News and photo date: 05--12--2017

News and photo date: 05--12--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo date: 05--12--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo date: 05--12--2017
ಲಿಂಕ್ : News and photo date: 05--12--2017

ಓದಿ


News and photo date: 05--12--2017

ಇ.ಎಸ್.ಐ. ಆಸ್ಪತ್ರೆಗೆ ತಾಯಿ ಭಾಗ್ಯ ಯೋಜನೆ ವಿಸ್ತರಣೆ
*************************************************
ಕಲಬುರಗಿ,ssssಡಿ.05.(ಕ.ವಾ.)-ಆರೋಗ್ಯ ಸಂಸ್ಥೆಗಳಲ್ಲಿ ಸುರಕ್ಷಿತ ಹೆರಿಗೆ ಮಾಡಿಸುವುದನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ತಾಯಿ ಭಾಗ್ಯ ಯೋಜನೆಯನ್ನು ಇ.ಎಸ್.ಐ. ಆಸ್ಪತ್ರೆಗೆ ವಿಸ್ತರಿಸಲಾಗುತ್ತಿದೆ ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದರು.
ಅವರು ಮಂಗಳವಾರ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಾಯಿ ಭಾಗ್ಯ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆರಿಗೆಗಳಾಗುತ್ತಿದ್ದು, ಇ.ಎಸ್.ಐ. ಆಸ್ಪತ್ರೆಯಲ್ಲೂ ಹೆರಿಗೆ ಸೌಲಭ್ಯ ಪ್ರಾರಂಭವಾದಲ್ಲಿ ಬೇರೆ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ತಾಯಿ ಭಾಗ್ಯ ಯೋಜನೆಯಡಿ ಹೆರಿಗೆಯಾದಲ್ಲಿ ಪ್ರತಿ ಹೆರಿಗೆಗೆ ಸರ್ಕಾರದಿಂದ 3000ರೂ.ಗಳನ್ನು ನೀಡಲಾಗುವುದು ಎಂದರು.
ವಿಭಾಗದಲ್ಲಿ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ಹೆರಿಗೆಗಳು ಆಸ್ಪತ್ರೆಗಳಲ್ಲಿ ಆಗುವ ಹಾಗೆ ನೋಡಿಕೊಳ್ಳಬೇಕು. ತಾಲೂಕು ಆಸ್ಪತ್ರೆಗಳಲ್ಲಿಯೂ ಸಹ ಕ್ಲಿಷ್ಟಕರ ಹೆರಿಗೆ ಮಾಡಿಸುವಂತಹ ಸೌಲಭ್ಯ, ಸಿಜೇರಿಯನ್ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಬೇಕು. ವಿಭಾಗದಲ್ಲಿ ತಜ್ಞ ವೈದ್ಯರ ಕೊರತೆಯಿದ್ದು, ಸರ್ಕಾರ ತಜ್ಞ ವೈದ್ಯರನ್ನು ಭರ್ತಿ ಮಾಡುವವರೆಗೆ ಬೋಧನಾ ಆಸ್ಪತ್ರೆಗಳಲ್ಲಿನ ಪೋಸ್ಟ್ ಗ್ರಾಜ್ಯುಯೆಟ್ ವಿದ್ಯಾರ್ಥಿಗಳ ಸೇವೆ ಪಡೆಯಲು ಚಿಂತಿಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಈಗಾಗಲೇ ಕೆಲವು ತಜ್ಞ ವೈದ್ಯರಿದ್ದು, ಖಾಲಿಯಿರುವ ತಜ್ಞ ವೈದ್ಯರ ಸೇವೆ ನೀಡಲು ಎರಡು ದಿನಕ್ಕೊಂದು ಬಾರಿ ಬೋಧನಾ ಆಸ್ಪತ್ರೆಯ ತಜ್ಞ ವೈದ್ಯರ ಸೇವೆ ಪಡೆಯಲಾಗುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಾಲೂಕು ಆಸ್ಪತ್ರೆಗಳಲ್ಲಿ ಕೊರತೆಯಿರುವ ತಜ್ಞ ವೈದ್ಯರ ಹಾಗೂ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವ ದಿನಾಂಕಗಳನ್ನು ಬೋಧನಾ ಆಸ್ಪತ್ರೆಗಳಿಗೆ ನೀಡಬೇಕು. ಇ.ಎಸ್.ಐ., ಬಸವೇಶ್ವರ, ಕೆ.ಬಿ.ಎನ್., ಎಂ.ಆರ್.ಎಂ.ಸಿ. ಹಾಗೂ ಜಿಮ್ಸ್ ತಜ್ಞ ವೈದ್ಯರು ವಿಶೇಷ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಬೇಕು. ಇದಕ್ಕೆ ಹೆಚ್.ಕೆ.ಆರ್.ಡಿ.ಬಿ.ಯಿಂದ ಅವಶ್ಯಕ ಸಹಾಯ ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ಕಲಬುರಗಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಗೈನಾಕಾಲಾಜಿಸ್ಟ್ ಹಾಗೂ ಮಕ್ಕಳ ತಜ್ಞ (ಪೆಡಿಯಾಟ್ರಿಶಿಯನ್) ವೈದ್ಯರನ್ನು ನೇಮಿಸಲಾಗಿದೆ. ಜಿಲ್ಲೆಗೆ ಕೇವಲ ಮೂರು ಅರವಳಿಕೆ ತಜ್ಞ (ಅನಸ್ಥೇಶಿಯಾ) ವೈದ್ಯರಿದ್ದಾರೆ. ಪ್ರತಿ ತಿಂಗಳು ಸೇಡಂ ತಾಲೂಕು ಆಸ್ಪತ್ರೆಯಲ್ಲಿ ಅಂದಾಜು 200 ಹೆರಿಗೆಗಳು ಹಾಗೂ ಉಳಿದ ತಾಲೂಕು ಆಸ್ಪತ್ರೆಗಳಲ್ಲಿ ಅಂದಾಜು 100 ಹೆರಿಗೆಗಳು ಆಗುತ್ತವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಅವಶ್ಯಕ ರಕ್ತದ ಸಂಗ್ರಹ ಇರುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಇ.ಎಸ್.ಐ. ಡೀನ್ ಡಾ|| ನಾಗರಾಜ, ಜಿಮ್ಸ್ ಅಧಿಕಾರಿ ದೊಡಮನಿ ಮತ್ತಿತರರು ಪಾಲ್ಗೊಂಡಿದ್ದರು.
