ಶೀರ್ಷಿಕೆ : ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ
ಲಿಂಕ್ : ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ
ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ
ಕೊಪ್ಪಳ ಜೂ. 06 (ಕರ್ನಾಟಕ ವಾರ್ತೆ): ಡೆಂಗ್ಯೂ ಜ್ವರದ ರೋಗ ಹರಡುವಿಕೆಗೆ ಮುಖ್ಯವಾಗಿ ಮನ್ಯಷ್ಯ-ರೋಗಾಣು-ಸೊಳ್ಳೆ ಇವುಗಳ ತ್ರಿಕೋನ ಸಂಬಂಧ ಹೊಂದಿದ್ದು, ರೋಗ ಬಂದ ನಂತರ ಚಿಕಿತ್ಸೆಗೆ ಪರದಾಡುವ ಬದಲು, ರೋಗ ಬಾರದಂತೆ ಎಚ್ಚರಿಕಾ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಕೊಪ್ಪಳ ಹಳೆ ಜಿಲ್ಲಾಸ್ಪತ್ರೆ ಆವರಣದ ಸಭಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರದಂದು ಆಯೋಜಿಸಿದ್ದ ಮಾಹಿತಿ ನೀಡಿಕೆ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ಡೆಂಗ್ಯೂ ಜರವು ಮಾರಣಾಂತಿಕ ರೋಗವಾಗಿದ್ದು, ಈ ರೋಗ ಬಾರದಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ಅನುಸರಿಸುವುದು ಸೂಕ್ತವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಈವರೆಗೆ ಒಟ್ಟು 16 ಡೆಂಗ್ಯು, 05-ಚಿಕುನ್‍ಗುನ್ಯಾ ಪ್ರಕರಣಗಳು ಖಚಿತಪಟ್ಟಿದ್ದು ಯಾವುದೇ ಮರಣ ಸಂಭವಿಸಿಲ್ಲ. ಕಳೆದ 2016 ರಲ್ಲಿ 55, 2017 ರಲ್ಲಿ 177 ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈಲ್ಲೆಯಲ್ಲಿ ಡೆಂಗ್ಯೂ ಮತ್ತು ಚಿಕುನ್‍ಗುನ್ಯಾ ರೋಗ ಹರಡುವುದನ್ನು ತಪ್ಪಿಸಲು ವಿಶೇಷ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೈರಿಸ್ಕ್ ಪ್ರದೇಶಗಳನ್ನು ಗುರುತಿಸಿ, ಲಾರ್ವ ಸಮೀಕ್ಷೆ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕರುಗಳ ಮೂಲಕ ಏರ್ಪಡಿಸಲಾಗುತ್ತಿದೆ. ರೋಗ ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದ್ದು, ತಮ್ಮ ಸುತ್ತಮುತ್ತಲ ಪ್ರದೇಶದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಡಾ. ವಿರುಪಾಕ್ಷರೆಡ್ಡಿ ಮಾದಿನೂರ ಅವರು ಹೇಳಿದರು.
ಕೀಟಜನ್ಯ ರೋಗಗಳ ಸಲಹೆಗಾರ ರಮೇಶ್ ಅವರು ಡೆಂಗ್ಯೂ ಮತ್ತು ಚಿಕುನ್‍ಗುನ್ಯಾ ರೋಗ ಹರಡುವಿಕೆ ಮತ್ತು ಚಿಕಿತ್ಸೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಡೆಂಗ್ಯೂ ಜ್ವರದ ಲಕ್ಷಣಗಳು, ಮೊದಲ ಹಂತದಲ್ಲಿ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕಣ್ಣಿನ ಸ್ವಲ್ಪ ಚಲನೆಯೂ ನೋವನ್ನುಂಟುಮಾಡುತ್ತದೆ. ಮೈ ಕೈ ನೋವು ಹಾಗೂ ವಿಪರೀತ ಸುಸ್ತು. ಎರಡನೇ ಹಂತದಲ್ಲಿ ರಕ್ತ ಸ್ರಾವ. ಬಾಯಿ, ಮೂಗು, ಕಿವಿಯಿಂದ, ಬೇಧಿಯಲ್ಲಿ ಮತ್ತು ಮೂತ್ರದಲ್ಲಿ ರಕ್ತಸ್ರಾವವಾಗುವುದು. ಕೀಲುಗಳಲ್ಲಿ ಒಳ ಅಂಗಗಳಲ್ಲಿ (ಹೃದಯ, ಮೆದಳು, ಕಿಡ್ನಿ ಇತ್ಯಾದಿಗಳಲ್ಲಿ) ರಕ್ತಸ್ರಾವ. ಮೂರನೇ ಹಂತದಲ್ಲಿ ಶ್ಯಾಕ್ ಸಿಂಡ್ರೋಮ್ ಲಕ್ಷಣಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲ ಲಕ್ಷಣಗಳು ಚಿಕುನ್‍ಗುನ್ಯ ಜ್ವರದ ಲಕ್ಷಣಗಳು ಆಗಿದ್ದು, ಇಂತಹ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಕೊಳ್ಳಬೇಕು. ಡೆಂಗ್ಯೂ/ ಚಿಕುನ್‍ಗುನ್ಯಾ ಪರೀಕ್ಷೆ ಮಾಡಲು ಕೊಪ್ಪಳ ಜಿಲ್ಲೆಯಲ್ಲಿ ಡಿ.ಪಿ.ಹೆಚ್ ಲ್ಯಾಬ್, ಕೆಐಎಂಎಸ್ ಕೊಪ್ಪಳ ಹಾಗೂ ಜಿಲ್ಲಾ ಸರ್ವೇಕ್ಷಣಾ ಪ್ರಯೋಗಾಲಯದಲ್ಲಿ ಪರೀಕ್ಷಿಸಿಕೊಳ್ಳಬಹುದು ಎಂದರು.
