News and photo date: 28---11---2017

News and photo date: 28---11---2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and photo date: 28---11---2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and photo date: 28---11---2017
ಲಿಂಕ್ : News and photo date: 28---11---2017

ಓದಿ


News and photo date: 28---11---2017

ರಾಜ್ಯದಲ್ಲಿ ಏಕರೂಪದ ಆರೋಗ್ಯ ವ್ಯವಸ್ಥೆ: ದೇಶಕ್ಕೆ ಮಾದರಿ
****************************************************
--ಸಚಿವ ಕೆ.ಆರ್. ರಮೇಶಕುಮಾರ್
*******************************
ಕಲಬುರಗಿ,ನ.28(ಕ.ವಾ.)-ರಾಜ್ಯದಲ್ಲಿ ಏಕರೂಪದ ಆರೋಗ್ಯ ವ್ಯವಸ್ಥೆ ಜಾರಿಗೆ ತಂದು ರಾಜ್ಯದ ಸುಮಾರು 1.43 ಕೋಟಿ ಕುಟುಂಬಗಳ ಹಾಗೂ ಕುಟುಂಬದ ಸದಸ್ಯರ ಆರೋಗ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳುತ್ತಿರುವುದು ದೇಶದಲ್ಲಿಯೇ ಮಾದರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ ಕುಮಾರ ತಿಳಿಸಿದರು.
ಅವರು ಮಂಗಳವಾರ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದಲ್ಲಿ ವಿವಿಧ ಹೆಸರುಗಳಲ್ಲಿ ಜಾರಿಯಲ್ಲಿರುವ ಎಲ್ಲ ಆರೋಗ್ಯ ಸೇವೆಗಳನ್ನು ಒಗ್ಗೂಡಿಸಿ ರಾಜ್ಯದಲ್ಲಿ ಏಕರೂಪದ ಆರೋಗ್ಯ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದರು.
ರಾಜ್ಯದಲ್ಲಿರುವ 1.20 ಕೋಟಿ ಬಿ.ಪಿ.ಎಲ್. ಕುಟುಂಬಗಳು ಆಹಾರ ಭದ್ರತಾ ಯೋಜನೆಯಡಿ ಆಧಾರ್ ಕಾರ್ಡನ್ನು ಲಿಂಕ್ ಮಾಡಿದ್ದಾರೆ. ಅವರಿಗೆ ಎಂಥದ್ದೇ ಕಾಯಿಲೆ ಬಂದರೂ ಉಚಿತ ಆರೋಗ್ಯ ಸೇವೆ ನೀಡಲಾಗುವುದು. ಇನ್ನುಳಿದ ಎ.ಪಿ.ಎಲ್. ಮತ್ತು ಇನ್ನಿತರ ವಲಯದ ಕುಟುಂಬಗಳಿಗೂ ಸಹ ಆರೋಗ್ಯ ಸೇವೆ ದೊರಕಿಸಲಾಗುತ್ತದೆ ಎಂದರು.
ರಾಜ್ಯ ಸುಮಾರು 2000ಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಆರೋಗ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡುತ್ತಿದೆ. ಸುಮಾರು 70 ರಷ್ಟು ಜನರಿಗೆ ಸರ್ಕಾರಿ ವಲಯದಿಂದ ಆರೋಗ್ಯ ಸೇವೆ ನೀಡಲಾಗುತ್ತಿದೆ. ಉಳಿದ ಶೇ. 30ರಷ್ಟು ಆರೋಗ್ಯ ಸೇವೆಗಳು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತರಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರಮಾಣವನ್ನು ಸಹ ತಗ್ಗಿಸಲಾಗುವುದು. ಕಾರಣ ರಾಜ್ಯದ ನಾಗರಿಕರು ಯಾವುದೇ ಭಯಪಡುವ ಅವಶ್ಯಕತೆಯಿಲ್ಲ ಎಂದರು.
