ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ

ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ
ಲಿಂಕ್ : ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ

ಓದಿ


ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ



ಕೊಪ್ಪಳ ಜೂ. 05 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಅಂಗವಾಗಿ ಜೂನ್. 08 ರಂದು ಮತದಾನ ನಡೆಯಲಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

    ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮತದಾನ ಕಾರ್ಯ ನಿರ್ವಹಿಸುವ ಸಂಬಂಧ ಕೊಪ್ಪಳ ಜಿಲ್ಲಾ ಪಂಚಾಯತಿಯ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರದಂದು ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರದ ಚುನಾವಣೆ ಅಂಗವಾಗಿ  ಜೂನ್. 08 ರಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ಮತದಾನ ನಡೆಯಲಿದೆ.  ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 8338 ಮತದಾರರಿದ್ದು,  ಮತದಾನಕ್ಕಾಗಿ ಜಿಲ್ಲೆಯಲ್ಲಿ ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಲ್ಲಿ ತಲಾ ಎರಡು ಮತದಾನ ಕೇಂದ್ರಗಳು, ಹಾಗೂ ಗಂಗಾವತಿ ಮತ್ತು ಕೊಪ್ಪಳದಲ್ಲಿ ತಲಾ ಮೂರು ಸೇರಿ ಜಿಲ್ಲೆಯಲ್ಲಿ ಒಟ್ಟು 10 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಮತದಾನ ಕರ್ತವ್ಯಕ್ಕೆ ಒಟ್ಟು 50 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.  ಪ್ರತಿ ಮತದಾನ ಕೇಂದ್ರದಲ್ಲಿ ಪಿಆರ್‍ಒ-01, ಎಪಿಆರ್‍ಒ-01 ಹಾಗೂ ಪಿಒ-02 ಸೇರಿದಂತೆ ಒಟ್ಟು 04 ಜನ ಅಧಿಕಾರಿಗಳು ಕಾರ್ಯ ನಿರ್ವಹಿಸುವರು.  50 ಸಿಬ್ಬಂದಿಗಳಿಗೆ ಅಂಚೆ ಮತ ಚಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ಅಧಿಕಾರಿಗಳು ಮತದಾನ ಕಾರ್ಯ ಪ್ರಾರಂಭದಿಂದ ಮುಕ್ತಾಯದವರೆಗೂ ಅನುಸರಿಸಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಗಿದ್ದು, ನಿಯಮಗಳಿಗೆ ಅನುಸಾರವಾಗಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು.  ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಮಾತನಾಡಿ, ಮತಗಟ್ಟೆಯಿಂದ 100 ಮೀ. ವಿಸ್ತೀರ್ಣದೊಳಗೆ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದ್ದು, ಮತದಾನ ನಿಗದಿತ ಸಮಯ ಬೆಳಿಗ್ಗೆ 07 ಗಂಟೆಗೆ ಪ್ರಾರಂಭಿಸಬೇಕು.  ಒಂದು ವೇಳೆ ಮತದಾನ ತಡವಾಗಿ ಪ್ರಾರಂಭವಾದರೂ ಮತದಾನದ ಸಮಯವನ್ನು ಹೆಚ್ಚಿಸಬಾರದು ಮತ್ತು ಮತಗಟ್ಟೆಯಲ್ಲಿ ಮತದಾರರು ಹಾಜರಿದ್ದಲ್ಲಿ ಅಂತಹವರಿಗೆ   ಮತ ಹಾಕಲು ಅವಕಾಶ ಕೊಡಬೇಕು.  ಮತದಾನ ಕೇಂದ್ರದ ಒಳಗೆ ನೀರಿನ ಬಾಟಲಿ ಅಥವಾ ಮೊಬೈಲ್ ಸಹಿತ ಮತದಾರರು ಪ್ರವೇಶ ಮಾಡುವಂತಿಲ್ಲ  ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
    ಮತದಾನ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮತದಾನ ನಿರ್ವಹಿಸುವ ಬಗ್ಗೆ ತರಬೇತಿ ನೀಡಿದ   ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ ಅವರು,  ಮತದಾನ ಪ್ರಾರಂಭಕ್ಕೂ ಮುನ್ನ ಮತಪೆಟ್ಟಿಗೆ ಖಾಲಿ ಇರುವ ಕುರಿತು  ಏಜೆಂಟ್‍ರಿಗೆ ಖಾತ್ರಿಪಡಿಸಿ, ಅವರಿಂದ ದೃಢೀಕರಿಸಿ ರುಜು ಪಡೆಯಬೇಕು.  ಮತದಾನ ಮುಕ್ತಾಯ ಬಳಿಕವೂ ನಿಯಮಾನುಸಾರ ಕ್ರಮಗಳನ್ನು ಅನುಸರಿಸಬೇಕು ಎಂದರು.