ತಾಯಿ ಭಾಗ್ಯ ಯೋಜನೆ ಅನುಷ್ಠಾನಕ್ಕೆ ಖಾಸಗಿ ಹೆರಿಗೆ
***********************************************
ಆಸ್ಪತ್ರೆಗಳು ಭಾಗಿಯಾಗಲು ಮನವಿ
*********************************
ಕಲಬುರಗಿ,ಡಿ.05.(ಕ.ವಾ.)-ತಾಯಿ ಭಾಗ್ಯ ಯೋಜನೆಯಡಿ ನೋಂದಣಿಯಾದ ಗರ್ಭಿಣಿಯರಿಗೆ ಸೇವೆ ನೀಡಬಯಸುವ ಖಾಸಗಿ ಹೆರಿಗೆ ಆಸ್ಪತ್ರೆಗಳು ಮುಕ್ತವಾಗಿ ಚರ್ಚಿಸಿ ಮುಂದೆ ಬಂದಲ್ಲಿ ಅಂತಹ ಆಸ್ಪತ್ರೆಗಳನ್ನು ತಾಯಿ ಭಾಗ್ಯ ಯೋಜನೆಯಡಿ ನೋಂದಾಯಿಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಖಾಸಗಿ ಹೆರಿಗೆ ಆಸ್ಪತ್ರೆಗಳೊಂದಿಗೆ ಚರ್ಚಿಸಿ ಜಿಲ್ಲೆಯಲ್ಲಿ ತಾಯಿ ಮತ್ತು ಮಗು ಮರಣ ಪ್ರಮಾಣ ಕಡಿಮೆ ಮಾಡಲು ಜಿಲ್ಲೆಗೆ ವಿಶೇಷ ಕಾರ್ಯಕ್ರಮ ರೂಪಿಸಬೇಕಾಗಿದೆ. ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸುವ ನಿಟ್ಟಿನಲ್ಲಿ ಖಾಸಗಿ ಹೆರಿಗೆ ಆಸ್ಪತ್ರೆಗಳು ಮುಂದೆ ಬರಬೇಕೆಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಿಯಮಿತವಾಗಿ ಗರ್ಭಿಣಿಯರ ತಪಾಸಣೆ ನಡೆಯುತ್ತದೆ. ಗರ್ಭ ಧರಿಸಿದವರನ್ನು ತಾಯಿ ಭಾಗ್ಯ ಯೋಜನೆಯಡಿ ನೋಂದಾಯಿಸಿಕೊಂಡು ಅವರ ರಕ್ತ, ರಕ್ತದೊತ್ತಡ, ಮಧುಮೇಹ, ಮಗುವಿನ ಬೆಳವಣಿಗೆ ಇತ್ಯಾದಿಗಳ ನಿಯಮಿತ ತಪಾಸಣೆ ಮಾಡಬೇಕು. ಹೆರಿಗೆ ಸಮಯದಲ್ಲಿ ರಕ್ತಹೀನತೆ ಅಥವಾ ರಕ್ತದೊತ್ತಡದಿಂದ ಮಹಿಳೆಯರು ಬಳಲಬಾರದು ಎಂದರು.
ಹೆರಿಗೆ ಸಮಯದಲ್ಲಿ ತಾಯಿ ಮರಣ ಹೊಂದಲು ರಕ್ತಹೀನತೆ ಮತ್ತು ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ. ತಾಯಿ ಭಾಗ್ಯ ಯೋಜನೆಯಡಿ ನೋಂದಣಿಯಾಗುವ ಗರ್ಭಿಣಿಯರು ತಮಗಿಷ್ಟವಾದ ಖಾಸಗಿ ಹೆರಿಗೆ ಆಸ್ಪತ್ರೆ ಹೆಸರನ್ನು ಸೂಚಿಸಿದಲ್ಲಿ ಅದನ್ನು ತಾಯಿ ಕಾರ್ಡನಲ್ಲಿ ನಮೂದಿಸಿದಲ್ಲಿ ನಿಯಮಿತವಾಗಿ ಕಾಲಕಾಲಕ್ಕೆ ಗರ್ಭಿಣಿಯರ ತಪಾಸಣೆ ಕೈಗೊಳ್ಳಲು ಅನುಕೂಲವಾಗುವುದು. ಈ ವರದಿಯು ಹೆರಿಗೆ ಸಮಯಕ್ಕೆ ಬಹಳ ಉಪಯೋಗವಾಗುವುದು. ತಾಯಿ ಭಾಗ್ಯ ಯೋಜನೆಯಡಿ ನೋಂದಣಿಯಾದ ಮಹಿಳೆಯರನ್ನು ಖಾಸಗಿ ಆಸ್ಪತ್ರೆಗೆ ಹೆರಿಗೆಗೆ ಕಳುಹಿಸಿದಾಗ ಅವರೊಂದಿಗೆ ಸಾಮಾನ್ಯ ಹೆರಿಗೆ ಅಥವಾ ಸಿಜೇರಿಯನ್ ಹೆರಿಗೆಯ ಔಷಧಿ ಕಿಟ್‍ಗಳನ್ನು ಕಳುಹಿಸಬೇಕು. ಗರ್ಭಿಣಿಯರ ಆರೈಕೆಯೊಂದಿಗೆ ಕಡಿಮೆ ತೂಕದ ಶಿಶುಗಳ ಆರೈಕೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವಂತೆ ಖಾಸಗಿ ಹೆರಿಗೆ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಶಿವರಾಜ ಸಜ್ಜನಶೆಟ್ಟಿ, ಖಾಸಗಿ ಹೆರಿಗೆ ಆಸ್ಪತ್ರೆಯ ವೈದ್ಯರು ಪಾಲ್ಗೊಂಡಿದ್ದರು.
ನಕಲು ಮುಕ್ತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಸೂಕ್ತ ಕ್ರಮ
*******************************************************
ಕಲಬುರಗಿ,ಡಿ.05.(ಕ.ವಾ.)-ಕಲಬುರಗಿ ವಿಭಾಗದಲ್ಲಿ 2018ರಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ನಕಲು ಮುಕ್ತವಾಗಿಸಲು ಸೂಕ್ತ ಕ್ರಮ ಜರುಗಿಸಬೇಕೆಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇತ್ತೀಚೆಗೆ ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿ ವಿಡಿಯೋ ಕಾನ್ಫ್‍ರೆನ್ಸ್‍ನಲ್ಲಿ 2017ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಲಬುರಗಿ ವಿಭಾಗದ ಸುಮಾರು ಶೇ. 71ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುತ್ತೀರ್ಣರಾದ ಶೇ. 29ರಷ್ಟು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕೆಂದರು.
