ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ

ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ
ಲಿಂಕ್ : ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ

ಓದಿ


ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ


ಕೊಪ್ಪಳ, ಜೂ. 19 (ಕರ್ನಾಟಕ ವಾರ್ತೆ): ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯಲ್ಲಿ ಸಸ್ಯ ಸಂತೆ ಕಾರ್ಯಕ್ರಮವನ್ನು ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಪ್ರಾರಂಭವಾಗಿದ್ದು, ಒಳ್ಳೆಯ ಗುಣಮಟ್ಟದ ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ವಿವಿಧ ಬಗೆಯ ಹಣ್ಣುಗಳ ಗಿಡಗಳು ಮತ್ತು ಔಷಧೀಯ ಸಸ್ಯಗಳು ಅತಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ.  ಸಾರ್ವಜನಿಕರಿಂದ ಸಸ್ಯ ಸಂತೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ತಿಳಿಸಿದರು.




     ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರದಂದು ಸಾರ್ವಜನಿಕರಿಗೆ ಹೂವು ಹಾಗೂ ಹಣ್ಣಿನ ಗಿಡಗಳನ್ನು ವಿತರಿಸುವ ಮೂಲಕ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

     ತೋಟಗಾರಿಕೆ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಲ್ಲದೇ ಸರ್ವತೋಮುಖ ಅಭಿವೃದಿs್ಧಗಾಗಿ ತೋಟಗಾರಿಕೆ ಅಭಿಯಾನ ಮತ್ತು ಸಸ್ಯಸಂತೆ ಎನ್ನುವ ಕಾರ್ಯಕ್ರಮವನ್ನು ಜೂ.19 ರಿಂದ 28 ರವರೆಗೆ ಹತ್ತು ದಿನಗಳ  ಕಾಲ  ಕೊಪ್ಪಳದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾಗಿದೆ.  ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದೆ ಮಾವು ಮೇಳ, ಜೇನು ಮೇಳ ನಂತಹ ರೈತಪರ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಇವೆಲ್ಲವೂ ಅತ್ಯಂತ ಯಶಸ್ವಿಗೊಂಡಿದ್ದು, ರೈತರು ತೋಟಗಾರಿಕೆ ಬೆಳೆಗಳತ್ತ ಆಕರ್ಷಿತರಾಗುತ್ತಿದ್ದಾರೆ.  ಕಳೆದ ವರ್ಷ ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಸ್ಯ ಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  ಹೀಗಾಗಿ ಈ ವರ್ಷವೂ ಸಸ್ಯ ಸಂತೆಯನ್ನು ಆಯೋಜಿಸಲಾಗಿದೆ.  ಇದರಿಂದ ರೈತರಿಗೂ ಉತ್ತೇಜನ ದೊರೆಯುತ್ತಿದ್ದು, ರೈತರಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕುರಿತು ತಾಂತ್ರಿಕ ಮಾಹಿತಿ ಹಾಗೂ ಸಲಹೆಗಳನ್ನು ಇಲಾಖೆಯು ಸಮರ್ಪಕವಾಗಿ ನೀಡುವ ಮೂಲಕ ತೋಟಗಾರಿಕೆ ಪ್ರದೇಶ ವಿಸ್ತರಣೆಗೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ. ತೋಟಗಾರಿಕೆಯಡಿ ಹೂವು, ಹಣ್ಣು, ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಲು ಕೂಡ ಇಲಾಖೆ ಕ್ರಮ ಕೈಗೊಂಡಿರುವುದು ಉತ್ತಮ ಕಾರ್ಯವಾಗಿದೆ.  ರೈತರು ಸಸ್ಯಸಂತೆಗೆ ಭೇಟಿ ನೀಡಿ, ಅಗತ್ಯ ಮಾಹಿತಿ ಪಡೆಯುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಹೇಳಿದರು.

