news and photo Date: 31--05--2018

news and photo Date: 31--05--2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು news and photo Date: 31--05--2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : news and photo Date: 31--05--2018
ಲಿಂಕ್ : news and photo Date: 31--05--2018

ಓದಿ


news and photo Date: 31--05--2018

12 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ: ವೇಳಾಪಟ್ಟಿ ಪ್ರಕಟ
*****************************************************************
ಕಲಬುರಗಿ,ಮೇ.31.(ಕ.ವಾ.)-ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಇತ್ಯರ್ಥವಾಗಿರುವ ಕಲಬುರಗಿ ಜಿಲ್ಲೆಯ 12 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಮೂಲಕ ಸ್ಥಾನಗಳ ಭರ್ತಿಗಾಗಿ ಕರ್ನಾಟಕ ಪಂಚಾಯತ್‍ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದನ್ವಯ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಬುಧವಾರ ಚುನಾವಣಾ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಜೂನ್ 2 ಕೊನೆಯ ದಿನವಾಗಿದ್ದು, ಜೂನ್ 4 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 6 ಅಂತಿಮ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ಮತದಾನವು ಜೂನ್ 14 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನದ ಅವಶ್ಯವಿದ್ದಲ್ಲಿ ಮತದಾನವನ್ನು ಜೂನ್ 15ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಜೂನ್ 17ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವಿವರ ಇಂತಿದೆ. ಕಲಬುರಗಿ ತಾಲೂಕು: ಮರಗುತ್ತಿ ಗ್ರಾಮ ಪಂಚಾಯಿತಿಯ 18 ಸದಸ್ಯ ಸ್ಥಾನ. ಆಳಂದ ತಾಲೂಕು: ದಣ್ಣೂರ ಗ್ರಾಮ ಪಂಚಾಯಿತಿಯ 12 ಸದಸ್ಯ ಸ್ಥಾನ, ನಿರಗುಡಿ ಗ್ರಾಮ ಪಂಚಾಯಿತಿಯ 23 ಸ್ಥಾನ, ಭೂಸನೂರ ಗ್ರಾಮ ಪಂಚಾಯಿತಿಯ 15 ಸ್ಥಾನ, ಹಿತ್ತಲಶಿರೂರ ಗ್ರಾಮ ಪಂಚಾಯಿತಿಯ 17 ಸ್ಥಾನ, ಧುತ್ತರಗಾಂವ ಗ್ರಾಮ ಪಂಚಾಯಿತಿಯ 21 ಸ್ಥಾನ. ಚಿತ್ತಾಪುರ ತಾಲೂಕು: ಶಳ್ಳಗಿ ಗ್ರಾಮ ಪಂಚಾಯಿತಿಯ 9 ಸ್ಥಾನ, ಕೊಲ್ಲೂರ ಗ್ರಾಮ ಪಂಚಾಯಿತಿಯ 15 ಸ್ಥಾನ, ರಾಂಪೂರಹಳ್ಳಿಯ ಗ್ರಾಮ ಪಂಚಾಯಿತಿಯ 11 ಸ್ಥಾನ. ಜೇವರ್ಗಿ ತಾಲೂಕು: ಮದರಿ ಗ್ರಾಮ ಪಂಚಾಯಿತಿಯ 14 ಸ್ಥಾನ, ಕರಕಿಹಳ್ಳಿ ಗ್ರಾಮ ಪಂಚಾಯಿತಿಯ 17 ಸ್ಥಾನ, ರಂಜಣಗಿ ಗ್ರಾಮ ಪಂಚಾಯಿತಿಯ 21 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಲ್ಲೂರ ಹಾಗೂ ರಾಂಪೂರಹಳ್ಳಿ ಗ್ರಾಮ ಪಂಚಾಯಿತಿಗಳು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಈ ಅಧಿಸೂಚನೆ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಉಪಚುನಾವಣೆ: ವೇಳಾಪಟ್ಟಿ ಪ್ರಕಟ
