ಶೀರ್ಷಿಕೆ : NEWS DATE: 8--12--2017
ಲಿಂಕ್ : NEWS DATE: 8--12--2017
NEWS DATE: 8--12--2017
ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
*********************************************
ಕಲಬುರಗಿ,ಡಿ.08.(ಕ.ವಾ.)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ್ ಅವರು ಯಶವಂತಪುರ-ಸೋಲಾಪುರ ಎಕ್ಸ್‍ಪ್ರೆಸ್ ರೈಲಿನ ಮೂಲಕ ಡಿಸೆಂಬರ್ 9ರಂದು ಬೆಳಿಗ್ಗೆ 6.25 ಗಂಟೆಗೆ ಕಲಬುರಗಿ ಆಗಮಿಸಿ, ಕಲಬುರಗಿ ಮತ್ತು ಸೇಡಂಗಳಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾರ್ವಜನಿಕ ಕುಂದುಕೊರತೆಗಳ ವಿಚಾರಣೆ ನಡೆಸಿ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.
ಡಿಸೆಂಬರ್ 10ರಂದು ಕಲಬುರಗಿಯಿಂದ ವಿಜಯಪುರಕ್ಕೆ ಪ್ರಯಾಣಿಸಿ, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಸಚಿವರು ಮರಳಿ ರಸ್ತೆ ಮೂಲಕ ಕಲಬುರಗಿ-ಸೇಡಂಗೆ ಆಗಮಿಸಿ, ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.

ಗಡಿ ಪ್ರದೇಶ ಅಭಿವೃದ್ಧಿ ಅಧ್ಯಕ್ಷರ ಪ್ರವಾಸ
************************************
ಕಲಬುರಗಿ,ಡಿ.08.(ಕ.ವಾ.)-ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ಬೆಂಗಳೂರಿನಿಂದ ರಸ್ತೆ ಮೂಲಕ ಡಿಸೆಂಬರ್ 9ರಂದು ಬೆಳಿಗ್ಗೆ 6 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಅಂದು ಮಧ್ಯಾಹ್ನ 3 ಗಂಟೆಗೆ ಗುರುಮಿಠಕಲ್ ಆರಾಧನಾ ಪಬ್ಲಿಕ್ ಸ್ಕೂಲ್‍ನಲ್ಲಿ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಡಿಸೆಂಬರ್ 10 ರಿಂದ 16ರವರೆಗೆ ಯಾದಗಿರಿ ಮತ್ತು ಗುರುಮಿಠಕಲ್ ಗಡಿ ಗ್ರಾಮ ಹಾಗೂ ಸಾರ್ವಜನಿಕರನ್ನು ಭೇಟಿ ಮಾಡುವರು. ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.

ಜೀವ ರಕ್ಷಕ ಪ್ರಶಸ್ತಿಗಾಗಿ ಅರ್ಜಿ ಅಹ್ವಾನ
***********************************
ಕಲಬುರಗಿ,ಜ.08.(ಕ.ವಾ.)-ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯಡಿ ರಸ್ತೆ ಅಪಘಾತದ ಸಂದರ್ಭದಲ್ಲಿ ಗಾಯಾಳುವಿಗೆ ನೆರವು ನೀಡಿದವರಿಗೆ ಜೀವ ರಕ್ಷಕ ಪ್ರಶಸ್ತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶಿವರಾಜ ಸಜ್ಜನ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಸಾಂತ್ವನ ಹರೀಶ್ ಯೋಜನೆಯಡಿ ಕರ್ನಾಟಕ ರಾಜ್ಯದ ಗಡಿ ವ್ಯಾಪ್ತಿಯಲ್ಲಿ ಘಟಿಸುವ ರಸ್ತೆ ಅಪಘಾತದ ಯಾವುದೇ ಗಾಯಾಳುಗಳಿಗೆ 48 ಗಂಟೆಗಳವರೆಗೆ ಗರಿಷ್ಠ 25,000 ರೂ.ಗಳವರೆಗೆ ಉಚಿತ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಜನವರಿ 26, 2018ರ ಜೀವ ರಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲು ದಯಾಳು ಮತ್ತು ಉಪಕಾರಿ/ನಾಮಕರಣ ವ್ಯಕ್ತಿಗಳು ಡಿಸೆಂಬರ್ 30ರೊಳಗಾಗಿ ಸಲ್ಲಿಸಬೇಕು. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಎರಡು ಬಾರಿ ನೀಡಲಾಗುತ್ತಿದೆ. ನಾಮಕರಣ/ ಅರ್ಜಿಗಳನ್ನು ಜನವರಿಯಿಂದ ಜುಲೈವರೆಗೆ ಹಾಗೂ ಆಗಸ್ಟ್‍ದಿಂದ ಡಿಸೆಂಬರ್‍ವರೆಗೆ ಸ್ವೀಕರಿಸಲಾಗುವುದು. ಪ್ರತಿ ವರ್ಷ ಜನವರಿ 26 ಗಣರಾಜ್ಯೋತ್ಸವ ಮತ್ತು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುವುದು.