ಮತದಾರರಿಗೆ ಸೂಚನೆ :
*********** ಈ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನೂ, ಸ್ಪರ್ಧಿಸಿರುವ ಅಷ್ಟೂ ಅಭ್ಯರ್ಥಿಗಳಿಗೆ ಆದ್ಯತಾನುಸಾರ ಮತ ನೀಡಬಹುದು.  ಇಂಗ್ಲೀಷ್ ಅಥವಾ ರೋಮನ್ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿ ಅಂಕಿಗಳಲ್ಲಿ ಮಾತ್ರವೇ ಗುರುತು ಮಾಡಬೇಕು. ಯಾವುದೇ ಪದಗಳನ್ನಾಗಲಿ,   ಚಿಹ್ನೆಯನ್ನಾಗಲಿ ಉಪಯೋಗಿಸುವಂತಿಲ್ಲ.  ಆದ್ಯತೆಯ ಸಂಖ್ಯೆಯನ್ನು ಅಭ್ಯರ್ಥಿಗಳ ಹೆಸರುಗಳ ಎದುರು ಇರುವ ಅಂಕಣಗಳಲ್ಲಿಯೇ ಬರೆಯಬೇಕು.  ಅಂಕಣದ ಹೊರಗಡೆ ಅಥವಾ ಎರಡು ಅಂಕಣಗಳ ನಡುವೆ ಗುರುತು ಮಾಡಿದರೆ ಅದನ್ನು ಕುಲಗೆಟ್ಟ ಮತ ಎಂದು ಪರಿಗಣಿಸಲಾಗುವುದು.  ಮೊದಲ ಆದ್ಯತೆ ಮತವನ್ನು ಕಡ್ಡಾಯವಾಗಿ ನಮೂದಿಸುವುದು ಅಗತ್ಯವಾಗಿದ್ದು, ಮೊದಲ ಆದ್ಯತೆ ಮತವನ್ನು ನೀಡಿದ ಮೇಲೆ ಮುಂದಿನ ಗುರುತುಗಳನ್ನು ಮಾಡುವುದು ಮತದಾರನ ಇಚ್ಛೆಗೆ ಅನುಸಾರವಾಗಿರುತ್ತದೆ.  ಆದರೆ ಮತದಾರನ ಆದ್ಯತಾನುಸಾರ ಮುಂದುವರಿದಿರಬೇಕು.  ಕ್ರಮ ಸಂಖ್ಯೆಯು ತಪ್ಪಿ ಹೋದಲ್ಲಿ ಮುಂದಿನ ಆದ್ಯತಾ ಮತಗಳು ಕುಲಗೆಟ್ಟ ಮತಗಳಾಗುವುವು.  ಯಾವುದೇ ಅಭ್ಯರ್ಥಿಯ ಹೆಸರಿನ ಎದುರುಗಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಅಂಕಿಯನ್ನು ಗುರುತು ಮಾಡಬಾರದು ಅಥವಾ ಇತರ ಗುರುತನ್ನು ಮಾಡಬಾರದು.  ಒಬ್ಬ ಅಭ್ಯರ್ಥಿಗಿಂತಲೂ ಹೆಚ್ಚಿನ ಹೆಸರುಗಳ ಎದುರುಗಡೆ ಅದೇ ಅಂಕಿಯನ್ನು ಗುರುತು ಮಾಡಬಾರದು.  ಮತದಾನ ಕೇಂದ್ರದಲ್ಲಿ ಮತಗಟ್ಟೆ ಅಧಿಕಾರಿ ನೀಡುವ ಸಾಧನದಿಂದ ಮಾತ್ರ ಮತಪತ್ರದಲ್ಲಿ ಗುರುತು ಮಾಡಬೇಕು.  ಇತರೆ ಯಾವುದೇ ಪೆನ್, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ ಉಪಯೋಗಿಸುವಂತಿಲ್ಲ.