*************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯ ಕಲಬುರಗಿ, ಆಳಂದ, ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಯ ಸದಸ್ಯರ ಹುದ್ದೆಯ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ಕರ್ನಾಟಕ ಪಂಚಾಯತ್‍ರಾಜ್ (ಚುನಾವಣೆಯನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದನ್ವಯ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಜೂನ್ 2ರಂದು ಕೊನೆಯ ದಿನವಾಗಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಜೂನ್ 6ರಂದು ಅಂತಿಮ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ಮತದಾನವು ಜೂನ್ 14 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರುಮತದಾನದ ಅವಶ್ಯವಿದ್ದಲ್ಲಿ ಮತದಾನವನ್ನು ಜೂನ್ 15ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು ಜೂನ್ 17ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ತಾಲೂಕಿನ ಹೆಸರು, ಗ್ರಾಮ ಪಂಚಾಯಿತಿ ಹೆಸರು, ತೆರವಾಗಿರುವ ಕ್ಷೇತ್ರದ ಹೆಸರು, ಸದಸ್ಯ ಸ್ಥಾನಗಳ ಸಂಖ್ಯೆ ವಿವರ ಇಂತಿದೆ. ಕಲಬುರಗಿ ತಾಲೂಕು: ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿಯ ಶ್ರೀನಿವಾಸ ಸರಡಗಿ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಸಣ್ಣೂರ ಗ್ರಾಮ ಪಂಚಾಯಿತಿಯ ಪಾಳಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ತಾಜಸುಲ್ತಾನಪುರ ಗ್ರಾಮ ಪಂಚಾಯಿತಿಯ ತಾಜಸುಲ್ತಾನಪುರ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಬಸವಪಟ್ಟಣ ಗ್ರಾಮ ಪಂಚಾಯಿತಿಯ ಜೋಗುರ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಮಹಾಗಾಂವ ಗ್ರಾಮ ಪಂಚಾಯಿತಿಯ ಮಹಾಗಾಂವ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಆಳಂದ ತಾಲೂಕು: ರುದ್ರವಾಡಿ ಗ್ರಾಮ ಪಂಚಾಯಿತಿಯ ಬಂಗರಗಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಹಾಗೂ ಮಾದನಹಿಪ್ಪರಗಾ ಗ್ರಾಮ ಪಂಚಾಯಿತಿಯ ಮಾದನಹಿಪ್ಪರಗಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ. ಸೇಡಂ ತಾಲೂಕು: ನೀಲಹಳ್ಳಿ ಗ್ರಾಮ ಪಂಚಾಯಿತಿಯ ಅರೆಬೊಮ್ಮನಳ್ಳಿ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ ಹಾಗೂ ಕೋಡ್ಲಾ ಗ್ರಾಮ ಪಂಚಾಯಿತಿಯ ಕೋಡ್ಲಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ. ಚಿತ್ತಾಪುರ ತಾಲೂಕು: ರಾವೂರ ಗ್ರಾಮ ಪಂಚಾಯಿತಿಯ ರಾವೂರ ಕ್ಷೇತ್ರದ 1 ಸ್ಥಾನಕ್ಕೆ, ಹಲಕಟ್ಟಾ ಗ್ರಾಮ ಪಂಚಾಯಿತಿಯ ಹಲಕಟ್ಟಾ ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ, ಆಲ್ಲೂರ(ಬಿ) ಗ್ರಾಮ ಪಂಚಾಯಿತಿಯ ಆಲೂರ (ಕೆ) ಕ್ಷೇತ್ರದ 1 ಸದಸ್ಯ ಸ್ಥಾನಕ್ಕೆ. ಚಿಂಚೋಳಿ ತಾಲೂಕು: ವೆಂಕಟಾಪುರ ಗ್ರಾಮ ಪಂಚಾಯಿತಿಯ ವೆಂಕಟಾಪುರ ಕ್ಷೇತ್ರದ 1 ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ಸಿ.ಬಿ.ಎಸ್.ಸಿ. ಪರೀಕ್ಷೆ: ಕಲಬುರಗಿ ಕೇಂದ್ರೀಯ ವಿದ್ಯಾಲಯಕ್ಕೆ ಶೇ. 96.5 ರಷ್ಟು
ಫಲಿತಾಂಶ
********************************************************************
ಕಲಬುರಗಿ,ಮೇ.31.(ಕ.ವಾ.)-2018ರ ಮಾರ್ಚ್/ಏಪ್ರಿಲ್‍ನಲ್ಲಿ ನಡೆದ ಸಿ.ಬಿ.ಎಸ್.ಸಿ. (10ನೇ ತರಗತಿ) ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕಲಬುರಗಿ ಕೇಂದ್ರೀಯ ವಿದ್ಯಾಲಯದ 86 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 55 ವಿದ್ಯಾರ್ಥಿಗಳು ಶೇ. 60 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಒಟ್ಟಾರೆ ಶಾಲೆಗೆ ಶೇ. 96.5 ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲ ಡಾ. ಕೆ. ಅಮರನಾಥ ತಿಳಿಸಿದ್ದಾರೆ.
