ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ

ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ
ಲಿಂಕ್ : ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ

ಓದಿ


ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ


ಕೊಪ್ಪಳ ಜೂ. 20 (ಕರ್ನಾಟಕ ವಾರ್ತೆ): ಕೊಪ್ಪಳ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಿವೇಶನ/ ವಸತಿ ರಹಿತರಿಗೆ ನಿವೇಶನ ಸೌಲಭ್ಯವನ್ನು ನಗರಸಭೆ ವತಿಯಿಂದ ಒದಗಿಸಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 
    ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಕೊಪ್ಪಳ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ನಿವೇಶನ/ ವಸತಿ ರಹಿತರಿಗೆ ನಿವೇಶನ ಸೌಲಭ್ಯವನ್ನು ಒದಗಿಸಿಕೊಡುವುದಕ್ಕಾಗಿ ಗುನ್ನಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 2 ಎಕರೆ ಮತ್ತು ಹೊರತಟ್ನಾಳ ಗ್ರಾಮವ್ಯಾಪ್ತಿಯಲ್ಲಿ 15 ಎಕರೆ 18 ಗುಂಟೆ ಜಮೀನನ್ನು ಖರೀದಿಸಿ, ಅದರಲ್ಲಿ 20*30 ಅಡಿ ಅಳತೆಯ ನಿವೇಶನಗಳನ್ನು ರಚಿಸಲಾಗಿದೆ.  ಈ ನಿವೇಶನಗಳನ್ನು ನಿವೇಶನ/ ವಸತಿ ರಹಿತರಿಗೆ ಹಂಚಿಕೆ ಮಾಡಲಾಗುವುದು.  ನಿವೇಶನ ಸೌಲಭ್ಯವನ್ನು ಪರಿಶಿಷ್ಟ ಜಾತಿಯವರಿಗೆ ಶೇ.18 ರಷ್ಟು, ಪರಿಶಿಷ್ಟ ಪಂಗಡದವರಿಗೆ ಶೇ.4.45, ದಿವ್ಯಾಂಗ ಜನರು (ವಿಕಲಚೇತರು) ಶೇ.5, ಮಾಜಿ ಸೈನಿಕರು/ ವಿಧವೆಯರು ಶೇ.01,  ಹಿರಿಯ ನಾಗರೀಕರಿಗೆ ಶೇ.02 ಹಾಗೂ ಸಾಮಾನ್ಯರಿಗೆ ಶೇ.69.25 ರಷ್ಟು ಮೀಸಲಾತಿ ಅನ್ವಯ ನೀಡಲಾಗುತ್ತಿದ್ದು, ಅರ್ಹರು ಇದರಂತೆ ಅರ್ಜಿ ಸಲ್ಲಿಸಬಹುದಾಗಿದೆ.
    ಅರ್ಜಿದಾರರು ಕೊಪ್ಪಳ ನಗರದ ನಿವಾಸಿಗಳಾಗಿರಬೇಕು.  ಅರ್ಜಿ ಸಲ್ಲಿಸಲು ಜೂ. 26 ಕೊನೆಯ ದಿನವಾಗಿದ್ದು, ಆಧಾರ್ ಕಾರ್ಡ್, ಕುಟುಂಬ ಪಡಿತರ ಚೀಟಿ, ಅರ್ಜಿದಾರರ ಭಾವಚಿತ್ರ, ಚುನಾವಣಾ ಆಯೋಗದ ಗುರುತಿನ ಚೀಟಿ, ಕುಟುಂಬ ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ಆಧಾರ್ ಕಾರ್ಡಗಳ ಜೆರಾಕ್ಸ್ ಪ್ರತಿ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿದಾರರ ಹಾಗೂ ಕುಟುಂಬದ ಭಾವಚಿತ್ರಗಳು ಮತ್ತು ನಗರಸಭೆಯಿಂದ ಅಥವಾ ರಾಜ್ಯದ ಯಾವುದೇ ನಗರ ಸ್ಥಳೀಯ ಸಂಸ್ಥೆಗಳಿಂದ ಈ ಹಿಂದೆ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ಪಡೆದುಕೊಂಡಿರುವುದಿಲ್ಲ ಎಂಬುದಕ್ಕೆ ರೂ. 100 ಛಾಪಾ ಕಾಗದದ ಮೇಲೆ ಕರಾರು ಪತ್ರವನ್ನು ಬರೆದು ನೋಟರಿ ಮಾಡಿಸಿ ಲಗತ್ತಿಸಿ, ಕೊಪ್ಪಳ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


ಹೀಗಾಗಿ ಲೇಖನಗಳು ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/06/blog-post_88.html

Subscribe to receive free email updates:

0 Response to "ಕೊಪ್ಪಳ ನಗರಸಭೆಯಿಂದ ನಿವೇಶನ ಸೌಲಭ್ಯ : ಅರ್ಜಿ ಆಹ್ವಾನ"

ಕಾಮೆಂಟ್‌‌ ಪೋಸ್ಟ್‌ ಮಾಡಿ