ಶೀರ್ಷಿಕೆ : news and photo date: 16--04-2018
ಲಿಂಕ್ : news and photo date: 16--04-2018
news and photo date: 16--04-2018
ರ್ಯಾಲಿ, ಸಮಾವೇಶ ಅನುಮತಿಗೆ “ಸುವಿಧಾ” ಮೂಲಕ ಅರ್ಜಿ ಸಲ್ಲಿಸಿ
**************************************************************
ಕಲಬುರಗಿ,ಏ.16.(ಕ.ವಾ.)-ಭಾರತ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕಾಗಿ ವಾಹನ ಬಳಕೆ, ರ್ಯಾಲಿ, ಬಹಿರಂಗ ಸಭೆ ಸೇರಿ ಇನ್ನೀತರ ಪ್ರಚಾರ ಸಾಮಗ್ರಿ ಬಳಸಲು ಅನುಮತಿ ಕಡ್ಡಾಯವಾಗಿರುವುದರಿಂದ ಆನ್‍ಲೈನ್ ಮೂಲಕ ಅನುಮತಿ ಪಡೆಯಲು “ಸುವಿಧಾ” ಎಂಬ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸದರಿ ತಂತ್ರಾಂಶದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳಿಗೆ ಇ.ವಿ.ಎಂ. ಮತ್ತು ವಿವಿಪ್ಯಾಟ್ ಹಾಗೂ ಸುವಿಧಾ ಮತ್ತು ಸಮಾಧಾನ್ ಆನ್‍ಲೈನ್ ಸೇವೆಗಳ ಅರ್ಜಿ ಸಲ್ಲಿಕೆ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯ ಚುನಾವಣಾ ಮುಖ್ಯ ಚುನಾವಣಾಧಿಕಾರಿಗಳ ಹಾಗೂ ಕಲಬುರಗಿ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ಲಭ್ಯವಿರುವ ಸುವಿಧಾ ಲಿಂಕ್ ಮೂಲಕ ಆನ್‍ಲೈನ್ ಅರ್ಜಿ ಸಲ್ಲಿಸಿದ ನಂತರ 48 ಗಂಟೆಯೊಳಗಾಗಿ ಅನುಮತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ನಂತರ ಮೊಬೈಲ್‍ಗೆ ಸ್ವೀಕೃತಿ ಸಂಖ್ಯೆ ಬರಲಿದೆ. ಸ್ವೀಕೃತಿ ಸಂಖ್ಯೆಯಿಂದ ಅರ್ಜಿ ಸ್ಥಿತಿಗತಿಯನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಬಹುದಲ್ಲದೆ ಅನುಮತಿ ಪತ್ರವನ್ನು ಸಹ ಆನ್‍ಲೈನ್ ಮೂಲಕವೆ ಪಡೆದುಕೊಳ್ಳಬಹುದು ಎಂದ ಅವರು ಒಂದು ವೇಳೆ ರಾಜಕೀಯ ಪಕ್ಷಗಳು ನೇರವಾಗಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಿದಲ್ಲಿ ಅದನ್ನು ಸಹ ಸ್ವೀಕರಿಸಲಾಗುತ್ತದೆ ಎಂದು ಸ್ಪಷ್ಠಪಡಿಸಿದರು.
ಇದೇ ರೀತಿ ಸಾರ್ವಜನಿಕರು, ರಾಜಕೀಯ ಪಕ್ಷಗಳು ಚುನಾವಣೆಗೆ ಸಂಬಂಧಿಸಿದಂತೆ ದೂರು, ಮಾಹಿತಿ ಮತ್ತು ಸಲಹೆ ನೀಡಲು “ಸಮಾಧಾನ” ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಇಲ್ಲಿ ಸಾರ್ವಜನಿಕರು ದೂರನ್ನು ಆನ್‍ಲೈನ್ ಮೂಲಕ ಸಲ್ಲಿಸಿ ಅಗತ್ಯ ದಾಖಲಾತಿಗಳನ್ನು ಅಪಲೋಡ್ ಮಾಡಬೇಕಾಗುತ್ತದೆ. ಅರ್ಜಿ ಸ್ವೀಕರಿಸಿದ 24 ಗಂಟೆಯೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಪ್ರಸಕ್ತ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಮುನ್ನ ದಿನ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಚುನಾವಣೆಯ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಖಾತೆ ಹೊಂದುವುದು ಕಡ್ಡಾಯವಾಗಿದೆ. ಈ ಬಗ್ಗೆ ಬ್ಯಾಂಕರ್ಸ್‍ಗಳ ಸಭೆ ನಡೆಸಲಾಗಿದ್ದು, ಪ್ರತಿ ಬ್ಯಾಂಕಿನಲ್ಲಿ ಇದಕ್ಕಾಗಿ ವಿಶೇಷ ಕೌಂಟರ್ ತೆರೆಯಲು ನಿರ್ದೇಶನ ನೀಡಲಾಗಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ತೊಂದರೆಯಾಗದು ಎಂದರು.
