NEWS AND PHOTO DATE: 13--12--2017

NEWS AND PHOTO DATE: 13--12--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು NEWS AND PHOTO DATE: 13--12--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : NEWS AND PHOTO DATE: 13--12--2017
ಲಿಂಕ್ : NEWS AND PHOTO DATE: 13--12--2017

ಓದಿ


NEWS AND PHOTO DATE: 13--12--2017

ಮುಖ್ಯಮಂತ್ರಿಗಳಿಂದ ಜಿಲ್ಲೆಯ ಸಾವಿರಾರು ಕೋಟಿಗಳ ಕಾಮಗಾರಿ ಲೋಕಾರ್ಪಣೆ
**********************************************************************
ಕಲಬುರಗಿ,ಡಿ.13(ಕ.ವಾ.)-ಕಲಬುರಗಿ ಜಿಲ್ಲೆಗೆ ಇತ್ತೀಚೆಗೆ ಮಂಜೂರಾಗಿರುವ ಹಾಗೂ ಪೂರ್ಣಗೊಂಡ ಸಾವಿರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ತಿಳಿಸಿದರು.
ಅವರು ಬುಧವಾರ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಫಜಲಪೂರ ತಾಲೂಕಿನ ಅಂದಾಜು 621 ಕೋಟಿ ರೂ., ಸೇಡಂ ತಾಲೂಕಿನ 133 ಕೋಟಿ ರೂ. ಹಾಗೂ ಜೇವರ್ಗಿ ತಾಲೂಕಿನ 194 ಕೋಟಿ ರೂ.ಗಳ ಕಾಮಗಾರಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು ಎಂದರು.
ಮುಖ್ಯಮಂತ್ರಿಗಳು ಡಿಸೆಂಬರ್ 15 ರಂದು ರಾತ್ರಿ ಕಲಬುರಗಿಗೆ ಆಗಮಿಸಿ ವಾಸ್ತವ್ಯ ಮಾಡುವರು. ಡಿಸೆಂಬರ್ 16ರಂದು ಬೆಳಿಗ್ಗೆ 9.30ಗಂಟೆಗೆ ಕಲಬುರಗಿ ನಗರದಲ್ಲಿ ಹೆಚ್.ಕೆ.ಇ. ಸೊಸೈಟಿಯ ಆಡಿಟೋರಿಯಂ ಉದ್ಘಾಟಿಸುವರು. ಬೆಳಗಿನ 10.30 ಗಂಟೆಗೆ ಅಫಜಲಪೂರ, ಮಧ್ಯಾಹ್ನ 1.30 ಗಂಟೆಗೆ ಸೇಡಂ ಹಾಗೂ ಸಾಯಂಕಾಲ 4.30 ಗಂಟೆಗೆ ಜೇವರ್ಗಿ ತಾಲೂಕಿನ ಯಡ್ರಾಮಿಯಲ್ಲಿ ಏರ್ಪಡಿಸಿರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಯಾ ತಾಲೂಕಿನಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು. ಅಲ್ಲದೇ ವಿವಿಧ ಇಲಾಖೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವರು ಎಂದರು.
ಮುಖ್ಯಮಂತ್ರಿಗಳು ಡಿಸೆಂಬರ್ 13ರಂದು ಬೀದರ ಜಿಲ್ಲೆಯಿಂದ ಪ್ರಾರಂಭಿಸಿ 2018ರ ಜನವರಿ 13ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಹೈದ್ರಾಬಾದ ಕರ್ನಾಟಕ ಜಿಲ್ಲೆಗಳಲ್ಲಿ ಡಿಸೆಂಬರ್ 18ರವರೆಗೆ ಪ್ರಯಾಣಿಸುವರು. ಸರ್ಕಾರ ತನ್ನ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಹಾಗೂ ಜನೋಪಯೋಗಿ ಕಾರ್ಯಕ್ರಮಗಳ ಕುರಿತು ರಾಜ್ಯದ ನಾಗರಿಕರಿಗೆ ಮನವರಿಕೆ ಮಾಡಿಕೊಡುವುದು ಈ ಪ್ರವಾಸದ ಉದ್ದೇಶವಾಗಿದೆ. ಸರ್ಕಾರದ ಶಿಷ್ಠಾಚಾರದಂತೆ ಕಾರ್ಯಕ್ರಮಗಳು ಜರುಗಲಿದ್ದು, ಪಕ್ಷದ ಕಾರ್ಯಕ್ರಮ ಇರುವುದಿಲ್ಲ. ಪಕ್ಷದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಾಗ ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ನಮ್ಮ ಸರ್ಕಾರ ಹೈದ್ರಾಬಾದ ಕರ್ನಾಟಕ ಪ್ರದೇಶವನ್ನು ಅಭಿವೃದ್ಧಿಗೊಳಿಸುವ ಕಾಳಜಿ ಮತ್ತು ಮುತವರ್ಜಿಯಿಂದ ಈ ಹಿಂದಿನ ಯು.ಪಿ.ಎ. ಸರ್ಕಾರದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದ ಮುಖಂಡರ ಪ್ರಯತ್ನದಿಂದ 371 ಕಲಂಗೆ ತಿದ್ದುಪಡಿ ತಂದು 371(ಜೆ) ಕಲಂ ರÀೂಪಿಸಿರುವುದು ಈ ಸರ್ಕಾರದ ಕೊಡುಗೆಯಾಗಿದೆ. 371(ಜೆ) ಕಲಂ ಅಡಿಯಲ್ಲಿ ಕ್ಯಾಬಿನೆಟ್ ಸಬ್ ಕಮಿಟಿ ರಚಿಸಿ ಕಾನೂನು ಹಾಗೂ ನಿಯಮಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ. ಸರ್ಕಾರ 371 ಜೆ ಕಲಂ ಅಡಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಸ್ಥಾಪಿಸಿ ಪ್ರತಿವರ್ಷ 1000 ಕೋಟಿ ರೂ.ಗಳಂತೆ 3 ವರ್ಷ 3000 ಕೋಟಿ ರೂ., ಹಾಗೂ ಪ್ರಸಕ್ತ ವರ್ಷ 1500 ಕೋಟಿ ರೂ.ಗಳ ಅನುದಾನ ನಿಗದಿಪಡಿಸಿದೆ. ಈಗಾಗಲೇ 2000 ಕೋಟಿ ರೂ.ಗಳು ಖರ್ಚಾಗಿವೆ. 2018ರ ಮೇ ಅಂತ್ಯದೊಳಗಾಗಿ ಎಲ್ಲ ಅನುದಾನವನ್ನು ಖರ್ಚುಮಾಡಲಾಗುವುದು. ಹೆಚ್.ಕೆ.ಆರ್.ಡಿ.ಬಿ.ಗೆ ಹಂಚಿಕೆಯಾಗಿರುವ ಒಟ್ಟು 4500 ಕೋಟಿ ರೂ.ಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ. ಹಣಕಾಸು ಇಲಾಖೆಯು ಅವಶ್ಯಕತೆಗೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲು ಸಿದ್ಧವಿದೆ ಎಂದರು.
ಹಲವಾರು ಕಾರಣಗಳಿಂದಾಗಿ ನೆನೆಗುದಗಿಗೆ ಬಿದ್ದಿದ್ದ ಈ ಭಾಗದ ಬೆಣ್ಣೇತೋರಾ ಯೋಜನೆಗೆ 160 ಕೋಟಿ ರೂ., ಲೋವರ ಮುಲ್ಲಾಮಾರಿ ಯೋಜನೆಗೆ 120 ಕೋಟಿ ರೂ., ಗಂಡೋರಿನಾಲಾ ಯೋಜನೆಗೆ 160 ಕೋಟಿ ರೂ. ಹಾಗೂ ಭೀಮಾ ಏತ ನೀರಾವರಿಗೆ 562 ಕೋಟಿ ರೂ.ಗಳನ್ನು ನೀಡುವ ಮೂಲಕ ಶಾಶ್ವತ ಪರಿಹಾರ ದೊರಕಿಸಿ ನೀರಾವರಿಗೆ ಕಾಯಕಲ್ಪ ನೀಡಿದೆ. ಹಲವು ದಿನಗಳಿಂದ ನಿಂತುಹೋಗಿದ್ದ ವಿಮಾನ ನಿಲ್ದಾಣ ಕಾಮಗಾರಿಯನ್ನು ಪುನರ್ ಪ್ರಾರಂಭಿಸಲಾಗಿದೆ. ವಿಮಾನ ನಿಲ್ದಾಣವನ್ನು ಮಾಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದರು.