ಪರೀಕ್ಷೆಗಳನ್ನು ನಕಲು ಮುಕ್ತವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಕೊಠಡಿ ಮೇಲ್ವಿಚಾರಕರನ್ನು ರ್ಯಾಂಡಮ್ ಪದ್ದತಿ ಮೂಲಕ ಆಯಾ ಶಾಲೆಯ ಶಿಕ್ಷಕರು ಅವರ ಶಾಲೆಯ ವಿದ್ಯಾರ್ಥಿಗಳಿರುವ ಪರೀಕ್ಷಾ ಕೇಂದ್ರಗಳಲ್ಲಿ ಇರದಂತೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದಲೇ ಆಯ್ಕೆಮಾಡಿ ಆದೇಶ ನೀಡುವ ಕ್ರಮವನ್ನು ಅನುಸರಿಸಬೇಕು ಎಂದು ಸೂಚಿಸಿದರು.
2018 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಷ್ಟಪಡುವ ಸಾಧಾರಣ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಉರ್ದು ಮಾಧ್ಯಮದಲ್ಲಿ ಪಾಸಿಂಗ್ ಪ್ಯಾಕೇಜ್ ಪುಸ್ತಿಕೆಗಳನ್ನು ಮುದ್ರಿಸಿ ಕೊಡಲಾಗುವುದು. ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಖರವಾಗಿ ತಿಳಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಹಾಗೂ ರಜೆ ಮತ್ತು ಅನಧಿಕೃತ ಗೈರು ಹಾಜರಾದ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಯುವವರೆಗೆ ಅತಿಥಿ ಶಿಕ್ಷಕರ ಸೇವೆ ಪಡೆಯಬೇಕೆಂದು ಸೂಚಿಸಿದರು.
ಶಾಲಾ ಅವಧಿಯ ನಂತರ ಕೆಲವು ವಿದ್ಯಾರ್ಥಿಗಳಿಗೆ ಮನೆಯಲ್ಲಿ ಅಭ್ಯಾಸ ಮಾಡಲು ಅನುಕೂಲಕರವಾದ ಸ್ಥಳಾವಕಾಶ ಮತ್ತು ಅಗತ್ಯ ಸೌಲಭ್ಯ ಇರುವುದಿಲ್ಲ. ಅಂಥ ವಿದ್ಯಾರ್ಥಿಗಳಿಗೆ ಶಾಲಾ ಅವಧಿಯ ನಂತರ ಅಭ್ಯಾಸ ಮಾಡಲು ಅನುಕೂಲವಾಗುವಂತೆ ಸ್ಥಳಿಯ ಸರ್ಕಾರಿ ಶಾಲೆಯಲ್ಲಿ ಕನಿಷ್ಟ ಸೌಲಭ್ಯಗಳಾದ ಬೆಳಕು, ನೀರು, ಆಸನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಶೈಕ್ಷಣಿಕ ಸಲಹೆಗಾರ ಎನ್.ಬಿ. ಪಾಟೀಲ ಮತ್ತಿತರರು ವಿಡಿಯೋ ಕಾನ್ಫ್‍ರೆನ್ಸ್‍ನಲ್ಲಿ ಪಾಲ್ಗೊಂಡಿದ್ದರು.
ಸಂಚಾರ ನಿಯಮ ಉಲ್ಲಂಘನೆ: ಪ್ರಕರಣ ದಾಖಲು ಹಾಗೂ ದಂಡ ವಸೂಲಿ
****************************************************************
ಕಲಬುರಗಿ,ssssಡಿ.05.(ಕ.ವಾ.)- ಸುಗಮ ಮತ್ತು ಸುರಕ್ಷಿತ ಸಂಚಾರ ಸಪ್ತಾಹ ಅಂಗವಾಗಿ ನವೆಂಬರ್ 24 ರಿಂದ ಡಿಸೆಂಬರ್ 1ರವರೆಗಿನ ಅವಧಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಲಬುರಗಿ ಜಿಲ್ಲೆಯಲ್ಲಿ 21,554 ಪ್ರಕರಣ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 12,529 ಪ್ರಕರಣ ದಾಖಲಿಸಿ ಒಟ್ಟು ರೂ. 25,91,700 ದಂಡ. ಬೀದರ ಜಿಲ್ಲೆಯಲ್ಲಿ 10,742 ಪ್ರಕರಣ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 7,774 ಪ್ರಕರಣ ದಾಖಲಿಸಿ 11,75,600 ರೂ. ದಂಡ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 5,287 ಪ್ರಕರಣ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವವರ ವಿರುದ್ಧ 2,754 ಪ್ರಕರಣ ದಾಖಲಿಸಿ 6,17,000 ರೂ.ಗಳ ದಂಡ ವಿಧಿಸಲಾಗಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಆಲೋಕಕುಮಾರ ಅವರು ತಿಳಿಸಿದ್ದಾರೆ.
