ಶೀರ್ಷಿಕೆ : ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ
ಲಿಂಕ್ : ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ
ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ
ಕೊಪ್ಪಳ ಮೇ. 04 (ಕರ್ನಾಟಕ ವಾರ್ತೆ): ವಿಧಾನಸಭೆ ಚುನಾವಣೆ ಸಂಬಂಧ ಮತ ಪಡೆಯಲು ಆಸೆ, ಆಮಿಷ ಒಡ್ಡುವವರ ಬಗ್ಗೆ ಮಾಹಿತಿ ನೀಡಿ, ದೂರು ಸಲ್ಲಿಸಲು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳಿಗೆ ಕರೆ ಮಾಡುವಂತೆ ಕುಷ್ಟಗಿ ತಾಲೂಕು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿರುವ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪಿ. ಮೋಹನ್ ಅವರು ತಿಳಿಸಿದ್ದಾರೆ.
ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಚುನಾವಣೆ ಸಂಬಂಧ ಯಾವುದೇ ಅಭ್ಯರ್ಥಿಗಳು, ಮುಖಂಡರು, ಅಥವಾ ವ್ಯಕ್ತಿಗಳು ಮತದಾರರಿಗೆ ಹಣ, ಮದ್ಯ, ಮತ್ತು ಇತರೆ ವಸ್ತುಗಳನ್ನು ಹಂಚುವುದು ಕಂಡುಬಂದಲ್ಲಿ, ತಕ್ಷಣ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅಲ್ಲದೆ ಹೊಲಗಳಲ್ಲಿ ಅಥವಾ ಇತರೆ ಸ್ಥಳಗಳಲ್ಲಿ ಯಾರಾದರೂ ಬಾಡೂಟ, ಉಪಹಾರ ಪ್ರಾಯೋಜಿಸಿದಲ್ಲಿ, ಅಂತಹ ಹೊಲಗಳ, ಸ್ಥಳದ ಮಾಲೀಕರ ವಿರುದ್ಧ ದೂರು ದಾಖಲಿಸಲಾಗುವುದು. ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಯಾವುದೇ ಗ್ರಾಮಗಳಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಅಧಿಕಾರಿ ಪಿ. ಮೋಹನ್- 9480871011 ಕ್ಕೆ ಕರೆ ಮಾಡಿ ತಿಳಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ
ಎಲ್ಲಾ ಲೇಖನಗಳು ಆಗಿದೆ ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ ಲಿಂಕ್ ವಿಳಾಸ https://dekalungi.blogspot.com/2018/05/blog-post_48.html

0 Response to "ಮತಕ್ಕಾಗಿ ಆಸೆ, ಆಮಿಷವೊಡ್ಡಿದಲ್ಲಿ ಫ್ಲೈಯಿಂಗ್ ಸ್ಕ್ವಾಡ್‍ಗೆ ಕರೆ ಮಾಡಿ"
ಕಾಮೆಂಟ್ ಪೋಸ್ಟ್ ಮಾಡಿ