ಡೆಂಗ್ಯೂ ಜ್ವರ ಹರಡದಂತೆ ಕ್ರಮ :
************* ಡೆಂಗ್ಯೂ ಜ್ವರ ಹರಡದಂತೆ ಜನ ಸಮುದಾಯ ಅನುಸರಿಸಬೇಕಾದ ಕ್ರಮಗಳ ವಿವರ ಇಂತಿದೆ. ಎಲ್ಲ ಬಗೆಯ ನೀರಿನ ತೊಟ್ಟಿ, ಡ್ರಂ, ಬ್ಯಾರೆಲ್, ಏರ್‍ಕೂಲರ್‍ಗಳನ್ನು ವಾರಕ್ಕೊಮ್ಮೆ ಖಾಲಿ ಮತ್ತು ಸ್ವಚ್ಛ ಮಾಡಿ ಒಳಗಿಸಿ ಪುನಃ ನೀರು ತುಂಬಿ ತೊಟ್ಟಿಗಳಲ್ಲಿ ಸೊಳ್ಳೆಗಳು ನುಸುಳದಂತೆ ಮುಚ್ಚಳಿಕೆಯಿಂದ ಸುಭದ್ರವಾಗಿ ಮುಚ್ಚಬೇಕು. ಮನೆಯ ಸುತ್ತ, ಬಯಲಿನಲ್ಲಿ ಮತ್ತು ಮಾಳಿಗೆ ಮೇಲೆ ಟೃರು ಟ್ಯೂಬು, ಒಡೆದ ಬಕೆಟ್, ಎಳೆನೀರು ಚಿಪ್ಪು, ಮರದ ಪೊಟರೆ, ಹೂವಿನ ಕುಂಡ, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿನ ಅಭಾವವಿದ್ದ ಸಂದರ್ಭಗಳಲ್ಲಿ ಶೇಖರಿಸಲ್ಪಟ್ಟ ನೀರನ್ನು ಸರಿಯಾಗಿ ಸೋಸಿ ಸ್ವಚ್ಛಗೊಳಿಸಿ ಶೇಖರಿಸಿಟ್ಟು ಬಳಸಬೇಕು. ಸಾಧ್ಯವಾದರೆ ಕಾಯಿಸಿ ಆರಿಸಿದ ನೀರನ್ನು ಸೋಸಿ ಕುಡಿಯುವುದು ಉತ್ತಮ ವಿಧಾನ. ನೂತನ ಕಟ್ಟಡ ಕಟ್ಟುವವರು ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು.
ಯಾವುದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಸಿಬ್ಬಂದಿ ನಿಮ್ಮ ಮನೆ ಹತ್ತಿರ ಬಂದಾಗ ಜ್ವರ ಪಿಡಿತರು ರಕ್ತ ಲೇಪನ ನೀಡಿ ಸಹಕರಿಸಬೇಕು. ಬೆಳಿಗ್ಗೆ ಮತ್ತು ಸಂಜೆ ವೇಳೆ ಸೊಳ್ಳೆಯ ಚಟುವಟಿಕೆ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಆದಷ್ಟು ಮೈ ತುಂಬಾ ಬಟ್ಟೆಯನ್ನು ಧರಿಸಬೇಕು. ಮನೆಯ ಕಿಟಕಿ, ಬಾಗಿಲು ಮುಚ್ಚಬೇಕು. ಸಂಜೆ ವೇಳೆ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ತಪ್ಪದೇ ಉಪಯೋಗಿಸಬೇಕು. ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಜಿಲ್ಲೆಯಾದ್ಯಂತ ಸೊಳ್ಳೆ ನಿಯಂತ್ರಣಕ್ಕಾಗಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಸಹಕರಿಸಬೇಕು. ಸೊಳ್ಳೆ ನಿರೋಧಕ ಮತ್ತು ಸೊಳ್ಳೆ ಪರದೆಗಳನ್ನು ಬಳಸುವ ಮೂಲಕ ಸ್ವಯಂ ರಕ್ಷಣಾ ವಿಧಾನ ಅನುಸರಿಸಬೇಕು. ಸೊಳ್ಳೆಗಳ ಕಚುವಿಕೆಯಿಂದ ದೂರವಿರಬೇಕು. ಕೆರೆ, ಹೊಂಡ ಮತ್ತಿತರ ನೀರಿನ ಸಂಗ್ರಹಣಾ ತೊಟ್ಟಿಗಳಲ್ಲಿ ಗಪ್ಸಿ ಮತ್ತು ಗಂಬೂಸಿಯಾ ಮೀನು ಮರಿಗಳನ್ನು ಬಿಡುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎಂದು ರಮೇಶ್ ವಿವರಣೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಸೇರಿದಂತೆ ವಿವಿಧ ಮಾಧ್ಯಮ ಪ್ರತಿನಿಧಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.
ಹೀಗಾಗಿ ಲೇಖನಗಳು ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ
ಎಲ್ಲಾ ಲೇಖನಗಳು ಆಗಿದೆ ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ ಲಿಂಕ್ ವಿಳಾಸ https://dekalungi.blogspot.com/2018/06/blog-post_67.html
0 Response to "ಡೆಂಗ್ಯೂ ಜ್ವರ ರೋಗ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ"
ಕಾಮೆಂಟ್ ಪೋಸ್ಟ್ ಮಾಡಿ