ಕಲಬುರಗಿ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಶ್ರೇಯಾ ಸಕರಿ 485 (ಶೇ 97ರಷ್ಟು) ಅಂಕಗಳನ್ನು ಪಡೆದಿದ್ದು, ಕಲಬುರಗಿ ಜಿಲ್ಲೆಗೆ ಟಾಪರ್‍ಆಗಿ ಹೊರಹೊಮ್ಮಿದ್ದಾಳೆ. ಅದೇ ರೀತಿ ಅನೀಲ ಶೇ. 94.6ರಷ್ಟು , ಖುಶಿ ರಾಠೋಡ-ಶೇ. 94.2, ಅರ್ಚಿತ ಶೇ. 93.6, ರೋಹನ-ಶೇ. 93.2, ರೋಹನ-ಶೇ. 92.8, ಭಾಗ್ಯಶ್ರೀ ಶೇ. 91.8, ಸ್ನೇಹಾ ಸಿಂಗ್-ಶೇ. 91.4 ರಷ್ಟು ಅಂಕಗಳನ್ನು ಪಡೆದಿದ್ದು ಅಗ್ರರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
ಕಲಬುರಗಿ ಕೇಂದ್ರೀಯ ವಿದ್ಯಾಲಯದಿಂದ ಒಟ್ಟು 86 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 8 ವಿದ್ಯಾರ್ಥಿಗಳು ಶೇ. 90 ಗಿಂತ ಹೆಚ್ಚು, 17 ವಿದ್ಯಾರ್ಥಿಗಳು ಶೇ. 80 ಗಿಂತ ಹೆಚ್ಚು, 12 ವಿದ್ಯಾರ್ಥಿಗಳು ಶೇ. 70ಗಿಂತ ಹೆಚ್ಚು ಹಾಗೂ 18 ವಿದ್ಯಾರ್ಥಿಗಳು ಶೇ. 60ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಕೇಂದ್ರೀಯ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗಾಗಿ ಕೇಂದ್ರೀಯ ವಿದ್ಯಾಲಯದ ವಿಎಂಸಿ ಚೇರಮನ್, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.
ಜುಲೈ 26-27ರಂದು ಕುಂದುಕೊರತೆ ನಿವಾರಣೆ ಸಭೆ
*********************************************
ಕಲಬುರಗಿ,ಮೇ.31.(ಕ.ವಾ.)-ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದವರ ದೂರುಗಳ ಕುರಿತು 2018ರ ಜುಲೈ 26 ಹಾಗೂ 27ರಂದು ಬೆಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣಾ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷ್ಯದಿಂದ ದೌರ್ಜನ್ಯಕ್ಕೊಳಗಾದವರ ದೂರುಗಳನ್ನು ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಇ-ಮೇಲ್ ಮೂಲಕ ಜೂನ್ 10ರೊಳಗೆ ಸಲ್ಲಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 4ರಿಂದ
**************
ಸಾರಥಿ-4 ಸಾಫ್ಟವೇರ್‍ನಲ್ಲಿ ಎಲ್‍ಎಲ್-ಡಿಎಲ್‍ನ್ನು ಪಡೆಯುವುದು ಕಡ್ಡಾಯ
**************************************************************
ಕಲಬುರಗಿ,ಮೇ.31.(ಕ.ವಾ.)-ಹೊಸದಾಗಿ ಎಲ್‍ಎಲ್ (ಕಲಿಕಾ ಚಾಲನಾ ಅನುಜ್ಞಾ ಪತ್ರ) ಮತ್ತು ಡಿಎಲ್ (ಪಕ್ಕಾ ಚಲನಾ ಅನುಜ್ಞಾ ಪತ್ರ)ವನ್ನು 2018 ಜೂನ್ 4 ರಿಂದ ಸಾರಥಿ-4 ಸಾಫ್ಟವೇರ್‍ನಲ್ಲಿಯೇ ಪಡೆಯುವುದು ಕಡ್ಡಾಯವಾಗಿದೆ ಎಂದು ಕಲಬುರಗಿ ಹಿರಿಯ ಪ್ರಾದೇಶಿಕ ಸಾರಿಗೆ ಕಚೇರಿಯ ಉಪ ಸಾರಿಗೆ ಆಯುಕ್ತ ಎಸ್.ಬಿ. ಸುರೇಂದ್ರಪ್ಪ ಅವರು ತಿಳಿಸಿದ್ದಾರೆ.