ರಾಜ್ಯದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಸರ್ಕಾರಿ, ಖಾಸಗಿ ಸ್ವತಂತ್ರ ಸಂಸ್ಥೆಗಳೊಂದಿಗೆ ಆರೋಗ್ಯ ಸೇವೆಗೆ ರೂಪಿಸಬೇಕಾದ ನಿಯಮಾವಳಿಗಳ ಬಗ್ಗೆ ಹಾಗೂ ದರಗಳ ಕುರಿತು ಚರ್ಚೆ ಮಾಡಿ ತೀರ್ಮಾನಿಸಿದ ನಂತರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಈ ಶಿಫಾರಸ್ಸುಗಳಿಗೆ ಆಕ್ಷೇಪಣೆಗಳನ್ನು ಕರೆದು ಅಂತಿಮವಾಗಿ ಆರೋಗ್ಯ ಸೇವೆಗಳ ಸರ್ಕಾರಿ ದರಗಳೆಂದು ಅಧಿಸೂಚನೆ ಹೊರಡಿಸಲಾಗುವುದು. ಈ ದರಗಳನ್ನು ಎಲ್ಲ ಆಸ್ಪತ್ರೆಯವರು ಒಪ್ಪಿಕೊಂಡು ಆಸ್ಪತ್ರೆಗಳಲ್ಲಿ ಪ್ರದರ್ಶಿಸಬೇಕು. ಇದು ಬಡಜನರ ಸುಲಿಗೆಯಿಂದ ರಕ್ಷಿಸಲು ಜರುಗಿಸಿದ ಕ್ರಮವಾಗಿದ್ದು, ಯಾರ ವಿರುದ್ಧವೂ ಅಲ್ಲ ಎಂದು ವಿವರಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ತಮ್ಮದೇಯಾದ ಖಾಸಗಿ ಆಸ್ಪತ್ರೆಗಳನ್ನು ಪ್ರಾರಂಭಿಸಿ, ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ರೋಗಿಗಳನ್ನು ತಮ್ಮ ಆಸ್ಪತ್ರೆಗೆ ಕಳುಹಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಎಚ್ಚೆತ್ತುಕೊಂಡು, ಇಂಥಹ ಅಪರಾಧ ಕೃತ್ಯಗಳನ್ನು ಮಾಡಬಾರದು. ಹಲವಾರು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ತಮ್ಮದೇಯಾದ ಔಷಧ ಮಳಿಗೆಗಳನ್ನು ಪ್ರಾರಂಭಿಸಿದ್ದಾರೆ. ಇವೆಲ್ಲವುಗಳನ್ನು ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗಮನಹರಿಸಿ ಪರಿಸ್ಥಿತಿ ಸುಧಾರಿಸಬೇಕೆಂದರು.
ಕಲಬುರಗಿ ಮತ್ತು ಯಾದಗಿರಿಯಲ್ಲಿ ತಾಯಿ ಮತ್ತು ಮಗುವಿನ ಮರಣದ ಪ್ರಮಾಣ ಹೆಚ್ಚಾಗಿದೆ. ಈ ಭಾಗದಲ್ಲಿ ಸ್ಕ್ಯಾನಿಂಗ್ ಯಂತ್ರಗಳು ಸಹ ಹೆಚ್ಚಿವೆ ಹಾಗೂ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುವುದು ಸಹ ಹೆಚ್ಚಾಗಿದೆ. ಕಲಬುರಗಿ ಪ್ರಾದೇಶಿಕ ಆಯುಕ್ತರು ಸ್ಕ್ಯಾನಿಂಗ್ ಸೆಂಟರ್‍ಗಳ ಮೇಲೆ ಅನಿರೀಕ್ಷಿತ ದಾಳಿ ಮಾಡಿ, ತಪ್ಪಿತಸ್ಥರ ಸ್ಕ್ಯಾನಿಂಗ್ ಯಂತ್ರಗಳನ್ನು ವಶಪಡಿಸಿಕೊಳ್ಳಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ, ಅವರ ವೈದ್ಯಕೀಯ ಲೈಸೆನ್ಸ್ ಸಹ ರದ್ದುಗೊಳಿಸಿ ಮತ್ತೆ ಬೇರೆಡೆ ಸ್ಕ್ಯಾನಿಂಗ್ ಯಂತ್ರ ಪ್ರಾರಂಭಿಸದಂತೆ ಕ್ರಮ ಜರುಗಿಸಬೇಕೆಂದರು.
