ಶೀರ್ಷಿಕೆ : ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ
ಲಿಂಕ್ : ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ
ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ ಜೂ. 05 (ಕರ್ನಾಟಕ ವಾರ್ತೆ): ಕೊಪ್ಪಳ ಬಾಲಮಂದಿರದ ಸ್ವಾಗತ ಘಟಕದ ಬಾಲಕನಾದ ಬಸವರಾಜ ತಂದೆ ಮಂಜಪ್ಪ ಎಂಬ 07 ವರ್ಷದ ಬಾಲಕನ ಪೋಷಕರ ಪತ್ತೆಗಾಗಿ ಸಹಕರಿಸುವಂತೆ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ರೋಹಿಣಿ ಕೋಟಗಾರ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೊಪ್ಪಳದ ಬಾಲಕರ ಸರಕಾರಿ ಬಾಲಮಂದಿರ, ವಿಜಯ ನಗರ ಬಡಾವಣೆ, ಅನ್ನಪೂರ್ಣೆಶ್ವರಿ ದೇವಸ್ಥಾನದ ಹತ್ತಿರ ಕಿನ್ನಾಳ ರೋಡ ಕೊಪ್ಪಳ, ಸಂಸ್ಥೆಯ ಸ್ವಾಗತ ಘಟಕದ ಬಾಲಕನಾದ ಬಸವರಾಜ ತಂದೆ ಮಂಜಪ್ಪ, ವಯಸ್ಸು-07 ಸಾ. ಕೊಪ್ಪಳ ಜಿಲ್ಲೆ ಕೊಪ್ಪಳ, ಈ ಬಾಲಕನನ್ನು ಕಳೆದ 2016ರ ಏಪ್ರಿಲ್. 07 ರಂದು ರಕ್ಷಣೆ ಮಾಡಿದ ಬೆಂಗಳೂರಿನಹ ಪೊಲೀಸರು ಬಾಲಕನ ಪೋಷಕರ ಪತ್ತೆ ಮತ್ತು ಮುಂದಿನ ಪುನರ್ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರಿಗೆ ಹಾಜರುಪಡಿಸಿದ್ದರು. ನಂತರ ಸಮಿತಿಯ ಆದೇಶದ ಮೇರೆಗೆ 2016ರ ಎಪ್ರಿಲ್. 11 ರಂದು ಶಿಶು ಮಂದಿರ ಬೆಂಗಳೂರಿಗೆ ವರ್ಗಾಯಿಸಿದ್ದರು. ನಂತರ ಬಾಲಕನ ಹೇಳಿಕೆ ಆಧರಿಸಿ ಕೊಪ್ಪಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೋಷಕರು ಪತ್ತೆಯಾಗಬಹುದೆಂದು, 2017ರ ಅಕ್ಟೋಬರ್. 23 ರಂದು ಪೋಷಕರ ಪತ್ತೆಗಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿಯವರೆಗೂ ಪೊಷಕರ ಪತ್ತೆಗಾಗಿ ಕಾರ್ಯಾಚರಣೆ ಮಾಡಿದರೂ, ಬೆಂಗಳೂರಿನಲ್ಲಿ ಪತ್ತೆಯಾಗಿರುವುದಿಲ್ಲ ಕಾರಣ ಬಾಲಕನನ್ನು ಪುನಃ ಸಮಾಲೋಚಿಸಿದಾಗ ಕೊಪ್ಪಳ ಜಿಲ್ಲೆಯವನೆಂದು ಹೇಳಿಕೆ ನೀಡುತ್ತಿದ್ದು, ಮಕ್ಕಳ ಕಲ್ಯಾಣ ಸಮಿತಿ ಬೆಂಗಳೂರುರವರು ಬಾಲಕನನ್ನು ಆತನ ಕುಟುಂಬಕ್ಕೆ ಸೇರಿಸುವ ಹಿತದೃಷ್ಟಿಯಿಂದ ಮತ್ತು ಪೋಷಕರ ಪತ್ತೆ ಮಾಡಲು ಸಹಕಾರವಾಗುವುದೆಂದು ಬಾಲ ನ್ಯಾಯ ಕಾಯ್ದೆ 96(1) ಕಲಂ ರಡಿಯಲ್ಲಿ ಕೊಪ್ಪಳ ಜಿಲ್ಲೆಗೆ ವರ್ಗಾಯಿಸಿದ್ದಾರೆ. ಬಾಲಕನು ಕೊಪ್ಪಳದಲ್ಲಿಯೇ ತನ್ನ ಮನೆಯಿದೆ ಎಂದು ಮಾತ್ರ ಹೇಳುತ್ತಿದ್ದು ಆದರೆ ಯಾವುದೇ ನಗರ, ವಾರ್ಡ, ಓಣಿ, ಗ್ರಾಮದವನೆಂದು ನಿರ್ದಿಷ್ಟವಾಗಿ ಹೇಳುತ್ತಿಲ್ಲ. ಈ ಬಾಲಕನ ಪೋಷಕರ ಪತ್ತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾಲಕರ ಬಾಲಮಂದಿರದ ಅಧೀಕ್ಷಕರು ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಈಗಾಗಲೆ ಮನವಿ ಸಲ್ಲಿಸಿದ್ದಾರೆ.
ಬಾಲಕನ ವಿವರ : ಹೆಸರು, ಬಸವರಾಜ, ತಂದೆ ಮಂಜಪ್ಪ, ತಾಯಿ ಹುಲಿಗೆವ್ವ, ವಯಸ್ಸು-07 ಎತ್ತರ-96 ಸೆಂ.ಮೀ., ತೂಕ-15 ಕೆಜಿ, ಬಣ್ಣ-ಗೋದಿ ಮೈ ಬಣ್ಣ, ಸಾಧಾರಣ ಮೈಕಟ್ಟು. ಬಲ್ಲ ಭಾಷೆ-ಕನ್ನಡ, ಬಾಲಕರ ಬಾಲಮಂದಿರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹೊಸೂರ ರಸ್ತೆ ಬೆಂಗಳೂರು, ರವರ ವರ್ಗಾವಣೆ ಮೂಲಕ ಕೊಪ್ಪಳಕ್ಕೆ ದಾಖಲು. ಪೋಲಿಸ್ ಸಬ್‍ಇನ್ಸಪೆಕ್ಟರ್ ಯಲಹಂಕ ಪೊಲೀಸ್ ಠಾಣೆ ಬೆಂಗಳೂರುರವರು ಕಳೆದ 2016ರ ಏಪ್ರಿಲ್. 07 ರಂದು ರಕ್ಷಣೆ ಮಾಡಿದ್ದಾರೆ. ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ, ನಗರದ ಪೊಲೀಸ್ ಠಾಣೆಗೆ ಅಥವಾ ಕೊಪ್ಪಳದ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಹೀಗಾಗಿ ಲೇಖನಗಳು ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ
ಎಲ್ಲಾ ಲೇಖನಗಳು ಆಗಿದೆ ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ ಲಿಂಕ್ ವಿಳಾಸ https://dekalungi.blogspot.com/2018/06/blog-post_45.html
0 Response to "ಬಾಲಕನ ಪೋಷಕರ ಪತ್ತೆಗೆ ಸಹಕರಿಸಲು ಮನವಿ"
ಕಾಮೆಂಟ್ ಪೋಸ್ಟ್ ಮಾಡಿ