ಶೀರ್ಷಿಕೆ : ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ
ಲಿಂಕ್ : ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ
ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ
ಮತ ಎಣಿಕೆ ನಡೆಯುವ ಕೊಠಡಿ ವಿವರ :
ಕಟ್ಟಡದ ಮೊದಲನೆ ಮಹಡಿಯ ಕೊಠಡಿ ಸಂಖ್ಯೆ 18 ರಲ್ಲಿ ಯಲಬುರ್ಗಾ ಕ್ಷೇತ್ರದ ಮತಗಳ ಎಣಿಕೆ ಕಾರ್ಯ ಜರುಗಲಿದ್ದು, ಕೊಠಡಿ ಸಂಖ್ಯೆ 19,20, 21 ರಲ್ಲಿ ಯಲಬುರ್ಗಾ ಕ್ಷೇತ್ರದ ಮತಯಂತ್ರಗಳನ್ನು ಭದ್ರತೆಯಲ್ಲಿ ಇರಿಸಲಾಗಿದೆ. ಕೊಠಡಿ ಸಂಖ್ಯೆ 25 ರಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಜರಿದ್ದು, ಮತ ಎಣಿಕೆಯ ಸಮಗ್ರ ವಿವರ ಪಡೆಯಲಿದ್ದಾರೆ. ಕೊಠಡಿ ಸಂಖ್ಯೆ 27 ಮತ್ತು 28 ರಲ್ಲಿ ಕನಕಗಿರಿ ಕ್ಷೇತ್ರದ ಮತಯಂತ್ರಗಳನ್ನು ಇರಿಸಲಾಗಿದ್ದು, ಕೊಠಡಿ ಸಂಖ್ಯೆ 29 ರಲ್ಲಿ ಕನಕಗಿರಿ ಕ್ಷೇತ್ರದ ಮತ ಎಣಿಕೆ ಕಾರ್ಯ ನೆರವೇರಲಿದೆ. ಕೊಠಡಿ ಸಂಖ್ಯೆ 31 ರಲ್ಲಿ ಮತಗಳ ಎಣಿಕೆ ಕಾರ್ಯದ ಅಂಕಿ-ಅಂಶಗಳ ವರದಿ ಸಂಗ್ರಹಣೆಗೆ ಕಂಪ್ಯೂಟರ್‍ಗಳನ್ನು ಇರಿಸಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೊಠಡಿ ಸಂಖ್ಯೆ 32 ರಲ್ಲಿ ಗಂಗಾವತಿ ಕ್ಷೇತ್ರದ ಮತಗಳ ಎಣಿಕೆ ಕಾರ್ಯ ಜರುಗಲಿದ್ದು, ಕೊಠಡಿ ಸಂಖ್ಯೆ 33 ರಲ್ಲಿ ಗಂಗಾವತಿ ಕ್ಷೇತ್ರದ ಮತ ಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ.
ಗವಿಸಿದ್ದೇಶ್ವರ ಮಹಾ ವಿದ್ಯಾಲಯ ಕಟ್ಟಡಕ್ಕೆ ಈಗಾಗಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಮತಗಳ ಎಣಿಕೆ ಕಾರ್ಯ ಮೇ. 15 ರಂದು ಬೆಳಿಗ್ಗೆ 08 ಗಂಟೆಯಿಂದ ಪ್ರಾರಂಭವಾಗಲಿದೆ. ಅಂದಾಜು ಮಧ್ಯಾಹ್ನ 01 ಗಂಟೆಯ ಒಳಗಾಗಿ ಎಲ್ಲ ಕ್ಷೇತ್ರಗಳ ಫಲಿತಾಂಶಗಳು ಹೊರಬೀಳುವ ಸಾಧ್ಯತೆಗಳಿವೆ. ಮತ ಎಣಿಕಾ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು, ಮತ ಎಣಿಕಾ ಕೇಂದ್ರದಲ್ಲಿ ಸಕಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಲಾಗಿದ್ದು, ಮತ ಎಣಿಕಾ ಕೇಂದ್ರ ಸುತ್ತ ಶಾಂತಿ, ಸುವ್ಯವಸ್ಥೆ ಕಾಯ್ದುಕೊಳ್ಳುವಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದ್ದಾರೆ.
ಹೀಗಾಗಿ ಲೇಖನಗಳು ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ
ಎಲ್ಲಾ ಲೇಖನಗಳು ಆಗಿದೆ ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ ಲಿಂಕ್ ವಿಳಾಸ https://dekalungi.blogspot.com/2018/05/15_14.html
0 Response to "ಮೇ. 15 ರಂದು ಕೊಪ್ಪಳದಲ್ಲಿ ಮತ ಎಣಿಕೆ : ಕೊಪ್ಪಳ ಜಿಲ್ಲಾಡಳಿತ ಸಕಲ ಸಜ್ಜು : ಶಾಂತಿ ಸುವ್ಯವಸ್ಥೆಗೆ ಸಹಕರಿಸಿ- ಎಂ. ಕನಗವಲ್ಲಿ"
ಕಾಮೆಂಟ್ ಪೋಸ್ಟ್ ಮಾಡಿ