ಸೇಡಂ ಮತಕ್ಷೆತ್ರದ ಎಲ್ಲ ತಾಂಡಾ ಮತ್ತು ಗ್ರಾಮಗಳಿಗೆ ಪಕ್ಕಾ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ಕಮಲಾವತಿ ಮತ್ತು ಕಾಗಿಣಾ ನದಿಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಮೂಲಕ ಹಾಗೂ ಎಲ್ಲ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ನೀರಾವರಿಗೆ ಅವಕಾಶ ಕಲ್ಪಿಸಲಾಗಿದೆ. ಸೇಡಂ ಮತಕ್ಷೇತ್ರದಲ್ಲಿ ಬೆಣ್ಣೆತೋರಾ ಹಾಗೂ ಲೋವರ ಮುಲ್ಲಾಮಾರಿ ನೀರಾವರಿ ಯೋಜನೆಯ ಅಂತಿಮ ಕಾಲುವೆಯಿಂದ ನೀರಾವರಿ ಪ್ರಯೋಜನ ಪಡೆಯಬೇಕಾಗಿರುವುದರಿಂದ ಈ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸೇಡಂ ನಗರದಲ್ಲಿ ರಂಗಮಂದಿರ, ಒಳಾಂಗಣ ಕ್ರೀಡಾಂಗಣ, ಆಸ್ಪತ್ರೆ ಹಾಗೂ ನಾಗರಿಕರು ಯೋಚಿಸದ ಕಾಮಗಾರಿಗಳನ್ನೆಲ್ಲ ಕೈಗೊಳ್ಳಲಾಗಿದೆ. 15 ವರ್ಷಗಳ ಹಿಂದೆ ಮತಕ್ಷೇತ್ರ ಹೇಗಿತ್ತು ಈಗ ಹೇಗಿದೆ ಎಂಬುದನ್ನು ಯಾವುದೇ ಗ್ರಾಮದ ನಾಗರಿಕರಿಂದ ಕೇಳಿ ತಿಳಿದುಕೊಳ್ಳಬಹುದಾಗಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಗಣ್ಯರಾದ ಅಲ್ಲಂಪ್ರಭು ಪಾಟೀಲ, ಜಗದೇವ ಗುತ್ತೇದಾರ ಮತ್ತಿತರರು ಉಪಸ್ಥಿತರಿದ್ದರು.
419 ಕೋಟಿ ರೂ. ಕಾಮಗಾರಿಗಳು ಚಾಲನೆಗೆ ಸಿದ್ದ
*******************************************
ಕಲಬುರಗಿ,ಡಿ.13(ಕ.ವಾ.)-ಕಲಬುರಗಿ ಜಿಲ್ಲೆಯ ಸೇಡಂ, ಅಫಜಲಪುರ ಹಾಗೂ ಜೇವರ್ಗಿ ತಾಲೂಕಿನಲ್ಲಿ ವಿವಿಧ ಇಲಾಖೆಯ ಒಟ್ಟು 419 ಕೋಟಿ ರೂ. ಕಾಮಗಾರಿಗಳು ಡಿಸೆಂಬರ್ 16ರಂದು ಮುಖ್ಯಮಂತ್ರಿಗಳಿಂದ ಚಾಲನೆಗೊಳ್ಳಲಿದೆ.
ಸೇಡಂ ತಾಲೂಕಿನ ಪಂಚಾಯತ್‍ರಾಜ್ ಇಂಜನಿಯರಿಂಗ್ ಇಲಾಖೆಯ ಮೂರು ಕಾಮಗಾರಿಗಳ ಒಟ್ಟು 2.60 ಕೋಟಿ ರೂ., ಕೆ,.ಆರ್.ಐ.ಡಿ.ಎಲ್. ಇಲಾಖೆಯ ನಾಲ್ಕು ಕಾಮಗಾರಿಗಳ ಒಟ್ಟು 8.65 ಕೋಟಿ ರೂ., ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಒಟ್ಟು 24 ಕಾಮಗಾರಿಯ 105.78 ಕೋಟಿ ರೂ. ಹಾಗೂ ಎ.ಪಿ.ಎಂ.ಸಿ.ಯ ಎರಡು ಕಾಮಗಾರಿಯ 3 ಕೋಟಿ ರೂ. ಹೀಗೆ ಒಟ್ಟು 120.03 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು.
