ಶೀರ್ಷಿಕೆ : ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ
ಲಿಂಕ್ : ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ
ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ
ಕೊಪ್ಪಳ ಮೇ. 07 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆ ಸಂಬಂಧ ಮೇ. 12 ರಂದು ಮತದಾನ ನಡೆಯಲಿದ್ದು, ಪ್ರತಿಯೊಬ್ಬ ಮತದಾರರ ಕುಟುಂಬಕ್ಕೆ ಈ ಬಾರಿ ವೋಟರ್ ಸ್ಲಿಪ್‍ನೊಂದಿಗೆ, ಮತದಾನ ಕುರಿತ ಮಾಹಿತಿಯನ್ನೊಳಗೊಂಡ ವೋಟರ್ ಗೈಡ್ ಮಡಿಕೆ ಪತ್ರವನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಪ್ರತಿ ಕುಟುಂಬಕ್ಕೂ ವೋಟರ್ ಗೈಡ್ :
*************** ಕಳೆದ ಬಾರಿಯ ಚುನಾವಣೆಯಲ್ಲಿ ಮತದಾರರಿಗೆ ವೋಟರ್ ಸ್ಲಿಪ್ ಅನ್ನು ಚುನಾವಣಾ ಆಯೋಗದ ವತಿಯಿಂದಲೇ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸುವ ಕಾರ್ಯ ಪ್ರಾಯೋಗಿಕವಾಗಿ ಕೈಗೊಳ್ಳಲಾಗಿತ್ತು. ಅದು ಯಶಸ್ವಿಯೂ ಆಗಿತ್ತು. ಇದರಿಂದ ಉತ್ತೇಜಿತಗೊಂಡ ಆಯೋಗವು, ಈ ಬಾರಿಯೂ ಎಲ್ಲ ಮತದಾರರಿಗೂ ವೋಟರ್ ಸ್ಲಿಪ್ ಅನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸುವ ಕಾರ್ಯ ಕೈಗೊಂಡಿದ್ದು, ವಿಶೇಷವೆಂದರೆ, ಈ ಬಾರಿ ವೋಟರ್ ಸ್ಲಿಪ್ ಜೊತೆಗೆ ಪ್ರತಿಯೊಂದು ಮತದಾರನ ಕುಟುಂಬಕ್ಕೂ ಮತದಾನ ಕುರಿತ ಮಾಹಿತಿಯನ್ನೊಳಗೊಂಡ ವೋಟರ್ ಗೈಡ್ ಅನ್ನು ವಿತರಿಸಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೆ ಇಂತಹ ವೋಟರ್ ಸ್ಲಿಪ್ ಮತ್ತು ವೋಟರ್ ಗೈಡ್ ಅನ್ನು ಮತದಾರರಿಗೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ತಲುಪಿಸುವ ಕಾರ್ಯ ಪ್ರಾರಂಭಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 2. 65 ಲಕ್ಷ ಕುಟುಂಬಗಳಿಗೆ ವೋಟರ್ ಗೈಡ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಕುಷ್ಟಗಿ ಕ್ಷೇತ್ರದಲ್ಲಿ 51200 ಕುಟುಂಬಗಳಿಗೆ ವೋಟರ್ ಗೈಡ್ ವಿತರಿಸಲಾಗುತ್ತಿದೆ. ಕನಕಗಿರಿ- 53000, ಗಂಗಾವತಿ- 48500, ಯಲಬುರ್ಗಾ-51800 ಹಾಗೂ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 60200 ಕುಟುಂಬಗಳಿಗೆ ವೋಟರ್ ಸ್ಲಿಪ್ ಜೊತೆಗೆ ವೋಟರ್ ಗೈಡ್ ವಿತರಿಸಲಾಗುವುದು.

