ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ

ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ
ಲಿಂಕ್ : ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ

ಓದಿ


ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ



ಕೊಪ್ಪಳ ಜೂ. 18 (ಕರ್ನಾಟಕ ವಾರ್ತೆ): ಹಲವಾರು ಟೆಲಿಕಾಂ ಕಂಪನಿಗಳು ಉತ್ತಮ ಸೇವೆ ಹಾಗೂ ಕಡಿಮೆ ದರ ನೀಡುವ ಮೂಲಕ ಸ್ಪರ್ಧೆಯನ್ನು ಒಡ್ಡುತ್ತಿದ್ದು, ಇಂತಹ ಸ್ಪರ್ಧಾತ್ಮಕ ಸಮಯದಲ್ಲಿ ಬಿಎಸ್‍ಎನ್‍ಎಲ್ ಉತ್ತಮ ಸೇವೆ ನೀಡುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.

     ಜಿಲ್ಲಾ ಪಂಚಾಯತಿಯ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಬಿಎಸ್‍ಎನ್‍ಎಲ್ ದೂರಸಂಪರ್ಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ವಿವಿಧ ಟೆಲಿಕಾಂ ಕಂಪನಿಗಳು ಈಗಾಗಲೆ 4ಜಿ ಸೇವೆಯನ್ನು ನೀಡುತ್ತಿವೆ.  ಆದರೆ ಬಿಎಸ್‍ಎನ್‍ಎಲ್ ಇನ್ನೂ 3ಜಿ ಸೇವೆಯನ್ನು ವಿಸ್ತರಿಸುವುದರಲ್ಲಿಯೇ ಇದೆ.  ಇನ್ನು ಸ್ಥಿರ ದೂರವಾಣಿ ಸಂಪರ್ಕಕ್ಕೆ ಉತ್ತೇಜನ ನೀಡಲು ಬಿಎಸ್‍ಎನ್‍ಎಲ್ 99 ರೂ. ಗಳ ನೂತನ ಪ್ಲಾನ್ ಜಾರಿಗೊಳಿಸಿ ಎರಡು ತಿಂಗಳುಗಳೇ ಕಳೆದಿದ್ದರೂ, ಇನ್ನೂ ಜನರಿಗೆ ಈ ಮಾಹಿತಿ ತಲುಪಿಸಲು ಬಿಎಸ್‍ಎನ್‍ಎಲ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.  ಬಿಎಸ್‍ಎನ್‍ಎಲ್ ಕೂಡ ಸ್ಪರ್ಧಾತ್ಮಕ ದರಗಳನ್ನು ನಿಗದಿಪಡಿಸಿ, ವಿಶೇಷ ಆಫರ್‍ಗಳನ್ನು ನೀಡಿದ್ದರೂ, ಪ್ರಚಾರದ ಕೊರತೆಯಿಂದ ಜನರಿಗೆ ಇದು ತಿಳಿಯುತ್ತಿಲ್ಲ.  ಬಿಎಸ್‍ಎನ್‍ಎಲ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಬಿಟ್ಟು ಹೊರಗಡೆ ಎಲ್ಲೂ ಜನರ ಬಳಿ ತೆರಳುವಂತಹ ಕಾರ್ಯ ಮಾಡುತ್ತಿಲ್ಲ.  ಹೀಗಾಗಿ ಬಿಎಸ್‍ಎನ್‍ಎಲ್ ಸೇವೆ ಬಗ್ಗೆ ಜನರಿಗೆ ವಿಶ್ವಾಸದ ಕೊರತೆ ಉಂಟಾಗುತ್ತಿದೆ.  ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೂ ಕೂಡ ಉತ್ತಮ ಟೆಲಿಕಾಂ, ಬ್ರಾಡ್‍ಬ್ಯಾಂಡ್ ಸೇವೆ ಲಭ್ಯವಾಗುವ ಮೂಲಕ ಡಿಜಿಟಲ್ ಭಾರತವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ.  ಆದರೆ ಇದಕ್ಕೆ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿಲ್ಲ.  ಬಿಎಸ್‍ಎನ್‍ಎಲ್ ಯಾವುದೇ ಪ್ರಗತಿ ಹಾಗೂ ಗುರಿಯನ್ನು ಹೊಂದಿಲ್ಲದೇ ಇರುವುದರಿಂದ ಪ್ರಗತಿ ಪರಿಶೀಲನೆ ಸಾಧ್ಯವಾಗುತ್ತಿಲ್ಲ.  ಇನ್ನಾದರೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಬಿಎಸ್‍ಎನ್‍ಎಲ್ ಜನರನ್ನು ಸಂಪರ್ಕಿಸಲು ಉತ್ತಮ ಗುಣಮಟ್ಟದ ಸೇವೆ ನೀಡುವ ಮೂಲಕ ಸ್ಪರ್ಧಾತ್ಮಕ ಕಾಲದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಎದುರಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.
47 ಹೊಸ 3ಜಿ ಟವರ್ ಮಂಜೂರು :
************* ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 3ಜಿ ಸೇವೆ ಇನ್ನೂ ಎಲ್ಲೆಡೆ ಲಭ್ಯವಾಗುತ್ತಿಲ್ಲ.  ಹೀಗಾಗಿ 3ಜಿ ಸೇವೆಯನ್ನು ವಿಸ್ತರಿಸುವ ನಿಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 21 ಹಾಗೂ ರಾಯಚೂರು ಜಿಲ್ಲೆಯಲ್ಲಿ 26 ಕಡೆಗಳಲ್ಲಿ ಹೊಸದಾಗಿ 3ಜಿ ಟವರ್ ನಿರ್ಮಿಸಲು ಮಂಜೂರಾತಿ ದೊರೆತಿದೆ.  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಹಳ್ಳಿ, ಸಂಗಾಪುರ, ಸಣಾಪುರ, ತೊಂಡಿಹಾಳ ಬಸಪಟ್ಟಣ, ಗಂಗಾವತಿಯ ಆನೆಗುಂದಿ ರಸ್ತೆ, ಹೊಸಳ್ಳಿ ರಸ್ತೆ, ಇಸ್ಲಾಂಪುರ ಸರ್ಕಲ್, ಜಯನಗರ.  ಕೊಪ್ಪಳ ತಾಲೂಕಿನ ಮೆತಗಲ್, ಲೇಬಗೇರಾ, ಹಿರೇಬೊಮ್ಮನಾಳ.  ಕುಷ್ಟಗಿ ತಾಲೂಕು ತಳುವಗೇರಾ.  ಕೆ.ಬೊದೂರ, ತಾವರಗೇರಾ.  ಯಲಬುರ್ಗಾ ತಾಲೂಕು ದ್ಯಾಂಪುರ-ಕುಕನೂರ, ಬಂಡಿ ಹಾಗೂ ತೊಂಡಿಹಾಳ ಗ್ರಾಮಗಳಲ್ಲಿ ಹೊಸದಾಗಿ 3ಜಿ ಟವರ್ ಮಂಜೂರಾಗಿದೆ.  ಅಲ್ಲದೆ ಕೊಪ್ಪಳ ಜಿಲ್ಲೆಯ 49 ಗ್ರಾಮಗಳಲ್ಲಿ ವೈಫೈ ಹಾಟ್‍ಸ್ಪಾಟ್ ಸೇವೆ ಒದಗಿಸಲು ಯೋಜನೆ ಪ್ರಗತಿಯಲ್ಲಿದೆ.  ಜಿಲ್ಲೆಯ ಹಿರೇಸಿಂದೋಗಿ ಹಾಗೂ ತಳಕಲ್‍ನಲ್ಲಿ ಈಗಾಗಲೆ ಸೇವೆ ಪ್ರಾರಂಭಿಸಲಾಗಿದೆ.  