ಶೀರ್ಷಿಕೆ : ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ
ಲಿಂಕ್ : ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ
ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ
ಕೊಪ್ಪಳ ಏ. 27 (ಕರ್ನಾಟಕ ವಾರ್ತೆ): ಅತ್ಯಾಚಾರ, ಕೊಲೆ ಮತ್ತು ಸಮಾಜದಲ್ಲಾಗುವ ಇತರೆ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಕಾನೂನು ಪಾಲನೆ ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಇವರ ಸಹಯೋಗದಲ್ಲಿ "ಮಕ್ಕಳ ಸ್ನೇಹಿ ಕಾನೂನು ಸೇವೆಗಳು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಯೋಜನೆ"ಗಳ ಕುರಿತು ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾದ ಒಂದು ದಿನದ ಕಾನೂನು ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಕಾನೂನಿನ ಬಗ್ಗೆ ಎಲ್ಲರಲ್ಲಿಯೂ ಸಹ ತಿಳುವಳಿಕೆ ಇದ್ದೇ ಇರುತ್ತದೆ. ಆದರೆ ಕಾನೂನು ಪಾಲನೆಯಲ್ಲಿ ನಾವೆಲ್ಲರೂ ಹಿಂದೆ ಉಳಿದಿದ್ದೇವೆ. ಯಾವುದೇ ಘಟನೆಗಳು ಜರುಗಿದ ನಂತರ ಎಚ್ಚೆತ್ತುಕೊಂಡು ಕಾನೂನಿನ ಮೊರೆ ಹೋಗುತ್ತೇವೆ. ಕೊಲೆ, ದರೋಡೆ, ಕಳ್ಳತನ, ಮೊಸ, ಭ್ರಷ್ಟಾಚಾರ, ಮಕ್ಕಳ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ, ದೌಜ್ಯನ್ಯ ಹೀಗೆ ಇತ್ಯಾದಿ ಪ್ರಕರಣಗಳು ಹೆಚ್ಚು ಸಂಭವಿಸುತ್ತಿದ್ದು, ಇದ್ದಕ್ಕೆ ಮುಖ್ಯ ಕಾರಣ ಕಾನೂನಿನ ಅರಿವು ಇಲ್ಲದಿರುವುದು ಮತ್ತು ಸರಿಯಾದ ರೀತಿಯಲ್ಲಿ ಕಾನೂನಿನ ಪಾಲನೆಯಾಗದೇ ಇರುವುದು. ಮೊದಲು ಎಲ್ಲರು ಸಾಮಾನ್ಯವಾಗಿ ಕಾನೂನು ಅರಿವನ್ನು ಹೊಂದಿ ಅದರ ಪಾಲನೆ ಮಾಡಬೇಕು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರವು ಮಹತ್ವದ್ದಾಗಿದೆ. ಭಾರತ ದೇಶವು ಮಕ್ಕಳನ್ನು ಮತ್ತು ಯುವಕರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಕಾನೂನಿನಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಪಾಲನೆ ಪೋಷಣೆ, ಹೀಗೆ ಹಲವಾರು ಹಕ್ಕುಗಳನ್ನು ಸಂವಿಧಾನ ಬದ್ಧವಾಗಿ ನೀಡಿದೆ. 2012 ರಲ್ಲಿ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಜಾರಿಗೊಳಿಸಿದ್ದು, ಎಲ್ಲ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಇಂದಿನ ಮಕ್ಕಳು ಈ ನಾಡಿನ ಭವ್ಯ ಪ್ರಜೆಗಳಾಗಿದ್ದು, ಅವರಿಗೆ ಮಕ್ಕಳ ಸ್ನೇಹಿ ವಾತವರಣವನ್ನು ಸೃಷ್ಠಿಸಿ ಉತ್ತಮ ನಾಗರೀಕರನ್ನಾಗಿ ರೂಪಿಸುವುದು ಅತ್ಯವಶ್ಯಕ. ಮಕ್ಕಳ ಮೇಲಿನ ದೌಜ್ಯನ್ಯ ತಡೆ ಕಾಯ್ದೆ, ಬಾಲ್ಯ ವಿವಾಹ ತಡೆ ಕಾಯ್ದೆ, ಇನ್ನೂ ಅನೇಕ ಕಾಯ್ದೆಗಳು ಜಾರಿಯಲ್ಲಿದ್ದರು ಸಹ ಕಾಯ್ದೆಗಳ ಉಲ್ಲಂಘನೆಯಾಗುತ್ತಿದೆ. ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಇತರರಿಗೂ ಅರಿವು ಮೂಡಿಸಬೇಕು. ಸಮಾಜದಲ್ಲಾಗುವ ಅಹೀತಕರ ಘಟನೆಗಳಿಗೆ ಕಾನೂನು ಪಾಲನೆಯಿಂದ ಕಡಿವಾಣ ಹಾಕಬಹುದಾಗಿದೆ ಎಂದು ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಶ್ರೀನಿವಾಸ ಅವರು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರೇಂದ್ರ ನಾವದಗಿ ಅವರು ಮಾತನಾಡಿ, ಸಾಮಾಜಿಕವಾಗಿ ದೌರ್ಜನ್ಯಕ್ಕೊಳಪಟ್ಟವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಸೇವೆಯನ್ನು ಒದಗಿಸಲಾಗುತ್ತಿದೆ. "ಎಲ್ಲಿಯವರೆಗೆ ಮೋಸಕ್ಕೆ ಒಳಪಡುತ್ತಿರುತ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಸಂಖ್ಯೆ ಕಡಿಮೆಯಾಗುವುದಿಲ್ಲ" ಈ ವಾಕ್ಯಕ್ಕೆ ಕಾರಣ ಕಾನೂನು ಅರಿವಿನ ಕೊರತೆ. ಈ ನಿಟ್ಟಿನಲ್ಲಿ ಪಿ.ಜಿ ಸೆಂಟರ್‍ನ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸುವಲ್ಲಿ ನ್ಯಾಯಾಂಗ ಇಲಾಖೆಯು "ಮನೆ-ಮನೆಗೆ ಕಾನೂನು" ಹೀಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಮಾನ್ಯರಲ್ಲಿಯೂ ಕಾನೂನು ಅರಿವು ಮೂಡಿಸುಲು ಪ್ರಯತ್ನಿಸುತ್ತಿದೆ. ನ್ಯಾಯಾಂಗ ಇಲಾಖೆ ಕಾರ್ಯ ಶ್ಲ್ಯಾಘನೀಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯ, ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ. ಮನೋಜ ಡೊಳ್ಳಿ ಅವರು ವಹಿಸಿದ್ದರು. ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಹರೀಶ ಜೋಗಿ, ಸ್ನಾತಕೋತ್ತರ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಪ್ರಕಾಶ ಅರವಡ್ಡಿ ಉಪಸ್ಥಿತರಿದ್ದರು. ಕಾರ್ಯಗಾರದ ಅಂಗವಾಗಿ "ಭಾದಿತರ ಪರಿಹಾರ ಯೋಜನೆಗಳು ಹಾಗೂ ಕಾನೂನು" ಹಾಗೂ "ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ಹಾಗೂ ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ" ಮತ್ತು "ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ತಿದ್ದುಪಡಿ ಕಾಯ್ದೆ-2016" ಎಂಬ ವಿಶಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಹೀಗಾಗಿ ಲೇಖನಗಳು ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ
ಎಲ್ಲಾ ಲೇಖನಗಳು ಆಗಿದೆ ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ ಲಿಂಕ್ ವಿಳಾಸ https://dekalungi.blogspot.com/2018/04/blog-post_126.html
0 Response to "ಅತ್ಯಾಚಾರ, ಕೊಲೆ ಇತ್ಯಾದಿಗಳ ಕಡಿವಾಣಕ್ಕೆ ಕಾನೂನು ಪಾಲನೆ ಅತ್ಯವಶ್ಯಕ : ಟಿ. ಶ್ರೀನಿವಾಸ"
ಕಾಮೆಂಟ್ ಪೋಸ್ಟ್ ಮಾಡಿ