ಶೀರ್ಷಿಕೆ : ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ
ಲಿಂಕ್ : ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ
ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ
ಕೊಪ್ಪಳ ಏ. 17 (ಕರ್ನಾಟಕ ವಾರ್ತೆ): ಕೊಪ್ಪಳ ವಿಧಾನಸಭಾ ಚುನಾವಣೆ ಅಂಗವಾಗಿ ಚುನಾವಣಾ ಅಧಿಸೂಚನೆಯನ್ನು ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ಮಂಗಳವಾರದಂದು ಹೊರಡಿಸಿದ್ದಾರೆ.
ಅಧಿಸೂಚನೆಯನ್ವಯ ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚನಕರು ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಗೆ ಕೊಪ್ಪಳ ತಹಸಿಲ್ದಾರರ ಕಚೇರಿ ಒಂದನೆ ಮಹಡಿಯಲ್ಲಿನ ಸಭಾಂಗಣದಲ್ಲಿ ಏ. 24 ರವರೆಗೆ (ಸರ್ಕಾರಿ ರಜಾ ದಿನ ಹೊರತುಪಡಿಸಿ) ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 03 ಗಂಟೆಯವರೆಗಿನ ಅವಧಿಯಲ್ಲಿ ಸಲ್ಲಿಸಬಹುದು. ನಾಮಪತ್ರದ ನಮೂನೆಗಳನ್ನು ಇದೇ ಕಚೇರಿಯಲ್ಲಿ ಹಾಗೂ ಇದೇ ವೇಳೆಯಲ್ಲಿ ಪಡೆದುಕೊಳ್ಳಬಹುದು. ನಾಮಪತ್ರಗಳ ಪರಿಶೀಲನೆ ಏ. 25 ರಂದು ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ತಿಳುವಳಿಕೆ ಪತ್ರವನ್ನು ಉಮೇದುವಾರ ಅಥವಾ ಅವರ ಯಾರೇ ಸೂಚಕರು ಅಥವಾ ಅದನ್ನು ಸಲ್ಲಿಸಲು ಉಮೇದುವಾರರಿಂದ ಲಿಖಿತದಲ್ಲಿ ಅಧಿಕೃತರಾದ ಅವರ ಏಜೆಂಟ್ ಏ. 27 ರಂದು ಮಧ್ಯಾಹ್ನ 03 ಗಂಟೆಯ ಒಳಗಾಗಿ ಸಲ್ಲಿಸಬಹುದು. ಮತದಾನ ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ನಡೆಯಲಿದೆ ಎಂದು ಕೊಪ್ಪಳ ಕ್ಷೇತ್ರ ಚುನಾವಣಾಧಿಕಾರಿ ಸಿ.ಡಿ. ಗೀತಾ ಅವರು ತಿಳಿಸಿದ್ದಾರೆ.
ಹೀಗಾಗಿ ಲೇಖನಗಳು ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ
ಎಲ್ಲಾ ಲೇಖನಗಳು ಆಗಿದೆ ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ ಲಿಂಕ್ ವಿಳಾಸ https://dekalungi.blogspot.com/2018/04/blog-post_48.html
0 Response to "ಕೊಪ್ಪಳ ವಿಧಾನಸಭೆ ಚುನಾವಣೆ : ಅಧಿಸೂಚನೆ ಪ್ರಕಟ"
ಕಾಮೆಂಟ್ ಪೋಸ್ಟ್ ಮಾಡಿ