ಗರ್ಭಿಣಿಯರಿಗೆ ನಿಯಮಿತವಾಗಿ ಪ್ರಾಥಮಿಕ ಹಂತದಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ತೂಕ, ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹಾಗೂ ಮಗುವಿನ ಬೆಳವಣಿಗೆ ಕುರಿತು ತಪಾಸಣೆ ಮಾಡಿಕೊಳ್ಳಬೇಕು. ಗರ್ಭಿಣಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ಸಹಾಯ ಪಡೆಯಬೇಕೆಂದು ಸಲಹೆ ನೀಡಿದರು.
ಬಡ ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡಲು ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಎಲ್ಲ ಆಸ್ಪತ್ರೆಗಳಿಗೆ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಬಳಕೆ ಮಾಡದೇ ಅವರನ್ನು ಸುಲಿಯಲು ಖಾಸಗಿ ಅಥವಾ ಬೇರೆ ರಾಜ್ಯಗಳ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ರಾಜ್ಯದ ರೋಗಿಗಳು ಚಿಕಿತ್ಸೆಗೆ ಬೇರೆ ರಾಜ್ಯಗಳಿಗೆ ಹೋಗುವುದು ಅವಮಾನದ ಸಂಗತಿಯಾಗಿದೆ. ಇದನ್ನು ತಡೆಯುವಂತೆ ಅವರು ಸೂಚಿಸಿದರು.
ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಮಾತನಾಡಿ, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಾಥಮಿಕ ಹಾಗೂ ವಿಸ್ತರಣಾ ಕೇಂದ್ರಗಳನ್ನು ಮಂಜೂರು ಮಾಡಿ, ಅವುಗಳ ಮೂಲಭೂತ ಸೌಲಭ್ಯಗಳಿಗೆ ಆರೋಗ್ಯ ಇಲಾಖೆಯಿಂದ ಅನುದಾನ ನೀಡುವ ಜೊತೆಗೆ ಹೆಚ್.ಕೆ.ಆರ್.ಡಿ.ಬಿ. ಯಿಂದ ಸಹ ಅವಶ್ಯಕ ಸಲಕರಣೆಗಳನ್ನು ನೀಡಲಾಗುವುದು. ನೂತನವಾಗಿ ಪ್ರಾರಂಭಿಸಲಾಗುವ ವಿಸ್ತರಣಾ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ 3 ವರ್ಷಗಳ ವೇತನ ನೀಡಲಾಗುವುದು. ಈಗಾಗಲೇ ಆರೋಗ್ಯ ಕ್ಷೇತ್ರಕ್ಕೆ ಅವಶ್ಯಕವಿರುವ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಇನ್ನೂ ಬೇಕಾದಲ್ಲಿ ನೀಡಲಾಗುವುದು ಎಂದರು.
ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಮನೋಜಕುಮಾರ ಮೀನಾ, ನಿರ್ದೇಶಕ ಮಂಜುನಾಥ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ವ್ಯವಸ್ಥಾಪಕ ನಿರ್ದೇಶಕ ರತನ ತೇಲ್ಕರ್, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಕೆ.ಹೆಚ್.ಎನ್.ಆರ್.ಡಿ.ಎಸ್.ನ ಮುಖ್ಯ ಇಂಜಿನಿಯರ್ ಸಿ. ಉದಯಶಂಕರ್, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ದೇಶಕಿ ಸುಧಾ, ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆಸ್ಪತ್ರೆಗಳ ಶಸ್ತ್ರಜ್ಞರು, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಾದೇಶಿಕÀ ಕಚೇರಿ ಆರಂಭಿಸಲು ಸಿದ್ಧತೆ
*********************************************************************
ನಿರ್ದೇಶಕ ಎನ್.ಆರ್.ವಿಶುಕುಮಾರ್ ಅವರಿಂದ ಸ್ಥಳ ಪರಿಶೀಲನೆ
*********************************************************
ಕಲಬುರಗಿ,ನ.28.(ಕ.ವಾ.)–ಕಲಬುರಗಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ (ಪ್ರಾದೇಶಿಕ ಕಚೇರಿ) ಆರಂಭಿಸುವ ನಿಟ್ಟಿನಲ್ಲಿ ಇಲಾಖೆಯ ನಿರ್ದೇಶಕರಾದ ಎನ್. ಆರ್. ವಿಶುಕುಮಾರ್ ಅವರು ಸೋಮವಾರ ನಗರದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.