ಸಾರಿಗೆ ಇಲಾಖೆಯ ಹಂತ ಹಂತಾಗಿ ಗಣಕೀಕರಣಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ 2018ರ ಜೂನ್ 4 ರಿಂದ ಸಾರಥಿ-1 ಸಾಫ್ಟವೇರ್‍ನಿಂದ ಸಾರಥಿ-4 ಸಾಫ್ಟವೇರ್‍ಗೆ ಉನ್ನತೀಕರಣಗೊಳ್ಳುತ್ತಿದೆ. ಸಾರಥಿ-4 ಸಾಫ್ಟವೇರ್ ಅನುಷ್ಠಾನಗೊಳಿಸಿದ್ದಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಗಣಕೀಕರಣ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ ಮತ್ತು ಸ್ಥಳದಲ್ಲಿಯೇ ಫಲಿತಾಂಶ ಪಡೆಯಬಹುದಾಗಿದೆ. ಈಗಾಗಲೇ ಸಾರಥಿ-1 ಸಾಫ್ಟವೇರ್‍ನಲ್ಲಿ ಎಲ್‍ಎಲ್ ಪಡೆದವರು 2018ರ ಜೂನ್ 4ರೊಳಗಾಗಿ ಡಿಎಲ್‍ನ್ನು ಸಾರಥಿ-1 ಸಾಫ್ಟವೇರ್‍ನಲ್ಲಿಯೇ ಪಡೆದುಕೊಳ್ಳಬೇಕು. ಈ ಕುರಿತು ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.
2018ರ ಜೂನ್ 25 ರಿಂದ ಸಾರಥಿ-4 ಸಾಫ್ಟವೇರ್‍ನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಹೊಸ ಡಿಎಲ್ ಮತ್ತು ಎಲ್‍ಎಲ್ ಒಳಗೊಂಡ ಇತರೆ ಪ್ರಕ್ರಿಯೆಗಳಾದ ಚಲನಾ ಅನುಜ್ಞಾ ಪತ್ರದ ನವೀಕರಣ ಮತ್ತು ಹೊಸ ವರ್ಗ ಸೇರ್ಪಡುವಿಕೆ ಮತ್ತು ಡಿಎಲ್‍ಗೆ ಸಂಬಂಧಿಸಿದ ಇನ್ನಿತರ ಎಲ್ಲ ಪ್ರಕ್ರಿಯೆಗಳನ್ನು ಸಹ ಸಾರಥಿ-4ನಲ್ಲಿ ಪಡೆಯಬೇಕಾಗಿರುವುದರಿಂದ ಸಾರಥಿ-1ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಸಾರಿಗೆ ಇಲಾಖೆಯು ಗಣಕೀಕರಣಗೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಅವರು ತಿಳಿಸಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹ: ಗಣಕೀಕೃತ ಕಾನೂನು ಸಲಹಾ ಕೇಂದ್ರ ಉದ್ಘಾಟನೆ
*************************************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಗಣಕೀಕರಣಗೊಳಿಸಲಾದ ಕಾನೂನು ಸಲಹಾ ಕೇಂದ್ರವನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಪಿ.ಟಿ. ಕಟ್ಟಿಮನಿ ಅವರು ಬುಧವಾರ ಉದ್ಘಾಟಿಸಿ ಮಾತನಾಡಿ ಈ ಗಣಕೀಕೃತ ಸಹಾಯವಾಣಿ ಕೇಂದ್ರದ ಉದ್ದೇಶ ಕುರಿತು ವಿಚಾರಾಧೀನ ಖೈದಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್. ಮಾಣಿಕ್ಯ ಮಾತನಾಡಿ, ಈ ಗಣಕೀಕರಣ ಸಹಾಯವಾಣಿ ಕೇಂದ್ರದಿಂದ ಅಪಾದಿತರು ತಮ್ಮ ಪ್ರಕರಣಗಳ ಮುಂದಿನ ದಿನಾಂಕವನ್ನು ತಿಳಿದುಕೊಳ್ಳಲು ಉಪಯೋಗವಾಗುತ್ತದೆ. ಇಲ್ಲದೇ ಕಾನೂನು ಸಹಾಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ಯಾನಲ್ ವಕೀಲ ಎಸ್.ಎಸ್. ವಾಗೆಯವರು ತಾವು ನಿಭಾಯಿಸುವ ಪ್ರಕ್ರಿಯೆಗಳನ್ನು ಈ ಗಣಕಯಂತ್ರದಲ್ಲಿ ದಾಖಲಿಸುವಂತೆ ಸೂಚಿಸಿದರು.