ಏನಿದು ವೋಟರ್ ಗೈಡ್ :
********** ಮೇ. 12 ರಂದು ನಡೆಯುವ ಮತದಾನ ಸಂದರ್ಭದಲ್ಲಿ ಒಬ್ಬ ಮತದಾರ, ತನ್ನ ಮತ ಚಲಾಯಿಸಲು ಏನು ಕ್ರಮ ಅನುಸರಿಸಬೇಕು, ಯಾವ ದಾಖಲೆಗಳು ಇರಬೇಕು, ಮತದಾರನಿಗೆ ಏನೆಲ್ಲ ಸೌಲಭ್ಯಗಳಿವೆ, ಸಹಾಯವಾಣಿ ಸಂಖ್ಯೆ, ಮತ ಚಲಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಹೀಗೆ ಸಮಗ್ರ ಮಾಹಿತಿ ಈ ವೋಟರ್ ಗೈಡ್‍ನಲ್ಲಿದೆ. ಮತ ಜಾಗೃತಿಗೆ ಚುನಾವಣಾ ಆಯೋಗದ ವತಿಯಿಂದ ಸಾರ್ವಜನಿಕರಿಗೆ ಸಂದೇಶ ನೀಡಲು ಆಯ್ಕೆಯಾಗಿರುವ ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್, ಕ್ರಿಕೆಟಿಗ ರಾಹುಲ್ ದ್ರಾವಿಡ್, ನಟ ಪುನೀತ್ ರಾಜ್‍ಕುಮಾರ್, ನಟಿ ಪ್ರಣೀತ ಅವರು ಮತದಾನಕ್ಕೆ ಉತ್ತೇಜನ ನೀಡುವ ಫೋಟೋ ಈ ಗೈಡ್‍ನಲ್ಲಿದೆ. ಚುನಾವಣಾ ದಿನಾಂಕ, ಸಮಯ ಎಲ್ಲವೂ ಇದರಲ್ಲಿದೆ. ದಿವ್ಯಾಂಗರಿಗೆ ಮತದಾನಕ್ಕೆ ಅನುಕೂಲವಾಗುವಂತೆ ರ್ಯಾಂಪ್ ಸೌಲಭ್ಯ, ಅಂಧರಿಗೆ ಮತ ಯಂತ್ರದಲ್ಲಿ ಬ್ರೈಲ್ ಲಿಪಿ ಅಳವಡಿಕೆ, ಮತದಾರರಿಗೆ ಕುಡಿಯುವ ನೀರು, ಶೌಚಾಲಯ, ಪ್ರಾಥಮಿಕ ಚಿಕಿತ್ಸೆ ಸೌಲಭ್ಯ, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಸಾಲು ಸೌಲಭ್ಯ ಇರುವ ಕುರಿತ ಮಾಹಿತಿಯೂ ಗೈಡ್‍ನಲ್ಲಿದೆ. ಮತ ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿದ್ದು, ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಲು ಸಹಾಯವಾಣಿ 1950, ಅಥವಾ ಎಸ್‍ಎಂಎಸ್ ಮೂಲಕ ತಿಳಿದುಕೊಳ್ಳುವುದು, ವೆಬ್‍ಸೈಟ್ ಮೂಲಕ ಪರಿಶೀಲಿಸಿಕೊಳ್ಳಲು ಇದರಲ್ಲಿ ಮಾಹಿತಿ ನೀಡಲಾಗಿದೆ. ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಬಗೆಯನ್ನು ವೋಟರ್ ಗೈಡ್‍ನಲ್ಲಿ ಸ್ಪಷ್ಟವಾಗಿ ಚಿತ್ರದ ಮೂಲಕ ವೋಟರ್ ಗೈಡ್‍ನಲ್ಲಿ ತಿಳಿಸಲಾಗಿದೆ.
ಪ್ರತಿಯೊಬ್ಬ ಮತದಾರರೂ ತಪ್ಪದೆ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತ ಚಲಾಯಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಯಾವುದೇ ಮತದಾರ ಮತ ಚಲಾವಣೆಯ ಹಕ್ಕಿನಿಂದ ವಂಚಿತರಾಗಬಾರದು. ಮತ ಚಲಾಯಿಸುವ ಬಗೆ ಅಥವಾ ಮತದಾನ ಕೇಂದ್ರದ ಬಗ್ಗೆ ಮಾಹಿತಿಯ ಕೊರತೆಯನ್ನು ಅನುಭವಿಸಬಾರದು ಎನ್ನುವ ಉದ್ದೇಶದಿಂದ ಈ ಬಾರಿ ವೋಟರ್ ಸ್ಲಿಪ್ ಜೊತೆಗೆ ವೋಟರ್ ಗೈಡ್ ಅನ್ನು ಪ್ರತಿಯೊಂದ ಮತದಾರರ ಕುಟುಂಬಕ್ಕೂ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಮತದಾರರದ್ದು ಕೇವಲ ಒಂದು ಮತ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ಮೌಲ್ಯವಾಗಿದೆ. ದೃಢವಾದ ಮತದಿಂದ ದೃಢವಾದ ಸರ್ಕಾರ ನಿರ್ಮಾಣ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಮೇ. 12 ರಂದು ಎಲ್ಲ ಮತದಾರರು ತಪ್ಪದೆ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು.
ಹೀಗಾಗಿ ಲೇಖನಗಳು ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/05/blog-post_40.html

0 Response to "ಮತದಾರರ ಪ್ರತಿ ಕುಟುಂಬಕ್ಕೆ ಈ ಬಾರಿ ವೋಟರ್ ಗೈಡ್- ಎಂ. ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