ಬಿಎಸ್‍ಎನ್‍ಎಲ್ ಸಂಪರ್ಕ ಸೇವೆಯನ್ನು ಉತ್ತಮಪಡಿಸಲು ಆಪ್ಟಿಕಲ್ ಫೈಬರ್ ಸಂಪರ್ಕ ಜಾಲ ವಿಸ್ತರಿಸಲಾಗುತ್ತಿದ್ದು, ಕೊಪ್ಪಳ ಹಾಗೂ ರಾಯೂಚೂರು ಜಿಲ್ಲೆಯ ಒಟ್ಟು 340 ಗ್ರಾಮ ಪಂಚಾಯತಿಗಳಿಗೆ ಬ್ರಾಡ್‍ಬ್ಯಾಂಡ್ ಸೇವೆ ಒದಗಿಸಲಾಗಿದೆ.  ಒಟ್ಟು 1171.8 ಕಿ.ಮೀ. ಆಪ್ಟಿಕಲ್ ಫೈಬರ್ ಜಾಲ ವಿಸ್ತರಿಸಲಾಗಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
     ಬಿಎಸ್‍ಎನ್‍ಎಲ್ ರಾಯಚೂರು-ಕೊಪ್ಪಳ ಟೆಲಿಕಾಂ ಜಿಲ್ಲೆಯ ಜನರಲ್ ಮ್ಯಾನೇಜರ್ ವಿವೇಕ್ ಜೈಸ್ವಾಲ್ ಅವರು ಮಾತನಾಡಿ, ಕೊಪ್ಪಳ   ಹಾಗೂ ರಾಯಚೂರ ಜಿಲ್ಲೆಯಲ್ಲಿ ಒಟ್ಟು 129 ಟೆಲಿಕಾಂ ಎಕ್ಸ್‍ಚೇಂಜ್‍ಗಳಿದ್ದು, 15408 ಸ್ಥಿರ ದೂರವಾಣಿ ಸಂಪರ್ಕ ಇವೆ.  ಅಲ್ಲದೆ 229425 ಬಿಎಸ್‍ಎನ್‍ಎಲ್ ಪ್ರಿಪೇಯ್ಡ್ ಮೊಬೈಲ್ ಹಾಗೂ 3778 ಪೋಸ್ಟ್‍ಪೇಯ್ಡ್ ಮೊಬೈಲ್ ಗ್ರಾಹಕರಿದ್ದಾರೆ.  ಬಿಎಸ್‍ಎನ್‍ಎಲ್ ನಲ್ಲಿ 4ಜಿ ಸೇವೆಯನ್ನು ನೀಡಬೇಕೆನ್ನುವ ಬೇಡಿಕೆ ವ್ಯಕ್ತವಾಗುತ್ತಿದ್ದು, ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ 4ಜಿ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ.  ಸ್ಥಿರ ದೂರವಾಣಿಗೆ ಬೇಡಿಕೆ ಕಡಿಮೆಯಾಗುತ್ತಿದ್ದು, ಇದರ ಉತ್ತೇಜನಕ್ಕೆ ಹಲವು ಆಫರ್‍ಗಳನ್ನು ನೀಡಲಾಗುತ್ತಿದೆ.  ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಆಫರ್ ಲಭ್ಯವಾಗುವ ಸಾಧ್ಯತೆಗಳಿವೆ.  ಬಿಎಸ್‍ಎನ್‍ಎಲ್ ನೊಂದಿಗೆ ವ್ಯವಹಾರ ಕೈಗೊಳ್ಳುವ ಖಾಸಗಿಯವರಿಗೂ ಉತ್ತಮ ಕಮಿಷನ್ ನೀಡಲಾಗುತ್ತಿದೆ ಎಂದರು.
     ಸಲಹಾ ಸಮಿತಿ ಸದಸ್ಯ ಸಿಂಧನೂರಿನ ಮಧ್ವಾಚಾರ್ಯ ಅವರು ಮಾತನಾಡಿ, ಕಳೆಗುಂದಿದ್ದ ಅಂಚೆ ಇಲಾಖೆ ಹಾಗೂ ರೇಡಿಯೋ ಗಳನ್ನು ಈಗಿನ ಕೇಂದ್ರ ಸರ್ಕಾರ ಹಲವು ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ನಷ್ಟದಲ್ಲಿದ್ದ ಇಲಾಖೆಗಳನ್ನು ಲಾಭದತ್ತ ಮುಖ ಮಾಡುವಂತೆ ಮಾಡಿದೆ.  