ಈಶಾನ್ಯ ವಲಯದ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ 2017ರ ನವೆಂಬರ್ 24 ರಿಂದ ಡಿಸೆಂಬರ್ 1ರವರೆಗೆ ಹೆಲ್ಮೆಟ್ ರಹಿತ ವಾಹನ ಚಾಲನೆ, ಕುಡಿದ ಅಮಲಿನಲ್ಲಿ ವಾಹನ ಚಾಲನೆ, ಟ್ರಿಪಲ್ ರೈಡಿಂಗ್ ಪ್ರಕರಣಗಳು, ಅತೀ ವೇಗ ಮತ್ತು ನಿಷ್ಕಾಳಜಿತನದ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ, ಸಮವಸ್ತ್ರ ಧರಿಸದೇ ವಾಹನ ಚಾಲನೆ, ವಾಹನಗಳಿಗೆ ಟಿಂಟೇಡ್ ಗ್ಲಾಸ್ ಅಳವಡಿಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ
ಈಶಾನ್ಯ ವಲಯದ ಕಲಬುರಗಿ, ಯಾದಗಿರಿ ಮತ್ತು ಬೀದರ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಕಲಬುರಗಿ ನಗರ, ಜೇವರ್ಗಿ, ಶಹಾಬಾದ, ಸೇಡಂ, ಚಿಂಚೋಳಿ, ಆಳಂದ, ಅಫಜಲಪುರ, ಬೀದರ್ ಜಿಲ್ಲೆಯ ಬೀದರ್À ನಗರ, ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ ಮತ್ತು ಯಾದಗಿರಿ ಜಿಲ್ಲೆಯ ಯಾದಗಿರಿ ನಗರ, ಸುರಪುರ, ಶಹಾಪೂರ ತಾಲ್ಲೂಕಾ ಕೇಂದ್ರಸ್ಥಾನಗಳಲ್ಲಿ ಸಂಚಾರಿ ನಿಯಮಗಳ ಪಾಲನೆಯ ಜಾಗೃತಿ ಮೂಡಿಸುವುದಕ್ಕಾಗಿ ಹೆಲ್ಮೆಟ್ ಧರಿಸಿಕೊಂಡು ಪೊಲೀಸರ ಜಾಥಾ, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಮುಖಾಂತರ, ಜನದಟ್ಟಣೆ ಮತ್ತು ಮಹತ್ವದ ಪ್ರದೇಶಗಳಲ್ಲಿ ಸಂಚಾರಿ ನಿಯಮಗಳನ್ನೊಳಗೊಂಡ ಫಲಕ ಅಳವಡಿಕೆ ಮೂಲಕ, ತಾಲ್ಲೂಕಾ ಮತ್ತು ಜಿಲ್ಲಾ ಕೇಂದ್ರಗಳಲ್ಲಿನ ಚಿತ್ರಮಂದಿರಗಳಲ್ಲಿ ಸ್ಲೈಡ್ ಮುಖಾಂತರ, ವಾಹನಗಳಲ್ಲಿ ಧ್ವನಿಸುರುಳಿ ಮುಖಾಂತರ ಮತ್ತು ಪೊಲೀಸರಿಂದ ದ್ವಿಚಕ್ರ ರ್ಯಾಲಿ ಮುಖಾಂತರ ಕೂಡ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕಾಗಿ ಜಾಗೃತಿ ಮೂಡಿಸಲಾಗಿದೆ. ಹೆಲ್ಮೆಟ್ ಧರಿಸಿ ವಾಹನ ಚಾಲನೆ, ಸಮವಸ್ತ್ರ ಧರಿಸಿ ಅಟೋ ಚಾಲನೆ ಮತ್ತು ಬೇಲ್ಟ್ ಧರಿಸಿ 4 ಚಕ್ರ ವಾಹನ ಚಲಾಯಿಸಿ ಸಂಚಾರಿ ನಿಯಮ ಪಾಲಿಸುವವರಿಗೆ ಪುಷ್ಪ ನೀಡಿ ಶುಭ ಕೋರಲಾಗಿದೆ. ಈ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಹಮ್ಮಿಕೊಂಡ ಸಪ್ತಾಹದಲ್ಲಿ ಸಾರ್ವಜನಿಕರು ಪೊಲೀಸ್ ಕ್ರಮಕ್ಕೆ ಸ್ಪಂದಿಸಿ ಹೆಚ್ಚಿನ ಸಹಕಾರ ನೀಡಿದ್ದಕ್ಕಾಗಿ ಹಾಗೂ ಈ ನಿಟ್ಟಿನಲ್ಲಿ ಈಶಾನ್ಯ ವಲಯದ ಪೊಲೀಸ್ ತೆಗೆದುಕೊಂಡ ಕ್ರಮಕ್ಕೆ ಎಲ್ಲರೂ ಸಹಕಾರ ನೀಡಿದ್ದಕ್ಕೆ ಇಲಾಖೆಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ.
2015 ನೇ ಸಾಲಿನಲ್ಲಿ ಈಶಾನ್ಯ ವಲಯದ ಕಲಬುರಗಿ ಜಿಲ್ಲೆಯಲ್ಲಿ ಭಾರಿ ರಸ್ತೆ ಅಪಘಾತ 332 ಮತ್ತು ರಸ್ತೆ ಅಪಘಾತ 1185 ಪ್ರಕರಣ. ಯಾದಗಿರಿಯಲ್ಲಿ 135 ಭಾರಿ ರಸ್ತೆ ಅಪಘಾತ ಮತ್ತು ರಸ್ತೆ ಅಪಘಾತ 301 ಮತ್ತು ಬೀದರ್ ಜಿಲ್ಲೆಯಲ್ಲಿ ಭಾರಿ ರಸ್ತೆ ಅಪಘಾತ 280 ಮತ್ತು ರಸ್ತೆ ಅಪಘಾತ 1179 ಪ್ರಕರಣ, 2016 ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಭಾರೀ ರಸ್ತೆ ಅಪಘಾತ 327, ರಸ್ತೆ ಅಪಘಾತ 1050 ಯಾದಗಿರಿ ಜಿಲ್ಲೆಯಲ್ಲಿ ಭಾರೀ ರಸ್ತೆ ಅಪಘಾತ 130 ಮತ್ತು ರಸ್ತೆ ಅಪಘಾತ 267 ಮತ್ತು ಬೀದರ್ ಜಿಲ್ಲೆಯಲ್ಲಿ ಭಾರೀ ರಸ್ತೆ ಅಪಘಾತ 268 ಮತ್ತು ರಸ್ತೆ ಅಪಘಾತ 1091 ಪ್ರಸ್ತುತ ಸಾಲಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಭಾರೀ ರಸ್ತೆ ಅಪಘಾತ 289, ರಸ್ತೆ ಅಪಘಾತ 928 ಪ್ರಕರಣ, ಯಾದಗಿರಿ ಜಿಲ್ಲೆಯಲ್ಲಿ ಭಾರೀ ರಸ್ತೆ ಅಪಘಾತ 125 ಮತ್ತು ರಸ್ತೆ ಅಪಘಾತ 259 ಮತ್ತು ಬೀದರ್ ಜಿಲ್ಲೆಯಲ್ಲಿ ಭಾರೀ ರಸ್ತೆ ಅಪಘಾತ 252 ಮತ್ತು ರಸ್ತೆ ಅಪಘಾತ 890 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿ ನೂರಾರು ಜನ ತಮ್ಮ ಪ್ರಾಣ ಕಳೆದುಕೊಂಡಿರುತ್ತಾರೆ. ಇಂತಹ ಭೀಕರ ರಸ್ತೆ ಅಪಘಾತಗಳ ಹತೋಟಿಗಾಗಿ ಮುಂದೆಯೂ ಈ ಕಾರ್ಯಾಚರಣೆ ಜಾರಿಯಲ್ಲಿರುತ್ತದೆ ಎಂದರು.
