ಶೀರ್ಷಿಕೆ : ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ
ಲಿಂಕ್ : ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ
ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ
ಕೊಪ್ಪಳ ಮೇ. 10 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಬಾಲ್ಯ ವಿವಾಹಕ್ಕೆ ಒಳಪಡಲಿದ್ದ ಕೊಪ್ಪಳ ತಾಲೂಕಿನ ಅಬ್ಬಿಗೇರಿ ತಾಂಡ ಗ್ರಾಮದ ಬಾಲಕಿಯನ್ನು ರಕ್ಷಿಸಿ, ಸರ್ಕಾರಿ ಬಾಲಮಂದಿರದಲ್ಲಿ ಹಾಜರುಪಡಿಸಲಾಗಿದೆ.
ಕೊಪ್ಪಳ ತಾಲೂಕಿನ ಅಬ್ಬಿಗೇರಿ ತಾಂಡ ಗ್ರಾಮದ ಬಾಲಕಿಯನ್ನು ಸೂಳಿಕೇರಿ ತಾಂಡಾ ಗ್ರಾಮದ ವರನೊಂದಿಗೆ ಮದುವೆ ನೆರವೇರಿಸಲು ಸಿದ್ಧತೆ ಕೈಗೊಂಡಿರುವ ಕುರಿತ ಖಚಿತ ಮಾಹಿತಿಯನ್ನು ತಿಳಿದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು, ಗ್ರಾಮಕ್ಕೆ ಭೇಟಿ ನೀಡಿ ಬಾಲ್ಯ ವಿವಾಹಕ್ಕೆ ಒಳಪಡಲಿದ್ದ ಬಾಲಕಿಯನ್ನು ರಕ್ಷಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಮತ್ತು ಮೇಲ್ವಿಚಾರಕಿಯರು ಹಾಗೂ ಸಿಬ್ಬಂದಿಗಳು ಅಬ್ಬಿಗೇರಿ ತಾಂಡ ಗ್ರಾಮಕ್ಕೆ ಭೇಟಿ ನೀಡಿ, ಬಾಲಕಿಯ ವಯಸ್ಸಿನ ಕುರಿತು ಶಾಲಾ ದಾಖಲಾತಿಯನ್ನು ಪರಿಶೀಲಿಸಿದ್ದು, ಬಾಲಕಿಗೆ 18 ವರ್ಷ ಪೂರ್ಣಗೊಂಡಿರುವುದಿಲ್ಲ ಎಂಬ ಮಾಹಿತಿಯು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಬಾಲಕಿಯ ಪಾಲಕರಿಗೆ ಬಾಲ್ಯವಿವಾಹ ದುಷ್ಪರಿಣಾಮಗಳ ಕುರಿತು ತಿಳುವಳಿಕೆ ಪತ್ರವನ್ನು ನೀಡಿ, ಬಾಲ್ಯ ವಿವಾಹದಿಂದ ಬಾಲಕಿಯನ್ನು ರಕ್ಷಿಸಿ ಮುಂದಿನ ಆರೈಕೆ ಮತ್ತು ಪೋಷಣೆಗಾಗಿ ಕೊಪ್ಪಳದ ಬಾಲಕಿಯರ ಬಾಲಮಂದಿರದಲ್ಲಿ ಹಾಜರುಪಡಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ
ಎಲ್ಲಾ ಲೇಖನಗಳು ಆಗಿದೆ ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ ಲಿಂಕ್ ವಿಳಾಸ https://dekalungi.blogspot.com/2018/05/blog-post_80.html
0 Response to "ಬಾಲ್ಯ ವಿವಾಹದಿಂದ ಬಾಲಕಿಯ ರಕ್ಷಣೆ"
ಕಾಮೆಂಟ್ ಪೋಸ್ಟ್ ಮಾಡಿ