ಊಟ ಕೊಡುವಂತಿಲ್ಲ, ಮದುವೆಗೆ ಅನುಮತಿ ಬೇಕಿಲ್ಲ: ಐ.ಪಿ.ಸಿ. ಸೆಕ್ಷನ್ 71(e) ರನ್ವಯ ರಾಜಕೀಯ ಪಕ್ಷಗಳು ನಡೆಸುವ ಬಹಿರಂಗ ಸಭೆ/ ಸಮಾವೇಶದಲ್ಲಿ ಮತದಾರರಿಗೆ ಊಟ, ತಿಂಡಿ ನೀಡುವಂತಿಲ್ಲ. ಆದರೆ ಚಹಾ, ನೀರು ನೀಡಬಹುದಾಗಿದ್ದು, ಇದರ ವೆಚ್ಚವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು. ಇನ್ನು ಮದುವೆ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲವಾದರು ಮದುವೆ ಮನೆಯವರು ನೊಂದಣಾಧಿಕಾರಿಗೆ ಮಾಹಿತಿ ನೀಡಬೇಕು. ಅಲ್ಲಿ ರಾಜಕೀಯ ನಾಯಕರು ಕ್ಯಾನ್ವಸ್ ಮಾಡಬಾರದು. ಈ ಬಗ್ಗೆ ವೀಡಿಯೋ ವೀವಿಂಗ್ ತಂಡ ನಿಗಾವಹಿಸಲಿದೆ ಎಂದರು.
108 ಪ್ರಕರಣ ದಾಖಲು: ನೀತಿ ಸಂಹಿತೆ ಜಾರಿ ದಿನಾಂಕದಿಂದ ಇಂದಿನ ವರೆಗೆ ಅಕ್ರಮ ಮದ್ಯ ಸಾಗಣೆಯಲ್ಲಿ ಭಾಗಿಯಾದವರ ಮೇಲೆ 108 ಪ್ರಕರಣಗಳ ದಾಖಲಾಗಿದ್ದು, 5 ಲಕ್ಷ ರೂ. ಮೊತ್ತದ 2 ಲಕ್ಷ ಲೀಟರ್ ಅಕ್ರಮ ಮದ್ಯ ಹಾಗೂ 28 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ಇದೇ ಸಂದರ್ಭದಲ್ಲಿ ತಿಳಿಸಿದರು.
ತರಬೇತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಇ.ವಿ.ಎಂ ಮತ್ತು ವಿವಿ ಪ್ಯಾಟ್ ಕುರಿತು ಡಾ.ಶಶಿಶೇಖರ ರೆಡ್ಡಿ ಹಾಗೂ ಆನ್‍ಲೈನ್ ಅರ್ಜಿ
ಸಲ್ಲಿಕೆ ಕುರಿತು ಮಹಾಂತೇಶ ಕುಮಾರ ತರಬೇತಿ ನೀಡಿದರು.