ಅಲ್ಲದೇ ಸಜಾ ಬಂದಿಗಳಲ್ಲಿ ಗುರುತಿಸಲ್ಪಟ್ಟಿರುವ 4 ಜನ ಅರೆಕಾಲಿಕೆ ಸ್ವಯಂ ಸೇವಕರುಗಳಿಗೆ ಮತ್ತು ಪ್ಯಾನಲ್ ವಕೀಲರಿಗೆ ಈ ಗಣಕೀಕರಣದ ಕುರಿತು ಮಾಹಿತಿ ನೀಡಿ ಇದರ ಉಪಯುಕ್ತತೆಯನ್ನು ಪಡೆಯಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ವಿ.ಮಲ್ಲಾಪುರೆ ಮಾತನಾಡಿದರು.
ಕೇಂದ್ರ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 80 ಜನ ವಿಚಾರಣಾಧೀನ ಖೈದಿಗಳು ಮತ್ತು ಸಜಾ ಬಂದಿಗಳು ಉಪಸ್ಥಿತರಿದ್ದರು.
ಐ.ಟಿ.ಐ. ಪ್ರವೇಶಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ
******************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯ 12 ಸರ್ಕಾರಿ ಮತ್ತು 9 ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2018-19ನೇ ಶೈಕ್ಷಣಿಕ ಸಾಲಿಗೆ ಐಟಿಐ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಪ್ರಾಚಾರ್ಯರು ತಿಳಿಸಿದ್ದಾರೆ.
ಇಚ್ಛೆಯುಳ್ಳ ಅಭ್ಯರ್ಥಿಗಳು emಠಿಣಡಿg.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮೇರಿಟ್-ಕಂ-ರಿಸರ್ವವೇಶನ್ ಆಧಾರದ ಮೇಲೆ ಪ್ರವೇಶ ನೀಡಲಾಗುತ್ತಿರುವುದರಿಂದ ಎಲ್ಲ ಮಾಹಿತಿಗಳನ್ನು ತಪ್ಪದೇ ಭರ್ತಿ ಮಾಡಿ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ದಾಖಲಿಸಿ ಕಾಲಕಾಲಕ್ಕೆ ಬರುವ ಸಂದೇಶಗಳನ್ನು ನೋಡಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ತಮಗೆ ಬಂದಿರುವ ಸಂದೇಶ ಪ್ರಕಾರದ ತಮ್ಮ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ತೆರಳಿ ತಮ್ಮ ದಾಖಲಾತಿಗಳನ್ನು ಹಾಜರುಪಡಿಸಬೇಕು. ದಾಖಲಾತಿ ಪರಿಶೀಲನೆ ಮಾಡಿಕೊಳ್ಳದೇ ಇದ್ದಲ್ಲಿ ಪ್ರವೇಶ ಪರಿಗಣಿಸಲಾಗುವುದಿಲ್ಲ.
