ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ

ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ
ಲಿಂಕ್ : ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ

ಓದಿ


ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ


ಕೊಪ್ಪಳ ಏ. 30 (ಕರ್ನಾಟಕ ವಾರ್ತೆ): ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧ ಕಸರತ್ತು ನಡೆಸುತ್ತಿರುವ ಜಿಲ್ಲಾಡಳಿತ, ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ಟಿಕೆಟ್‍ನಲ್ಲೂ ಮತದಾನದ ಸಂದೇಶ ನೀಡುವ ಮೂಲಕ, ಮತದಾರರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ.

     ಮೇ. 12 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಜರುಗುವ ಮತದಾನ ಪ್ರಕ್ರಿಯೆಯಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೆ ಭಾಗವಹಿಸಿ, ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎನ್ನುವುದು ಚುನಾವಣಾ ಆಯೋಗದ ಆಶಯವಾಗಿದೆ.  ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿಯ ಮೂಲಕ ಹಲವಾರು ಕಸರತ್ತುಗಳನ್ನು ಕೈಗೊಳ್ಳಲಾಗುತ್ತಿದೆ.  ಜಾಗೃತಿ ಮೂಡಿಸುವ ಸಲುವಾಗಿ ಮಾನವ ಸರಪಳಿ, ಬೈಕ್ ರ್ಯಾಲಿ, ಪ್ರಭಾತ ಫೇರಿ, ಮತ ಯಂತ್ರಗಳ ಪ್ರಾತ್ಯಕ್ಷಿಕೆ ಹೀಗೆ ಹಲವು ಬಗೆಯಲ್ಲಿ ಯತ್ನಿಸಲಾಗುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ ವಿಶೇಷವಾಗಿ ಖ್ಯಾತ ಹಾಸ್ಯ ಸಾಹಿತಿ ಗಂಗಾವತಿ ಪ್ರಾಣೇಶ್ ಅವರನ್ನು ಮತ ಜಾಗೃತಿಗಾಗಿ ಐಕಾನ್ ಆಗಿ ಗುರುತಿಸಲಾಗಿದ್ದು, ಕೊಪ್ಪಳ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಾಣೇಶ್ ಅವರು ತಮ್ಮ ಹಾಸ್ಯ ಮಾತುಗಳಲ್ಲಿ ಪಂಚಿಂಗ್ ಡೈಲಾಗ್‍ಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಪರಿಣಾಮಕಾರಿ ಎನಿಸುತ್ತಿದೆ.  ಇದೀಗ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿರುವ ಸ್ವೀಪ್ ಸಮಿತಿ, ಸಾರಿಗೆ ಸಂಸ್ಥೆಯ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗುವ ಟಿಕೆಟ್‍ನಲ್ಲೂ ಕೂಡ ಪ್ರಯಾಣದ ಸ್ಥಳ, ದಿನಾಂಕ, ಕಿ.ಮೀ., ಪ್ರಯಾಣ ದರದ ಜೊತೆಗೆ ಹೆಚ್ಚುವರಿಯಾಗಿ ಮತದಾನ ಜಾಗೃತಿಯ ಸಂದೇಶ ಪ್ರಿಂಟ್ ಆಗುವ ರೀತಿಯಲ್ಲಿ ಟಿಕೆಟ್ ನೀಡುವ ಯಂತ್ರದಲ್ಲಿ ತಂತ್ರಾಂಶ ವ್ಯವಸ್ಥೆ ಮಾಡಲಾಗಿದೆ.  ‘ದಿನಾಂಕ: 12-5-2018 ರಂದು ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಿ’  ಎನ್ನುವ ಸಂದೇಶ ಪ್ರತಿಯೊಂದು ಬಸ್‍ಗಳ ಟಿಕೆಟ್‍ನಲ್ಲೂ ಮುದ್ರಿತಗೊಂಡು, ಪ್ರಯಾಣಿಕರ ಕೈ ಸೇರುತ್ತಿದೆ.  ಪ್ರಯಾಣಿಕರಲ್ಲೂ ಕೂಡ ಮತದಾರರಿದ್ದು, ಈ ಸಂದೇಶ ಮತದಾರರ ಕೈ ಸೇರಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿ, ಮತದಾನ ಪ್ರಮಾಣ ಹೆಚ್ಚಾಗಲಿ ಎಂಬುದು ಸಾರಿಗೆ ಸಂಸ್ಥೆಯ ಆಶಯವಾಗಿದೆ.


ಹೀಗಾಗಿ ಲೇಖನಗಳು ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ

ಎಲ್ಲಾ ಲೇಖನಗಳು ಆಗಿದೆ ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ ಲಿಂಕ್ ವಿಳಾಸ https://dekalungi.blogspot.com/2018/04/blog-post_351.html

Subscribe to receive free email updates:

0 Response to "ಬಸ್ ಟಿಕೆಟ್‍ನಲ್ಲೂ ಮತದಾನ ಜಾಗೃತಿ ಸಂದೇಶ"

ಕಾಮೆಂಟ್‌‌ ಪೋಸ್ಟ್‌ ಮಾಡಿ