ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ

ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ
ಲಿಂಕ್ : ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ

ಓದಿ


ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ


ಕೊಪ್ಪಳ ಏ. 29 (ಕರ್ನಾಟಕ ವಾರ್ತೆ): ಕೊಪ್ಪಳ ವಿಧಾನಸಭಾ ಚುನಾವಣೆ ಸಂಬಂಧ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮೂರು ಹಂತಗಳಲ್ಲಿ ವೆಚ್ಚದ ವಿವರಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ದಿನಾಂಕ ಹಾಗೂ ಸಮಯ ನಿಗದಿಪಡಿಸಲಾಗಿದ್ದು, ಕಡ್ಡಾಯವಾಗಿ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗುವಂತೆ ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.
  ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ಸೆಕ್ಷನ್ 77 ರ ಪ್ರಕಾರ ನಿಗದಿತ ನಮೂನೆಗಳಲ್ಲಿ ಖರ್ಚಿನ ವಿವರಣೆಯನ್ನು ನಿರ್ವಹಿಸುವ ಮೂಲಕ, ಖರ್ಚಿನ ವಿವರಣೆಯನ್ನು ಸಂಬಂಧಪಟ್ಟ ಅಧಿಕೃತ ದಾಖಲಾತಿಗಳೊಂದಿಗೆ ಚುನಾವಣಾ ವೆಚ್ಚ ನಿರೀಕ್ಷಕರ ಪರಿಶೀಲನೆಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.   ಸಂಬಂಧಪಟ್ಟ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಯಿಂದ ಅಧಿಕೃತಗೊಂಡ ಏಜೆಂಟರ ಮೂಲಕ ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಬೇಕು.  ಇದಕ್ಕಾಗಿ ಪ್ರಥಮ ಸಮೀಕ್ಷೆ ಏಪ್ರಿಲ್ 30, ದ್ವಿತೀಯ ಸಮೀಕ್ಷೆ ಮೇ. 04 ಹಾಗೂ ತೃತೀಯ ಸಮೀಕ್ಷೆ ಮೇ. 08 ರಂದು ಹೀಗೆ ಮೂರು ಹಂತಗಳಲ್ಲಿ ವೆಚ್ಚ ವಿವರಣೆ ಸಮೀಕ್ಷೆಗೆ ಅಭ್ಯರ್ಥಿವಾರು ಸಮಯ ನಿಗದಿಪಡಿಸಲಾಗಿದ್ದು,  ನಿಗದಿಪಡಿಸಿದ ದಿನಾಂಕ ಹಾಗೂ ಸಮಯದಲ್ಲಿ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಬೇಕು.  
  ಏ. 30, ಮೇ-04 ಹಾಗೂ ಮೇ. 08.  ಹೀಗೆ ಮೂರು ಹಂತಗಳಲ್ಲಿ ವೆಚ್ಚ ವಿವರಣೆ ಸಮೀಕ್ಷೆಗಾಗಿ ಅಭ್ಯರ್ಥಿವಾರು  ನಿಗದಿಪಡಿಸಿದ ಸಮಯದ ವಿವರ ಇಂತಿದೆ.  ಅಮರೇಶ್ ಕರಡಿ- ಬೆಳಿಗ್ಗೆ 10 ಗಂಟೆಯಿಂದ 10-30 ಗಂಟೆಯವರೆಗೆ ಸಮಯ ನಿಗದಿಪಡಿಸಿದೆ.  ಕೆ.ಎಂ. ಸೈಯದ್- ಬೆಳಿಗ್ಗೆ 10-30 ಗಂಟೆಯಿಂದ 11 ಗಂಟೆಯವರೆಗೆ ಸಮಯ ನಿಗದಿಪಡಿಸಿದೆ.  ರಾಘವೇಂದ್ರ ಹಿಟ್ನಾಳ-  ಬೆಳಿಗ್ಗೆ 11 ಗಂಟೆಯಿಂದ 11-30 ಗಂಟೆಯವರೆಗೆ ಸಮಯ ನಿಗದಿಪಡಿಸಿದೆ.  ಮಂಜುನಾಥ ಪಲ್ಲೇದ- ಬೆಳಿಗ್ಗೆ 11-30 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಮಯ ನಿಗದಿಪಡಿಸಿದೆ.  ಹನುಮಪ್ಪ ಮ್ಯಾಗಳಮನಿ- ಮಧ್ಯಾಹ್ನ 12 ಗಂಟೆಯಿಂದ 12-30 ರವರೆಗೆ ನಿಗದಿಪಡಿಸಿದೆ.  ಪಂಪಾಪತಿ ಹುಲಿಗಿ- ಮಧ್ಯಾಹ್ನ 12-30 ರಿಂದ 01 ಗಂಟೆವರೆಗೆ ನಿಗದಿಪಡಿಸಿದೆ.  ಮಲ್ಲಿಕಾರ್ಜುನಪ್ಪ ನಿಜಗುಣ ಹಡಪದ- ಮಧ್ಯಾಹ್ನ 2-30 ಗಂಟೆಯಿಂದ 03 ಗಂಟೆಯವರೆಗೆ.  ಸಂಜಯ ವಿಠ್ಠಲರಾವ್- ಮಧ್ಯಾಹ್ನ 3 ಗಂಟೆಯಿಂದ 3-30 ಗಂಟೆಯವರೆಗೆ ನಿಗದಿಪಡಿಸಿದೆ.  ಸಿದ್ದರಾಮಪ್ಪ ದೊಡ್ಡಮನಿ- ಮಧ್ಯಾಹ್ನ 3-30 ಗಂಟೆಯಿಂದ 04 ಗಂಟೆಯವರೆಗೆ.  ಸುರೇಶಗೌಡ ಸೋಮನಗೌಡ ಅವರಿಗೆ ಸಂಜೆ 04 ಗಂಟೆಯಿಂದ 4-30 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ.
  ನಿಗದಿಪಡಿಸಿದ ದಿನಾಂಕ ಹಾಗೂ ಸಮಯದಲ್ಲಿ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗದಿದ್ದಲ್ಲಿ  ಅಂತಹ ಅಭ್ಯರ್ಥಿಗಳ ವಿರುದ್ಧ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ಸೆಕ್ಷನ್ 77 (3) ರನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಹೀಗಾಗಿ ಲೇಖನಗಳು ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ

ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ ಲಿಂಕ್ ವಿಳಾಸ https://dekalungi.blogspot.com/2018/04/blog-post_830.html

Subscribe to receive free email updates:

0 Response to "ಕೊಪ್ಪಳ : ಚುನಾವಣಾ ವೆಚ್ಚ ವಿವರಣೆ ಸಮೀಕ್ಷೆಗೆ ಹಾಜರಾಗಲು ಸೂಚನೆ"

ಕಾಮೆಂಟ್‌‌ ಪೋಸ್ಟ್‌ ಮಾಡಿ