ಜೇವರ್ಗಿ ತಾಲೂಕಿನ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಒಟ್ಟು 19 ಕಾಮಗಾರಿಗಳ 45.19 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಯ ಒಟ್ಟು 3 ಕಾಮಗಾರಿಯ 46.45 ಕೋಟಿ ರೂ., ಪಂಚಾಯತ್‍ರಾಜ್ ಇಂಜನಿಯರಿಂಗ್ ವಿಭಾಗದ 5 ಕಾಮಗಾರಿಗಳ 4.79 ಕೋಟಿ ರೂ., ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ನಾಲ್ಕು ಕಾಮಗಾರಿಗಳ 19.71 ಕೋಟಿ ರೂ., ಕೆ.ಬಿ.ಜೆ.ಎನ್.ಎಲ್.ನ ಒಂದು ಕಾಮಗಾರಿಗೆ 28.29 ಕೋಟಿ ರೂ., ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಇಂಜನಿಯರಿಂಗ್ ವಿಭಾಗದ 8 ಕಾಮಗಾರಿಗೆ 14.89 ಕೋಟಿ ರೂ. ಹಾಗೂ ಸಣ್ಣ ನೀರಾವರಿ ಇಲಾಖೆಯ 5 ಕಾಮಗಾರಿಗೆ 13 ಕೋಟಿ ರೂ. ಹೀಗೆ ಒಟ್ಟು 172.33 ಕೋಟಿ ರೂ. ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು.
ಅಫಜಲಪುರ ತಾಲೂಕಿನ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಒಟ್ಟು 14 ಕಾಮಗಾರಿಗಳ 101.36 ಕೋಟಿ ರೂ., ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಒಂದು ಕಾಮಗಾರಿಯ 3.89 ಕೋಟಿ ರೂ., ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ 3 ಕಾಮಗಾರಿಯ 3.25ಕೋಟಿ ರೂ., ಪಂಚಾಯತ್‍ರಾಜ್ ಇಂಜನಿಯರಿಂಗ್ ವಿಭಾಗದ 2 ಕಾಮಗಾರಿಯ 1.75 ಕೋಟಿ ರೂ., ಕೆ.ಎಂ.ಎಫ್.ನ ಒಂದು ಕಾಮಗಾರಿಯ 0.39 ಕೋಟಿ ರೂ., ಜೆಸ್ಕಾಂನ 2 ಕಾಮಗಾರಿಯ 7.11 ಕೋಟಿ ರೂ., ಕೆ.ಪಿ.ಟಿ.ಸಿ.ಎಲ್.ನ ಒಂದು ಕಾಮಗಾರಿ 9.30 ಕೋಟಿ ರೂ. ಹೀಗೆ ಒಟ್ಟು 127.05 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸುವರು.
ಚಿಂಚೋಳಿ: ಅಂಗನವಾಡಿ ಕಾರ್ಯಕರ್ತೆಯರ-
********************************************
ಸಹಾಯಕಿಯರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಡಿ.13.(ಕ.ವಾ.)-ಚಿಂಚೋಳಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ 09 ಅಂಗನವಾಡಿ ಕಾರ್ಯಕರ್ತೆಯರ ಮತ್ತು 20 ಅಂಗನವಾಡಿ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಚೆಯುಳ್ಳ ಅಭ್ಯರ್ಥಿಗಳು hಣಣಠಿ://ಚಿಟಿgಚಿಟಿತಿಚಿಜiಡಿeಛಿಡಿuiಣ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಅಥವಾ ಚಿಂಚೋಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಪೀಠೋಪಕರಣ ಸರಬರಾಜಿಗಾಗಿ ಅರ್ಜಿ ಆಹ್ವಾನ
*******************************************
ಕಲಬುರಗಿ,ಡಿ.13(ಕ.ವಾ.)-ಯಾದಗಿರಿ ಜಿಲ್ಲಾ ಮತ್ತು ಪ್ರಧಾನ ಜಿಲ್ಲಾ ನ್ಯಾಯಾಲಯ ಘಟಕಕ್ಕೆ ವಿವಿಧ 4 ಮಾದರಿಯ ಫೀಠೋಪಕರಣಗಳನ್ನು ಸರಬರಾಜು ಮಾಡಲು ಕೆ.ಟಿ.ಪಿ.ಪಿ. ಕಾಯ್ದೆ 1999 ನಿಯಮ 2000ರನ್ವಯ ಅರ್ಹ ತಯಾರಕರು, ಡೀಲರ್ ಮತ್ತು ಸರಬರಾಜುದಾರರಿಂದ ಟೆಂಡರ್ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿಳಿಸಿದ್ದಾರೆ.
