ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ

ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ
ಲಿಂಕ್ : ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ

ಓದಿ


ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ



ಕೊಪ್ಪಳ ಫೆ. 20 (ಕರ್ನಾಟಕ ವಾರ್ತೆ): ಸಂತ ಕವಿ ಸರ್ವಜ್ಞರ ವಚನಗಳು ಇಂದಿಗೂ ಅಜರಾಮರವಾಗಿ ಉಳಿದಿದ್ದು, ಅವರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನು ಒಳಗೊಂಡಿವೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು.

    ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದಂದು ಏರ್ಪಡಿಸಿದ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಸ್ಕøತದಲ್ಲಿ ಸರ್ವಜ್ಞ ಎಂದರೆ ಎಲ್ಲಾ ಜ್ಞಾನವನ್ನು ಅರಿತವರು ಎಂದರ್ಥ.  ಸರ್ವಜ್ಞರು ತಮ್ಮ ತ್ರಿಪದಿ ವಚನಗಳಲ್ಲಿ ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳ ಕುರಿತು ತಿಳಿಸಿದ್ದಾರೆ.  ಜಾತಿ, ಮತ, ಪಂಥ ಇವುಗಳ ಬಗ್ಗೆ ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊಂಕು ವ್ಯವಸ್ಥೆಯನ್ನು ತಿದ್ದಿದ್ದಾರೆ.  ಮನುಷ್ಯರಾಗಿ ಬಾಳುವುದು ಮುಖ್ಯ ಎಂದು ಕವಿ ಸರ್ವಜ್ಞರು ಮನುಕುಲಕ್ಕೆ ಸಂದೇಶವನ್ನು ನೀಡಿದ್ದಾರೆ.  ಸರಳ ಭಾಷೆಯಲ್ಲಿ, ಬದುಕಿನ ಸತ್ಯವನ್ನು ಜಗತ್ತಿಗೆ ಪರಿಚಯಿಸಿದ ಮಹಾನ್ ಕವಿ ಸರ್ವಜ್ಞರು.  ಅವರ ವಿಚಾರಧಾರೆಗಳನ್ನು ಜಗತ್ತಿಗೆ ಪರಿಚಯಿಸಲು ಸರ್ಕಾರವು ಜಯಂತಿಯನ್ನು ಆಚರಿಸುತ್ತಿದೆ.  ಕೊಪ್ಪಳ ಜಿಲ್ಲೆಯಲ್ಲಿ ಕುಂಬಾರ ಭವನ ನಿರ್ಮಾಣ ಹಾಗೂ ಕುಂಬಾರ ನಿಗಮ ಸ್ಥಾಪನೆಗೆ ಸಮಾಜದ ಬೇಡಿಕೆಯಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು.  ಹೆಚ್ಚಿನ ಅನುದಾನವನ್ನು ನೀಡಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸಹ ಸ್ಥಾಪಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷ ರಾಜಶೇಖರ ಹಿಟ್ನಾಳ ಅವರು ಹೇಳಿದರು. 
    ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಕನ್ನಡ ಪ್ರಾಧ್ಯಾಪಕರಾದ ಡಾ. ಭಾಗ್ಯಜ್ಯೋತಿ ಅವರು ಸಂತ ಕವಿ ಸರ್ವಜ್ಞರ ಕುರಿತು ವಿಶೇಷ ಉಪನ್ಯಾಸ ನೀಡಿ, ಸರ್ವಜ್ಞರ ಕಾಲಾವಧಿಯ ಕುರಿತು ನಿಖರ ಮಾಹಿತಿ ಇಲ್ಲ.  ಆದರೂ ಹಲವಾರು ತಜ್ಞರ ಸಂಶೋಧನೆಯ ಪ್ರಕಾರ 16 ಮತ್ತು 17ನೇ ಶತಮಾನ ಎಂದು ತಿಳಿಯುತ್ತದೆ.  ಸರ್ವಜ್ಞರು ಹಾವೇರಿ ಜಿಲ್ಲೆಯ ಹಿರೇಕೆರೂರಿನ ಕುಂಬಾರಮಾಳ್ವೆ ಹಾಗೂ ಬಸವರಸ ಎಂಬ ದಂಪತಿಗಳ ಪುತ್ರರು.  