ಅದೇ ರೀತಿ ಬಿಎಸ್‍ಎನ್‍ಎಲ್  ಅನ್ನೂ ಕೂಡ ಮುಂಚೂಣಿಗೆ ಬರುವಂತೆ ಮಾಡಲು ಆರ್ಥಿಕ ಮತ್ತು ತಾಂತ್ರಿಕ ತಜ್ಞರ ಸಲಹೆಗಳನ್ನು ಪಡೆಯಬೇಕಿದೆ.  ಸಲಹಾ ಸಮಿತಿ ಸಭೆಗಳು ಕನಿಷ್ಟ 06 ತಿಂಗಳಿಗೊಮ್ಮೆಯಾದರೂ ನಡೆಯಬೇಕು.  ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎರಡು ವರ್ಷಗಳಿಗೊಂದು ಸಭೆ ನಡೆಯುವಂತಾಗಿದೆ.  ಹೀಗಾದಲ್ಲಿ, ತಜ್ಞರು ಸಲಹೆಗಳನ್ನು ನೀಡುವುದು ಹೇಗೆ, ಅದು ಅನುಷ್ಠಾನಗೊಳ್ಳುವುದು ಯಾವಾಗ  ಎಂದು ಪ್ರಶ್ನಿಸಿದ ಅವರು, ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಆಪರ್‍ಗಳ ಕುರಿತು ಹೆಚ್ಚಿನ ಪ್ರಚಾರ ನಡೆಸಿ, ಜನರನ್ನು ತಲುಪಲು ಯತ್ನಿಸುತ್ತವೆ.  ಆದರೆ ಬಿಎಸ್‍ಎನ್‍ಎಲ್ ಪ್ರಚಾರದಲ್ಲಿ ತೀವ್ರ ಹಿಂದುಳಿದಿದ್ದು, ಆಫರ್‍ಗಳನ್ನು ತಿಳಿಯಲು ಜನರು ಟೆಲಿಕಾಂ ಕಚೇರಿಗೆ ಹೋಗಿಯೇ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ಹೀಗಾದಲ್ಲಿ ಬಿಎಸ್‍ಎನ್‍ಎಲ್ ಅಭಿವೃದ್ಧಿಗೊಳ್ಳುವುದು ಹೇಗೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
     ಸಭೆಯಲ್ಲಿ ಬಿಎಸ್‍ಎನ್‍ಎಲ್ ಡೆಪ್ಯುಟಿ ಜನರಲ್ ಮ್ಯಾನೇಜರ್ ರಾಧಾ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಪದಕಿ ಸೇರಿದಂತೆ ಸಲಹಾ ಸಮಿತಿ ಸದಸ್ಯರುಗಳಾದ ಸಿದ್ದಾರೆಡ್ಡಿ ಡಂಬ್ರಳ್ಳಿ, ವಿರುಪಾಕ್ಷಪ್ಪ ಭತ್ತದ ಹಾಗೂ ಕೊಪ್ಪಳದ ಬಿಎಸ್‍ಎನ್‍ಎಲ್ ಅಧಿಕಾರಿ ರವಿಕುಮಾರ ನಾಯಕ್ ಹಾಗೂ ವಿವಿಧ ವೃಂದದ ಅಧಿಕಾರಿಗಳು ಉಪಸ್ಥಿತರಿದ್ದರು.
 


ಹೀಗಾಗಿ ಲೇಖನಗಳು ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ

ಎಲ್ಲಾ ಲೇಖನಗಳು ಆಗಿದೆ ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ ಲಿಂಕ್ ವಿಳಾಸ https://dekalungi.blogspot.com/2018/06/blog-post_90.html

Subscribe to receive free email updates:

0 Response to "ಬಿಎಸ್‍ಎನ್‍ಎಲ್ ಅಸ್ತಿತ್ವ ಉಳಿಕೆಗೆ ಗುಣಮಟ್ಟ ಹಚ್ಚಿಸುವ ಅಗತ್ಯವಿದೆ-ಕರಡಿ ಸಂಗಣ್ಣ"

ಕಾಮೆಂಟ್‌‌ ಪೋಸ್ಟ್‌ ಮಾಡಿ