ಶೀರ್ಷಿಕೆ : ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್
ಲಿಂಕ್ : ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್
ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್
ಕೊಪ್ಪಳ ಏ. 20 (ಕರ್ನಾಟಕ ವಾರ್ತೆ): ವಿಧಾನಸಭಾ ಚುನಾವಣೆ ನಿಮಿತ್ಯ ಮೇ. 12 ರಂದು ಮತದಾನ ನಡೆಯಲಿದ್ದು, ಎಲ್ಲ ಮತದಾರರು ಅಂದು ತಪ್ಪದೆ ಮತದಾನ ಮಾಡಬೇಕು ಎನ್ನುವ ಸಂದೇಶವನ್ನು ನೀಡುವುದರ ಮೂಲಕ ಕುಷ್ಟಗಿ ಪಟ್ಟಣದಲ್ಲಿ ಆಟೋ ಚಾಲಕರು, ಆಟೋ ರ್ಯಾಲಿ ಕೈಗೊಂಡು ಮತ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಮತದಾರರಲ್ಲಿ ನೈತಿಕ ಮತದಾನ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಸಮಿತಿಯು ಹಲವು ಕಸರತ್ತು ನಡೆಸುತ್ತಿದ್ದು, ಜನರಲ್ಲಿ ಮತದಾನಕ್ಕೆ ಪ್ರೇರೇಪಿಸಲು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕುಷ್ಟಗಿ ಪಟ್ಟಣದಲ್ಲಿ ಇಂತಹ ಮತ ಜಾಗೃತಿ ಕಾರ್ಯಕ್ರಮಕ್ಕೆ ಆಟೋ ಚಾಲಕರು ಸಾಥ್ ನೀಡಿದ್ದು ವಿಶೇಷವಾಗಿತ್ತು. ಮತದಾರರ ಜಾಗೃತಿಗಾಗಿ ಆಟೋಗಳಿಗೆ ಮತ ಜಾಗೃತಿಯ ಭಿತ್ತಪತ್ರವನ್ನು ಅಳವಡಿಸಿಕೊಂಡು, ಆಟೋ ರ್ಯಾಲಿ ಕೈಗೊಂಡರು. ಕುಷ್ಟಗಿಯ ಪೊಲೀಸ್ ಠಾಣೆ ಆವರಣದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಡಿ. ಮೋಹನ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ ತಳವಾರ ಅವರು ಆಟೋ ಜಾಗೃತಿ ರ್ಯಾಲಿಗೆ ಚಾಲನೆ ನೀಡಿದರು. ಆಟೋ ರ್ಯಾಲಿಯು ಬಸವೇಶ್ವರ ವೃತ್ತ, ಬಸ್ ನಿಲ್ದಾಣ, ಮಲ್ಲಯ್ಯ ವೃತ್ತ, ಮಾರುತಿ ವೃತ್ತ, ಕನಕದಾಸ ವೃತ್ತ, ಮಾರುಕಟ್ಟೆ ರಸ್ತೆ, ಕಾಲೇಜು ರಸ್ತೆ ಮೂಲಕ ತಹಸಿಲ್ದಾರರ ಕಚೇರಿ ಆವರಣವರೆಗೆ ಆಟೋ ರ್ಯಾಲಿ ಸಾಗಿಬಂದಿತು. ಕುಷ್ಟಗಿ ಕ್ಷೇತ್ರ ಚುನಾವಣಾಧಿಕಾರಿ ಪ್ರಶಾಂತ್ ಅವರು, ಮಾತನಾಡಿ, ಎಲ್ಲ ಮತದಾರರು ಮೇ. 12 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಬೇಕು. ಎಲ್ಲ ಮತದಾರರು ಇತರೆ ಮತದಾರರಿಗೂ ಮತದಾನಕ್ಕಾಗಿ ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.
ಹೀಗಾಗಿ ಲೇಖನಗಳು ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್
ಎಲ್ಲಾ ಲೇಖನಗಳು ಆಗಿದೆ ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್ ಲಿಂಕ್ ವಿಳಾಸ https://dekalungi.blogspot.com/2018/04/blog-post_776.html

0 Response to "ಕುಷ್ಟಗಿಯಲ್ಲಿ ಮತದಾನದ ಜಾಗೃತಿ ಆಟೋ ಚಾಲಕರ ಸಾಥ್"
ಕಾಮೆಂಟ್ ಪೋಸ್ಟ್ ಮಾಡಿ