ಸರಬರಾಜು ಮಾಡುವ ಪೀಠೋಪಕರಣಗಳ ವಿವರ ಇಂತಿದೆ. ಸ್ಟೀಲ್ ಸ್ಲೋಟೆಡ್ ಆ್ಯಂಗಲ್ ರ್ಯಾಕ್ ದೊಡ್ಡದ್ದು-16, ಸ್ಟೀಲ್ ಅಲಮಾರಿ-08, ವುಡನ್ ಚಿಕ್ಕದ್ದು ಟೇಬಲ್-04, ಹೈ ಬ್ಯಾಕ್ ರಿವಾಲ್ವಿಂಗ್ ಕುಷನ್ ಚೇರ್-04. ಟೆಂಡರ್ ಅರ್ಜಿಗಳನ್ನು ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಕಚೇರಿಯಿಂದ ಕಾರ್ಯದಿನದ ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಪಡೆದು ಭರ್ತಿ ಮಾಡಿ ಅದರೊಂದಿಗೆ ಇ.ಎಂ.ಡಿ. 10,000 ರೂ. ಡಿ.ಡಿ./ಎಫ್‍ಡಿಆರ್ ಯನ್ನು ಲಗತ್ತಿಸಿದ ಭದ್ರಪಡಿಸಿದ ಅರ್ಜಿಯ ಎರಡು ಲಕೋಟೆಗಳನ್ನು ಡಿಸೆಂಬರ್ 26ರ ಸಾಯಂಕಾಲ 4ಗಂಟೆಯೊಳಗಾಗಿ ಯಾದಗಿರಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಸಲ್ಲಿಸಬೇಕು. ಅರ್ಜಿದಾರರ ಸಮಕ್ಷಮದಲ್ಲಿ ಭದ್ರಪಡಿಸಿದ ಅರ್ಜಿ ಲಕೋಟೆಗಳನ್ನು ಡಿಸೆಂಬರ್ 27 ರಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ಪೀಠೋಪಕರಣಗಳ ವಿವರ, ಷರತ್ತು, ನಿಬಂಧನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.
ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿ ಆಹ್ವಾನ
*************************************
ಕಲಬುರಗಿ,ಡಿ.13.(ಕ.ವಾ): ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನ (ತಾಂತ್ರಿಕ ತರಬೇತಿ ಸಂಸ್ಥೆ) ದಿಂದ 2017-18 ನೇ ಸಾಲಿಗೆ ಆಪರೇಟರ್ ಅಡ್ವಾನ್ಸ್ ಮಶೀನ್ ಟೂಲ್ ಟ್ರೇಡ್‍ನಲ್ಲಿ ಪೂರ್ಣಾವಧಿ ಅಪ್ರೆಂಟಿಸ್ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 60ರಷ್ಟು ಅಂಕ ಪಡೆದಿರಬೇಕು. ವಯೋಮಿತಿ 2017ರ ಡಿಸೆಂಬರ್ 1ಕ್ಕೆ 15 ರಿಂದ 18 ವರ್ಷದೊಳಗಿರಬೇಕು. ಬಡ ವಿದ್ಯಾರ್ಥಿಗಳು ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿ ಹೊಂದಿರಬೇಕು. ತರಬೇತಿ ಸಮಯದಲ್ಲಿ ಪ್ರತಿ ತಿಂಗಳು 5500ರೂ.ಗಳ ಸ್ಟೈಫಂಡ್ ನೀಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಜಿಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಬಿ.ಪಿ.ಎಲ್./ ಅಂತ್ಯೋದಯ ಪಡಿತರ ಚೀಟಿ ಹಾಗೂ ಒಂದು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರವನ್ನು ಲಗತ್ತಿಸಿ ಡಿಸೆಂಬರ್ 27ರೊಳಗಾಗಿ ಸದರಿ ಕಚೇರಿಯಲ್ಲಿ ಸಲ್ಲಿಸಬೇಕು.
ಅಪ್ಟಿಟ್ಯೂಡ್ ಟೆಸ್ಟ್/ ಅಸೆಸ್ಮೆಂಟ್‍ಗೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಹೆಚ್.ಎ.ಎಲ್. ತಿತಿತಿ.hಚಿಟ-iಟಿಜiಚಿ.ಛಿomವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು. ಅಪ್ಟಿಟ್ಯೂಡ್ ಟೆಸ್ಟ್/ ಅಸೆಸ್ಮೆಂಟ್‍ವನ್ನು ಬೆಂಗಳೂರಿನ ಟಿ.ಟಿ.ಐ. ನಲ್ಲಿ 2018ರ ಜನವರಿ 24ರಂದು ನಡೆಯಲಿದೆ. ಈ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಡಿಸೆಂಬರ್ 14ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಡಿ.13.(ಕ.ವಾ): ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಲಬುರಗಿಯ ಕಾರ್ಯನಿರ್ವಾಹಕ ಇಂಜಿನಿಯರರ ಕಚೇರಿಯಿಂದ ಡಿಸೆಂಬರ್ 14ರಂದು 110ಕೆ.ವಿ. ನಾಲವಾರ ವಿದ್ಯುತ್ ವಿತರಣಾ ಕೇಂದ್ರದಲ್ಲಿ 110ಕೆ.ವಿ. ಪಿಟಿ ಸ್ಥಳಾಂತರ ಕಾರ್ಯಕೈಗೊಳ್ಳಲಾಗುತ್ತಿದೆ.