ಪ್ರಸಕ್ತ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಇರುವ ಸೇಡಂ- ಶಹಾಬಾದ್ ವರ್ತುಲ ರಸ್ತೆಯಲ್ಲಿರುವ ಡಾ. ಸಿದ್ದಯ್ಯ ಪುರಾಣಿಕ ಸುವರ್ಣ ಸಾಂಸ್ಕøತಿಕ ಸಮುಚ್ಛಯದಲ್ಲಿ ಕಟ್ಟಡಗಳ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಇಲಾಖೆ ಮತ್ತು ಕಲಬುರಗಿ ರಂಗಾಯಣದ ಕಾರ್ಯಚಟುವಟಿಕೆಗಳನ್ನು ಅವರು ಪರಿಶೀಲಿಸಿದರು. ಇಲಾಖೆಯ ಗ್ರಂಥಗಳನ್ನು ಧೂಳು ಹಿಡಿಯದಂತೆ ಸಂರಕ್ಷಿಸಿಡಬೇಕು. ಪ್ರಚಾರ ನೀಡಿ ಗ್ರಂಥಗಳ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಅವರು ಸೂಚಿಸಿದರು.
ರಂಗಾಯಣದ ಬಯಲು ರಂಗ ಮಂದಿರ ನಿರ್ಮಾಣ, ಆವರಣದಲ್ಲಿ ಸಮೃದ್ಧ ಹಸಿರು ಪರಿಸರ ನಿರ್ಮಿಸುವ ನಿಟ್ಟಿನಲ್ಲಿ ಮರಗಳ ಬೆಳೆಸುವುದು, ಹೊರಗುತ್ತಿಗೆಯಲ್ಲಿ ರಾತ್ರಿ ಕಾವಲುಗಾರರ ನೇಮಕ, ಕಚೇರಿ ಸ್ವಚ್ಛವಾಗಿಡಲು ನೌಕರರ ನೇಮಕ ಮುಂತಾದವುಗಳ ಕುರಿತು ರಂಗಾಯಣದ ನಿರ್ದೇಶಕ ಶ್ರೀ ಮಹೇಶ್ ವಿ. ಪಾಟೀಲ್ ಹಾಗೂ ಆಡಳಿತಾಧಿಕಾರಿ ಶ್ರೀ ದತ್ತಪ್ಪ ಸಾಗನೂರು ಆವರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ರಂಗಾಯಣದ ನಟ-ನಟಿಯರನ್ನು ಅವರು ಪರಿಚಯ ಮಾಡಿಕೊಂಡು, ನಾಟಕಗಳ ಪ್ರದರ್ಶನ ಕುರಿತಂತೆ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಕಲಬುರಗಿ ರಂಗಾಯಣದ ವತಿಯಿಂದ ಇಲಾಖೆಯ ನಿರ್ದೇಶಕ ವಿಶುಕುಮಾರ್ ಅವರನ್ನು ಗೌರವಿಸಲಾಯಿತು. ವಿವಿದೆಡೆಯಿಂದ ಬಂದ ಕಲಾವಿದರು ಕೂಡ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಲಾವಿದ ಶ್ರೀ ಸಿದ್ಧರಾಮ ಪೊಲೀಸ್ ಪಾಟೀಲ್ ಅವರು ರಂಗಗೀತೆಗಳನ್ನು ಹಾಡಿದರು. ನಟಿ ಅಂಬುಜಾಕ್ಷಿ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ರಂಗಾಯಣದ ನಿರ್ದೇಶಕ ಮಹೇಶ್ ವಿ. ಪಾಟೀಲ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರೂ ಆದ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಅಪ್ಪರಾವ್ ಅಕ್ಕೋಣಿ ಮುಂತಾದವರು ಇದ್ದರು.
