ಶೀರ್ಷಿಕೆ : ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ
ಲಿಂಕ್ : ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ
ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ
ಕೊಪ್ಪಳ ಮೇ. 05 (ಕರ್ನಾಟಕ ವಾರ್ತೆ): ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚದ ನಿರ್ವಹಣೆ ಹಾಗೂ ಖರ್ಚಿನ ವಿವರವನ್ನು ತಪಾಸಣೆಗೆ ಸಲ್ಲಿಸಲು ಮೇ. 08 ರ ಬದಲಾಗಿ, ಮೇ. 10 ರಂದು ತೃತೀಯ ಸಮೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.
ಸೆಕ್ಷನ್-77 ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಪ್ರಕಾರ 64- ಕೊಪ್ಪಳ ವಿಧಾನಸಭೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಚುನಾವಣಾ ವೆಚ್ಚದ ನಿರ್ವಹಣೆ ಹಾಗೂ ಖರ್ಚಿನ ವಿವರವನ್ನು ತಪಾಸಣೆಗೆ ಸಲ್ಲಿಸುವಂತೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸಮೀಕ್ಷೆಗೆ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಲಾಗಿತ್ತು. ಅದರಂತೆ ಏ. 30 ರಂದು ಪ್ರಥಮ ಸಮೀಕ್ಷೆ ಹಾಗೂ ಮೇ 04 ರಂದು ದ್ವಿತೀಯ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಆದರೆ ತೃತೀಯ ಸಮೀಕ್ಷೆಯನ್ನು ಮೇ. 08 ರ ಬದಲಾಗಿ ಮೇ. 10 ರಂದು ಕೈಗೊಳ್ಳಲು ಚುನಾವಣಾ ವೆಚ್ಚ ವೀಕ್ಷಕರು, ನಿರ್ದೇಶನ ನೀಡಿದ್ದಾರೆ. ಅದರಂತೆ ತೃತೀಯ ಸಮೀಕ್ಷೆಯನ್ನು ಮೇ. 08 ರ ಬದಲಿಗೆ ಮೇ. 10 ರಂದು ಕೈಗೊಳ್ಳಲು ನಿರ್ಧರಿಸಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮೇ. 10 ರಂದು ತಪ್ಪದೆ ತೃತೀಯ ಸಮೀಕ್ಷೆಗೆ ಹಾಜರಾಗಿ ಚುನಾವಣಾ ವೆಚ್ಚದ ನಿರ್ವಹಣೆ ಹಾಗೂ ಖರ್ಚಿನ ವಿವರವನ್ನು ತಪಾಸಣೆಗೆ ಸಲ್ಲಿಸಬೇಕು.
ಚುನಾವಣಾ ವೆಚ್ಚದ ನಿರ್ವಹಣೆ ಹಾಗೂ ಖರ್ಚಿನ ವಿವರವನ್ನು ತಪಾಸಣೆಗೆ ನಿಗದಿತ ದಿನಾಂಕ ಹಾಗೂ ಸಮಯದಲ್ಲಿ ಹಾಜರುಪಡಿಸದ ಅಭ್ಯಥಿಗಳ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್-77(3)ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು 64- ಕೊಪ್ಪಳ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ ಲಿಂಕ್ ವಿಳಾಸ https://dekalungi.blogspot.com/2018/05/10.html
0 Response to "ಕೊಪ್ಪಳ : ಚುನಾವಣಾ ವೆಚ್ಚ ವಿವರ ಸಲ್ಲಿಸಲು ಮೇ. 10 ರಂದು ತೃತೀಯ ಸಮೀಕ್ಷೆ"
ಕಾಮೆಂಟ್ ಪೋಸ್ಟ್ ಮಾಡಿ