ಚುನಾವಣೆ ಹಿನ್ನೆಲೆ: ಜಿಲ್ಲೆಗೆ ಸಿ.ಐ.ಎಸ್.ಎಫ್./ ಸಿ.ಆರ್.ಪಿ.ಎಫ್. ತುಕಡಿಗಳ ಆಗಮನ
**************************************************************************
ಕಲಬುರಗಿ,ಏ.16.(ಕ.ವಾ.)-ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಂತಿಯುತ ಮತದಾನ ನಡೆಯುವಂತೆ ಕಲಬುರಗಿ ಜಿಲ್ಲೆಗೆ 4 ಸಿ.ಐ.ಎಸ್.ಎಫ್ ಮತ್ತು 1 ಸಿ.ಆರ್.ಪಿ.ಎಫ್ ಪಡೆಗಳು ಆಗಮಿಸಿದ್ದು, ಜಿಲ್ಲೆಯ ವಿವಿಧೆಡೆ ರೂಟ್ ಪರೇಡ್ ನಡೆಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳಿಗೆ ಇ.ವಿ.ಎಂ. ಮತ್ತು ವಿವಿಪ್ಯಾಟ್ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಕೆ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕಳೆದ ಬಾರಿ ಧಾರ್ಮಿಕ ವೈಷಮ್ಯ ಮತ್ತು ವಿವಿಧ ಕಾರಣಗಳಿಂದ ಗಲಭೆಗಳಿಗೆ ಸಾಕ್ಷಿಯಾದಂತಹ ಹಾಗೂ ಮತದಾರರಿಗೆ ಮತದಾನ ಮಾಡಲು ತಡೆಯೊಡ್ಡಿರುವಂತಹ 70 ಮತಗಟ್ಟೆಗಳನ್ನು ದುರ್ಬಲ (ವಲ್‍ನರೇಬಲ್) ಮತಗಟ್ಟೆ ಹಾಗೂ ಶೇ.90ರಷ್ಟು ಮತದಾನ ಹಾಗೂ ಒಂದೇ ಅಭ್ಯರ್ಥಿಗೆ ಶೇ.75 ಮತಗಳು ಚಲಾವಣೆಯಾದಂತಹ ಕ್ಲಿಷ್ಠಕರ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇಂತಹ ಮತಗಟ್ಟೆಗಳಿಗೆ ಹಾಗೂ ಚೆಕ್ ಪೋಸ್ಟ್‍ಗಳಿಗೆ ಉಳಿದ ಮತಗಟೆಗಳಿಗಿಂತ ಹೆಚ್ಚಿನ ಪ್ಯಾರಾ ಮಿಲಿಟರಿ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಮಾದರಿ ನೀತಿ ಸಂಹಿತೆ ಕಟ್ಟಿನಿಟ್ಟಾಗಿ ಜಾರಿಗೊಳಿಸಲು 60 ಫ್ಲೈಯಿಂಗ್ ಸ್ಕ್ವಾಡ್ ಹಾಗೂ 72 ಎಸ್.ಎಸ್.ಟಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ತಂಡದ ಮುಖ್ಯಸ್ಥರಿಗೆ ಕಾರ್ಯನಿರ್ವಾಹಕ ದಂಡಾಧಿಕಾರದ ಅಧಿಕಾರ ನೀಡಲಾಗಿದ್ದು, ಸ್ಥಳದಲ್ಲಿಯೆ ಇವರು ವಾರೆಂಟ್ ಸಹ ಹೊರಡಿಸಬಹುದಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ 2158 ಮತಗಟ್ಟೆ ಸ್ಥಾಪಿಸಲಾಗಿತ್ತು, ಈ ಬಾರಿ ಇದರ ಸಂಖ್ಯೆ 2267ಗೆ ಹೆಚ್ಚಳವಾಗಿದೆ. ಇದಲ್ಲದೆ ನಗರ ಪ್ರದೇಶದಲ್ಲಿ ಪ್ರತಿ ಮತಗಟ್ಟೆ 1400 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1200 ಗರಿಷ್ಠ ಮತದಾರರನ್ನು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಈ ಸಂಖ್ಯೆ ಮೀರಿದಲ್ಲಿ 117 ಹೆಚ್ಚುವರಿ ಮತಗಟ್ಟೆ (ಆಕ್ಸಿಲರಿ) ತೆರೆಯಲಾಗಿದೆ ಎಂದು ವೆಂಕಟೇಶಕುಮಾರ ಹೇಳಿದರು.
ತರಬೇತಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅಶೊಕ ಗುಡಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಬಸವ ಜಯಂತಿ: ಮದ್ಯ ಮಾರಾಟಕ್ಕೆ ನಿಷೇಧ
****************************************
ಕಲಬುರಗಿ,ಏ.16(ಕ.ವಾ.)-ಬಸವ ಜಯಂತಿಯನ್ನು 2018ರ ಏಪ್ರಿಲ್ 18ರಂದು ಆಚರಿಸುತ್ತಿರುವ ಪ್ರಯುಕ್ತ ಜಿಲ್ಲಾ ದಂಡಾಧಿಕಾರಿ ಆರ್. ವೆಂಕಟೇಶಕುಮಾರ ಅವರು ಕಲಬುರಗಿ ಜಿಲ್ಲೆಯಾದ್ಯಂತ ಏಪ್ರಿಲ್ 17ರ ಮಧ್ಯರಾತ್ರಿಯಿಂದ ಏಪ್ರಿಲ್ 19ರ ಬೆಳಗಿನ 6 ಗಂಟೆಯವರೆಗೆ ಎಲ್ಲ ತರಹದ ಮದ್ಯ, ಸರಾಯಿ, ಸೇಂದಿ, ಸ್ವದೇಶಿ ಹಾಗೂ ವಿದೇಶಿ ಮದ್ಯ ಹಾಗೂ ಎಲ್ಲ ತರಹದ ಮಾದಕ ವಸ್ತುಗಳ ಮಾರಾಟವನ್ನು ನಿಷೇಧಿಸಿದ್ದಾರೆ ಹಾಗೂ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ಜಯಂತಿ ಆಚರಣೆ ಸಂದರ್ಭದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರ ಅನ್ವಯ ಈ ಆದೇಶ ಹೊರಡಿಸಿದ್ದಾರೆ.

ಪ್ರಥಮ ಪಿಯುಸಿ ವಸತಿ ಕಾಲೇಜಿನ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
********************************************************
ಕಲಬುರಗಿ,ಏ.16(ಕ.ವಾ.)-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಲಬುರಗಿ ನಗರದ ಮದೀನಾ ಕಾಲೋನಿಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ 2018-19ನೇ ಸಾಲಿಗೆ ಪ್ರಥಮ ಪಿಯುಸಿ ವಿಜ್ಞಾನ ಕೋರ್ಸಿನ ಒಟ್ಟು 80 ಸೀಟುಗಳ ಪ್ರವೇಶಕ್ಕಾಗಿ ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಮೆರಿಟ್ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಸಿಎಂಬಿ (Pಅಒಃ) 40 ಸೀಟುಗಳು ಹಾಗೂ ಪಿಸಿಎಂಸಿಎಸ್ (PಅಒಅS) 40 ಸೇರಿದಂತೆ ಒಟ್ಟು 80 ಸೀಟುಗಳು ಲಭ್ಯವಿದ್ದು, ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಸಮುದಾಯದ ಬಾಲಕಿಯರಿಗೆ ಶೇ. 75 ಹಾಗೂ ಇತರೆ ಸಮುದಾಯದ ಬಾಲಕಿಯರಿಗೆ ಶೇ. 25 ಸೀಟುಗಳನ್ನು ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನವಾಗಿದೆ.
ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ ವಸತಿ ಶಾಲೆಯ ಪ್ರಚಾರ್ಯರನ್ನು ಮೊಬೈಲ್ ಸಂಖ್ಯೆ 7760260131, 7338285111 ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಾರ್ಯಾಲಯ ಹಾಗೂ ದೂರವಾಣಿ ಸಂಖ್ಯೆ 08472-247260ನ್ನು ಸಂಪರ್ಕಿಸಬೇಕೆಂದು ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ತಾಂತ್ರಿಕ ಶಾಲೆ: ಎಂಟನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
****************************************************************
ಕಲಬುರಗಿ,ಏ.16(ಕ.ವಾ.)-ಕಲಬುರಗಿ ನಗರದ ಐವಾನ್ ಶಾಹಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ತಾಂತ್ರಿಕ ಶಾಲೆಯಲ್ಲಿ 8ನೇ ತರಗತಿಗೆ ಪ್ರವೇಶ ಪಡೆಯಲು 7ನೇ ತರಗತಿಯಲ್ಲಿ ಪಾಸಾದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರ್ಕಾರಿ ಹಿರಿಯ ತಾಂತ್ರಿಕ ಶಾಲೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಯಾವುದೇ ಮಾನ್ಯತೆ ಪಡೆದ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಪಾಸಾಗಿರಬೇಕು. ಕನ್ನಡ ಅಥವಾ ಇಂಗ್ಲೀಷ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿಗಳನ್ನು ಮೇ 19ರವರೆಗೆ ವಿತರಿಸಲಾಗುತ್ತಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಮೇ 19ರ ಸಂಜೆ 5.30 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ, ಐವಾನ್ ಶಾಹಿ ರಸ್ತೆ, ಕಲಬುರಗಿ ಕಚೇರಿ (ಮೊಬೈಲ್ ಸಂಖ್ಯೆ 9482398717) ಹಾಗೂ ಬೋಧಕರಾದ ಬಾಹುರಾವ ಪಾಟೀಲ ಮೊಬೈಲ್ ಸಂಖ್ಯೆ 9449985805ಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಹೈಕೋರ್ಟ ಪೀಠದಲ್ಲಿ ಹೊಟೇಲ್ ನಡೆಸಲು ಟೆಂಡರ್ ಆಹ್ವಾನ
*****************************************************
ಕಲಬುರಗಿ,ಏ.16(ಕ.ವಾ.)-ಕಲಬುರಗಿ ಹೈಕೋರ್ಟ್ ಪೀಠದಲ್ಲಿರುವ ಕ್ಯಾಂಟೀನ ನಡೆಸಲು ಖ್ಯಾತ ಹೊಟೇಲ್ ಅಥವಾ ಕ್ಯಾಟರೆರ್ಸ್‍ರರಿಂದ ಟೆಂಡರ್ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಹೈಕೋರ್ಟ್ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಕೆ.ಬಿ. ಅಸೂದೆ ಅವರು ತಿಳಿಸಿದ್ದಾರೆ.
