News and photo date: 21-04-2018

News and photo date: 21-04-2018 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo date: 21-04-2018, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo date: 21-04-2018
ಲಿಂಕ್ : News and photo date: 21-04-2018

ಓದಿ


News and photo date: 21-04-2018

 ಸ್ವೀಪ್ ಸಮಿತಿಯಿಂದ ಜಾಗೃತಿ ಜಾಥಾ 
ಕಲಬುರಗಿ,ಏ.21.(ಕ.ವಾ.)-ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕಲಬುರಗಿಯಲ್ಲಿಂದು ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ಇಲಾಖೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಿಂದ ಪ್ರಾರಂಭವಾಗಿ, ಸೆಂಟ್ರಲ್ ಕಾಮತ್ ಹೊಟೇಲ್ ಎದುರುಗಡೆಯಿಂದ ಜಗತ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊನೆಗೊಂಡಿತು. 
ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯಿಂದ ವಿಕಲಚೇತನರನ್ನೊಳಗೊಂಡು ಏರ್ಪಡಿಸಿದ್ದ ಜಾಥಾ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊನೆಗೊಂಡಿತು. ಈ ಜಾಥಾದಲ್ಲಿ ಜಿಲ್ಲೆಯ ವಿಕಲಚೇತನರು ಪಾಲ್ಗೊಂಡು ನೈತಿಕ ಮತದಾನ ಮಾಡುವಂತೆ ಘೋಷಣೆಗಳನ್ನು ಕೂಗಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಕಲಚೇತನರು ಸುಲಭವಾಗಿ ಮತದಾನ ಮಾಡಲು ಅನುಕೂಲವಾಗುವ ಹಾಗೆಯೇ ಎಲ್ಲ ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಕಲಚೇತನರನ್ನು ಮತಗಟ್ಟೆಗಳಿಗೆ ಕರೆದುಕೊಂಡು ಬರುವ ವ್ಯವಸ್ಥೆ ಸಹ ಮಾಡಲಾಗುತ್ತಿದೆ.
ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿರುವ ಇಂದಿನ ಎರಡು ಇಲಾಖೆಗಳ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾರ್ಗದುದ್ದಕ್ಕೂ ನೈತಿಕ ಮತದಾನದ ಕುರಿತು ಹಾಗೂ ಕಡ್ಡಾಯ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. 
ವಿಧಾನಸಭಾ ಚುನಾವಣೆ: 9 ಅಭ್ಯರ್ಥಿಗಳಿಂದ 11 ನಾಮಪತ್ರ ಸಲ್ಲಿಕೆ
ಕಲಬುರಗಿ,ಏ.21.(ಕ.ವಾ.)-ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 2018ರ ಮೇ 12ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಲ್ಕನೇ ದಿನವಾದ ಇಂದು ಶನಿವಾರ 9 ಅಭ್ಯರ್ಥಿಗಳಿಂದ 11 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್. ವೆಂಕಟೇಶಕುಮಾರ ಅವರು ತಿಳಿಸಿದ್ದಾರೆ.
 ನಾಮಪತ್ರ ಸಲ್ಲಿಕೆಯ ವಿವರ: 34-ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಗೋವಿಂದ ತಂದೆ ವಿಶ್ವನಾಥ ಭಟ್ಟ ಅವರು ಜಾತ್ಯಾತೀತ ಜನತಾ ದಳ ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದಾರೆ.