ಜಿಲ್ಲೆಯ 7 ಗ್ರಾಮ ಪಂಚಾಯತಿಗಳಿಗೆ ಉಪಚುನಾವಣೆ: ವೇಳಾಪಟ್ಟಿ ಪ್ರಕಟ
****************************************************************
ಕಲಬುರಗಿ,ನ.28.(ಕ.ವಾ.)-ಕಲಬುರಗಿ ಜಿಲ್ಲೆಯ ಜೇವರ್ಗಿ, ಚಿತ್ತಾಪುರ, ಸೇಡಂ, ಚಿಂಚೋಳಿ ಹಾಗೂ ಆಳಂದ ತಾಲೂಕಿನ 07 ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 08 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ಚುನಾವಣೆ ಜರುಗುವ ತಾಲೂಕಿನ ಹೆಸರು, ಗ್ರಾಮ ಪಂಚಾಯಿತಿ ಹಾಗೂ ತೆರವಾದ ಕ್ಷೇತ್ರದ ಸಂಖ್ಯೆ ಮತ್ತು ಹೆಸರು ವಿವರ ಇಂತಿದೆ. ಜೇವರ್ಗಿ ತಾಲೂಕು: 39-ಕೋಳಕೂರ (01-ಕೋಳಕೂರ). ಚಿತ್ತಾಪುರ ತಾಲೂಕು: 39-ನಾಲವಾರ (01-ನಾಲವಾರ ಮತ್ತು 03-ನಾಲವಾರ). ಸೇಡಂ ತಾಲೂಕು: 01-ಮಳಖೇಡ (04-ಮಳಖೇಡ). ಚಿಂಚೋಳಿ ತಾಲೂಕು: 16-ಶಿರೋಳ್ಳಿ (04-ರುದ್ನೂರ) ಹಾಗೂ 27-ಮೇಘಾ (02-ಮೇಘಾ). ಆಳಂದ ತಾಲೂಕು: 02-ತಡೋಳಾ (02-ತಡೋಳಾ) ಹಾಗೂ 46-ಕಡಗಂಚಿ (05-ಕಡಗಂಚಿ).
ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 30 ಗುರುವಾರ ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಡಿಸೆಂಬರ್ 1 ಶುಕ್ರವಾರದಂದು ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 4 ಸೋಮವಾರ ಕೊನೆಯ ದಿನಾಂಕವಾಗಿದೆ. ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿಸೆಂಬರ್ 17ರ ಭಾನುವಾರದಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನ ಅವಶ್ಯವಿದ್ದರೆ ಡಿಸೆಂಬರ್ 19ರ ಮಂಗಳವಾರದಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮತಗಳ ಏಣಿಕೆ ಡಿಸೆಂಬರ್ 20 ಬುಧವಾರದಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ. ಡಿಸೆಂಬರ್ 20ರ ಬುಧವಾರದೊಳಗೆ ಚುನಾವಣೆಯನ್ನು ಮುಕ್ತಾಯಗೊಳ್ಳಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕು ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ
*******************************************************************
ಕಲಬುರಗಿ,ನ.28.(ಕ.ವಾ.)-ವಿವಿಧ ಕಾರಣಗಳಿಂದ ತೆರವಾಗಿರುವ ಕಲಬುರಗಿ ಜಿಲ್ಲಾ ವ್ಯಾಪ್ತಿಗೊಳಪಡುವ ಕಲಬುರಗಿ ತಾಲೂಕಿನ 08-ಮಹಾಗಾಂವ ತಾಲೂಕು ಪಂಚಾಯಿತಿಯ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಜರುಗಿಸಲು ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಅವರು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 30 ಗುರುವಾರ ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಡಿಸೆಂಬರ್ 1 ಶುಕ್ರವಾರದಂದು ನಡೆಯಲಿದೆ. ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 4 ಸೋಮವಾರ ಕೊನೆಯ ದಿನಾಂಕವಾಗಿದೆ. ಅವಶ್ಯವಿದ್ದರೆ ಮತದಾನವನ್ನು ಡಿಸೆಂಬರ್ 17ರ ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮರು ಮತದಾನ ಅವಶ್ಯವಿದ್ದರೆ ಡಿಸೆಂಬರ್ 19ರ ಮಂಗಳವಾರದಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು. ಮತಗಳ ಏಣಿಕೆ ಡಿಸೆಂಬರ್ 20 ಬುಧವಾರದಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ. ಡಿಸೆಂಬರ್ 20ರ ಬುಧವಾರದೊಳಗೆ ಚುನಾವಣೆಯನ್ನು ಮುಕ್ತಾಯಗೊಳ್ಳಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಿನಿ ಮಣ್ಣು ಪರೀಕ್ಷಾ ಘಟಕ ಸ್ಥಾಪನೆಗಾಗಿ ಅರ್ಜಿ ಆಹ್ವಾನ
**************************************************
ಕಲಬುರಗಿ,ನ.28.(ಕ.ವಾ.)-ಕೃಷಿ ಇಲಾಖೆಯ ಮಣ್ಣು ಆರೋಗ್ಯ ನಿರ್ವಹಣೆ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ನಿಂಬರ್ಗಾ, ಮಾದನ ಹಿಪ್ಪರಗಾ, ಚಿಂಚೋಳಿ, ಸುಲೇಪೇಟ, ಕಾಳಗಿ, ನಾಲವಾರ, ಜೇವರ್ಗಿ, ಯಡ್ರಾಮಿ, ಮುಧೋಳ, ಕೋಡ್ಲಾ, ಅಡಕಿ ಹೋಬಳಿಯ ಗ್ರಾಮ ಮಟ್ಟದಲ್ಲಿ ಮಿನಿ ಮಣ್ಣು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ಅರ್ಹ ಉದ್ದಿಮೆದಾರರು/ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್. ಮೊಕಾಶಿ ತಿಳಿಸಿದ್ದಾರೆ.
ಗ್ರಾಮ ಮಟ್ಟದಲ್ಲಿ ಮಿನಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪಿಸಿ ಸ್ಥಳಿಯ ಉದ್ದಿಮೆದಾರರು/ಅಭ್ಯರ್ಥಿಗಳನ್ನು ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು. ಸ್ಥಳೀಯ ಉದ್ದಿಮೆದಾರರು/ಅಭ್ಯರ್ಥಿಗಳು ಗ್ರಾಮ ಮಟ್ಟದಲ್ಲಿ ಸ್ಥಾಪಿಸಲಾಗುವ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಗೆ ಗರಿಷ್ಟ ವೆಚ್ಚ 5 ರೂ.ಲಕ್ಷಗಳಾಗಿದೆ. ಶೇ 75 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ. 25 ರಷ್ಟು ಉದ್ದಿಮೆದಾರರು ಸ್ವಂತವಾಗಿ ಭರಿಸಬೇಕಾಗುತ್ತದೆ. ಮಾರ್ಗ ಸೂಚಿಯನ್ವಯ ಪ್ರತಿ ಮಣ್ಣು ಮಾದರಿ ಸಂಗ್ರಹಣೆ, ವಿಶ್ಲೇಷಣೆ, ಮಣ್ಣು ಆರೋಗ್ಯ ಚೀಟಿ ತಯಾರಿಕೆ ಹಾಗೂ ವಿತರಣೆಗಾಗಿ ಸಹಾಯಧನ ನೀಡಲಾಗುವುದು.
