾಟರ್ ಟ್ಯಾಂಕ್ ಹಿಂದುಗಡೆ , ಮುಸ್ಲಿಂ ಚೌಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.


ಹೀಗಾಗಿ ಲೇಖನಗಳು NEWS AND PHOTO DATE: 01-06-2018

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 01-06-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 01-06-2018 ಲಿಂಕ್ ವಿಳಾಸ https://dekalungi.blogspot.com/2018/06/news-and-photo-date-01-06-2018.html

Subscribe to receive free email updates:

0 Response to "NEWS AND PHOTO DATE: 01-06-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