ಶೀರ್ಷಿಕೆ : ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ
ಲಿಂಕ್ : ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ
ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ
ಕೊಪ್ಪಳ ಏ. 26 (ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲಾ ಕಾರಾಗೃಹ ಆವರಣದಲ್ಲಿ ಸಸಿ ನೆಡುವುದರ ಮೂಲಕ ಭೂ ಸಂರಕ್ಷಣಾ ದಿನಾಚರಣೆಯನ್ನು ಗುರುವಾರದಂದು ಆಚರಿಸಲಾಯಿತು.
ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರಾಗೃಹ ಮತ್ತು ಜಿಲ್ಲಾ ಅರಣ್ಯ ಇಲಾಖೆ ಇವರ ಸಹಯೋಗದಲ್ಲಿ ಭೂ ಸಂರಕ್ಷಣಾ ದಿನಾಚರಣೆಯನ್ನು ಗುರುವಾರದಂದು ಜಿಲ್ಲಾ ಕಾರಾಗೃಹ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಭೂಮಿಯ ಮೇಲೆ ಜನಿಸಿದ ನಾವುಗಳು ಭೂ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿವಿಧ ಮಾಲಿನ್ಯಗಳಿಂದ ಭೂಮಿಯ ವಾತಾವರಣ ಹಾಳಾಗುತ್ತಿದ್ದು ಇದರಿಂದ ನೆೃಸರ್ಗಿಕ ವಿಕೋಪಗಳು ಸಂಭವಿಸುತ್ತಿವೆ. ನಮ್ಮ ಮುಂದಿನ ಪೀಳಿಗೆಗಾಗಿ ಪ್ರತಿಯೊಬ್ಬರು ಭೂ ಸಂರಕ್ಷಣೆಯನ್ನು ಮಾಡುವುದು ಅತ್ಯವಶ್ಯಕವಾಗಿದೆ. ಗಿಡಗಳನ್ನು ಬೆಳೆಸಿ ಹಸಿರನ್ನು ಹೆಚ್ಚಿಸುವುದರ ಮೂಲಕ ಭೂಮಿಯನ್ನು ಸಂರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ವಾಯ್. ಯಲ್ಲಾರೆಡ್ಡಿ ಅವರು ಕೈದಿಗಳ ಮೂಲಕ ಸಸಿಗಳನ್ನು ನೆಡೆಸಿ ಪರಿಸರ ಪ್ರೇಮವನ್ನು ವ್ಯಕ್ತಪಡಿಸಿದರು. ಅರಣ್ಯ ಸಂರಕ್ಷಣಾಧಿಕಾರಿ ಜಿ. ಲೋಹಿತ್, ಎ.ಹೆಚ್. ಮುಲ್ಲಾ, ರಾಜೇಶ ಗಂಟಿ ಹಾಗೂ ಗುರುರಾಜ ಜೋಶಿ ವಕೀಲರು, ಶಿವಕುಮಾರ ಸೇರಿದಂತೆ ಅನೇಕ ಗಣ್ಯರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಸಿಗಳನ್ನು ನೆಟ್ಟು ಪರಿಸರ ಪ್ರೇಮವನ್ನು ವ್ಯಕ್ತಪಡಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹೀಗಾಗಿ ಲೇಖನಗಳು ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ
ಎಲ್ಲಾ ಲೇಖನಗಳು ಆಗಿದೆ ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ ಲಿಂಕ್ ವಿಳಾಸ https://dekalungi.blogspot.com/2018/04/blog-post_356.html
0 Response to "ಸಸಿ ನೆಡುವುದರ ಮೂಲಕ ಜಿಲ್ಲಾ ಕಾರಾಗೃಹದಲ್ಲಿ ಭೂ ಸಂರಕ್ಷಣಾ ದಿನಾಚರಣೆ"
ಕಾಮೆಂಟ್ ಪೋಸ್ಟ್ ಮಾಡಿ