ಮೂಲ ನಾಮ ಪುಷ್ಪದತ್ತಾ.  ಸರ್ವಜ್ಞರು ಸಾಕು ತಾಯಿ ಮಲ್ಲಮ್ಮ ಅವರ ಆಶ್ರಯದಲ್ಲಿ ಬೆಳೆಯುತ್ತಾರೆ.  ಬಾಲ್ಯದಲ್ಲಿಯೇ ವಿದ್ಯೆಯಲ್ಲಿ ಚತುರರಾಗಿದ್ದರು.  ಮುಂದೆ ಬೆಳೆಯುತ್ತಾ ತ್ರಿಪದಿಗಳನ್ನು ರಚಿಸುತ್ತಾ ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.  ಸರ್ವಜ್ಞರು ಸುಮಾರು ಏಳು ಸಾವಿರಕ್ಕೂ ಹೆಚ್ಚು ತ್ರಿಪದಿ ವಚನಗಳನ್ನು ರಚಿಸಿದ್ದು, ಗುರುಪದ್ದತಿ, ಶಿಕ್ಷಣ ಪದ್ದತಿ, ಜ್ಞಾನ ಹಾಗೂ ಲಿಂಗ ಪದ್ದತಿಗಳ ಬಗ್ಗೆ ತಿಳಿಸಿದ್ದಾರೆ.  ಸರ್ವಜ್ಞರು ಜಾತಿ ಪದ್ದತಿಯನ್ನು ತಿದ್ದಿದವರು.  ಅರಿವೇ ಗುರು ಎಂಬ ಬಸವಣ್ಣನವರ ಹೇಳಿಕೆಯಂತೆ, ಜ್ಞಾನ ಒಂದು ಇದ್ದರೆ ಸಾಕು ಈಡೀ ಜಗತ್ತನ್ನೇ ಗೆಲ್ಲಬಹುದು.  ತನ್ನನ್ನು ತಾನು ಅರಿತವನೇ ಗುರು ಎಂದು ಸರ್ವಜ್ಞರು ತಿಳಿಸಿದ್ದಾರೆ.  ಓಡಾಡುವ ನೆಲಕ್ಕೆ ಜಾತಿ ಇಲ್ಲ, ಹರಿಯುವ ನೀರಿಗೆ ಜಾತಿ ಇಲ್ಲ, ಬೀಸುವ ಗಾಳಿಗೆ ಜಾತಿ ಇಲ್ಲ, ಬೆಳಕಿಗೆ ಜಾತಿ ಇಲ್ಲ, ಮಾನವರಲ್ಲಿ ಜಾತಿ ಏತಕೇ ಎಂದು ಸರ್ವಜ್ಞರು ಪ್ರಶ್ನಿಸಿದ್ದಾರೆ.  “ಎಲ್ಲಾ ವಿದ್ಯೆಗಳ ಒಡೆಯ ಕೃಷಿ” ಎಂದು ಕೃಷಿ ಮತ್ತು ವ್ಯವಸಾಯದ ಕುರಿತು ಸಹ ಸರ್ವಜ್ಞರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದು, ಸಮಾಜದ ಸಂಜೀವಿನಿಯಾಗಿದ್ದಾರೆ.  ಅವರ ಹಾದಿಯಲ್ಲಿ ಎಲ್ಲರೂ ಮುಂದೆ ಸಾಗಬೇಕಾಗಿದೆ ಎಂದರು.      
    ಸಮಾರಂಭದ ಅಧ್ಯಕ್ಷತೆಯನ್ನು ಕೊಪ್ಪಳ ತಹಶೀಲ್ದಾರ ಗುರುಬಸವರಾಜ ಅವರು ವಹಿಸಿದ್ದರು.  ಜಿ.ಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಪ್ರೊಬೆಷನರಿ ಸಹಾಯಕ ಆಯುಕ್ತ ಚಂದ್ರಯ್ಯ, ನಿಂಗರಾಜ ಕುಂಬಾರ, ಕಳಕಪ್ಪ ಕುಂಬಾರ, ನಿಂಗಪ್ಪ ಕುಂಬಾರ ಸೇರಿದಂತೆ ಅನೇಕ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.  ಕಾರ್ಯಕ್ರಮದ ನಂತರ ಕವಿ ಸರ್ವಜ್ಞರ ಭಾವಚಿತ್ರದ ಭವ್ಯ ಮೆರವಣಿಗೆ ಅಶೋಕ ವೃತ್ತದಿಂದ ಜವಾಹರ ರಸ್ತೆ, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಮಾರ್ಗವಾಗಿ ಪ್ಯಾಟಿ ಈಶ್ವರ ದೇವಸ್ಥಾನದವರೆಗೆ ಅದ್ದೂರಿಯಾಗಿ ಜರುಗಿತು.


ಹೀಗಾಗಿ ಲೇಖನಗಳು ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ

ಎಲ್ಲಾ ಲೇಖನಗಳು ಆಗಿದೆ ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ ಲಿಂಕ್ ವಿಳಾಸ https://dekalungi.blogspot.com/2018/02/blog-post_89.html

Subscribe to receive free email updates:

0 Response to "ಸರ್ವಜ್ಞರ ತ್ರಿಪದಿಗಳು ಜನಪರ ಮೌಖಿಕ ಅರಿವನ್ನೊಳಗೊಂಡಿವೆ : ರಾಜಶೇಖರ ಹಿಟ್ನಾಳ"

ಕಾಮೆಂಟ್‌‌ ಪೋಸ್ಟ್‌ ಮಾಡಿ