ಪ್ರಶಸ್ತಿಯ ಆಯ್ಕೆ ವಿಧಾನ, ಮಾನದಂಡ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ತಾಲೂಕು ಮಟ್ಟದ ಅಧಿಕಾರಿಗಳ ಮೊಬೈಲ್ ಸಂಖ್ಯೆ ವಿವರ ಇಂತಿದೆ. ಕಲಬುರಗಿ ಮೊಬೈಲ್ ಸಂಖ್ಯೆ 7760999023, ಅಫಜಲಪುರ-7760999033, ಆಳಂದ-7760999027, ಜೇವರ್ಗಿ-7760999040, ಸೇಡಂ-7760999043, ಚಿತ್ತಾಪುರ-7760999032, ಚಿಂಚೋಳಿ- 7760999030ಗಳನ್ನು ಸಂಪರ್ಕಿಸಬೇಕು. ನಿಗದಿತ ಅರ್ಜಿ ನಮೂನೆಗಾಗಿ ಕಲಬುರಗಿಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಹಾಗೂ ಮೊಬೈಲ್ ಸಂಖ್ಯೆ 7760999110, 7619649376, 7259033398ಗಳನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಸಗೊಬ್ಬರ ಮಾರಾಟಗಾರರು:
***************************
ಡಿಸೆಂಬರ್ 13ರೊಳಗಾಗಿ ಪಿಓಎಸ್ ಮಶೀನ್ ಪಡೆಯಲು ಸೂಚನೆ
*********************************************************
ಕಲಬುರಗಿ,ಡಿ.08.(ಕ.ವಾ.)-ಡಿಬಿಟಿ ಯೋಜನೆಯಡಿ ಕಲಬುರಗಿ ಜಿಲ್ಲೆಯ ಎಲ್ಲ ರಿಟೇಲರ್ ರಸಗೊಬ್ಬರ ಮಾರಾಟಗಾರರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಮಾರಾಟ ಮಾಡುವ ರಸಗೊಬ್ಬರ ಮಾರಾಟಗಾರರು ಈಗಾಗಲೇ ಎಂ.ಎಫ್.ಎಂ.ಎಸ್. ಐಡಿ (ಒಈಒS Iಆ) ಹೊಂದಿದ ಮಾರಾಟಗಾರರು ಕೂಡಲೇ ಡಿಸೆಂಬರ್ 13 ರೊಳಗಾಗಿ ಪಿ.ಓ.ಎಸ್. ಮಶೀನ್‍ಗಳನ್ನು ಪಡೆದುಕೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಡಿಸೆಂಬರ್ 17ರೊಳಗಾಗಿ ಪಿ.ಓ.ಎಸ್. ಮಶೀನ್ ಹೊಂದಿರದ ರಿಟೇಲರ್ ರಸಗೊಬ್ಬರ ಮಾರಾಟಗಾರರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪರವಾನಿಗೆ ಪತ್ರವನ್ನು ಅನರ್ಹ ಎಂದು ಪರಿಗಣಿಸಿ ರದ್ದುಗೊಳಿಸಲಾಗುವುದು. ನಂತರ ಯಾವುದೇ ವ್ಯವಹಾರ ಮಾಡಲು ಬರುವುದಿಲ್ಲ.