ದ್ವಿಚಕ್ರ ವಾಹನ ಚಾಲಕರು ಮತ್ತು ಪಿಲನ್ ರೈಡರ್ (ಹಿಂಬದಿ ಸವಾರರು) ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಮೆಟ್ ಧರಿಸದ ಹಿಂಬದಿ ಸವಾರರ ವಿರುದ್ಧ ಕೂಡ ಪ್ರಕರಣ ದಾಖಲಿಸಲಾಗುವುದು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೂ ಚರ್ಚಿಸಿ ಅನುಮತಿ ಇಲ್ಲದ ವಾಹನಗಳ ಚಾಲನೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು. 4 ಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸುವುದು, ಆಟೋ ಡ್ರೈವರ್‍ಗಳು ಸಮವಸ್ತ್ರ ಧರಿಸಿಕೊಂಡು ತಮ್ಮ ಆಟೋ ರಿಕ್ಷಾವನ್ನು ನಿಗದಿತ ಮಿತಿಯಲ್ಲಿ ಚಾಲನೆ ಮಾಡುವುದು ಕಡ್ಡಾಯ ಹಾಗೂ ಚಾಲಕರು ಕುಡಿದ ಅಮಲಿನಲ್ಲಿ ವಾಹನ ಚಾಲನೆ, ಟ್ರಿಪಲ್ ರೈಡಿಂಗ್, ಅತೀ ವೇಗ ಮತ್ತು ನಿಷ್ಕಾಳಜಿತನದ ಚಾಲನೆ, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ, ಸಮವಸ್ತ್ರ ಧರಿಸದೇ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ತಂಡದ ಕ್ಷೇತ್ರ ಭೇಟಿ
************************************
ಕಲಬುರಗಿ,ssssಡಿ.05.(ಕ.ವಾ.)-ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದ ಅನುಷ್ಠಾನ ಹಾಗೂ ಪ್ರಗತಿ ಕುರಿತು ರಾಜ್ಯದ ಕಲಬುರಗಿ, ಬೆಳಗಾವಿ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕೇಂದ್ರ ಸರ್ಕಾರದ ತಂಡವು ಇತ್ತೀಚೆಗೆ ಎರಡು ದಿನಗಳ ಭೇಟಿ ನೀಡಿತು. ಈ ತಂಡವು ಕಲಬುರಗಿ ತಾಲೂಕಿನ ಖಣದಾಳ, ಕಮಲಾಪೂರ ಮತ್ತು ಸಾವಳಗಿ(ಬಿ) ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ಭೇಟಿ ನೀಡಿತು.
ಈ ತಂಡವು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರನ್ನು ಭೇಟಿ ಮಾಡಿ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಅನುಷ್ಠಾನ ಕುರಿತು ಕ್ಷೇತ್ರ ಭೇಟಿ ನೀಡಿ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಮಟ್ಟದ ತಂಡದೊಂದಿಗೆ ಸ್ವಚ್ಚ ಭಾರತ್ ಮಿಷನ್ ಕಾರ್ಯಕ್ರಮದ ಅನುಷ್ಟಾನ ಕುರಿತು ಚರ್ಚಿಸಿತು.
ಕಲಬುರಗಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದ ತಂಡದೊಂದಿಗೆ ತಾಲ್ಲೂಕು ಮಟ್ಟದ ತಂಡದೊಂದಿಗೆ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದ ಅನುಷ್ಠಾನ, ಕಾರ್ಯಕ್ರಮದ ರೂಪುರೇಷೆಗಳನ್ನು ಹಾಗೂ ಜಿಲ್ಲೆಯಲ್ಲಿ ವಿಶೇಷ ಅನುಷ್ಟಾನದಲ್ಲಿರುವ “ಸಿರಿ” ಹಾಗೂ “ಕೂಸು” ಕಾರ್ಯಕ್ರಮ ಕುರಿತು ಚರ್ಚಿಸಿದರು. ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನ ಹಾಗೂ ಕಾರ್ಯಕ್ರಮದಿಂದ ಪ್ರಗತಿ ಕಂಡು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಭಿನಂದಿಸಿದರು. ಕಾರ್ಯಕ್ರಮದ ಮುಂದಿನ ಹೆಜ್ಜೆ ಹಾಗೂ 2018ರ ಮಾರ್ಚ್‍ಗೆ ನಿಗದಿಪಡಿಸಿದ ಗುರಿ ಹಾಗೂ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮಾಡುವಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ಕುರಿತು ಚರ್ಚಿಸಿದರು.
ಖಣದಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ವೀಕ್ಷಿಸಿದ ತಂಡವು ಕೂಸು ಮತ್ತು ಸಿರಿ ಕಾರ್ಯಕ್ರಮದಡಿಯಲ್ಲಿ ನಿರ್ಮಾಣವಾದ ಶೌಚಾಲಯಗಳ ಜೊತೆಗೆ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿರ್ಮಾಣವಾದ ಶಾಲಾ ತಡೆಗೊಡೆಯನ್ನು ಸಹ ವೀಕ್ಷಿಸಿದರು. ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಮತ್ತು ಗ್ರಾಮಸ್ಥರೊಡನೆ ಕಾರ್ಯಕ್ರಮದ ಅನುಷ್ಟಾನ ಕುರಿತು ಚರ್ಚಿಸಿದರು. ಕಲಬುರಗಿ ತಾಲೂಕಿನ ಸಾವಳಗಿ(ಬಿ) ಹಾಗೂ ಕಮಲಾಪುರ ಗ್ರಾಮ ಪಂಚಾಯತಿಗಳನ್ನು ವೀಕ್ಷಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಂಡದವರೊಂದಿಗೆ ಮಾತನಾಡಿ, ಕೂಸು ಹಾಗೂ ಸಿರಿ ಮತ್ತು ಜಿಲ್ಲೆಯಲ್ಲಿ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿಯಲ್ಲಿ ಸಮುದಾಯದ ಭಾಗವಹಿಸುವಿಕೆ ಹಾಗೂ ವೈಯಕ್ತಿಕ ಶೌಚಾಲಯದ ನಿರ್ಮಾಣ ಬಳಕೆ ಮುಂತಾದ ವಿಷಯ ಕುರಿತು ಚರ್ಚಿಸಿದರು.
