ಶೀರ್ಷಿಕೆ : 2ND ROUND NEWS AND PHOTOS 19-12-2017
ಲಿಂಕ್ : 2ND ROUND NEWS AND PHOTOS 19-12-2017
2ND ROUND NEWS AND PHOTOS 19-12-2017
ಪಾಲಿಕೆ ಆಯುಕ್ತ ಸುನೀಲ ಕುಮಾರ ವರ್ಗಾವಣೆ:
*****************************************
ನೌಕರರ ಸಂಘದಿಂದ ಆತ್ಮೀಯ ಬೀಳ್ಕೊಡುಗೆ
****************************************
ಕಲಬುರಗಿ,ಡಿ.19.(ಕ.ವಾ.)-ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಸುನೀಲ ಕುಮಾರ ಪಿ. ಅವರನ್ನು ಕರ್ನಾಟಕ ಮುನಿಸಿಪಲ್ ಡಾಟಾ ಸೋಸೈಟಿಯ ಜಂಟಿ ನಿರ್ದೇಶಕ (ಸುಧಾರಣೆ) ಹುದ್ದೆಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಪಾಲಿಕೆಯ ನೌಕರರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಕಲಬುರಗಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರರಾದ ಶರಣ ಕುಮಾರ ಮೋದಿ, ಮಾಜಿ ಮಹಾಪೌರ ಸಯ್ಯದ್ ಅಹ್ಮದ್, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರು ಹಾಗೂ ಪಾಲಿಕೆಯ ಕಾರ್ಯನಿರ್ವಹಕ ಅಭಿಯಂತ ಆರ್.ಪಿ.ಜಾಧವ ಸೇರಿದಂತೆ ಪಾಲಿಕೆಯ ನೌಕರ ವೃಂದದವರು ಸುನೀಲ ಕುಮಾರ್ ಅವರನ್ನು ಮೈಸೂರು ಪೇಟಾ, ಶಾಲು ಹೊದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಗಣ್ಯರು ಸುನೀಲ ಕುಮಾರ ಅವರು ಕಳೆದ ಎರಡು ವರ್ಷಗಳಲ್ಲಿ ಪಾಲಿಕೆಯ ಸಿಬ್ಬಂದಿ, ಜನಪ್ರತಿನಿಧಿ ಮತ್ತು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪಾಲಿಕೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ನಗರದಲ್ಲಿ ರಸ್ತೆ, ಒಳಚರಂಡಿ, ಕಸ ನಿರ್ವಹಣೆ, ಪೌರ ಕಾರ್ಮಿಕರಿಗೆ ಮನೆ ಒದಗಿಸುವ ಹಾಗೂ ಅವರನ್ನು ಸಿಂಗಾಪುರ್ ಪ್ರವಾಸಕ್ಕೆ ಕಳುಹಿಸಿದ್ದು ಅವರ ಕೆಲಸಕ್ಕೆ ಹಿಡಿದ ಕನ್ನಡಿಯಾಗಿವೆ. ಪಾಲಿಯ ಕಾರ್ಯ ವ್ಯವಸ್ಥೆ ಚುರುಕಿಗೆ ಮೊಬೈಲ್ ಆಪ್‍ಗಳನ್ನು ತಂದು ಪ್ರತಿ ಕೆಲಸದ ಮೇಲೆ ನಿಗಾವಹಿಸಿ ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಣೆಗೆ ಮತ್ತು ಸಾರ್ವಜನಿಕರು ದೂರು ದುಮ್ಮಾನಗಳನ್ನು ಆಲಿಸಿ ಪರಿಹಾರ ನೀಡುವ ಮೂಲಕ ಪಾರದರ್ಶಕ ಆಡಳಿತದಿಂದ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದ್ದರು ಎಂದು ಅವರ ಸೇವೆಯನ್ನು ಕೊಂಡಾಡಿದರು.
ಇದೇ ಸಂದರ್ಭದಲ್ಲಿ ನಗರದ ವಿವಿಧ ಸಂಘ-ಸಂಘಟನೆಗಳು, ಸಾರ್ವಜನಿಕರು, ಪೌರ ಕಾರ್ಮಿಕರು ಮತ್ತು ಸಂಘದವರು ಸುನೀಲ ಕುಮಾರ್ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಆಕೃತಿ ಸಾಗರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಾಜಿದ್ ಅಹ್ಮದ್ ಮುಲ್ಲಾ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ತನ್ವಿರ ಅಹ್ಮದ ಸರಡಗಿ, ಸದಸ್ಯ ರಾಜು ಕಪನೂರ, ಮಾಜಿ ಉಪ ಮಹಾಪೌರ ಮಹೇಶ ಹೂಸೂರಕರ್, ಮಾಜಿ ಸದಸ್ಯ ಉಮೇಶ ಯಲಶೆಟ್ಟಿ, ಪಾಲಿಕೆ ಉಪ ಆಯುಕ್ತ ಮಹಮ್ಮದ್ ಆರೀಫುದ್ದಿನ್, ಕಂದಾಯ ಅಧಿಕಾರಿ ಆರಿಫುದಿನ್, ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ವೀರಭದ್ರ ಸಿಂಪಿ ಸೇರಿದಂತೆ ಪಾಲಿಕೆ ನೌಕರರ ವೃಂದದ ಪದಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.

ಹೀಗಾಗಿ ಲೇಖನಗಳು 2ND ROUND NEWS AND PHOTOS 19-12-2017
ಎಲ್ಲಾ ಲೇಖನಗಳು ಆಗಿದೆ 2ND ROUND NEWS AND PHOTOS 19-12-2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.
ನೀವು ಈಗ ಲೇಖನ ಓದುತ್ತಿದ್ದಲ್ಲಿ 2ND ROUND NEWS AND PHOTOS 19-12-2017 ಲಿಂಕ್ ವಿಳಾಸ https://dekalungi.blogspot.com/2017/12/2nd-round-news-and-photos-19-12-2017.html
0 Response to "2ND ROUND NEWS AND PHOTOS 19-12-2017"
ಕಾಮೆಂಟ್ ಪೋಸ್ಟ್ ಮಾಡಿ