ಎಂ.ಎಫ್.ಎಂ.ಎಸ್. ಐಡಿ (ಒಈಒS Iಆ) ಹೊಂದಿರದೇ ಇರುವ ಮಾರಾಟಗಾರರು ಕೂಡಲೇ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಿ ಎಂ.ಎಫ್.ಎಂ.ಎಸ್. ಐಡಿ (ಒಈಒS Iಆ) ದಾಖಲಿಸಿ, ನಂತರ ಪಿ.ಓ.ಎಸ್. ಮಶೀನ್ ಪಡೆದುಕೊಳ್ಳಬೇಕು. ಡಿಸೆಂಬರ್ 9 ಹಾಗೂ 10ರಂದು ರಜೆ ಇದ್ದರೂ ಸಹ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಸದರಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಿ ಪಿ.ಓ.ಎಸ್. ಮಶೀನ್‍ಗಳನ್ನು ತಪ್ಪದೆ ಪಡೆದುಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ರಚನೆ
*********************************
ಕಲಬುರಗಿ,ssssಡಿ.08.(ಕ.ವಾ.)-ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ರಾಜ್ಯಪಾಲರು ಕಲಬುರಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯನ್ನು ರಚಿಸಿದ್ದಾರೆ ಎಂದು ಕಲಬುರಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.
01 ರಿಂದ 18 ವರ್ಷದೊಳಗಿನ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪ್ರತಿ ಸೋಮವಾರ ಕಲಬುರಗಿ ನಗರದ ಬಾಲಕರ ಬಾಲಮಂದಿರದಲ್ಲಿ ಮತ್ತು ಎರಡನೇ ಮತ್ತು ನಾಲ್ಕನೇ ಬುಧವಾರ ಬುದ್ದಿಮಾಂದ್ಯ ಬಾಲಕಿಯರ ಬಾಲಮಂದಿರದಲ್ಲಿ, ಪ್ರತಿ ಗುರುವಾರ ಬಾಲಕಿಯರ ಬಾಲಮಂದಿರದಲ್ಲಿ ಈ ಸಮಿತಿಯು ಮಕ್ಕಳ ಸಮಸ್ಯೆ ಕುರಿತು ಚರ್ಚಿಸಲಿದೆ.
ಮಕ್ಕಳ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಸರ್ಕಾರಿ ಬಾಲಕರ ಬಾಲಮಂದಿರ ಆವರಣ, ಸ್ತ್ರೀಶಕ್ತಿ ಭವನ, ಒಂದನೇ ಮಹಡಿ, ಪ್ರಗತಿ ಕಾಲೋನಿ ಕಲಬುರಗಿ ಹಾಗೂ ದೂರವಾಣಿ ಸಂಖ್ಯೆ 08472-233756ನ್ನು ಸಂಪರ್ಕಿಸಬಹುದಾಗಿದೆ.

ಕಂಪ್ಯೂಟರ್ ಆಪರೇಟರ್ ಸೇವೆ ಪಡೆಯಲು ಹೊರಮೂಲ
*************************************************
ಸಂಸ್ಥೆಗಳಿಂದ ದರಪಟ್ಟಿ ಆಹ್ವಾನ
****************************
ಕಲಬುರಗಿ,ಡಿ.08.(ಕ.ವಾ.)- ಕಲಬುರಗಿ ಪಶು ಪಾಲನಾ ಇಲಾಖೆಯಲ್ಲಿ ಖಾಲಿಯಿರುವ 09 ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಹಾಗೂ ಜಿಲ್ಲೆಯ 07 ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿಗೆ ಕಂಪ್ಯೂಟರ್ ಆಪರೇಟರ್ ಡಾಟಾ ಎಂಟ್ರಿ ಆಪರೇಟರಗಳ ಸೇವೆಯನ್ನು ಪಡೆಯಲು ಅರ್ಹ ನೋಂದಾಯಿತ ಹೊರಮೂಲ ಸಂಸ್ಥೆಗಳಿಂದ ದರಪಟ್ಟಿಗಳನ್ನು ಅಹ್ವಾನಿಸಲಾಗಿದೆ.