35-ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ರಾಮು ತಂದೆ ಚತ್ರು ಅವರು ಪಕ್ಷೇತರದಿಂದ 01 ನಾಮಪತ್ರ, ಕಾಶಿನಾಥ ತಂದೆ ಸಾಯಬಣ್ಣ ಪಾಪಿ ಅವರು ಪಕ್ಷೇತರದಿಂದ 01 ನಾಮಪತ್ರ, ನಾಗೇಶ ತಂದೆ ವೀರಣ್ಣ ಪಕ್ಷೇತರದಿಂದ 01 ನಾಮಪತ್ರ, ಮಕಬೂಲ ಪಟೇಲ್ ತಂದೆ ಮಹ್ಮದ್ ಅಲಿ ಪಕ್ಷೇತರದಿಂದ 01 ನಾಮಪತ್ರ, ಸಿದ್ದಪ್ಪ ತಂದೆ ಚಂದ್ರಾಮಪ್ಪ ಅವರು ಪಕ್ಷೇತರದಿಂದ 01 ನಾಮಪತ್ರ ಸಲ್ಲಿಸಿದ್ದಾರೆ.
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ ದಲ್ಲಿ ರಮೇಶ ತಂದೆ ಭೀಮಸಿಂಗ್ ಚವ್ಹಾಣ ಅವರು ಪಕ್ಷೇತರದಿಂದ 01 ನಾಮಪತ್ರ ಸಲ್ಲಿಸಿದ್ದಾರೆ.
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಲ್ಹಾದ ವಟಮಾರಿ ತಂದೆ ಮುರಳಿ ಮನೋಹರರಾವ ಅವರು ಪಕ್ಷೇತರದಿಂದ 01 ನಾಮಪತ್ರ ಸಲ್ಲಿಸಿದ್ದಾರೆ.
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ  ಎಸ್.ಎಂ. ಜಲಾಲುದ್ದೀನ್ ತಂದೆ ಎಸ್.ಎಂ.ಎಂ. ಶರೀಫಜಾದಾ ಅವರು ಪಕ್ಷೇತರ 01 ನಾಮಪತ್ರ, ಚಂದ್ರಕಾಂತ ತಂದೆ ಬಸವರಾಜ ಪಾಟೀಲ ಅವರು ಭಾರತೀಯ ಜನತಾ ಪಕ್ಷದಿಂದ 01 ನಾಮಪತ್ರ ಹಾಗೂ ನಾಸೀರ ಹುಸೇನ್ ತಂದೆ ಸಾದತ ಹುಸೇನ ಅವರು ಜನತಾದಳ (ಸೆಕ್ಯೂಲರ್) ಪಕ್ಷದಿಂದ 01 ನಾಮಪತ್ರ ಸಲ್ಲಿಸಿದ್ದಾರೆ.
  ಇನ್ನುಳಿದ 40-ಚಿತ್ತಾಪುರ, 41-ಸೇಡಂ, 42-ಚಿಂಚೋಳಿ ಹಾಗೂ 46-ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ. 
ಈವರೆಗೆ ಒಟ್ಟು 23 ಅಭ್ಯರ್ಥಿಗಳು 34 ನಾಮಪತ್ರಗಳು ಸಲ್ಲಿಸಿದಂತಾಗಿದೆ. (34-ಅಫಜಲಪುರ ವಿಧಾನಸಭಾ ಕ್ಷೇತ್ರದ ಗೋವಿಂದ ತಂದೆ ವಿಶ್ವನಾಥ ಭಟ್ಟ ಅವರು ಜಾತ್ಯಾತೀತ ಜನತಾದಳ ಪಕ್ಷದಿಂದ ಹಾಗೂ 45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದಿಂದ ಚಂದ್ರಕಾಂತ ತಂದೆ ಬಸವರಾಜ ಪಾಟೀಲ ಅವರು ಭಾರತೀಯ ಜನತಾ ಪಕ್ಷದಿಂದ ಇಂದು ಪುನ: ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ). ನಾಮಪತ್ರ ಸಲ್ಲಿಕೆಗೆ ಏಪ್ರಿಲ್  24 ರಂದು ಕೊನೆಯ ದಿನವಾಗಿದೆ.
ಏಪ್ರಿಲ್ 22ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಏ.21(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11 ಕೆವಿ.  ಸಿನಿಮಾ ಫೀಡರ್ ಮತ್ತು 11ಕೆ.ವಿ. ಗಾಜಿಪುರ ಫೀಡರ ಮೇಲೆ 33ಕೆ.ವಿ. ಐ.ಬಿಮ್ ಕಂಬಗಳ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ಏಪ್ರಿಲ್ 22ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಗೂ 11ಕೆ.ವಿ. ವಿಠ್ಠಲನಗರ ಮತ್ತು 11ಕೆ.ವಿ. ಐವಾನ್ ಶಾಹಿ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸದರಿ ಕೇಂದ್ರದ ಮೇಲೆ ಬರುವ ಫೀಡರ್ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
