ಶೀರ್ಷಿಕೆ : ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ
ಲಿಂಕ್ : ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ
ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಪ್ಪಳ ( ಕರ್ನಾಟಕ ವಾರ್ತೆ) ಡಿ.14: ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ ಯಾವುದೇ ಪಕ್ಷಬೇಧ ,ಪ್ರಾದೇಶಿಕತೆಯ ತಾರತಮ್ಯ ಮಾಡದೇ ಸಮಾನ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿಂದು ಸುಮಾರು 235 ಕೋಟಿ ರೂಪಾಯಿಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವ ಸಾಧನಾ ಸಂಭ್ರಮ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯುಚ್ಛಕ್ತಿ ಬಿಲ್ ಪಾವತಿಸದ ಬಡವರ ಮನೆಗಳ ಹಾಗೂ ನೀರಾವರಿ ಪಂಪಸೆಟ್ ಗಳ ಸಂಪರ್ಕ ಕಡಿತಗೊಳಿಸಲಾಗಿತ್ತು. ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಮನ್ನಾ ಮಾಡಿ ಸಂಪರ್ಕ ಕಲ್ಪಿಸಲಾಯಿತು.ವಿವಿಧ ಅಭಿವೃದ್ಧಿ ನಿಗಮ ಗಳಲ್ಲಿ ಬಾಕಿ ಇದ್ದ ಬಡವರ ಸಾಲ ಮನ್ನಾ ಮಾಡಿ ಋಣಮುಕ್ತಗೊಳಿಸಲಾಯಿತು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ, ಹಗರಣಕ್ಕೆ ಆಸ್ಪದ ನೀಡದೇ ದಕ್ಷ ,ಸಮರ್ಥ ಆಡಳಿತವನ್ನು ನೀಡಿದ್ದೇವೆ. ಕೋಮುಭಾವನೆ ಕೆರಳಿಸಿ, ಶಾಂತಿ ಕದಡಿ ರಾಜಕೀಯ ಮಾಡಬಾರದು. ಸಂವಿಧಾನ,ಸಂಸದೀಯ ಭಾಷೆಯನ್ನು ಎಲ್ಲ ರಾಜಕೀಯ ಪಕ್ಷಗಳು ಅಳವಡಿಸಿಕೊಳ್ಳಬೇಕು.
ಸಹಕಾರ ಬ್ಯಾಂಕುಗಳಲ್ಲಿ ನ ರೈತರವ50 ಸಾವಿರ ರೂಪಾಯಿವರೆಗಿನ ಒಟ್ಟು 10 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇವೆ.
ಅನ್ನಭಾಗ್ಯ,ಕ್ಷೀರಭಾಗ್ಯ,ಕ್ಷೀರಧಾರೆ,ವಿದ್ಯಾಸಿರಿ ಯೋಜನೆಗಳ ಮೂಲಕ ಹಸಿವು ,ಅಪೌಷ್ಟಿಕತೆ ಮುಕ್ತ ಕರ್ನಾಟಕ ನಿರ್ಮಿಸಲು ಧೃಡ ಹೆಜ್ಜೆಗಳನ್ನು ಇಡಲಾಗಿದೆ.ಹಾಸ್ಟೇಲ್ ವಂಚಿತ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ವರದಾನವಾಗಿದೆ.
ಅಭಿವೃದ್ಧಿ ವಿಚಾರದಲ್ಲಿ ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಕೆಲ ಧರ್ಮಗಳನ್ನು ಹೊರಗಿಡುವ ಹುನ್ನಾರ ಸರಿಯಲ್ಲ.