ಟೆಂಡರ್ ಅರ್ಜಿಯನ್ನು ಪಡೆಯಲು ಡಿಸೆಂಬರ್ 18 ಕೊನೆಯ ದಿನವಾಗಿದೆ. ಭರ್ತಿ ಮಾಡಿದ ಟೆಂಡರ್ ಅರ್ಜಿ ನಮೂನೆಯನ್ನು ಡಿಸೆಂಬರ್ 20ರ ಮಧ್ಯಾಹ್ನ 1 ಗಂಟೆಯೊಳಗಾಗಿ ಸಲ್ಲಿಸಬೇಕು. ಇ.ಎಂ.ಡಿ. ಮೊತ್ತ, ಟೆಂಡರ್ ಫಾರ್ಮ ಬೆಲೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕೊಳಲು ವಾಹನ ಸ್ಪರ್ಧೆ: ಮಣಿಕಂಠ ವಿಶ್ವನಾಥ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕಲಬುರಗಿ,ssssಡಿ.08.(ಕ.ವಾ.)-ಉಡುಪಿ ಜಿಲ್ಲೆಯಲ್ಲಿ ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ಜರುಗಿದ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಿಂದ ಭಾಗವಹಿಸಿದ ಮಣಿಕಂಠ ವಿಶ್ವನಾಥ ಅವರು ಕೊಳಲು ವಾದನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅದೇ ರೀತಿ ವಿಶ್ವನಾಥ ವಸ್ತ್ರದಮಠ ಅವರು ಹಾರ್ಮೋನಿಯಮ್ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ಶಾಸ್ತ್ರೀಯ ಹಿಂದೂಸ್ಥಾನಿ ಗಾಯನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ನೃತ್ಯ ಸ್ಪರ್ಧೆಯಲ್ಲಿ ಮಶಾಕ್ ಅಹ್ಮದ್ ಮಣಿಪುರಿ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತರೆಲ್ಲರಿಗೂ ನಗದು ಬಹುಮಾನ ನೀಡಲಾಗಿದೆ ಅವರು ತಿಳಿಸಿದ್ದಾರೆ.

ಶೌಚಾಲಯ ನಿರ್ಮಾಣಕ್ಕಾಗಿ ಶಾಲೆ/ಮದರಸಾಗಳಿಂದ ಅರ್ಜಿ ಆಹ್ವಾನ
************************************************************
ಕಲಬುರಗಿ,ಡಿ.08.(ಕ.ವಾ.)- ಮೌಲಾನಾ ಆಜಾದ್ ಎಜ್ಯುಕೇಶನ್ ಫೌಂಡೇಶನ್‍ದಿಂದ ಅಲ್ಪಸಂಖ್ಯಾತರ ಸಂಘ ಸಂಸ್ಥೆಗಳವರಿಂದ ಕಾರ್ಯನಿರ್ವಹಿಸುತ್ತಿರುವ ಶಾಲಾ/ ಮದರಸಾಗಳಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ಅರ್ಹ ಶಾಲೆ/ಮದರಸಾಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಶೇ.25ರಷ್ಟು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರಬೇಕು. ಮದರಸಾಗಳಲ್ಲಿ ಕನಿಷ್ಠ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರಬೇಕು. ಮದರಸಾ/ಶಾಲೆಯೂ ಸಂಘ ಸಂಸ್ಥೆಯ ಹೆಸರಿಗೆ ನೋಂದಣಿಯಾಗಿ ಕನಿಷ್ಠ 30 ವರ್ಷ ಹಳೆಯದಾಗಿರಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಿನಿ ವಿಧಾನಸೌಧದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯವನ್ನು ಅಥವಾ http://ift.tt/2kEbFbD ಸಂಪರ್ಕಿಸಲು ಕೋರಲಾಗಿದೆ.

ಡಿಸೆಂಬರ್ 12ರಂದು ಶಿಶಿಕ್ಷು ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ
**********************************************************
ಕಲಬುರಗಿ,ಡಿ.08.(ಕ.ವಾ.)-ಬೆಂಗಳೂರಿನ ಮೇ|| ಭಾರತ ಹೇವಿ ಎಲೆಕ್ಟ್ರಿಕಲ್ ಲಿಮಿಟೆಡ್‍ದಿಂದ ಐ.ಟಿ.ಐ. ಫಿಟ್ಟರ್, ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಮತ್ತು ಪಾಸಾ/ಕೋಪಾ ವೃತ್ತಿಗಳಲ್ಲಿ 2017ರ ಜುಲೈಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿಗಾಗಿ ಡಿಸೆಂಬರ್ 12ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಪುರುಷ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಸ್ ಸಂದರ್ಶನ ನಡೆಯಲಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಎನ್.ಎಸ್. ಪಾಂಚಾಳ ತಿಳಿಸಿದ್ದಾರೆ.
ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಆಧಾರ ಕಾರ್ಡ ಹಾಗೂ ಇತರೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಕಲಬುರಗಿ ಸರ್ಕಾರಿ ಪುರುಷ ಕೈಗಾರಿಕಾ ತರಬೇತಿ ಸಂಸ್ಥೆಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278611ನ್ನು ಸಂಪರ್ಕಿಸಲು ಕೋರಿದೆ.

ಡಿಸೆಂಬರ್ 10ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಡಿ.08.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗ-1ರಿಂದ ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಎಫ್-10 ಮತ್ತು ಎಫ್-12 ಫೀಡರಗಳ ವ್ಯಾಪ್ತಿಯಲ್ಲಿ ಸುಧಾರಣಾ ಕಾರ್ಯ ಕೈಗೊಳ್ಳುವ ಪ್ರಯುಕ್ತ ಡಿಸೆಂಬರ್ 10ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ. ವಿದ್ಯುತ್ ವ್ಯತ್ಯಯವಾಗುವ ಗ್ರಾಮಗಳ ವಿವರ ಇಂತಿದೆ.
110/11 ಕೆ.ವಿ. ಯುನಿವರ್ಸಿಟಿ ವಿದ್ಯುತ್ ವಿತರಣಾ ಕೇಂದ್ರದ: ಎಫ್-10 ನಂದೂರ ಕೆಐಡಿಬಿ 1 ಮತ್ತು 2. ಎಫ್-12 ಕೆಸರಟಗಿ ಇಂಡಸ್ಟ್ರೀಯಲ್, ನಂದೂರ ಫೀಡರಿನ ನಂದೂರ, ಕೆಸರಟಗಿ, ಇಂಡಸ್ಟ್ರೀಯಲ್ ಏರಿಯಾ, ನಂದೂರ, ನಂದೂರ(ಕೆ), ಧರ್ಮಪೂರ ಗ್ರಾಮಗಳು.

ತಿಂಗಳ ಚಿತ್ರ ಕಾರ್ಯಕ್ರಮ: ಯುವ ಕಲಾವಿದರಿಂದ ಅರ್ಜಿ ಆಹ್ವಾನ
*********************************************************
ಕಲಬುರಗಿ,ಡಿ.08.(ಕ.ವಾ.)-ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರತಿ ತಿಂಗಳಲ್ಲಿ 4 ದಿನದ ತಿಂಗಳ ಚಿತ್ರ ಕಾರ್ಯಕ್ರಮವನ್ನು ಯುವ ಕಲಾವಿದರಿಗಾಗಿ ನಡೆಸಲಿದೆ. ಇದಕ್ಕಾಗಿ ಆಸಕ್ತ ಯುವ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಆಸಕ್ತ ಕಲಾವಿದರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಸ್ವ-ವಿವರವನ್ನು ಭರ್ತಿ ಮಾಡಿ ಹಾಗೂ 2 ಕಲಾಕೃತಿಗಳ ಛಾಯಾಚಿತ್ರದೊಂದಿಗೆ ಅಕಾಡೆಮಿಗೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ 2018ರ ಜನವರಿ 6ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಕಾರ್ಯಾಲಯ, 2ನೇ ಮಹಡಿ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು-560002, ದೂರವಾಣಿ: 080-22480297 ಸಂಪರ್ಕಿಸುವುದು ಅಥವಾ ಅಕಾಡೆಮಿ http://ift.tt/2AQS9vC ವೆಬ್‍ಸೈಟ್‍ದಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ರಿಜಿಸ್ವ್ರಾರ್ ಇಂದ್ರಮ್ಮ ಹೆಚ್.ವಿ ತಿಳಿಸಿದಾರೆ.

ಹೀಗಾಗಿ ಲೇಖನಗಳು NEWS DATE: 8--12--2017
ಎಲ್ಲಾ ಲೇಖನಗಳು ಆಗಿದೆ NEWS DATE: 8--12--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS DATE: 8--12--2017 ಲಿಂಕ್ ವಿಳಾಸ https://dekalungi.blogspot.com/2017/12/news-date-8-12-2017.html
0 Response to "NEWS DATE: 8--12--2017"
ಕಾಮೆಂಟ್ ಪೋಸ್ಟ್ ಮಾಡಿ