ಶೀರ್ಷಿಕೆ : ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ
ಲಿಂಕ್ : ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ
ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ
ಕೊಪ್ಪಳ ಮೇ. 13 (ಕರ್ನಾಟಕ ವಾರ್ತೆ) : ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮನ್ನೇರಾಳ ಗ್ರಾಮದ ಮತಗಟ್ಟೆ ಸಂಖ್ಯೆ 20 ಮತ್ತು 21 ರಲ್ಲಿ ಮರು ಮತದಾನ ಮೇ. 14 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ತಿಳಿಸಿದ್ದಾರೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮೇ. 12 ರಂದು ನಡೆದ ಮತದಾನ ಸಂದರ್ಭದಲ್ಲಿ ಮನ್ನೇರಾಳ ಗ್ರಾಮದ ಮತಗಟ್ಟೆ ಸಂಖ್ಯೆ 21 ರಲ್ಲಿಯ ಮತದಾರರು ಮತಗಟ್ಟೆ ಸಂಖ್ಯೆ 20 ರಲ್ಲಿ ಮತ ಚಲಾಯಿಸಿರುತ್ತಾರೆ. ಹೀಗಾಗಿ ಮತಗಟ್ಟೆ ಸಂಖ್ಯೆ 20 ರ ಮತದಾನ ಪ್ರಮಾಣ ಶೇ. 100 ಕ್ಕಿಂತ ಹೆಚ್ಚಾಗಿರುವುದ ಕಂಡುಬಂದಿರುತ್ತದೆ. ಪ್ರಕರಣ ಕುರಿತು ಭಾರತ ಚುನಾವಣಾ ಆಯೋಗದ ಗಮನಕ್ಕೆ ತರಲಾಯಿತು. ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಮನ್ನೇರಾಳ ಗ್ರಾಮದ ಮತಗಟ್ಟೆ ಸಂಖ್ಯೆ 20-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ ಭಾಗ), ಹಳೆಯ ಕಟ್ಟಡ ಹಾಗೂ ಇದೇ ಗ್ರಾಮದ ಮತಗಟ್ಟೆ ಸಂಖ್ಯೆ 21- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ ಭಾಗ) ರಲ್ಲಿ ಮೇ. 14 ರಂದು ಮರು ಮತದಾನ ನಡೆಸಲು ನಿರ್ಧರಿಸಲಾಗಿದೆ. ಮರು ಮತದಾನ ಅಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಡೆಯಲಿದೆ. ಮತಗಟ್ಟೆ ಸಂಖ್ಯೆ 20 ರಲ್ಲಿ 605 ಮತದಾರರಿದ್ದರೆ, ಮತಗಟ್ಟೆ ಸಂಖ್ಯೆ 21 ರಲ್ಲಿ 1121 ಮತದಾರರಿದ್ದಾರೆ. ಈ ಎರಡೂ ಮತಗಟ್ಟೆಗಳಿಗೆ ಸಂಬಂಧಪಟ್ಟ ಮತದಾರರು ಮೇ. 14 ರಂದು ಮತಗಟ್ಟೆಗಳಲ್ಲಿ ಮತ ಚಲಾಯಿಸುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೀಗಾಗಿ ಲೇಖನಗಳು ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ
ಎಲ್ಲಾ ಲೇಖನಗಳು ಆಗಿದೆ ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ ಲಿಂಕ್ ವಿಳಾಸ https://dekalungi.blogspot.com/2018/05/14.html
0 Response to "ಕುಷ್ಟಗಿ : ಮನ್ನೇರಾಳದ ಎರಡು ಮತಗಟ್ಟೆಗಳಲ್ಲಿ ಮೇ. 14 ರಂದು ಮರು ಮತದಾನ"
ಕಾಮೆಂಟ್ ಪೋಸ್ಟ್ ಮಾಡಿ