ಕಳೆದ ನಾಲ್ಕೂವರೆ ವರ್ಷಗಳಲ್ಲಿ 14 ಲಕ್ಷ ಉದ್ಯೋಗ ಸೃಜನೆ ಮಾಡಲಾಗಿದೆ.ಬಂಡವಾಳ ಹೂಡಿಕೆಯಲ್ಲಿ 11 ನೇ ಸ್ಥಾನದಲ್ಲಿದ್ದ ಕರ್ನಾಟಕ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಪ.ಜಾ. ಹಾಗೂ ಪ.ಪಂ.ಗಳ ಜನರ ವಿಕಾಸಕ್ಕಾಗಿ ಮೀಸಲಿಡಲಾದ ಹಣ ಕಡ್ಡಾಯವಾಗಿ ಬಳಸಲು ಎಸ್.ಸಿ.ಪಿ ಮತ್ತು .ಟಿ ಎಸ್.ಪಿ .ಕಾಯ್ದೆ ಜಾರಿ ಮಾಡಿದ್ದು,ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀತಿ ತಂದುದು. ತಾಂಡಾ,ಗಿರಿಜನ ಹಾಡಿ,ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ, ವಾಸಿಸುವನೇ ಒಡೆಯ ಕಾಯ್ದೆಗಳನ್ನು ಅನುಷ್ಠಾನ ಕ್ಕೆ ತಂದುದು ಐತಿಹಾಸಿಕ ನಿರ್ಣಯಗಳಾಗಿವೆ ಎಂದರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿದ ಗಂಗಾವತಿ ತಾಲೂಕಿನ ಪ್ರಗತಿ ಮಾಹಿತಿ ಕಿರುಪುಸ್ತಕವನ್ನು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಉನ್ನತ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ,ಅಭಿವೃದ್ಧಿ ಹಾಗೂ ಸರ್ವರಿಗೂ ಸಮಪಾಲು ಸಮಬಾಳು ಎಂಬ ವಿಷಯದಲ್ಲಿ ನಂಬಿಕೆ ಇಟ್ಟುಕೊಂಡಿರುವಮುಖ್ಯಮಂತ್ರಿಗಳು ಬಡವರು ಹಾಗೂ ರೈತರ ಹಿತಾಭಿವೃದ್ಧಿಗೆ ಬದ್ಧವಾಗಿದ್ದಾರೆ.ಪ್ರತಿ ವರ್ಷ 5 ಸಾವಿರ ಕೋಟಿ ರೂ.ಗಳನ್ನು ಕೇವಲ ಆಹಾರಧಾನ್ಯದ ಸಬ್ಸಿಡಿಗಾಗಿಯೇ ಖರ್ಚು ಮಾಡುತ್ತಿದೆ.ದೇಶದಲ್ಲಿ ಬೇರೆ ಯಾವ ರಾಜ್ಯಗಳೂ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿಲ್ಲ.
ಉಚಿತ ಗ್ಯಾಸ್ ಸ್ಟೋವ್ ಹಾಗೂ ಸಿಲಿಂಡರ್ ಒದಗಿಸಲು ಪ್ರತಿ ಬಡಕುಟುಂಬಗಳಿಗೆ 4040 ರೂ ವೆಚ್ಚದಲ್ಲಿ ಮುಖ್ಯಮಂತ್ರಿಗಳ ಅನಿಲ ಭಾಗ್ಯ ಯೋಜನೆಯನ್ನು ಮಾರ್ಚ ಅಂತ್ಯದೊಳಗಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಮುನಿರಾಬಾದ್ ಮೆಹಬೂಬನಗರ ಹಾಗೂ ಗದಗ ವಾಡಿ ರೇಲ್ವೇ ಯೋಜನೆಗಳಿಗೆ ರಾಜ್ಯಸರಕಾರ ಅರ್ಧ ಪಾಲು ನೀಡಿ ಭೂಮಿಯನ್ನು ಸಹ ಉಚಿತವಾಗಿ ನೀಡಿದೆ.ಮಾರುಕಟ್ಟೆ ದರದಲ್ಲಿ ರೈತರಿಗೆ ಪರಿಹಾರ ನೀಡಿ ಕೃಷ್ಣಾ ಬಿ ಸ್ಕೀಮ್ ಯೋಜನೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ .ಇದಕ್ಕೆ ಮುಖ್ಯಮಂತ್ರಿಗಳು 2395 ಕೋಟಿ ರೂ.ಗಳ ಹಣ ನೀಡಲು ತಾತ್ವಿಕವಾಗಿ ಒಪ್ಪಿದ್ದಾರೆ ಎಂದರು.
