ಶೀರ್ಷಿಕೆ : ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಲಿಂಕ್ : ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊಪ್ಪಳ ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕನಕಗಿರಿ ಮೊರಾರ್ಜಿ ದೇಸಾಯಿ ವಸತಿ (ಪ.ಜಾ) ಶಾಲೆಯಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನಕಗಿರಿ ಮೊರಾರ್ಜಿ ದೇಸಾಯಿ ವಸತಿ (ಪ.ಜಾ) ಶಾಲೆಯಲ್ಲಿ ಪ್ರಸಕ್ತ ಸಾಲಿನ ವಿಜ್ಞಾನ ಮತ್ತು ದೈಹಿಕ ಶಿಕ್ಷಣ ಈ ಎರಡು ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಹ ಬಿ.ಎಸ್.ಸಿ (ಪಿಸಿಎಂ/ಸಿಬಿಝಡ್) ಬಿ.ಎಡ್., ಟಿ.ಇ.ಟಿ. ತೇರ್ಗಡೆ ಹೊಂದಿದವರಿಗೆ ಆಧ್ಯತೆ ನೀಡಲಾಗುವುದು. ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗೆ ಯಾವುದೇ ಪದವಿ, ಬಿ.ಪಿ.ಎಡ್. ವಿದ್ಯಾರ್ಹತೆ ಹೊಂದಿರುವ ಆಸಕ್ತ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದೆ.
ಅತಿಥಿ ಶಿಕ್ಷಕರ ಸೇವೆಯು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವವರೆಗೆ ಮಾತ್ರ ಸೀಮಿತವಾಗಿದ್ದು, ರೂ. 10 ಸಾವಿರಗಳ ಮಾಸಿಕ ವೇತನವನ್ನು ನೀಡಲಾಗುವುದು. ಅತಿಥಿ ಶಿಕ್ಷಕರ ಸೇವೆ ತಾತ್ಕಾಲಿಕವಾಗಿ ಪಡೆಯಲಾಗುತ್ತಿದ್ದು, ಇವರ ಸೇವೆ ಖಾಯಂ ನೇಮಕಾತಿ ಅಥವಾ ಯಾವುದೇ ತರಹದ ಸೇವಾ ಕೃಪಾಂಕಕ್ಕೆ ಅರ್ಹವಾಗಿರುವುದಿಲ್ಲ. ನೇಮಕಾತಿ ಅಧಿಸೂಚಿಸಿ (ನೇರ ನೇಮಕಾತಿ) ವಸತಿ ಶಾಲೆ ಶಿಕ್ಷಕರು ನೇಮಗೊಂಡು ಕರ್ತವ್ಯಕ್ಕೆ ಹಾಜರಾದ ತಕ್ಷಣದಿಂದ ಅತಿಥಿ ಶಿಕ್ಷಕರ ಹುದ್ದೆಗಳ ತಂತಾನೆ ರದ್ದಾಗುವುದು. ಅರ್ಜಿ ಸಲ್ಲಿಸಲು ಜೂ. 25 ಕೊನೆಯ ದಿನವಾಗಿದ್ದು, ಆಸಕ್ತರು ಪ್ರಾಚಾರ್ಯರು, ಮೊರಾರ್ಜಿ ದೇಸಾಯಿ ವಸತಿ (ಪ.ಜಾ) ಶಾಲೆಯ ಕನಕಗಿರಿ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9591647623 ಕ್ಕೆ ಸಂಪರ್ಕಿಸಬಹುದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/06/blog-post_92.html
0 Response to "ಕನಕಗಿರಿ : ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