ಶೀರ್ಷಿಕೆ : ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ
ಲಿಂಕ್ : ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ
ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ
ಕೊಪ್ಪಳ ಮೇ. 08 (ಕರ್ನಾಟಕ ವಾರ್ತೆ): ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಕೊಪ್ಪಳ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸ್ಕೌಡ್ಸ್ ಮತ್ತು ಗೈಟ್ಸ್ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತರು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ಸಂಸ್ಥೆಯು ಸೂಚನೆ ನೀಡಿದೆ.
ಸ್ಕೌಡ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಬೇಸಿಗೆ ರಜೆಯನ್ನು ಕಳೆಯಲು ಅತ್ಯುತ್ತಮ ಚಟುವಟಿಕೆಯಿಂದ ಕೂಡಿದ ಬೇಸಿಗೆ ಶಿಬಿರವನ್ನು ಮೇ. 14 ರಿಂದ 18 ರವರೆಗೆ ಗದಗ ರಸ್ತೆಯ ಎಕ್ಸ್‍ಲೆಂಟ್ ಪಬ್ಲಿಕ್ ಸ್ಕೂಲ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಐದು ದಿನಗಳ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಊಟ ಮತ್ತು ವಸತಿ ಸಹಿತ ಉಚಿತವಾಗಿ ಏರ್ಪಡಿಸಲಾಗಿದೆ. ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ, ಕ್ರಾಪ್ಟ್‍ವರ್ಕ್ (ಕಸದಿಂದ ರಸ), ಯೋಗ, ಚಿತ್ರಕಲೆ, ಬ್ಯಾಂಡ್ ಸೆಟ್ ತರಬೇತಿ, ಸ್ವ ರಕ್ಷಣೆ ಕಲೆ, ಸಾಹಸ ಚಟುವಟಿಕೆಗಳು, ಬುದ್ದಿ ಶಕ್ತಿಯ ಆಟಗಳು, ಸಂಗೀತ, ಸ್ಕೌಟ್ಸ್ ಮತ್ತು ಗೈಡ್ ಸಂಬಂದಪಟ್ಟ ವಿಷಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಬೇಸಿಗೆ ಶಿಬಿರದಲ್ಲಿ ಮಕ್ಕಳ ಸಂಖ್ಯೆಯನ್ನು ಗರಿಷ್ಠ 100 ಕ್ಕೆ ನಿಗದಿ ಪಡಿಸಲಾಗಿದ್ದು, ಆಸಕ್ತ ಸ್ಕೌಡ್ಸ್ ಮತ್ತು ಗೈಡ್ಸ್ ಮಕ್ಕಳು ಮೇ. 10 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಎ.ಎಸ್.ಓ.ಸಿ ಮೊ.ಸಂ-861873448, ಡಿ.ಓ.ಸಿ - 9731619211, ಡಿ.ಟಿ.ಸಿ- 9379196652, ಮಲ್ಲಪ್ಪ- 9945792202, ವಿಜಯ ಕುಮಾರ– 9611126702, ಯರ್ರಣ್ಣ - 9242400001 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ
ಎಲ್ಲಾ ಲೇಖನಗಳು ಆಗಿದೆ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2018/05/blog-post_51.html
0 Response to "ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಶಿಬಿರ : ಹೆಸರು ನೊಂದಾಯಿಸಿಕೊಳ್ಳಲು ಸೂಚನೆ"
ಕಾಮೆಂಟ್ ಪೋಸ್ಟ್ ಮಾಡಿ