ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ

ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ
ಲಿಂಕ್ : ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ

ಓದಿ


ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ



ಕೊಪ್ಪಳ ಜೂ. 20 (ಕರ್ನಾಟಕ ವಾರ್ತೆ): ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜನಸಮುದಾಯವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಬುಧವಾರದಂದು ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಯಿತು.
 
      ಜಿಲ್ಲೆಯಲ್ಲಿ ಮಲೇರಿಯಾ ರೋಗದ ಹರಡುವಿಕೆ, ನಿಯಂತ್ರಣ ಹಾಗೂ ರೋಗಗಳನ್ನು  ತಡೆಗಟ್ಟುವ ನಿಟ್ಟಿನಲ್ಲಿ ಜನಸಮುದಾಯವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕೊಪ್ಪಳ ನಗರದ ಹಳೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ “ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥ” ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||. ಎಚ್. ರಾಮಕೃಷ್ಣ, ಅವರು ಚಾಲನೆ ನೀಡಿದರು.  ನಂತರ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಮಲೇರಿಯಾ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಲ್ಲಾ ರೀತಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಈಗ ಮಳೆಗಾಲ ಪ್ರಾರಂಭವಾಗಿದ್ದು ಅಲ್ಲಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟು ಸೊಳ್ಳೆಗಳ ಸಂತತಿ ಹೆಚ್ಚಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾದಂತಹ ರೋಗಗಳ ಹೆಚ್ಚಳವಾಗುವ ಎಲ್ಲಾ ಸಾದ್ಯತೆ ಇರುತ್ತದೆ. ಮಲೇರಿಯಾ ರೋಗಕ್ಕೆ ನಿರ್ಧಿಷ್ಟ ಚಿಕಿತ್ಸೆ ಇದ್ದು ಜನರೂ ಭಯಪಡುವ ಅವಶ್ಯಕತೆ ಇಲ್ಲ. ಯಾವುದೇ ಜ್ವರ ಇರಲಿ ಶೀಘ್ರವೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿ ಉಚಿತ ಚಿಕಿತ್ಸೆ ಪಡೆಯಲು ಜನಸಮುದಾಯಕ್ಕೆ ಕರೆ ನೀಡಿದರು.  
 
          ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ||.ವಿರುಪಾಕ್ಷರೆಡ್ಡಿ ಎಸ್ ಮಾದಿನೂರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಧೇಶನದಂತೆ ಪ್ರತಿ ವರ್ಷವು ಜೂನ್ ತಿಂಗಳನ್ನು “ಮಲೇರಿಯಾ ವಿರೋಧಿ ಮಾಸಾಚರಣೆ” ಯನ್ನಾಗಿ ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು ಇದು ಸೋಂಕಿತ ಅನಾಫಿಲಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ ಹಾಗೂ ಈ ಸೊಳ್ಳೆಗಳು ಬಹುತೇಕ ಸಂಜೆ ಹೊತ್ತಿನಲ್ಲಿಯೇ ಕಚ್ಚುತ್ತವೆ ಹಾಗಾಗಿ ಜನಸಮುದಾಯವು ಸ್ವಯಂ ರಕ್ಷಣ ವಿಧಾನಗಳನ್ನು ಬಳಸಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಬೇಕು.  ಅನಾಫಿಲಿಸ್ ಸೊಳ್ಳೆಗಳು ಸ್ವಚ್ಚವಾದ ನೀರಿನಲ್ಲಿ, ಕೆರೆ, ಬಾವಿ, ಹೊಂಡ, ಕಾಲುವೆ ಮುಂತಾದ ನಿಂತ ನೀರಿನ ತಾಣಗಳಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನಭಿವೃದ್ಧಿ ಮಾಡುತ್ತವೆ. ಆದ್ದರಿಂದ  ಮನೆಯ ಒಳಗೆ ಮತ್ತು ಹೊರಗೆ    ನೀರು ನಿಲ್ಲದಂತೆ ಎಚ್ಚರವಹಿಸಬೇಕು ಹಾಗೂ ನೀರು ಶೇಖರಣೆ ಸಲಕರಣೆಗಳನ್ನು ಸದಾಕಾಲ ಮುಚ್ಚಿಡಬೇಕು.  ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಲು, ಮನೆಗಳ ಸುತ್ತಮುತ್ತ ಸ್ವಚ್ಚತೆ ಕಾಪಾಡಬೇಕು. ಸರ್ಕಾರದ ನಿರ್ದೇಶನದಂತೆ ಕೊಪ್ಪಳ ಜಿಲ್ಲೆಯನ್ನು 2025 ರ ಒಳಗಾಗಿ ಮಲೇರಿಯಾ ನಿರ್ಮೂಲನೆಗೆ ಪಣ ತೊಡೋಣ, ಮಲೇರಿಯಾ ಮುಕ್ತ ಸಮಾಜ ನಿರ್ಮಿಸಲು, ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಲು ಜನಸಮುದಾಯಕ್ಕೆ ಕರೆ ನೀಡಿದರು.  
       ಜಿಲ್ಲಾ ಕೀಟಜನ್ಯ ರೋಗಗಳ ಸಲಹೆಗಾರ ರಮೇಶ್ ಮಾತನಾಡಿ,  ಪ್ರಸಕ್ತ ಸಾಲಿನ ಮಲೇರಿಯಾ ವಿರೋಧಿ ಮಾಸಾಚರಣೆಯ ಘೋಷಣೆಯ “ಮಲೇರಿಯಾ ಕೊನೆಗೊಳಿಸಲು ಸಿದ್ಧರಾಗಿ” ಎಂಬುದಾಗಿರುತ್ತದೆ.  ಅದರಂತೆ ಕೊಪ್ಪಳ ಜಲ್ಲೆಯನ್ನು 2025ರ ವೇಳೆಗೆ ಸಂಪೂರ್ಣ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಗಧಿತ ಗುರಿ ಸಾಧಿಸಲು ಮಾರ್ಗಸೂಚಿಗಳ ಅನ್ವಯ ಸಕಲ ನಿಯಂತ್ರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಜೊತೆ ಕೊಪ್ಪಳ ಜಿಲ್ಲೆಯಲ್ಲಿ ಜನಸಮುದಾಯದ ಜಾಗೃತಿ ಮತ್ತು ಜನರ ಸಹಕಾರ ಇದ್ದಾಗ ಮಾತ್ರ ನಿಗಧಿತ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ. ಆದ್ದರಿಂದ  ಜನರ ಜಾಗೃತಿ ಮತ್ತು  ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.
        ಜಾಥದಲ್ಲಿ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಕೊಪ್ಪಳ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಯವರು, ಕಿರಿಯ ಮಹಿಳಾ ತರಬೇತಿ ಕೇಂದ್ರದ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು, ಶಾಲಾ ವಿಧ್ಯಾರ್ಥಿಗಳು, ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿ ಕಚೇರಿಯ ಆರ್.ಬಿ.ಎಸ್.ಕೆ ವೈಧ್ಯಾಧಿಕಾರಿಗಳು ಹಾಗೂ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
          ಕೊಪ್ಪಳ ನಗರದಾದ್ಯಂತ ಸಂಚರಿಸಿದ ಜನ ಜಾಗೃತಿ ಜಾಥದಲ್ಲಿ ತೆರೆದ ವಾಹನದಲ್ಲಿ ಮಲೇರಿಯಾ ವಿರೋಧಿ ಜಾಗೃತಿ ಗೀತೆಗಳನ್ನು ಹಾಡುವುದರ ಮೂಲಕ ಹಾಗೂ ಜನಜಾಗೃತಿ ಕರಪತ್ರಗಳನ್ನು ಹಂಚುವುದರ ಮೂಲಕ ಹಾಗೂ ಭ್ಯಾನರ್ ಮತ್ತು ಪೋಸ್ಟರ್‍ಗಳನ್ನು ಪ್ರದರ್ಶಿಸಿಸುವುದರ ಮೂಲಕ ನಗರದಲ್ಲಿ ಜನ ಜಾಗೃತಿ ಜಾಥವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.



ಹೀಗಾಗಿ ಲೇಖನಗಳು ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ ಲಿಂಕ್ ವಿಳಾಸ https://dekalungi.blogspot.com/2018/06/blog-post_86.html

Subscribe to receive free email updates:

0 Response to "ಕೊಪ್ಪಳ ನಗರದಲ್ಲಿ ಮಲೇರಿಯಾ ವಿರೋಧಿ ಜನ ಜಾಗೃತಿ ಜಾಥಾ"

ಕಾಮೆಂಟ್‌‌ ಪೋಸ್ಟ್‌ ಮಾಡಿ