ಶಾಸಕ ಇಕ್ಬಾಲ್ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸಾಸಾಕಷ್ಟು ಸ್ಪಂದಿಸಿದ್ದಾರೆ. ತುಂಗಭದ್ರಾ ಎಡದಂಡೆ ನಾಲೆಯ ಎರಡನೇ ಬೆಳೆಗೆ ನೀರೊದಗಿಸುವ ಕಾರ್ಯವನ್ನು ಸರಾಗವಾಗಿ ನಡೆಸಿಕೊಟ್ಟರು.
ಯಾವುದೇ ಜಾತಿ,ವರ್ಗಗಳಿಗೆ ಸೀಮಿತವಾಗದೇ ಎಲ್ಲರಿಗೂ ಸಮಾನವಾಗಿ ಕಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸೌಹಾರ್ದತೆ ,ಕೋಮು ಸಾಮರಸ್ಯ ಕದಡಿ, ಕಲಹ ಸೃಷ್ಟಿಸುವ ಶಕ್ತಿಗಳನ್ನು ನಿಗ್ರಹಿಸುವ ಕಾರ್ಯವನ್ನು ಜಿಲ್ಲೆಯ ಪೊಲೀಸರು, ಜಿಲ್ಲಾಧಿಕಾರಿ ಗಳು ಸಮರ್ಥವಾಗಿ ಶ್ರಮಿಸಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸುಮಾರು 620 ಕೋಟಿ ರೂ.ಗಳ ಅನುದಾನ ಮುಖ್ಯಮಂತ್ರಿಗಳು ನೀಡಿರುವದು ಸಾಮಾನ್ಯ ಸಂಗತಿಯಲ್ಲ. ಈ ಭಾಗದಲ್ಲಿ ನಿರಂತರವಾಗಿ ಆನೆಗೊಂದಿ ಹಾಗೂ ಕನಕಗಿರಿ ಉತ್ಸವಕ್ಕಾಗಿ ಶಾಶ್ವತ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ನೇರ ನಡೆ ನುಡಿಗೆ ಹೆಸರಾಗಿರುವ ಮುಖ್ಯಮಂತ್ರಿಗಳ ಮನೋಭಾವ ಮೆಚ್ಚಿ ಅವರೊಂದಿಗೆ ಗುರುರಿಸಿಕೊಂಡಿದ್ದೇನೆ.ಕ್ಷೇತ್ರದ ಅಭಿವೃದ್ಧಿ ನನಗೆ ಮುಖ್ಯ, ಯಾರಿಗೂ ದ್ರೋಹ ಬಗೆದಿಲ್ಲ ಎಂದರು.
ಶಾಸಕರಾದ ಶಿವರಾಜ ತಂಗಡಗಿ, ಕೆ.ರಾಘವೇಂದ್ರ ಹಿಟ್ನಾಳ, ಹಂಪನಗೌಡ ಬಾದರ್ಲಿ, ಜಿ.ಪಂ.ಅಧ್ಯಕ್ಷ ರಾಜಶೇಖರ ಹಿಟ್ನಾಳ,ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿ.ಪಂ ಸಿಇಓ ವೆಂಕಟರಾಜ್ ಮತ್ತಿತರರು ಇದ್ದರು.
ಹೀಗಾಗಿ ಲೇಖನಗಳು ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ
ಎಲ್ಲಾ ಲೇಖನಗಳು ಆಗಿದೆ ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಕ್ ವಿಳಾಸ https://dekalungi.blogspot.com/2017/12/blog-post_14.html
0 Response to "ಅಭಿವೃದ್ಧಿಯಲ್ಲಿ ರಾಜಕೀಯ ಭೇದ, ತಾರತಮ್ಯ ಮಾಡಿಲ್ಲ - ಮುಖ್ಯಮಂತ್ರಿ ಸಿದ್ದರಾಮಯ್ಯ"
ಕಾಮೆಂಟ್ ಪೋಸ್ಟ್ ಮಾಡಿ