ಸಸ್ಯಸಂತೆಯ ವೈಶಿಷ್ಟ್ಯ :
********* ತೋಟಗಾರಿಕೆ ಅಭಿಯಾನ ಹಾಗೂ ಸಸ್ಯಸಂತೆ ಕಾರ್ಯಕ್ರಮದಡಿ, ಜಿಲ್ಲೆಯ ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವ ಸಾರ್ವಜನಿಕರಿಗೆ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿಗಳಲ್ಲದೇ ಅನೇಕ ವಿಧದ ಕಸಿ / ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ ಗಿಡಗಳು, ತರಕಾರಿ, ಔಷಧೀಯ ಮತ್ತು ಸಾಂಬಾರು ಸಸ್ಯಗಳನ್ನು ಇಲಾಖೆಯ ವತಿಯಿಂದ ಯೋಗ್ಯ ದರದಲ್ಲಿ ಪೂರೈಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣದಲ್ಲಿ ಜೂ. 19 ರಿಂದ ಹತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.  ಸಸ್ಯ ಸಂತೆಯಲ್ಲಿ  ತೋಟಗಾರಿಕೆಯಡಿ ಬಳಸಲ್ಪಡುವ ವಿವಿಧ ಪರಿಕರಗಳು, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳು ಯೋಗ್ಯ ದರದಲ್ಲಿ  ಇದೇ ಆವರಣದಲ್ಲಿ ಲಭ್ಯವಿದೆ.  ಕೈತೋಟ, ಮನೆಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವುದು ಹಾಗೂ ಎಲ್ಲ ಬಗೆಯ ಗಿಡಗಳನ್ನು ನೆಡಲು ಇದೇ ವೇದಿಕೆಯಲ್ಲಿ ಸಾರ್ವಜನಿಕರಿಗೆ ತಾಂತ್ರಿಕ ನೆರವು ಹಾಗೂ ಮಾಹಿತಿ ನೀಡಲಾಗುತ್ತಿದೆ.

ಸಸ್ಯ ಸಂತೆಯಲ್ಲಿ ಏನೇನು ಲಭ್ಯ :
***********ಸಸ್ಯ ಸಂತೆಯಲ್ಲಿ ಈ ಬಾರಿ ಗಿಡಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ. ತಾರಸಿ ತೋಟದಡಿ ಟೊಮೆಟೊ, ಬದನೆ, ಮೆಣಸಿನಕಾಯಿ, ಗುಲಾಬಿ, ದಾಸವಾಳ, ಅಲಂಕಾರಿಕ ಗಿಡಗಳು, ವರ್ಟಿಕಲ್ ಗಾರ್ಡನ್, ಜೈವಿಕ ಮತ್ತು ಎರೆಹುಳು ಗೊಬ್ಬರ. ನಿರುಪಯುಕ್ತ ಬಾಟಲ್‍ಗಳಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವುದರ ಮಾದರಿ ಇಲ್ಲಿ ಲಭ್ಯವಿದೆ.  