ಮತದಾನಕ್ಕೆ ಪರ್ಯಾಯ ದಾಖಲೆಗಳು :
********** ಮತದಾನ ಮಾಡಲು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕಿದ್ದು, ಈ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪರ್ಯಾಯವಾಗಿ 13 ಬಗೆಯ ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಹಾಜರುಪಡಿಸಿ, ಮತ ಚಲಾಯಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.  ಪಾಸ್‍ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ರಾಜ್ಯ/ ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಬ್ಯಾಂಕ್/ ಅಂಚೆ ಕಛೇರಿ ನೀಡಿರುವ ಭಾವಚಿತ್ರವಿರುವ ಪಾಸ್‍ಬುಕ್, ಪಾನ್‍ಕಾರ್ಡ್, ರಾಷ್ಟ್ರೀಯ ಜನಸಂಖ್ಯೆ ನೊಂದಣಿ ಅಡಿಯಲ್ಲಿ ಆರ್.ಜಿ.ಐ ವತಿಯಿಂದ ನೀಡಿರುವ ಸ್ಮಾರ್ಟ್‍ಕಾರ್ಡ್, ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್‍ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲಾತಿಗಳು, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿರುವ ಗುರುತಿನ ಚೀಟಿ, ಶಸ್ತ್ರ ಪರವಾನಗಿ ಪತ್ರ, ಅಂಗವಿಕಲರಿಗೆ ನೀಡಿರುವ ಗುರುತಿನ ಕಾರ್ಡ್, ಮಾಜಿಸೈನಿಕರಿಗೆ ಸಿಎಸ್‍ಡಿ ಕ್ಯಾಂಟೀನ್ ಕಾರ್ಡ್.  ಈ ಪೈಕಿ ಯಾವುದಾದರೂ ಒಂದು ದಾಖಲೆ ಹಾಜರುಪಡಿಸಿ ಮತ ಚಲಾಯಿಸಬಹುದು.
ಮತಗಟ್ಟೆ ಹಾಗೂ ಮತದಾರರ ಸಂಖ್ಯಾ ವಿವರ : ಕುಷ್ಟಗಿ ತಹಶೀಲ ಕಾರ್ಯಾಲಯ, ಸಿಬ್ಬಂದಿ ಕೊಠಡಿ, -689 ಮತದಾರರು.  ಕುಷ್ಟಗಿ ತಹಶೀಲ ಕಾರ್ಯಾಲಯ, ಸರ್ವೇ ಸೆಕ್ಷನ್-698 ಮತದಾರರು.   ಯಲಬುರ್ಗಾ-1 ಸರಕಾರಿ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), ಹೊಸ ಕಟ್ಟಡ (ದಕ್ಷಿಣ ಭಾಗ)  -617 ಮತದಾರರು.  ಯಲಬುರ್ಗಾ-2 ಸರಕಾರಿ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), ಹೊಸ ಕಟ್ಟಡ (ಮಧ್ಯ ಭಾಗ)-819 ಮತದಾರರು.  ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ದಕ್ಷಿಣ ಭಾಗ) -766 ಮತದಾರರು.  ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ಪಶ್ಚಿಮ ಎಡ ಭಾಗ) -760 ಮತದಾರರು.  ಗಂಗಾವತಿ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ (ಪ್ರೌಢ ಶಾಲೆ ವಿಭಾಗ), (ಉತ್ತರ ಭಾಗ) -1312 ಮತದಾರರು.  ಕೊಪ್ಪಳ ತಾಲೂಕ ಪಂಚಾಯತ್ ಕಾರ್ಯಾಲಯ, ಸಭಾ ಕೊಠಡಿ (ಪಶ್ಚಿಮ ಭಾಗ) -873 ಮತದಾರರು.  ಕೊಪ್ಪಳ ತಾಲೂಕ ಪಂಚಾಯತ್ ಕಾರ್ಯಾಲಯ, ಸಭಾ ಕೊಠಡಿ (ಪಶ್ಚಿಮ ಭಾಗ, ಎಡಗಡೆಯ ಕೊಠಡಿ) -889 ಮತದಾರರು.  ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆ, ತಹಶೀಲ್ ಕಛೇರಿ ಕಟ್ಟಡ (ನೆಲ ಮಹಡಿ) -917 ಮತದಾರರು.  ಜಿಲ್ಲೆಯಲ್ಲಿ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 8338 ಪದವಿಧರ ಮತದಾರರಿದ್ದಾರೆ.
     ತರಬೇತಿ ಕಾರ್ಯಗಾರದಲ್ಲಿ ಉಪವಿಭಾಗಾಧಿಕಾರಿ ಡಾ. ರವಿ ತಿರ್ಲಾಪುರ ಸೇರಿದಂತೆ ತಾಲೂಕುಗಳ ತಹಸಿಲ್ದಾರರು, ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.


ಹೀಗಾಗಿ ಲೇಖನಗಳು ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ

ಎಲ್ಲಾ ಲೇಖನಗಳು ಆಗಿದೆ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/06/blog-post_9.html

Subscribe to receive free email updates:

0 Response to "ವಿಧಾನ ಪರಿಷತ್ ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ : ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕ್ರಮ ವಹಿಸಿ : ಎಂ. ಕನಗವಲ್ಲಿ"

ಕಾಮೆಂಟ್‌‌ ಪೋಸ್ಟ್‌ ಮಾಡಿ