ಆಯಾ ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಲಭ್ಯವಿರುವ ಮತ್ತು ಡಿಜಿಟಿ ನವದೆಹಲಿ ಇವರಿಂದ ಸಂಯೋಜನೆ ಪಡೆದ (ಎನ್.ಸಿ.ವಿ.ಟಿ.) ಹಾಗೂ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ತಿನಿಂದ (ಎಸ್.ಸಿ.ವಿ.ಟಿ.) ಸಂಯೋಜನೆ ಪಡೆದ ವೃತ್ತಿ ಮತ್ತು ಘಟಕಗಳಿಗೆ ಪ್ರವೇಶ ನೀಡಲಾಗುವುದು. ಆಯಾ ವೃತ್ತಿಗಳಿಗೆ ಪ್ರವೇಶ ಬಯಸಿದ್ದಲ್ಲಿ ಜೂನ್ 8 ರೊಳಗಾಗಿ ಯಾವುದೇ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅಥವಾ ಇಂಟರನೆಟ್ ಸೆಂಟರ್‍ಗಳಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸಲು ಕೋರಲಾಗಿದೆ.
ಆಳಂದ: ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
*************************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣಾ ಗ್ರಾಮದಲ್ಲಿ ಮಂಜೂರಾಗಿರುವ ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ 2018-19ನೇ ಸಾಲಿಗೆ ಆಂಗ್ಲ, ಕನ್ನಡ, ಉರ್ದು ಮತ್ತು ಗಣಿತ ವಿಷಯಗಳಿಗೆ ತಾತ್ಕಾಲಿಕ ಅತಿಥಿ ಶಿಕ್ಷಕರ ಸೇವೆ ಪಡೆಯಲು ಆಸಕ್ತ ನಿವೃತ್ತಿ ಶಿಕ್ಷಕ/ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಳಂದ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಬಿ.ಇಡಿ ಮತ್ತು ಬಿ.ಎಸ್.ಸಿ. ಬಿ.ಇಡಿ. ಪಾಸಾಗಿರಬೇಕು. ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಮಾದರಿ ಶಾಲೆಯಿಂದ ಪಡೆದು ಭರ್ತಿ ಮಾಡಿ ಜೂನ್ 5ರೊಳಗಾಗಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಆಳಂದ ರಜವಿ ರಸ್ತೆಯಲ್ಲಿರುವ ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯವನ್ನು ಹಾಗೂ ಮೊಬೈಲ್ ಸಂಖ್ಯೆ 9449785047. ನರೋಣಾ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆ ಪ್ರಾಂಶುಪಾಲರನ್ನು ಮೊಬೈಲ್ ಸಂಖ್ಯೆ 9986474605ನ್ನು ಸಂಪರ್ಕಿಸಲು ಕೋರಲಾಗಿದೆ.
ಅಫಜಲಪುರ: ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
***************************************************
ಕಲಬುರಗಿ,ಮೇ.31.(ಕ.ವಾ.)-ಅಫಜಲಪುರ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಬಾಲಕ, ಬಾಲಕಿಯರ ವಸತಿ ನಿಲಯ ಹಾಗೂ ಅನುದಾನಿತ ವಸತಿ ನಿಲಯಗಳ ಪ್ರವೇಶಕ್ಕಾಗಿ 5 ರಿಂದ 10ನೇ ರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಫಜಲಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ವಸತಿ ನಿಲಯಗಳ ವಿವರ ಇಂತಿದೆ. ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಅಫಜಲಪುರ ಟೌನ್, ಸಾಗನೂರ, ಬಂದರವಾಡ, ಚೌಡಾಪುರ, ಬೈರಾಮಡಗಿ, ದೇಸಾಯಿ ಕಲ್ಲೂರ, ಘತ್ತರಗಾ, ಮಾಶ್ಯಾಳ, ಕರಜಗಿ, ಮಣ್ಣೂರ, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಅಪಜಲಪುರ ಟೌನ್ ಹಾಗೂ ಸರ್ಕಾರಿ ಆಶ್ರಮ ಶಾಲೆ ಅರ್ಜುಣಗಿ ತಾಂಡಾ. ಅನುದಾನಿತ ವಸತಿ ನಿಲಯಗಳ ವಿವರ: ಲಂಮಾಣಿ ವಿದ್ಯಾರ್ಥಿ ನಿಲಯ ಅಫಜಲಪುರ, ಡಾ. ಬಾಬುರಾಜೇಂದ್ರ ಪ್ರಸಾದ ಮೆಟ್ರಿಕ್ ಪೂರ್ವ ವಸತಿ ನಿಲಯ ಹಿರೇ ಜೇವರ್ಗಿ ಹಾಗೂ ಶ್ರೀ ಡಾಕುಸಿಂಗ್ ಮಹಾರಾಜ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಗೊಬ್ಬೂರ.
