ಶೀರ್ಷಿಕೆ : ಕತ್ತಿ ಝಳಪಿಸತೊಡಗಿದರು
ಲಿಂಕ್ : ಕತ್ತಿ ಝಳಪಿಸತೊಡಗಿದರು
ಕತ್ತಿ ಝಳಪಿಸತೊಡಗಿದರು
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹೊರಗಿನವರು ಒಳಗಿನವರ ತಲೆ ತರಿದರೆಂಬ
ಇತಿಹಾಸಗಳ ಓದಿ ಬೆಳೆದವರು
ಒಪ್ಪುತಪ್ಪುಗಳ ನಡುವೆ ಗೆರೆ ಕೊರೆಯಲಾಗದೆ
ಸತ್ಯವನರಿಯಲಾಗದೆ ಜಿದ್ದಿಗೆ ಬಿದ್ದರು.
ಹಗಲೂರಾತ್ರಿಗಳ ಪರಿವೆಯಿರದೆ
ಕತ್ತಿಗಳ ಮಸೆದದ್ದೇ ಮಸೆದದ್ದು
ಹರಿತವಾದ ಮೇಲೆ ಆಯುಧ
ಹುಡುಕತೊಡಗಿದರು:
ಒಳಗಿನವರ ತಲೆ ತೆಗೆದ ಆ ಹೊರಗಿನವರಲ್ಲೊಬ್ಬನ
ಮೊದಲು ಪಕ್ಕದ ಮನೆಯಲ್ಲಿ,
ಆಮೇಲೆ ತಮ್ಮದೇ ಬೀದಿಯಲ್ಲಿ,
ಊರಲ್ಲಿ,
ಕೊನೆಗೆ ಊರೂರಲ್ಲಿ ಹುಡುಕಿ ಅಲೆಯ ತೊಡಗಿದರು
ಹೊರಗಿನವನಿಗಾಗಿ.
ಹೊರಗಿವನೆಂದುಕೊಂಡವರೆಲ್ಲ
ಒಳಗಿನವರೇ ಆಗಿ ಹೋದ ಕಾಲದ ಕ್ರಿಯೆಯ ಮರೆತರು
ಕೊನೆಗೆ ಒರೆಯಿಂದ ಹೊರತೆಗೆದ
ಕತ್ತಿಗೆ ರಕ್ತದ ನೈವೇಧ್ಯವಿಡದೆ ಒರೆ ಸೇರಿಸಬಾರದೆಂಬ ಮಾತು ಕೇಳಿ
ಒಳಗಿನವರನೇ ಹುಡುಹುಡುಕಿ ಕತ್ತಿ ಝಳಪಿಸತೊಡಗಿದರು
ಇತಿಹಾಸಗಳ ಓದಿ ಬೆಳೆದವರು
ಒಪ್ಪುತಪ್ಪುಗಳ ನಡುವೆ ಗೆರೆ ಕೊರೆಯಲಾಗದೆ
ಸತ್ಯವನರಿಯಲಾಗದೆ ಜಿದ್ದಿಗೆ ಬಿದ್ದರು.
ಹಗಲೂರಾತ್ರಿಗಳ ಪರಿವೆಯಿರದೆ
ಕತ್ತಿಗಳ ಮಸೆದದ್ದೇ ಮಸೆದದ್ದು
ಹರಿತವಾದ ಮೇಲೆ ಆಯುಧ
ಹುಡುಕತೊಡಗಿದರು:
ಒಳಗಿನವರ ತಲೆ ತೆಗೆದ ಆ ಹೊರಗಿನವರಲ್ಲೊಬ್ಬನ
ಮೊದಲು ಪಕ್ಕದ ಮನೆಯಲ್ಲಿ,
ಆಮೇಲೆ ತಮ್ಮದೇ ಬೀದಿಯಲ್ಲಿ,
ಊರಲ್ಲಿ,
ಕೊನೆಗೆ ಊರೂರಲ್ಲಿ ಹುಡುಕಿ ಅಲೆಯ ತೊಡಗಿದರು
ಹೊರಗಿನವನಿಗಾಗಿ.
ಹೊರಗಿವನೆಂದುಕೊಂಡವರೆಲ್ಲ
ಒಳಗಿನವರೇ ಆಗಿ ಹೋದ ಕಾಲದ ಕ್ರಿಯೆಯ ಮರೆತರು
ಕೊನೆಗೆ ಒರೆಯಿಂದ ಹೊರತೆಗೆದ
ಕತ್ತಿಗೆ ರಕ್ತದ ನೈವೇಧ್ಯವಿಡದೆ ಒರೆ ಸೇರಿಸಬಾರದೆಂಬ ಮಾತು ಕೇಳಿ
ಒಳಗಿನವರನೇ ಹುಡುಹುಡುಕಿ ಕತ್ತಿ ಝಳಪಿಸತೊಡಗಿದರು
ಹೀಗಾಗಿ ಲೇಖನಗಳು ಕತ್ತಿ ಝಳಪಿಸತೊಡಗಿದರು
ಎಲ್ಲಾ ಲೇಖನಗಳು ಆಗಿದೆ ಕತ್ತಿ ಝಳಪಿಸತೊಡಗಿದರು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕತ್ತಿ ಝಳಪಿಸತೊಡಗಿದರು ಲಿಂಕ್ ವಿಳಾಸ https://dekalungi.blogspot.com/2018/05/blog-post_76.html

0 Response to "ಕತ್ತಿ ಝಳಪಿಸತೊಡಗಿದರು"
ಕಾಮೆಂಟ್ ಪೋಸ್ಟ್ ಮಾಡಿ