ಶೀರ್ಷಿಕೆ : ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು
ಲಿಂಕ್ : ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು
ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು
ಕೊಪ್ಪಳ ಮೇ. 06 (ಕರ್ನಾಟಕ ವಾರ್ತೆ): ಕುಷ್ಟಗಿ ತಾಲೂಕು ದೊಣ್ಣೆಗುಡ್ಡ ಗ್ರಾಮದ ಬಳಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ, ಮತದಾರರ ಮೇಲೆ ಪ್ರಭಾವ ಬೀರಲು ಏರ್ಪಡಿಸಿದ್ದ ಬಾಡೂಟವನ್ನು ವಶಕ್ಕೆ ಪಡೆದು, ಆರೋಪಿ ದುರುಗಪ್ಪ ಮರಿಯಪ್ಪ ಗ್ವಾಡಿ ಅವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ ಶನಿವಾರದಂದು ರಾತ್ರಿ ಸುಮಾರು 08 ಗಂಟೆಗೆ ಕುಷ್ಟಗಿ ತಾಲೂಕು ದೊಣ್ಣೆಗುಡ್ಡ ಗ್ರಾಮ ಬಳಿ ದುರ್ಗಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಾಜಕೀಯ ಪಕ್ಷದ ವತಿಯಿಂದ ಬಾಡೂಟ ಏರ್ಪಡಿಸಿರುವ ಬಗ್ಗೆ ಇಲ್ಲಿನ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಆರ್.ಎಸ್. ರಾವಳ ಅವರಿಗೆ ಬಂದ ದೂರು ಹಿನ್ನೆಲೆಯಲ್ಲಿ, ಫ್ಲೈಯಿಂಗ್ ಸ್ಕ್ವಾಡ್ ತಂಡವು ಸ್ಥಳಕ್ಕೆ ತೆರಳಿ, ಪರಿಶೀಲಿಸಿದಾಗ, ಮತದಾರರ ಮೇಲೆ ಪ್ರಭಾವ ಬೀರುವ ಸಲುವಾಗಿ ರಾಜಕೀಯ ಪಕ್ಷದವರು ಬಾಡೂಟ ತಯಾರಿಸಿ, ವಿತರಣೆಗೆ ಸಿದ್ಧತೆ ಮಾಡಿಕೊಂಡಿರುವುದು ಕಂಡುಬಂದಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡ ಸ್ಥಳಕ್ಕೆ ದಾಳಿ ನಡೆಸಿದ ಕೂಡಲೆ, ಅಲ್ಲಿಗೆ ಆಗಮಿಸಿದ್ದ ಜನರು ಓಡಿಹೋಗಿದ್ದು, 20 ಕೆ.ಜಿ. ಮಟನ್, 25 ಕೆ.ಜಿ. ಯಷ್ಟು ಅನ್ನವನ್ನು ತಂಡವು ವಶಕ್ಕೆ ಪಡೆದಿದ್ದು, ಬಾಡೂಟ ವ್ಯವಸ್ಥೆ ಮಾಡಿದ್ದ ದುರುಗಪ್ಪ ಮರಿಯಪ್ಪ ಗ್ವಾಡಿ ಅವರನ್ನು ವಶಕ್ಕೆ ಪಡೆದು, ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಆರ್.ಎಸ್. ರಾವಳ ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು
ಎಲ್ಲಾ ಲೇಖನಗಳು ಆಗಿದೆ ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು ಲಿಂಕ್ ವಿಳಾಸ https://dekalungi.blogspot.com/2018/05/blog-post_6.html
0 Response to "ದೊಣ್ಣೆಗುಡ್ಡದಲ್ಲಿ ಬಾಡೂಟ ವಶ : ಪ್ರಕರಣ ದಾಖಲು"
ಕಾಮೆಂಟ್ ಪೋಸ್ಟ್ ಮಾಡಿ