ಆನ್‍ಲೈನ್‍ನಲ್ಲಿ ಭರ್ತಿ ಮಾಡಿದ ಅರ್ಜಿ ಪ್ರತಿಯನ್ನು ಅಫಜಲಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08470-282098ನ್ನು ಸಂಪರ್ಕಿಸಲು ಕೋರಲಾಗಿದೆ.
ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪ್ರಸ್ತಾವನೆ ಆಹ್ವಾನ
****************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎಡ್/ಬಿ.ಪಿ.ಎಡ್ ತರಬೇತಿ ಹೊಂದಿದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗೆ ಬಡ್ತಿಗಾಗಿ 2017ನೇ ಬ್ಲಾಕ್ ಅವಧಿಗೆ ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ 2017ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಬಿ.ಇಡಿ/ಬಿ.ಪಿ.ಇಡಿ ತರಬೇತಿ ಹೊಂದಿದ ಶಿಕ್ಷಕರು ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿಮಾಡಿ ಪ್ರತಿಯೊಂದು ವಿವರಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಲಗತ್ತಿಸಿ ಆಯಾ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಜೂನ್ 14ರೊಳಗಾಗಿ ಸಲ್ಲಿಸಬೇಕೆಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ಧಾರೆ.
ಹೊಸದಾಗಿ ಪ್ರಸ್ತಾವನೆ ಸಲ್ಲಿಸಬಯಸುವ ಶಿಕ್ಷಕರಿಗೆ ಪ್ರಸ್ತಾವನೆಯನ್ನು ನಮೂನೆಯನ್ನು ಹಾಗೂ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂನ್ 1ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
****************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ತಾಲೂಕುಗಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ದಿನಾಂಕಗಳಂದು ನಡೆಸಲಾಗುವುದು ಎಂದು ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ. ಶಿಬಿರದ ದಿನಾಂಕ, ಸ್ಥಳ ಮತ್ತು ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಜೂನ್ 1ರಂದು: ಅಫಜಲಪುರ ತಾಲೂಕಿನ ಬಡದಾಳ ಪ್ರಾಥಮಿಕ ಆರೋಗ್ಯ ಕೇಂದ್ರ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ|| ಚಂದ್ರಶೇಖರ ಹುಡೇದ. ಜೂನ್ 5 ರಂದು: ಆಳಂದ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ|| ಚಂದ್ರಶೇಖರ ಹುಡೇದ. ಜೂನ್ 6 ರಂದು: ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರ-ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ|| ಮುನಾವರ ಹುಸೇನ್. ಜೂನ್ 8 ರಂದು: ಅಫಜಲಪುರ ತಾಲೂಕು ಆಸ್ಪತ್ರೆ- ಡಿ.ಎಂ.ಹೆಚ್.ಪಿ. ತಂಡ. ಜೂನ್ 12ರಂದು: ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ|| ವಿಜಯೇಂದ್ರ. ಜೂನ್ 13ರಂದು: ಅವರಾದ ಪ್ರಾಥಮಿಕ ಆರೋಗ್ಯ ಕೇಂದ್ರ್ರ-ಕೆ.ಬಿ.ಎನ್. ಆಸ್ಪತ್ರೆಯ ಮನೋವೈದ್ಯ ಡಾ|| ಅಮೂಲ ಪತಂಗೆ. ಜೂನ್ 15ರಂದು: ಜೇವರ್ಗಿ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೃದ್ಯ ಆಲೋಕ ಘನಾತೆ.ಜೂನ್ 19ರಂದು: ಚಿತ್ತಾಪುರ ತಾಲೂಕು ಆಸ್ಪತ್ರೆ-ಮನೋವೈದ್ಯ ಡಾ|| ಎಂ. ಇರ್ಫಾನ್.
