ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು

ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು
ಲಿಂಕ್ : ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು

ಓದಿ


ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು


ಕೊಪ್ಪಳ ಏ. 22 (ಕ.ವಾ): ವಿಧಾನಸಭಾ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಯಲ್ಲಿದೆ.  ಜಿಲ್ಲೆಯಲ್ಲಿ ಈವರೆಗೆ ಅಬಕಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 64 ಪ್ರಕರಣಗಳನ್ನು ದಾಖಲಿಸಿ 32 ಜನರನ್ನು ಬಂಧಿಸಲಾಗಿದ್ದು. ಒಟ್ಟು 05 ಮದ್ಯದ ಅಂಗಡಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ ಎಂದು ಕೊಪ್ಪಳ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ತಿಳಿಸಿದ್ದಾರೆ.
     ಚುನಾವಣೆ ನಿಮಿತ್ಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ.  ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿದ್ದು, ಕೊಪ್ಪಳ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಅಂದರೆ ಮಾ. 27 ರಿಂದ ಇದುವರೆಗೂ ಸುಮಾರು 160 ಕಡೆ ದಾಳಿ ನಡೆಸಲಾಗಿದೆ.  ಈ ಪೈಕಿ ಅಕ್ರಮ ಮದ್ಯ ಸಾಗಾಣಿಕೆಗೆ ಸಂಬಂಧಿಸಿದಂತೆ ತೀವ್ರತರವಾದ 09 ಪ್ರಕರಣಗಳನ್ನು ದಾಖಲಿಸಿದೆ.  ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ 32 ಮದ್ಯದಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ನಿಯಮ ಉಲ್ಲಂಘಿಸಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಿದಂತಹ 23 ಪ್ರಕರಣಗಳನ್ನು ದಾಖಲಿಸಿದೆ.  ಅಕ್ರಮ ಸಾಗಾಣಿಕೆ ಪ್ರಕರಣಗಳಲ್ಲಿ 32 ಜನರನ್ನು ಬಂಧಿಸಿ, 183. 380 ಲೀ. ಅಕ್ರಮ ಮದ್ಯ ಮತ್ತು 26. 850 ಲೀ. ಬಿಯರ್ ವಶಪಡಿಸಿಕೊಳ್ಳಲಾಗಿದೆ.  ಅಲ್ಲದೆ 04 ದ್ವಿಚಕ್ರ ವಾಹನಗಳನ್ನು ಜಪ್ತು ಮಾಡಲಾಗಿದೆ.  ಅಬಕಾರಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ಗಂಗಾವತಿಯಲ್ಲಿ 01, ಕೊಪ್ಪಳ-02, ಕುಕನೂರು- 01 ಹಾಗೂ ಯಲಬುರ್ಗಾದಲ್ಲಿ 01 ಸೇರಿದಂತೆ ಒಟ್ಟು 05 ಸಿ.ಎಲ್-02 ಮದ್ಯದಂಗಡಿಗಳ ಲೈಸೆನ್ಸ್ ಅಮಾನತುಗೊಳಿಸಲಾಗಿದೆ.  
ಅಬಕಾರಿ ಅಕ್ರಮ ಕಂಡುಬಂದಲ್ಲಿ ಮಾಹಿತಿ ನೀಡಿ : ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆ ಅಥವಾ ಶೇಖರಣೆ ಬಗ್ಗೆ ಯಾವುದೇ ಮಾಹಿತಿ ಅಥವಾ ದೂರು ಇದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.  ಪ್ರಶಾಂತಕುಮಾರ್, ಅಬಕಾರಿ ಉಪ ಆಯುಕ್ತರು, ಕೊಪ್ಪಳ- 9449597170, 08539-222002.  ಎಂ.ಎಸ್. ನಾರಾಯಣ ನಾಯ್ಕ್, ಅಬಕಾರಿ ಉಪಾಧೀಕ್ಷಕರು, ಕೊಪ್ಪಳ- 9449597175, 08539-221610.  ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಮಹದೇವ ಪೂಜಾರಿ, ಅಬಕಾರಿ ನಿರೀಕ್ಷಕರು, ಕೊಪ್ಪಳ- 9535479446. ಎಂ.ಎಲ್. ಕಣಬರಕರ, ಅಬಕಾರಿ ಉಪನಿರೀಕ್ಷಕರು- 9902936649.  ಎ.ಎಚ್. ಕೃಷ್ಣಮೂರ್ತಿ, ಅಬಕಾರಿ ನಿರೀಕ್ಷಕರು, ಕೊಪ್ಪಳ- 9880404148, 08539-222384.  ಬಿ.ಎ. ಪಾಂಗೇರಿ, ಅಬಕಾರಿ ಉಪ ನಿರೀಕ್ಷಕರು, ಕೊಪ್ಪಳ- 9481740977.  ಎಂ. ಭವಾನಿ, ಅಬಕಾರಿ ನಿರೀಕ್ಷಕರು, ಕೆ.ಎಸ್.ಬಿ.ಸಿ.ಎಲ್. ಡಿಪೋ, ಗೋಶಾಲಾ ಆವರಣ, ಕಾತರಕಿ ರಸ್ತೆ, ಕೊಪ್ಪಳ- 9845678027.  ಗಂಗಾವತಿ ತಾಲೂಕು ವ್ಯಾಪ್ತಿಯಲ್ಲಿ ಮಹಾದೇವ ಪೂಜಾರಿ, ಅಬಕಾರಿ ನಿರೀಕ್ಷಕರು, ಗಂಗಾವತಿ-9535479446, 08533-230527.  ಎಸ್.ಎಸ್. ಈಶ್ವರಪ್ಪ, ಅಬಕಾರಿ ಉಪ ನಿರೀಕ್ಷಕರು, ಗಂಗಾವತಿ- 9844077032.  ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕು ವ್ಯಾಪ್ತಿಗೆ ಕೆ. ಸುಷ್ಮಾ, ಅಬಕಾರಿ ನಿರೀಕ್ಷಕರು, ಕುಷ್ಟಗಿ- 9448844650, 08536-267247.  ಬಸವರಾಜ ಎಸ್. ಮುಡಶಿ, ಅಬಕಾರಿ ಉಪ ನಿರೀಕ್ಷಕರು, ಕುಷ್ಟಗಿ- 9241767667.   ಅಬಕಾರಿ ನಿಯಮಗಳ ಉಲ್ಲಂಘನೆ, ಅಕ್ರಮ ಮದ್ಯ ಸಾಗಾಣಿಕೆ ಅಥವಾ ಸಂಗ್ರಹಣೆ ಕುರಿತ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಮೇಲೆ ತಿಳಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಕೊಪ್ಪಳ   ಅಬಕಾರಿ ಉಪ ಆಯುಕ್ತ ಪ್ರಶಾಂತಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಹೀಗಾಗಿ ಲೇಖನಗಳು ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು

ಎಲ್ಲಾ ಲೇಖನಗಳು ಆಗಿದೆ ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು ಲಿಂಕ್ ವಿಳಾಸ https://dekalungi.blogspot.com/2018/04/32-05.html

Subscribe to receive free email updates:

0 Response to "ವಿಧಾನಸಭೆ ಚುನಾವಣೆ ನೀತಿ ಸಂಹಿತೆ : ಅಬಕಾರಿ ಅಕ್ರಮಕ್ಕೆ 32 ಜನರ ಬಂಧನ : 05 ಮದ್ಯದಂಗಡಿಗಳ ಲೈಸೆನ್ಸ್ ಅಮಾನತು"

ಕಾಮೆಂಟ್‌‌ ಪೋಸ್ಟ್‌ ಮಾಡಿ