ಶೀರ್ಷಿಕೆ : ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ
ಲಿಂಕ್ : ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ
ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ
ಕೊಪ್ಪಳ ಮೇ. 16 (ಕರ್ನಾಟಕ ವಾರ್ತೆ): ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಗೆ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಯು.ಪಿ.ಎಸ್.ಸಿ., ಕೆ.ಎ.ಎಸ್., ಬ್ಯಾಂಕಿಂಗ್, ಗ್ರೂಪ್-ಸಿ ಮತ್ತು ಎಸ್.ಎಸ್.ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಗೆ ಆಯ್ಕೆ ಮಾಡಲಾಗುತ್ತಿದ್ದು, 21 ರಿಂದ 35 ವರ್ಷ (30.05.2018ಕ್ಕೆ) ವಯೋಮಾನದ, ಹಾಗೂ ವಾರ್ಷಿಕ ರೂ.6.00 ಲಕ್ಷಗಳನ್ನು ಮೀರದಂತೆ ಆದಾಯ ಹೊಂದಿರುವ ಅರ್ಹ ಪರಿಶಿಷ್ಟ ಜಾತಿಯ ಪದವಿಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಹಾಗೂ ವಿವಿಧ ತರಬೇತಿ ಸಂಸ್ಥೆಗಳಲ್ಲಿ ಲಭ್ಯವಿರುವ ಸೀಟುಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯವನ್ನು ಇಲಾಖೆಯಿಂದ ನೀಡಲಾಗುವುದಿಲ್ಲ. ಸರ್ಕಾರಿ ಆದೇಶದ ಪ್ರಕಾರ ಮಾಸಿಕ ಶಿಷ್ಯವೇತನ ಪಾವತಿಸಲಾಗುವುದು. ಈ ಹಿಂದೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ತರಬೇತಿ ಪಡೆಯಲು ಅವಕಾಶವಿರುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ. 30 ಆಗಿದ್ದು, ಆನ್‍ಲೈನ್‍ನಲ್ಲಿ ಇಲಾಖೆ ವೆಬ್‍ಸೈಟ್ www.sw.kar.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೊಪ್ಪಳ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ
ಎಲ್ಲಾ ಲೇಖನಗಳು ಆಗಿದೆ ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ ಲಿಂಕ್ ವಿಳಾಸ https://dekalungi.blogspot.com/2018/05/blog-post_50.html
0 Response to "ಐಎಎಸ್, ಕೆಎಎಸ್ ಪೂರ್ವಭಾವಿ ತರಬೇತಿ : ಅರ್ಹರಿಂದ ಅರ್ಜಿ ಆಹ್ವಾನ"
ಕಾಮೆಂಟ್ ಪೋಸ್ಟ್ ಮಾಡಿ