ಟೆಂಡರ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ ಪೀಠದ ಕಲಬುರಗಿ ಕಚೇರಿಯಿಂದ (ಕಚೇರಿ ವೇಳೆಯಲ್ಲಿ) ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ 100 ರೂ. ಶುಲ್ಕ ಪಾವತಿಸಿ ಪಡೆಯಬೇಕು. ಭರ್ತಿ ಮಾಡಿ ದ್ವಿಲಕೋಟೆಯೊಂದಿಗೆ 10,000ರೂ.ಗಳ ಇ.ಎಂ.ಡಿ. ಮೊತ್ತದ ಡಿಮ್ಯಾಂಡ್ ಡ್ರಾಫ್ಟ್‍ನ್ನು “ದಿ ಅಡಿಷನಲ್ ರಿಜಿಸ್ಟ್ರಾರ್ ಜನರಲ್, ಹೈಕೋರ್ಟ್ ಆಫ್ ಕರ್ನಾಟಕ, ಕಲಬುರಗಿ ಬೇಂಚ್” ಇವರ ಹೆಸರಿನಲ್ಲಿ ಪಡೆಯಬೇಕು.
ಲಕೋಟೆ ಒಂದರಲ್ಲಿ 10,000 ರೂ.ಗಳ ಡಿಮ್ಯಾಂಡ್ ಡ್ರಾಫ್ಟ್ ಮತ್ತು ಲಕೋಟೆ ಎರಡರಲ್ಲಿ ಟೆಂಡರ್ ಸಂಬಂಧಪಟ್ಟ ಅರ್ಜಿ, ಲೈಸೆನ್ಸ್ ನೋಂದಣಿ ಪತ್ರ, ಕ್ಯಾಂಟಿನ ಚಲಾಯಿಸಲು ಆಹಾರ ಪದಾರ್ಥಗಳ ದರಪಟ್ಟಿ ಮತ್ತು ಹಿಂದೆ ಕ್ಯಾಂಟಿನ್ ನಡೆಸಿದ ಅನುಭವ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಭದ್ರಪಡಿಸಿದ ಲಕೋಟೆಯೊಂದಿಗೆ 2018ರ ಮೇ 14ರ ಮಧ್ಯಾಹ್ನ 2 ಗಂಟೆಯೊಗಾಗಿ ಸಲ್ಲಿಸಬೇಕು.
ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು 2018ರ ಮೇ 16ರಂದು ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುವುದು ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಹೈಕೋರ್ಟ ಪೀಠದ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಿದೆ.

ಹೀಗಾಗಿ ಲೇಖನಗಳು news and photo date: 16--04-2018
ಎಲ್ಲಾ ಲೇಖನಗಳು ಆಗಿದೆ news and photo date: 16--04-2018 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ news and photo date: 16--04-2018 ಲಿಂಕ್ ವಿಳಾಸ https://dekalungi.blogspot.com/2018/04/news-and-photo-date-16-04-2018.html

0 Response to "news and photo date: 16--04-2018"
ಕಾಮೆಂಟ್ ಪೋಸ್ಟ್ ಮಾಡಿ