ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ

ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ
ಲಿಂಕ್ : ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ

ಓದಿ


ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ



ಕೊಪ್ಪಳ ಜೂ. 27 (ಕರ್ನಾಟಕ ವಾರ್ತೆ): ನಾಡಪ್ರಭು ಕೆಂಪೇಗೌಡ ಅವರು ದೂರದೃಷ್ಠಿಯ ಅಭಿವೃದ್ಧಿಯ ಹರಿಕಾರರು ಎಂದು ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪ್ರಭುರಾಜ ನಾಯಕ ಅವರು ಹೇಳಿದರು.

      ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಬುಧವಾರದಂದು ಹಮ್ಮಿಕೊಳ್ಳಲಾಗಿದ್ದ, ನಾಡಪ್ರಭು ಕೆಂಪೇಗೌಡರ ಜಂಯಂತಿ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
         ನಾಡು ಅಂದರೆ ಪ್ರಾಂತ್ಯ, ಪ್ರಭು ಅಂತರೆ ರಾಜ.  ಪ್ರಾಂತ್ಯದ ರಾಜರಾಗಿದ್ದರಿಂದ ಕೆಂಪೇಗೌಡರಿಗೆ ನಾಡಪ್ರಭು ಎಂದು ಕರೆಯಲಾಗುತ್ತದೆ.  ಕ್ರಿ.ಶ ಸುಮಾರು 1510 ರಲ್ಲಿ ಕೆಂಪನಂಜೇಗೌಡ ಹಾಗೂ ಲಿಂಗಮಾಂಬೆ ಎಂಬ ದಂಪತಿಗಳಿಗೆ ಕೆಂಪೇಗೌಡ ಜನಿಸಿದರು.  ದಕ್ಷಿಣ ಭಾರತದ ಸುಪ್ರಸಿದ್ದ ವಿಜಯನಗರ ಸಾಮಾಜ್ಯದ ಮಹಾನವಮಿ ಹಬ್ಬದಲ್ಲಿ ತಂದೆಯೊಂದಿಗೆ ಭಾಗವಹಿಸಿ, ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ಬೆಂಗಳೂರನ್ನು ಅಭಿವೃದ್ಧಿ ಮಾಡುವ ದೂರದೃಷ್ಠಿಯನ್ನು ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದರಲ್ಲದೇ 64 ಪೇಟೆಗಳನ್ನು ನಿರ್ಮಿಸಿದ್ದರು.  ವೃತ್ತಿಯಾಧಾರಿತ ಪೇಟೆಗಳು ಮತ್ತು ಜಾತಿ ಅಥವಾ ವ್ಯಕ್ತಿಯಾಧಾರಿತ ಪೇಟೆಗಳು ಎಂಬ ಎರಡು ಭಾಗಗಳಾಗಿ ಪೇಟೆಗಳನ್ನು ನಿರ್ಮಿಸಿದ್ದರು.  ಕಬ್ಬಾರ ಪೇಟೆ, ಕುರುಬ ಪೇಟೆ, ಅಕ್ಕಿ ಪೇಟೆ, ರಾಗಿ ಪೇಟೆ ಇತ್ಯಾದಿ ಪೇಟೆಗಳು ಇಂದಿಗೂ ಪ್ರಚಲಿತವಾಗಿವೆ.  ಕೋಟೆ ನಿರ್ಮಿಸಿ ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಆನೆಕಲ್ ಮಹಾದ್ವಾರಗಳನ್ನು ನಿರ್ಮಾಣ ಮಾಡಿದ್ದರು.  ಹಲವಾರು ಕೆರೆಗಳ ನಿರ್ಮಾಣ, ದೇವಾಲಯಗಳ ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳು ಇಂದು ಬಸ್‍ನಿಲ್ದಾಣ (ಮೆಜೆಸ್ಟಿಕ್), ಕ್ರೀಡಾಂಗಣ ಇತ್ಯಾದಿ ಸಾರ್ವಜನಿಕ ಸ್ಥಳಗಳಾಗಿವೆ.  ಅಣ್ಣಮ್ಮ ದೇವಾಲಯ, ಗಣೇಶ ಹಾಗೂ ಆಂಜನೇಯ ದೇವಾಲಯಗಳನ್ನು ಬೆಂಗಳೂರಿನಲ್ಲಿ ಇಂದಿಗೂ ಕಾಣಬಹುದಾಗಿದೆ. 