ಜೂನ್ 20ರಂದು: ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಸರ್ಕಾರಿ ಆರೋಗ್ಯ ಕೇಂದ್ರ್ರ-ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ|| ರಾಹುಲ ಮಂದಕನಳ್ಳಿ. ಜೂನ್ 22ರಂದು: ಆಳಂದ ತಾಲೂಕಿನ ಗೋಳಾ(ಬಿ) ಪ್ರಾಥಮಿಕ ಆರೋಗ್ಯ ಕೇಂದ್ರ್ರ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೈದ್ಯ ಡಾ|| ವಿಜಯೇಂದ್ರ. ಜೂನ್ 26ರಂದು: ಸೇಡಂ ತಾಲೂಕು ಆಸ್ಪತ್ರೆ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಡಾ. ಅಜಯ ಢಗೆ. ಜೂನ್ 27ರಂದು: ಮಳಖೇಡ ಅಲ್ಟ್ರಾಟೆಕ್ ಸಿಮೆಂಟ್ ಫ್ಯಾಕ್ಟರಿ-ಕಲಬುರಗಿ ಬಸವೇಶ್ವರ ಆಸ್ಪತ್ರೆಯ ಮನೋವೈದ್ಯ ಆಲೋಕ ಘನಾತೆ. ಜೂನ್ 29ರಂದು: ಆಳಂದ ತಾಲೂಕಿನ ಮಾದನಹಿಪ್ಪರಗಾ ಸರ್ಕಾರಿ ಆರೋಗ್ಯ ಕೇಂದ್ರ-ಡಿ.ಎಂ.ಹೆಚ್.ಪಿ. ತಂಡ.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಜೂನ್ 4ರಂದು ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿಗೆ ಸಂದರ್ಶನ
*************************************************************
ಕಲಬುರಗಿ,ಮೇ.31.(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 2018-19ನೇ ಶೈಕ್ಷಣಿಕ ಸಾಲಿಗೆ ಖಾಲಿಯಿರುವ ತಲಾ ಓರ್ವ ವಿಜ್ಞಾನ ಸಹಶಿಕ್ಷಕ ಹಾಗೂ ಇಂಗ್ಲೀಷ ಸಹ ಶಿಕ್ಷಕರ ಹುದ್ದೆಗಳಿಗಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಜೂನ್ 4ರಂದು ಸಂದರ್ಶನ ನಡೆಯಲಿದೆ ಎಂದು ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ವಿಜ್ಞಾನ ಶಿಕ್ಷಕರ ಹುದ್ದೆಗೆ ಬಿ.ಎಸ್‍ಸಿ.,ಬಿ.ಎಡ್. (ಸಿ.ಬಿ.ಝಡ್. ಐಚ್ಛಿಕ ವಿಷಯ) ಹಾಗೂ ಇಂಗ್ಲೀಷ ಸಹ ಶಿಕ್ಷಕರ ಹುದ್ದೆಗೆ ಬಿ.ಎ.,ಬಿ.ಎಡ್. (ಇಂಗ್ಲೀಷ ಐಚ್ಛಿಕ ವಿಷಯ) ವಿದ್ಯಾರ್ಹತೆ ಹೊಂದಿರಬೇಕು. ಪ್ರತಿ ಮಾಹೆ 10,000 ರೂ.ಗಳ ಗೌರವಧನ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳು ಹಾಗೂ ಅದರ ದೃಢೀಕೃತ ಜಿರಾಕ್ಸ್ ದಾಖಲಾತಿಗಳೊಂದಿಗೆ ಮೇಲ್ಕಂಡ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9916689952ನ್ನು ಸಂಪರ್ಕಿಸಲು ಕೋರಲಾಗಿದೆ.



ಹೀಗಾಗಿ ಲೇಖನಗಳು news and photo Date: 31--05--2018

ಎಲ್ಲಾ ಲೇಖನಗಳು ಆಗಿದೆ news and photo Date: 31--05--2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo Date: 31--05--2018 ಲಿಂಕ್ ವಿಳಾಸ https://dekalungi.blogspot.com/2018/05/news-and-photo-date-31-05-2018.html

Subscribe to receive free email updates:

0 Response to "news and photo Date: 31--05--2018"

ಕಾಮೆಂಟ್‌‌ ಪೋಸ್ಟ್‌ ಮಾಡಿ