ಶೀರ್ಷಿಕೆ : ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು
ಲಿಂಕ್ : ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು
ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು
ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯಲ್ಲಿ ಬಾಳೆ ಬೆಳೆಯಲ್ಲಿ ಸೊರಗು ರೋಗ ಕಂಡುಬಂದಿದ್ದು, ಇದರ ಹತೋಟಿಗೆ ತೋಟಗಾರಿಕೆ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ.

ಇತ್ತೀಚೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೊಪ್ಪಳ ತಾಲೂಕಿನ ವಿವಿಧ ಕಡೆ ಬಾಳೆ ತೋಟಗಳಿಗೆ ಭೇಟಿ ನೀಡಿದಾಗ ಬಿಸಿಲಿನ ತಾಪದಿಂದ ದುಂಡಾಣು ರೋಗ ಕಂಡು ಬಂದಿದ್ದು, ವಿಷಯ ತಜ್ಞರು ರೈತರಿಗೆ ಸಲಹೆ ನೀಡಿರುತ್ತಾರೆ. ಇದೊಂದು ದುಂಡಾಣು ವಿನಿಂದ ಬರುವ ಸೊರಗು ರೋಗ ವಾಗಿದ್ದು, ಹತೋಟಿಗಾಗಿ, ಸಿಓಸಿ 3 ಗ್ರಾಮ ಜೊತೆಗೆ ಸ್ಟ್ರೆಪ್ಟೊ ಸೈಕ್ಲಿನ್ 0.50 ಗ್ರಾಮ 1 ಲೀ. ನೀರಿನಲ್ಲಿ ಬೆರೆಸಿ ಬಡ್ಡಿ ಗೆ ಸುರಿಯಬೇಕು ಅಲ್ಲದೆ ಸುಳಿಯಲ್ಲಿ ಯೂ ಹಾಕಬೇಕು. ಇದಾದ ನಂತರ 3 ದಿನಗಳ ಕಾಲ ನೀರು ಹರಿಸಬಾರದು. 15 ದಿನಗಳ ನಂತರ ಇದೇ ಕ್ರಿಯೆಯನ್ನು ಪುನರಾವರ್ತನೆ ಮಾಡಬೇಕು. ನಂತರ ಬ್ಲೀಚಿಂಗ್ ಪುಡಿಯನ್ನು 30 ಗ್ರಾಮನಷ್ಟು ಪ್ರತಿ ಗಿಡಕ್ಕೆ ನೀಡಿ ನೀರು ಹರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಮತ್ತು ವಿಷಯ ತಜ್ಞರನ್ನು ಮೋ. ಸಂ. 9482672039 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೀಗಾಗಿ ಲೇಖನಗಳು ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು
ಎಲ್ಲಾ ಲೇಖನಗಳು ಆಗಿದೆ ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು ಲಿಂಕ್ ವಿಳಾಸ https://dekalungi.blogspot.com/2018/04/blog-post_881.html

0 Response to "ಬಾಳೆ ಬೆಳೆಯಲ್ಲಿ ಸೊರಗು ರೋಗ : ರೈತರಿಗೆ ಸಲಹೆಗಳು"
ಕಾಮೆಂಟ್ ಪೋಸ್ಟ್ ಮಾಡಿ