ಸಿರಿ ಕಾರ್ಯಕ್ರಮ ಜಾಗೃತಿ ಮೂಡಿಸಲು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳು
ಕಲಬುರಗಿ,ssssಡಿ.05.(ಕ.ವಾ.)-ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯ “ಸಿರಿ” ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲ ಶಾಲೆಗಳ ಮಕ್ಕಳಲ್ಲಿ ಜಾಗೃತಿ ಮೂಡಿಸಲು ತಾಲೂಕಿನ ಎಲ್ಲ ಶಾಲೆಗಳಲ್ಲಿ ಚಿತ್ರಕಲಾ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಶಾಲೆಗಳಲ್ಲಿ ಇನ್ನೂ ಹೆಚ್ಚು ಅರಿವು ಮೂಡಿಸುವ ತನ್ಮೂಲಕ ಮಕ್ಕಳ ವೈಯಕ್ತಿಕ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಡಿಸೆಂಬರ್ 10ರವರೆಗೆ (ಮಾನವ ಹಕ್ಕುಗಳ ಸಪ್ತಾಹ ಅಂಗವಾಗಿ) ಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ವಚ್ಚ ಶಾಲೆ ಸ್ವಸ್ಥ ಮಕ್ಕಳು ವಿಷಯ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಡಿಸೆಂಬರ್ 6ರವರೆಗೆ ಶಾಲಾ ಹಂತದಲ್ಲಿ, ಡಿಸೆಂಬರ್ 7 ಹಾಗೂ 8ರಂದು ತಾಲೂಕು ಹಂತದಲ್ಲಿ ಹಾಗೂ ಡಿಸೆಂಬರ್ 11 ಹಾಗೂ 12ರಂದು ಜಿಲ್ಲಾ ಹಂತದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಶಾಲಾ ಹಂತ, ತಾಲೂಕು ಹಂತ ಹಾಗೂ ಜಿಲ್ಲಾ ಹಂತಗಳಲ್ಲಿ ಆಯ್ಕೆಯಾದ ಸ್ಪರ್ಧಾಥಿಗಳಿಗೆ ಸೂಕ್ತ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಆರೋಗ್ಯವೇ ಭಾಗ್ಯ ಭಾಷಣ ಸ್ಪರ್ಧೆಯನ್ನು ಡಿಸೆಂಬರ್ 6ರವರೆಗೆ ಶಾಲಾ ಹಂತದಲ್ಲಿ, ಡಿಸೆಂಬರ್ 7 ಹಾಗೂ 8ರಂದು ತಾಲೂಕು ಹಂತದಲ್ಲಿ ಹಾಗೂ ಡಿಸೆಂಬರ್ 11 ಹಾಗೂ 12ರಂದು ಜಿಲ್ಲಾ ಹಂತದಲ್ಲಿ ಏರ್ಪಡಿಸಲಾಗಿದೆ. ಭಾಷಣ ಸ್ಪರ್ಧೆಯ ಸಮಯ 10 ನಿಮಿಷ ಇರುತ್ತದೆ. ಈ ಶಾಲಾ, ತಾಲೂಕು ಹಾಗೂ ಜಿಲ್ಲಾ ಹಂತಗಳಲ್ಲಿ ಆಯ್ಕೆಯಾದ ಸ್ಪರ್ಧಾಥಿಗಳಿಗೆ ಸೂಕ್ತ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ರಾಷ್ಟ್ರೀಯ ಮಹಿಳಾ ಮಕ್ಕಳ ದಿನಾಚರಣೆ, ಹೆಣ್ಣು ಮಕ್ಕಳ ಪ್ರೋತ್ಸಾಹ ನಮ್ಮ ಹೊಣೆ, ಹೆಣ್ಣು ಮಗುವಿನ ರಕ್ಷಣೆ; ಸರ್ಕಾರದ ಪ್ರೋತ್ಸಾಹದಾಯಕ ಯೋಜನೆಗಳು ಮತ್ತು ಅವಕಾಶಗಳು ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನು ಡಿಸೆಂಬರ್ 6ರವರೆಗೆ ಶಾಲಾ ಹಂತ, ಡಿಸೆಂಬರ್ 7 ಹಾಗೂ 8ರಂದು ತಾಲೂಕು ಹಂತ ಹಾಗೂ ಡಿಸೆಂಬರ್ 11 ಹಾಗೂ 12ರಂದು ಜಿಲ್ಲಾ ಹಂತದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಬಂಧ ಸ್ಪರ್ಧೆಯ ಸಮಯ 30 ನಿಮಿಷ ಇರುತ್ತದೆ. ಶಾಲಾ ಹಂತ, ತಾಲೂಕು ಹಂತ ಹಾಗೂ ಜಿಲ್ಲಾ ಹಂತಗಳಲ್ಲಿ ಆಯ್ಕೆಯಾದ ಸ್ಪರ್ಧಾಥಿಗಳಿಗೆ ಸೂಕ್ತ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯ ಸಿರಿ ಎಂಬ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅನುಷ್ಠಾನದಲ್ಲಿದೆ. ಸಿರಿ ಎಂದರೆ ಸಂಪತ್ತು, ನಮ್ಮ ಮಕ್ಕಳೇ ಸಂಪತ್ತು ಆಗಿರುವುದರಿಂದ ನಮ್ಮ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ‘ಸಿರಿ’ ಯೋಜನೆ ರೂಪಿಸಲಾಗಿದೆ. ‘ಸಿರಿ’ ಎಂದರೆ ಬೆಂಬಲ, ಆರಂಭಿಸು, ತಲುಪು, ಸ್ಫೂರ್ತಿ ಎಂಬ ನಾಲ್ಕು ಹೆಜ್ಜೆಗಳ ಮೂಲಕ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ವಿನೂತನ ಹೆಜ್ಜೆಯನ್ನು ಇಟ್ಟು, ಈ ಕುರಿತು ಮಹತ್ವದ ವಿಷಯವನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದೆ.
ಸ್ವಚ್ಛ ಭಾರತ ಮಿಷನ್ ಯೋಜನೆಯ ಸಿರಿ ಕಾರ್ಯಕ್ರಮದಡಿ ಪ್ರತಿ ಗುರುವಾರ ಬೆಳಿಗ್ಗೆ 9.30 ರಿಂದ 10.30 ಗಂಟೆಯವರೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರೇಡಿಯೋ ಕಾರ್ಯಕ್ರಮದ ಮೂಲಕ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ, ಶಾಲಾ ಮಕ್ಕಳು ಮತ್ತು ಶಿಕ್ಷಕರನ್ನುದ್ದೇಶಿಸಿ ವೈಯಕ್ತಿಕ ಸ್ವಚ್ಛತೆ, ಕಲಿಕೆ ಹಾಗೂ ಶೈಕ್ಷಣಿಕ ವಿಷಯಗಳ ಕುರಿತು ಮಾಹಿತಿ ನೀಡುವರು.
