ಶೀರ್ಷಿಕೆ : ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ
ಲಿಂಕ್ : ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ
ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ
ಕೊಪ್ಪಳ ಮೇ. 02 (ಕರ್ನಾಟಕ ವಾರ್ತೆ): ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ಮಾವು ಬೆಳೆಗಾರ ರೈತರಿಗೆ ಮಾವು ಮಾಗಿಸುವ ಕುರಿತು ಕೆಲವು ಸಲಹೆಗಳನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಒಂದು ತಿಂಗಳು ತಡವಾಗಿ ಮಾವು ಈಗ ಕಟಾವಿಗೆ ಸಿಧ್ಧವಾಗುತ್ತಿದೆ. ಈ ಸಮಯದಲ್ಲಿ ಕಾಯಿಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಹಾಗೂ ಕೆಲವು ಕಾಯಿಗಳು ಉದುರುತ್ತವೆ. ಇದು ಕಟಾವಿಗೆ ಸೂಕ್ತ ಸಮಯ. ಒಂದು ಅಂಗುಲ ದೇಟು ಸಮೇತ ತಂಪು ಹೊತ್ತಿನಲ್ಲಿ ಕಾಯಿಗಳಿಗೆ ಪೆಟ್ಟು ಬೀಳದಂತೆ ಕಟಾವು ಮಾಡಿ 6 ಗಂಟೆಗಳ ಕಾಲ ನೆರಳಿನಲ್ಲಿ ಪ್ಲಾಸ್ಟಿಕ್ ಟ್ರೇಗಳಲ್ಲಿ ತಲೆ ಕೆಳಗೆ ಮಾಡಿ ಇಡಬೇಕು. ಈ ಟ್ರೇಗಳನ್ನ ನೀರಿನಲ್ಲಿ ಅದ್ದಿ ಗಾಳಿಯಾಡದ ಕೋಣೆಯಲ್ಲಿ ಇಟ್ಟು ಶಿಫಾರಸು ಮಾಡಿದ ಪ್ರಮಾಣದಲ್ಲಿ ಇಥಲೀನ ಅನಿಲ ಬಿಡುಗಡೆ ಮಾಡಿ ಬಾಗಿಲು ಮುಚ್ಚಿಡಬೇಕು. ಇಂತಹ ಕಾಯಿಗಳು 3 ರಿಂದ 4 ದಿನಗಳಲ್ಲಿ ಮಾಗಿ ಸೇವನೆಗೆ ಸಿದ್ದವಾಗುತ್ತವೆ. ಹಣ್ಣುಗಳನ್ನು ಮಾಗಿಸಲು ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್ ನಂತಹ ರಾಸಾಯನಿಕಗಳನ್ನು ಬಳಸಬಾರದು, ಇದು ಕಾನೂನುಬಾಹಿರವಾಗಿದೆ, ಅಲ್ಲದೆ ಇಂತಹ ಹಣ್ಣು ಸೇವನೆ ಮಾಡುವ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ.
ಕೊಪ್ಪಳದ ಕೃಷಿ ಮಾರುಕಟ್ಟೆ ಆವರಣದಲ್ಲಿರುವ ಹಣ್ಣು ಮಾಗಿಸುವ ಘಟಕದಲ್ಲಿಯೂ ರೈತರು ತಮ್ಮ ಉತ್ಪನ್ನಗಳನ್ನು ಮಾಗಿಸಿ ಮಾರಾಟ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಮತ್ತು ವಿಷಯ ತಜ್ಞರನ್ನು ಸಂಪರ್ಕ ಮಾಡಬಹುದು, ಅಥವಾ ಮೋ.ಸಂ. 9482672039 ಕ್ಕೆ ಸಂಪರ್ಕಿಸಬಹುದು ಎಂದು ಕೊಪ್ಪಳ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಕೃಷ್ಣ ಸಿ. ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ
ಎಲ್ಲಾ ಲೇಖನಗಳು ಆಗಿದೆ ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ ಲಿಂಕ್ ವಿಳಾಸ https://dekalungi.blogspot.com/2018/05/blog-post_68.html
0 Response to "ಮಾವು ಮಾಗಿಸುವ ಕುರಿತು ರೈತರಿಗೆ ಸಲಹೆ"
ಕಾಮೆಂಟ್ ಪೋಸ್ಟ್ ಮಾಡಿ