ಕೆಂಪೇಗೌಡ ರವರು ಒಬ್ಬ ಉತ್ತಮ ಆಡಳಿತಗಾರರಾಗಿದ್ದು, ತೆರಿಗೆ ಸಂಗ್ರಹಕ್ಕೆ ಎಂಟು ಅಧಿಕಾರಿಗಳನ್ನು ನೇಮಿಸಿದ್ದರು.  500 ವರ್ಷಗಳ ಹಿಂದೆಯೇ ಉದ್ಯಮ ಮೇಳವನ್ನು ಪ್ರಾರಂಭಿಸಿದ್ದರು.  ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿದ್ದು, ರಸ್ತೆಗಳ ನಿರ್ಮಾಣ ಮತ್ತು ಅವುಗಳ ಅಭಿವೃದ್ಧಿ ಮಾಡುವಂತಹ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.  ಕೆಂಪೇಗೌಡರು ಒಬ್ಬ ಜಾತ್ಯತೀತ ಅರಸರಾಗಿದ್ದು, ಅಂದಿನ ಸಮಾಜದ ಎಲ್ಲ ಸಮುದಾಯಗಳ ಜನರಿಗೆ ಆರ್ಥಿಕ ನ್ಯಾಯವನ್ನು ಒದಗಿಸಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ.  ರಸ್ತೆ ಪಕ್ಕ ಗಿಡಗಳನ್ನು ನಡುವುದು, ಕುಡಿಯುವ ನೀರಿಗಾಗಿ ಕಲ್ಯಾಣಗಳನ್ನು (ದೊಡ್ಡ ನೀರಿನ ಅರವಟಿಕೆಗಳು) ನಿರ್ಮಾಣ, ಇನ್ನೂ ಹಲವಾರು ಕಾಯಕಗಳನ್ನು ಮಾಡಿ, ಬೆಂಗಳೂರು ನಿರ್ಮಾತೃ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.  ಇಂದಿನ ದಿನಮಾನಗಳಲ್ಲಿ ಬೆಂಗಳೂರು ಒಂದು ಬೃಹತ್ ಉದ್ಯಮಗಳ ಮತ್ತು ಉದ್ಯಾನಗಳ ನಗರವಾಗಿದ್ದು, ಇದಕ್ಕೆ ಕೆಂಪೇಗೌಡರು ಮುಖ್ಯ ಕಾರಣಿಕರ್ತರಾಗಿದ್ದಾರೆ ಎಂದು ಡಾ. ಪ್ರಭುರಾಜ ನಾಯಕ ಅವರು ಹೇಳಿದರು.
          ಸ್ವಾತಂತ್ರ್ಯ ಯೋಧರಾದ ಸುಮಂತರಾವ್ ಪಟವಾರಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.  ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಯು. ನಾಗರಾಜ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಸಂಖ್ಯಾ ಸಂಗ್ರಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ, ಗಣ್ಯರಾದ ಶಿವಾನಂದ ಹೊದ್ಲೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 
 


ಹೀಗಾಗಿ ಲೇಖನಗಳು ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ

ಎಲ್ಲಾ ಲೇಖನಗಳು ಆಗಿದೆ ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ ಲಿಂಕ್ ವಿಳಾಸ https://dekalungi.blogspot.com/2018/06/blog-post_32.html

Subscribe to receive free email updates:

0 Response to "ಕೆಂಪೇಗೌಡರು ದೂರದೃಷ್ಠಿ ಅಭಿವೃದ್ಧಿಯ ಹರಿಕಾರರು : ಡಾ. ಪ್ರಭುರಾಜ ನಾಯಕ"

ಕಾಮೆಂಟ್‌‌ ಪೋಸ್ಟ್‌ ಮಾಡಿ