110ಕೆ.ವಿ. ನಾಲವಾರ, 33ಕೆ.ವಿ. ಯರಗೋಳ ಮತ್ತು 33ಕೆ.ವಿ. ಸನ್ನತಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯ ನಾಲವಾರ, ಯರಗೋಳ, ಸನ್ನತಿ, ತರಕಸಪೇಟೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಸಹಕರಿಸಬೇಕೆಂದು ಕಲಬುರಗಿ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 14ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
*************************************************
ಕಲಬುರಗಿ,ಡಿ.13.(ಕ.ವಾ): ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ಡಿಸೆಂಬರ್ 14ರಂದು ಗುರುವಾರ 11ಕೆ.ವಿ. ಸಿದ್ದೇಶ್ವರ ಫೀಡರ್ ವ್ಯಾಪ್ತಿಯಲ್ಲಿ ಯು.ಜಿ. ಕೇಬಲ ಕಾರ್ಯಕೈಗೊಳ್ಳುವ ಪ್ರಯುಕ್ತ ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
11 ಕೆ.ವಿ ಸಿದ್ದೇಶ್ವರ: ಪ್ರಗತಿ ಕಾಲೋನಿ, ಬಡೇಪುರ, ಎಂ.ಜಿ. ರೋಡ, ಆರ್.ಟಿ.ಓ. ಕಚೇರಿ, ಜೆ.ಡಿ.ಎ., ಸಂತ್ರಾಸವಾಡಿ, ದರ್ಶನಾಪುರ ಲೇಔಟ್, ಎಂ.ಆರ್.ಎಂ.ಸಿ. ಕಾಲೇಜು ಎದುರುಗಡೆ, ಭರತ ನಗರ ತಾಂಡಾ, ದರ್ಶನ ಅಪಾರ್ಟ್‍ಮೆಂಟ್, ಬಸವೇಶ್ವರ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಆಳಂದ: ಅಂಗನವಾಡಿ ಕಾರ್ಯಕರ್ತೆಯರ-
***************************************
ಸಹಾಯಕಿಯರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
************************************************
ಕಲಬುರಗಿ,ಡಿ.13.(ಕ.ವಾ.)-ಆಳಂದ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ 07 ಅಂಗನವಾಡಿ ಕಾರ್ಯಕರ್ತೆಯರ ಮತ್ತು 31 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಚೆಯುಳ್ಳ ಅಭ್ಯರ್ಥಿಗಳು http://ift.tt/2z7MTFO ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಆಳಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಡಿಸೆಂಬರ್ 16ರಂದು ಶ್ರೀನಿವಾಸ ಸರಡಗಿಯಲ್ಲಿ ಜನಸ್ಪಂದನ ಸಭೆ
*********************************************************
ಕಲಬುರಗಿ,ಡಿ.13.(ಕ.ವಾ.)-ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಜನಸ್ಪಂದನ ಸಭೆ ನಡೆಸಲಾಗುವುದು ಎಂದು ಗ್ರೇಡ್-2 ತಹಶೀಲ್ದಾರ್ ಜಗನ್ನಾಥ ಎಮ್. ಪೂಜಾರಿ ತಿಳಿಸಿದ್ದಾರೆ.
ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಗೊಳಪಟ್ಟ ಜನಪ್ರತಿನಿಧಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.



ಹೀಗಾಗಿ ಲೇಖನಗಳು NEWS AND PHOTO DATE: 13--12--2017

ಎಲ್ಲಾ ಲೇಖನಗಳು ಆಗಿದೆ NEWS AND PHOTO DATE: 13--12--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ NEWS AND PHOTO DATE: 13--12--2017 ಲಿಂಕ್ ವಿಳಾಸ https://dekalungi.blogspot.com/2017/12/news-and-photo-date-13-12-2017.html

Subscribe to receive free email updates:

0 Response to "NEWS AND PHOTO DATE: 13--12--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