       11 ಕೆ.ವಿ ಸಿನಿಮಾ ಫೀಡರ್: ಸುಪರ ಮಾರ್ಕೇಟ್, ಶಹಾ ಬಜಾರ್ ಜಿ.ಡಿ.ಎ., ಕಟಗರಪುರ, ಪ್ರಕಾಶ ಟಾಕೀಸ್, ಲೋಹಾರಗಲ್ಲಿ, ಐಯ್ಯರವಾಡಿ, ಸಿಟಿ ಬಸ್ ನಿಲ್ದಾಣ, ಬಂಬೂ ಬeóÁರ್, ಮಹಾಲಕ್ಷ್ಮೀ ಲೇಔಟ್, ಕಿರಾಣಾ ಬಜಾರ್, ಮಾರವಾಡಿ ಗಲ್ಲಿ, ಚೌಕ್ ಪೊಲೀಸ್ ಸ್ಟೇಷನ್, ಫೋರ್ಟ್ ರಸ್ತೆ, ಬಾಂಡಾ ಬಜಾರ್, ಸರಸ್ವತಿ ಗೋದಾಮು, ಪುಟಾಣಿ ಗಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
     11 ಕೆ.ವಿ. ಗಾಜಿಪುರ ಫೀಡರ್: ಜಿ.ಡಿ.ಎ., ಗೋಕುಲ ನಗರ, ಜಿಲ್ಲಾಧಿಕಾರಿಗಳ ಕಚೇರಿ, ಮಾಲಿ ಪಾಟೀಲ್ ಟಿ.ಸಿ., ಬಸವಣ್ಣ ಟೆಂಪಲ್, ಮಿಲ್‍ನ ಚೌಕ್, ಶಂಕರಲಿಂಗ ಟೆಂಪಲ್, ಮಟನ ಮಾರ್ಕೇಟ್, ಕಾವೇರಿ ನಗರ, ತಹಶೀಲ್ದಾರ ಕಚೇರಿ, ಚನ್ನಮಲ್ಲೇಶ್ವರ ನಗರ, ಮಜಗಿ ಲೇಔಟ್, ಸುಪರ ಮಾರ್ಕೇಟ್ ರೇಮಾಂಡ್ ಟಿ.ಸಿ. ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ವಿಠ್ಠಲ ನಗರ ಫೀಡರ್: ಡಿ.ಡಿ.ಪಿ.ಐ. ಕಚೇರಿ, ವಿಜಯ ವಿದ್ಯಾಲಯ ಕಂಪೌಂಡ್, ಐವಾನ್ ಶಾಹಿ ಅತಿಥಿ ಗೃಹ, ಗುಲ್ಲಾಬೌಡಿ, ಲಾಹೋಟಿ ಪೇಟ್ರೋಲ್ ಪಂಪ್, ಕೆ.ಬಿ.ಎನ್. ಆಸ್ಪತ್ರೆ, ಖೂಬಾ ಪ್ಲಾಟ್, ವಿಠ್ಠಲನಗರ, ಆನಂದ ನಗರ, ವಿವೇಕಾನಂದ ನಗರ, ರಾಮನಗರ, ಇಂದಿರಾ ನಗರ, ವಿದ್ಯಾನಗರ, ಬಲಘಟ ಕಂಪೌಂಡ್, ಮೆಹತಾ ಕಂಪೌಂಡ್, ಮಿನಿ ವಿಧಾನಸೌಧ, ಜಿಲಾ ್ಲ ನ್ಯಾಯಾಲಯ ಮತ್ತು ಜೆಸ್ಕಾಂ ಕಚೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಐವಾನ್-ಶಾಹಿ ಫೀಡರ್: ಹಳೆಯ ಗೇಸ್ಟ್ ಹೌಸ್, ನೀಚೆಗಲ್ಲಿ, ಕಮರ್ಶಿಯಲ್ ಟ್ಯಾಕ್ಸ್ ಕಚೇರಿ, ವಿಜಯ ವಿದ್ಯಾಲಯ, ಲಾಹೋಟಿ ಪೇಟ್ರೋಲ್ ಪಂಪ್, ಹೆಚ್.ಕೆ.ಇ. ಕಚೇರಿ, ಏಶಿಯನ್ ಪ್ಲಾಜಾ, ಪರಿವಾರ ಹೋಟೆಲ್, ತಿಮ್ಮಾಪುರಿ ಚೌಕ್, ವಿಜು ವುಮೆನ್ಸ್ ಕಾಲೇಜ್, ಪಿಡಿಎ ಇಂಜಿನಿಯರಿಂಗ್ ಕಾಲೇಜ್ ರಸ್ತೆ, ಬಿಎಸ್‍ಎನ್‍ಎಲ್ ಎಕ್ಸಚೇಂಜ್, ಪಿಡಬ್ಲೂಡಿ ಕ್ವಾರ್ಟರ್ಸ್, ಮಿನಿ ವಿಧಾನಸೌಧ ಎದುರು ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.




ಹೀಗಾಗಿ ಲೇಖನಗಳು News and photo date: 21-04-2018

ಎಲ್ಲಾ ಲೇಖನಗಳು ಆಗಿದೆ News and photo date: 21-04-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo date: 21-04-2018 ಲಿಂಕ್ ವಿಳಾಸ https://dekalungi.blogspot.com/2018/04/news-and-photo-date-21-04-2018.html

Subscribe to receive free email updates:

0 Response to "News and photo date: 21-04-2018"

ಕಾಮೆಂಟ್‌‌ ಪೋಸ್ಟ್‌ ಮಾಡಿ