ಡಿಸೆಂಬರ್ 7ರಂದು ಸಶಸ್ತ್ರ ಪಡೆಗಳ ಧ್ವಜಾ ದಿನಾಚರಣೆ
************************************************
ಕಲಬುರಗಿ,ssssಡಿ.05.(ಕ.ವಾ.)-ಸಶಸ್ತ್ರ ಪಡೆಗಳ ಧ್ವಜಾ ದಿನಾಚರಣೆಯನ್ನು ಡಿಸೆಂಬರ್ 7ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಮಾಜಿ ಸೈನಿಕರು, ವೀರ ನಾರಿಯರು ಹಾಗೂ ಅವಲಂಬಿತರು ಈ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕಲಬುರಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಬೇಸಿಗೆ ಕಂಪ್ಯೂಟರ್ ತರಬೇತಿ: ಹೆಸರು ನೋಂದಾಯಿಸಲು ಡಿ. 12 ಕೊನೆಯ ದಿನ
ಕಲಬುರಗಿ,ssssಡಿ.05.(ಕ.ವಾ.)-ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ 30 ದಿನಗಳ ಬೇಸಿಕ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಆಧಾರ್ ಕಾರ್ಡ, ಮೊಬೈಲ್ ಸಂಖ್ಯೆ ವಿವರಗಳೊಂದಿಗೆ ಡಿಸೆಂಬರ್ 12ರೊಳಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846ನ್ನು ಸಂಪರ್ಕಿಸಲು ಕೋರಲಾಗಿದೆ.
ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಕಾರ್ಯಕ್ರಮ
ಕಲಬುರಗಿ,ssssಡಿ.05.(ಕ.ವಾ.)- ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ 2017-18ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಡಿಸೆಂಬರ್ 6ರಂದು ಬೆಳಿಗ್ಗೆ 10.30 ಗಂಟೆಗೆ ಕಲಬುರಗಿಯ ಆಸೀಫ್ ಗಂಜ್‍ನ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಆಸಕ್ತ ಸರ್ಕಾರಿ, ಅನುದಾನಿತ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರು ವಿವಿಧ ಸ್ಪರ್ಧೆಗಳಾದ ಗಾಯನ ಸ್ಪರ್ಧೆ, ಆಶು ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಪಾಠೋಪಕರಣಗಳ ತಯಾರಿಕೆ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ (ಸಾಮಾನ್ಯ ಜ್ಞಾನ) ಹಾಗೂ ರಸಪ್ರಶ್ನೆ (ವಿಜ್ಞಾನ) ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಯಮಾನುಸಾರ ನಳದ ಸಂಪರ್ಕ ಪಡೆಯಲು ಸೂಚನೆ
*************************************************
ಕಲಬುರಗಿ,ssssಡಿ.05.(ಕ.ವಾ.)-ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕೋಟನೂರ-ಡಿ (ದತ್ತಾತ್ರೇಯ ಪಾಟೀಲ ಹೆಚ್. ರೇವೂರ) ಬಡಾವಣೆಯಲ್ಲಿ ವಾಸಿಸುತ್ತಿರುವ ಮತ್ತು ಕಟ್ಟಡ ನಿರ್ಮಿಸುತ್ತಿರುವ ನಾಗರಿಕರು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನಳದ ಸಂಪರ್ಕವನ್ನು ನಿಯಮಾನುಸಾರ ಪಡೆಯಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಟನೂರ ಡಿ ಬಡಾವಣೆಯಲ್ಲಿ ಇ.ಎಲ್.ಎಸ್.ಆರ್. ಟ್ಯಾಂಕ್ ಮೂಲಕ ನೀರು ಸರಬರಾಜು ಸೌಕರ್ಯ ಕಲ್ಪಿಸಲಾಗಿದೆ. ಕೆಲವು ಜನ ಮಾತ್ರ ನೀರಿನ ಸೌಕರ್ಯ ಪಡೆದಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ಅಭಿಯಂತರರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗ ಕಲಬುರಗಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೇವರ್ಗಿ: ಅಂಗನವಾಡಿ ಕಾರ್ಯಕರ್ತೆಯರ-
***************************************
ಸಹಾಯಕಿಯರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
**********************************************
ಕಲಬುರಗಿ,ಡಿ.05.(ಕ.ವಾ.)-ಜೇವರ್ಗಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿಯಿರುವ 20 ಅಂಗನವಾಡಿ ಕಾರ್ಯಕರ್ತೆಯರ ಮತ್ತು 50 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜೇವರ್ಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಚೆಯುಳ್ಳ ಅಭ್ಯರ್ಥಿಗಳು http://ift.tt/2zNI7ep ಆನ್‍ಲೈನ್ ಮೂಲಕ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. ಖಾಲಿಯಿರುವ ಹುದ್ದೆಗಳ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ(ಗ್ರಾ) ಅಂಗನವಾಡಿ ಕಾರ್ಯಕರ್ತೆಯರ-
*******************************************
ಸಹಾಯಕಿಯರ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ
***********************************************
ಕಲಬುರಗಿ,ssssಡಿ.05.(ಕ.ವಾ.)- ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿಯಿರುವ 03 ಅಂಗನವಾಡಿ ಕಾರ್ಯಕರ್ತೆಯರ, 01-ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 27 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಇಚ್ಚೆಯುಳ್ಳ ಅಭ್ಯರ್ಥಿಗಳು http://ift.tt/2zNI7ep ಆನ್‍ಲೈನ್ ಮೂಲಕ ಡಿಸೆಂಬರ್ 29ರ ಸಂಜೆ 5.30 ಗಂಟೆಯೊಳಗಾಗಿ ಆನ್‍ಲೈನ್ ಮೂಲಕ ಸಲ್ಲಿಸಬೇಕು. ಖಾಲಿಯಿರುವ ಹುದ್ದೆಗಳ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸದರಿ ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.