ಪ್ರಧಾನ ಹಣ್ಣುಗಳಲ್ಲಿ ಸಪೋಟ, ಮಾವು ಸೇರಿದಂತೆ ವಿವಿಧ ಹಣ್ಣುಗಳು ಮತ್ತು ಅಪ್ರಧಾನ ಹಣ್ಣಿನ ಗಿಡಗಳಲ್ಲಿ ಡ್ರಾಗನ್ ಫ್ರೂಟ್, ನೇರಳೆ, ನೆಲ್ಲಿ, ಸೀತಾಫಲ, ಸೀಡ್‍ಲೆಸ್ ಪೇರಲ (ಸೀಬೆ) ಹಣ್ಣೀನ ಗಿಡಗಳು ಲಭ್ಯವಿದೆ.  ಹೂವಿನ ಗಿಡಗಳಲ್ಲಿ ಸೇವಂತಿಗೆ, ಸುಗಂಧರಾಜ, ಜರ್ಬೆರಾ, ಗುಲಾಬಿ, ಮಲ್ಲಿಗೆ, ಗೋಲ್ಡನ್ ರಾಡ್ ಗಿಡಗಳು. ಸುಗಂಧಿತ/ಔಷಧೀಯ ಗಿಡಗಳಲ್ಲಿ ಶ್ರೀತುಳಸಿ, ಕೃಷ್ಣತುಳಸಿ, ಇನ್ಸುಲಿನ್ ಗಿಡ, ಅಲೊವೆರಾ, ನಿಂಬೆಹುಲ್ಲು ಗಿಡಗಳು ಇವೆ. ತೋಟಗಾರಿಕೆ ಸಸ್ಯಗಳಲ್ಲಿ ಮಾವು, ಸಪೋಟ, ನಿಂಬೆ, ಕರಿಬೇವು, ಪೇರಲ, ಡಾಗ್ ರಿಡ್ಜ್, ನುಗ್ಗೆ, ತೆಂಗಿನ ಗುಣಮಟ್ಟದ ಗಿಡಗಳು ಇಲ್ಲಿ ದೊರೆಯಲಿವೆ.  ಚಿತ್ತಾರದ ಎಲೆಯ ಗಿಡಗಳಲ್ಲಿ ಕ್ರೋಟಾನ್, ಅರೇಲಿಯಾ, ಅಕೇಲಿಫಾ, ಎರಾಂಥಿಯಮ್. ಉದ್ಯಾನವನ ಅಂಚಿನ ಗಿಡಗಳಲ್ಲಿ ಪೊರ್ಚಲ್‍ಕೆ, ಕ್ರೋರೋಪೈಟಮ್, ಹೊನೆಗೊನೆ, ಸಿಂಗೋನಿಯಂ.  ಕ್ಯಾಕ್ಟಸ್/ಸಕುಲೆಂಟ್ ಗಿಡಗಳಲ್ಲಿ ಯುರ್ಫೋರ್ಬಿಯಾ, ಸ್ಯಾನ್ಸಪೇರಿಯಾ, ಅಲಂಕಾರಿಕ ಕತ್ತಾಳೆ.  ಉದ್ಯಾನವನದ ಬಾರ್ಡರ್ ಗಿಡಗಳಲ್ಲಿ ದುರಂತಾ, ಅಕೋಲಿಫಾ, ಹೆಮಿಲಿಯಾ. ಹೂವಿನ ಪೊದೆ ಗಿಡಗಳಲ್ಲಿ ದಾಸವಾಳ, ಕಣಗಿಲೆ, ಇಕ್ಲೋರಾ, ನಂದಿಬಟ್ಟಲು, ಅಲಪೆಂಡಾ, ಹೆಮೇಲಿಯಾ, ಟಕೋಮಾ, ಮುಸಾಂಡಾ ಗಿಡಗಳು ಇಲ್ಲಿ ದೊರೆಯುತ್ತವೆ. 20-25 ವರ್ಷಗಳಷ್ಟು ಹಳೆಯದಾದ ಬೊನ್ಸಾಯಿ ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.  ಮಾವಿನ ಗಿಡಗಳಲ್ಲಿ ಆಪೂಸ್, ರಸಪುರಿ, ಬಂಗನಪಲ್ಲಿ, ನೀಲಂ, ತೋತಾಪುರಿ, ಸಿಂಧೂರಿ, ಮಲಗೋವಾ, ದಶಹರಿ, ಮಲ್ಲಿಕಾ, ಕೇಸರ್ ತಳಿಗಳ ಗಿಡಗಳು ಸಸ್ಯ ಸಂತೆಯಲ್ಲಿ ದೊರೆಯುತ್ತಿವೆ.  ಪರಿಸರಕ್ಕೆ ಪೂರಕವಾಗಿ, ಮನೆಗಳಲ್ಲಿ ಅಲಂಕಾರಕ್ಕೆ ಇಡುವಂತಹ ಆಕ್ಸಿಜನ್ ಪ್ಲಾಂಟ್, ಐವಿ ಸಸ್ಯಗಳನ್ನು ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಲ್ಲಿ ಇಡಲಾಗಿದೆ.

ವಿಶೇಷ ಹೂವಿನ ಗಿಡಗಳು :
********** ಕೊಪ್ಪಳ ಜಿಲ್ಲೆಯ ವಿವಿಧ ಸಸ್ಯಾಗಾರಗಳಲ್ಲದೆ ಬೆಂಗಳೂರಿನ ಲಾಲ್‍ಬಾಗ್‍ನಿಂದಲೂ ವಿಶೇಷ ಹೂವಿನ ಗಿಡಗಳನ್ನು ಜಿಲ್ಲೆಗೆ ತರಿಸಲಾಗಿದ್ದು, ಪ್ರದರ್ಶನಕ್ಕೆ ಮತ್ತು ಮಾರಾಟಕ್ಕೆ ಇಡಲಾಗಿದೆ.  ಹೂವಿನ ಗಿಡಗಳಲ್ಲಿ ಡ್ರೆಸಿನಾ (ಬೇಬಿಡಾಲ್), ಬಟನ್ ರೋಸ್ ( ಮಿನಿಯೇಚರ್), ಬಂಬೂಗ್ರಾಸ್, ಇಗ್ಬೋರಾ, ಹೈಡ್ರಿಂಜಿಯ, ಜಿರಾನಿಯಂ, ಕಾರ್ನೆಶನ್, ಪೆಟ್ರಾಕ್ರೋಟಾನ್, ಗೋಲ್ಡನ್ ಸೈಪ್ರಸ್, 5 ಬಣ್ಣಗಳ ಕಣಗಲ ಹೂವಿನ ಗಿಡಗಳು, 05 ಬಣ್ಣಗಳ ಗುಲಾಬಿ ಗಿಡಗಳು ಲಭ್ಯವಿದೆ.  ಲಿಲಿಯಂ, ಗ್ಲಾಡಿಯೇಲಸ್, ಗ್ಲಾಡಿಯೇಲಿ, ಡಯನ್‍ಥಸ್, ಧಾಲಿಯಾ, ಹೋಲಿಹೋಕ್, ಮೇರಿಗೋಲ್ಡ್, ಸಲ್ವಿಯಾ, ಜಿನಿಯಾಪಿಂಕ್, ಆಸ್ಟರ್ ನಂತಹ ವಿವಿಧ ಅಲಂಕಾರಿಕ, ಬಣ್ಣ ಬಣ್ಣದ ಹೂವುಗಳ ಬೀಜಗಳನ್ನು ಮಾರಾಟಕ್ಕೆ ಇಡಲಾಗಿದೆ.
     ಜಿಲ್ಲೆಯ ವಡ್ಡರಹಟ್ಟಿ, ಮುನಿರಾಬಾದ್, ನೀರಲೂಟಿ, ಬಂಡಿ, ನಿಡಶೇಸಿ ಮತ್ತು ಗಿಣಿಗೇರಾ ಸೇರಿದಂತೆ ಒಟ್ಟು 07 ಕಡೆಗಳಲ್ಲಿ ಇಲಾಖೆಯ ಸಸ್ಯಾಗಾರಗಳಿದ್ದು, ಇಲ್ಲಿ ಸಾರ್ವಜನಿಕರಿಗೆಂದೇ ಸುಮಾರು 2. 5 ಲಕ್ಷ ವಿವಿಧ ಬಗೆಯ ಹೂವು, ಹಣ್ಣಿನ ಗಿಡಗಳು, ಅಲಂಕಾರಿಕ ಗಿಡಗಳನ್ನು ಬೆಳೆಸಿ, ಮಾರಾಟಕ್ಕಾಗಿ ಸಿದ್ಧವಿರಿಸಲಾಗಿದೆ.  ಗಿಡಗಳು ಅತ್ಯಲ್ಪ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ.
       ಕೊಪ್ಪಳದಲ್ಲಿ ಆಯೋಜಿಸಲಾಗಿರುವ ಸಸ್ಯ ಸಂತೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಾರ್ವಜನಿಕರು ಕೈತೋಟಕ್ಕೆ, ಮನೆಗಳ ಬಳಿ ನೆಡಲು ಅಲಂಕಾರಿಕ ಗಿಡಗಳು, ಕರಿಬೇವು ಗಿಡ, ಗುಲಾಬಿ ಹಾಗೂ ಬಗೆಗೆಯ ಹೂವಿನ ಗಿಡಗಳನ್ನು ಖರೀದಿಸಲು ಮುಂದಾಗಿದ್ದು ಕಂಡುಬಂದಿತು.  ರೈತ ಸಮುದಾಯ ವಿವಿಧ ಬಗೆಯ ಹಣ್ಣಿನ ಗಿಡಗಳು ಹಾಗೂ ಇದರ ತಾಂತ್ರಿಕ ವಿವರಗಳನ್ನು ಅಧಿಕಾರಿಗಳಿಂದ ಪಡೆದುಕೊಳ್ಳುವಲ್ಲಿ ನಿರತರಾಗಿದ್ದರು.  ಕೊಪ್ಪಳ ಜಿಲ್ಲೆಯ ರೈತರು, ಸಾರ್ವಜನಿಕರು ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಈ ವಿಶೇಷ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ತೋಟಗಾರಿಕೆ ಇಲಾಖೆ ( ದೂ.ಸಂ: 0859231530), ಹಾರ್ಟಿ ಕ್ಲಿನಿಕ್ (ಮೊ.ಸಂ : 9482672039) ಅಲ್ಲದೇ ಆಯಾ ತಾಲೂಕಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರು ತಿಳಿಸಿದರು.
     ಜಿ.ಪಂ. ಸದಸ್ಯ ಹನುಮಂತಗೌಡ ಪಾಟೀಲ ಚಂಡೂರ, ಗಣ್ಯರಾದ ಯಂಕಣ್ಣ ಯರಾಶಿ, ಹಾರ್ಟಿ ಕ್ಲಿನಿಕ್‍ನ ಸಲಹಾ ತಜ್ಞ ವಾಮನ ಮೂರ್ತಿ, ತೋಟಗಾರಿಕೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್, ಶ್ರೀಧರ್ ಸೇರಿದಂತೆ ತೋಟಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಹೀಗಾಗಿ ಲೇಖನಗಳು ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ ಲಿಂಕ್ ವಿಳಾಸ https://dekalungi.blogspot.com/2018/06/blog-post_44.html

Subscribe to receive free email updates:

0 Response to "ಕೊಪ್ಪಳದಲ್ಲಿ ಸಸ್ಯ ಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಚಾಲನೆ : ಅತ್ಯಲ್ಪ ದರದಲ್ಲಿ ಗುಣಮಟ್ಟದ ಫಲ-ಪುಷ್ಪ, ತರಕಾರಿ ಮತ್ತು ಔಷಧೀಯ ಗಿಡಗಳು ಲಭ್ಯ"

ಕಾಮೆಂಟ್‌‌ ಪೋಸ್ಟ್‌ ಮಾಡಿ