ಕಲಾವಿದರನ್ನು ಪ್ರೋತ್ಸಾಹಿಸಲು ಅಂಚೆ ಚೀಟಿ ಸಹಕಾರಿ
************************************************
ಕಲಬುರಗಿ,ssssಡಿ.05.(ಕ.ವಾ.)-ಹೈದ್ರಾಬಾದ ಕರ್ನಾಟಕ ವಿಭಾಗದಲ್ಲಿ ಕಲೆ ಮತ್ತು ಕಲಾವಿದರನ್ನು ಬೆಳೆಸಲು ಕಲಾನಿಕೇತನ ಬಹಳ ಸಹಕಾರಿಯಾಗಿದೆ. ಅಂಚೆ ಇಲಾಖೆಯಿಂದ ಹಿರಿಯ ಕಲಾವಿದರ ಲಕೋಟೆ ಮತ್ತು ಅಂಚೆ ಚೀಟಿ ಬಿಡುಗಡೆಗೊಳಿಸಿದ್ದು ನನಗೆ ಖುಷಿ ತಂದಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಮಂಗಳವಾರ ಮಾತೋಶ್ರೀ ನೀಲಗಂಗಮ್ಮ ಎ. ಅಂಧಾನಿ ಆರ್ಟ್ ಗ್ಯಾಲರಿಯಲ್ಲಿ ಅಂಚೆ ಇಲಾಖೆಯು ಕಲಾವಿದ ಮಾರ್ತಂಡರಾವ ಟಿ. ಬೋಪಾಲೆ ಅವರ ಹುಟ್ಟುಹಬ್ಬದ ಅಂಗವಾಗಿ ಮತ್ತು ಐಡಿಯಲ್ ಪೈನ್ ಆರ್ಟ್ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಹೊರತಂದಿರುವ ಎಂ.ಟಿ. ಬೋಪಾಲೆ ಅವರ ವಿಶೇಷ ಲಕೋಟೆ ಹಾಗೂ ಮೈ ಸ್ಟ್ಯಾಂಟ್ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಧಾರವಾಡ ಉತ್ತರ ಕರ್ನಾಟಕ ವಿಭಾಗದ ಪೋಸ್ಟರ್ ಮಾಸ್ಟರ್ ಜನರಲ್ ವೀಣಾ ಆರ್. ಶ್ರೀನಿವಾಸ ಮಾತನಾಡಿ, ಕರ್ನಾಟಕದಲ್ಲಿರುವ ವಿಶೇಷ ವ್ಯಕ್ತಿಗಳು, ಸ್ಮಾರಕ, ಪ್ರವಾಸಿ ತಾಣಗಳ ಕುರಿತ ಮೈ ಸ್ಟ್ಯಾಂಪ್ ಮತ್ತು ಲಕೋಟೆಗಳನ್ನು ಅಂಚೆ ಇಲಾಖೆಯಿಂದ ಹೊರತರಲಾಗುತ್ತಿದೆ. ಕಲಾನಿಕೇತನವು ಹೆಸರಾಂತ ಕಲಾವಿದ ಎಂ.ಟಿ. ಬೋಪಾಲೆ ಅವರ ಮೈ ಸ್ಟ್ಯಾಂಪ್ ಹೊರತಂದಿದೆ. ಈ ರೀತಿಯಲ್ಲಿ ಸಾರ್ವಜನಿಕರು ಅಂಚೆ ಇಲಾಖೆಯೊಂದಿಗೆ ಸಹಕರಿಸಿದಲ್ಲಿ ಹೆಚ್ಚು ಕೆಲಸ ಮಾಡಲು ಅನುಕೂಲವಾಗುವುದು ಎಂದರು.
ಕಲಬುರಗಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಎಸ್.ಎಸ್. ಪಾಟೀಲ ಮಾತನಾಡಿ, ಕಲಬುರಗಿಯಲ್ಲಿ ಎಸ್.ಎಂ. ಪಂಡಿತ, ಎಂ.ಟಿ. ಬೋಪಾಲೆ ಅವರಂತಹ ಪ್ರಸಿದ್ಧ ಕಲಾವಿದರ ಪರಂಪರೆಯಿದೆ. ಇಂದಿನ ಯುವ ಪೀಳಿಗೆಗೆ ಕಲಾವಿದರನ್ನು ಪರಿಚಯಿಸಲು ಕಲಾವಿದರ ಸ್ಟ್ಯಾಂಪ್ ಮತ್ತು ಕವರಗಳು ಸಹಕಾರಿಯಾಗುವವು. ಅಂಚೆ ಇಲಾಖೆಯು ಹಲವಾರು ಆನ್‍ಲೈನ್ ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳ ಪ್ರಯೋಜನ ಪಡೆಯಬೇಕೆಂದು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಲಬುರಗಿಯ ದಿ ಐಡಿಯಲ್ ಫೈನ್ ಆರ್ಟ್ ಸೊಸೈಟಿ ಕಾರ್ಯದರ್ಶಿ ಡಾ. ಅಂದಾನಿ ವಿ. ಜಿ. ಮಾತನಾಡಿ, ಇಂದಿನ ಯುಗದಲ್ಲಿ ಕಲಾ ಶಿಕ್ಷಣ ದುಬಾರಿಯಾಗಿದೆ. ಶ್ರೀಮಂತ ಮತ್ತು ಬುದ್ಧಿವಂತ ಜನರು ವೈದ್ಯಕೀಯ, ಇಂಜನಿಯರಿಂಗ್ ಅಧ್ಯಯನ ಮಾಡುತ್ತಾರೆ. ಈ ಭಾಗದ ಬಡ ವಿದ್ಯಾರ್ಥಿಗಳು ಕಲೆಯಲ್ಲಿ ಅಭಿರುಚಿ ತೋರಿ ಅಧ್ಯಯನ ಮಾಡುತ್ತಿದ್ದಾರೆ. ಕಲಾನಿಕೇತನವು ಸುಮಾರು 50ವರ್ಷಗಳಿಂದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತ ಮುನ್ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಕಲಾವಿದ ಎಂ.ಟಿ. ಬೋಪಾಲೆ ಅವರ ಕವರ ಮತ್ತು ಅಂಚೆ ಚೀಟಿ ರಚಿಸಿದ ಕಲಾವಿದರಾದ ಡಾ. ಸತೀಶ ಮತ್ತು ಆಕಾಶ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಂಚೆ ಇಲಾಖೆಯ ನಿವೃತ್ತ ಮಾರುಕಟ್ಟೆ ಅಧಿಕಾರಿ ಅಖ್ತರ ಅಲಿ, ಐಡಿಯಲ್ ಫೈನ್ ಆರ್ಟ್ ಕಾಲೇಜಿನ ಪ್ರಾಂಶುಪಾಲ ಪೂರ್ಣಿಮಾ ಪಾಟೀಲ ಮತ್ತಿತರ ಕಲಾವಿದರು ಪಾಲ್ಗೊಂಡಿದ್ದರು.







ಹೀಗಾಗಿ ಲೇಖನಗಳು News and photo date: 05--12--2017

ಎಲ್ಲಾ ಲೇಖನಗಳು ಆಗಿದೆ News and photo date: 05--12--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo date: 05--12--2017 ಲಿಂಕ್ ವಿಳಾಸ https://dekalungi.blogspot.com/2017/12/news-and-photo-date-05-12-2017.html

Subscribe to receive free email updates:

0 Response to "News and photo date: 05--12--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