ಅಭ್ಯರ್ಥಿಗಳು ಗ್ರಾಮ ಮಟ್ಟದಲ್ಲಿನ ಉದ್ದಿಮೆದಾರರಾಗಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು. ದ್ವಿತೀಯ ಪಿ.ಯು.ಸಿ (ವಿಜ್ಞಾನ) ಪಾಸಾಗಿರಬೇಕು ಮತ್ತು ಕಂಪ್ಯೂಟರ ಜ್ಞಾನ ಹೊಂದಿರಬೇಕು. ಗ್ರಾಮದಲ್ಲಿ ಮಣ್ಣು ಪರೀಕ್ಷಾ ಕೇಂದ್ರ ಸ್ಥಾಪನೆಗೆ ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರಬೇಕು. ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದಿಂದ ಪಡೆದು ಭರ್ತಿ ಮಾಡಿ ಅಗಶ್ಯಕ ದಾಖಲೆಗಳೊಂದಿಗೆ ಡಿಸೆಂಬರ್ 8ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಂಟಿ ನಿರ್ದೇಶಕರ ಕಾರ್ಯಾಲಯವನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278630ನ್ನು ಸಂಪರ್ಕಿಸಲು ಕೋರಲಾಗಿದೆ.
ಡಿಸೆಂಬರ್ 3ರಂದು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ
*******************************************************************
ಕಲಬುರಗಿ,ನ.28.(ಕ.ವಾ.)-ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಕೆಎಸ್‍ಐಎಸ್‍ಎಫ್) ಮತ್ತು ಸ್ಪೇಷಲ್ ರಿಸರ್ವ್ ಸಬ್ ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ ಮತ್ತು ಮಹಿಳಾ) ಹಾಗೂ ಸೇವಾ ನೀರತರನ್ನೊಳಗೊಂಡ ಹುದ್ದೆಗಳಿಗೆ 2017ರ ಡಿಸೆಂಬರ್ 3ರಂದು ಲಿಖಿತ ಪರೀಕ್ಷೆಯನ್ನು ಜರುಗಲಿದೆ. ಈ ಪರೀಕ್ಷೆಯು ಮೊದಲನೆಯ ಅಧಿವೇಶನವು ಅಂದು ಬೆಳಿಗ್ಗೆ 10 ರಿಂದ ಬೆಳಿಗ್ಗೆ 11 ಗಂಟೆಯವರೆಗೆ ಹಾಗೂ ಎರಡನೇಯ ಅಧಿವೇಶನವು ಮಧ್ಯಾಹ್ನ 12 ರಿಂದ ಮಧ್ಯಾಹ್ನ 1-30 ಗಂಟೆಯವರೆಗೆ ಜರುಗಲಿದೆ ಎಂದು ಕಲಬುರಗಿ ಈಶಾನ್ಯ ವಲಯದ ಪೊಲೀಸ್ ಮಹಾನಿರೀಕ್ಷಕರು ತಿಳಿಸಿದ್ದಾರೆ.
ಸುಮಾರು 1360 ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯು ಕಲಬುರಗಿ ನಗರದ ಕಲಬುರಗಿ ಕುಸನೂರ ರಸ್ತೆಯಲ್ಲಿರುವ ರೇಶ್ಮಿ ಡಿಗ್ರಿ ಕಾಲೇಜು ಹಾಗೂ ನಗರದ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಸರ್ಕಾರಿ ಮುದ್ರಣಾಲಯ ಎದುರುಗಡೆ ಇರುವ ನ್ಯೂ ನೋಬೆಲ್ ಗಲ್ರ್ಸ್ ಹೈಸ್ಕೂಲ್‍ನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ.
.ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಕೆಎಸ್‍ಐಎಸ್‍ಎಫ್) ಮತ್ತು ಸ್ಪೇಷಲ್ ರಿಸರ್ವ್ ಸಬ್ ಇನ್ಸ್‍ಪೆಕ್ಟರ್ (ಕೆಎಸ್‍ಆರ್‍ಪಿ) (ಪುರುಷ ಮತ್ತು ಮಹಿಳಾ) ಹಾಗೂ ಸೇವಾ ನೀರತರನ್ನೊಳಗೊಂಡ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇ.ಟಿ./ಪಿ.ಎಸ್.ಟಿ. ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳ ಲಿಖಿತ ಪರೀಕ್ಷೆಯನ್ನು ಈ ಮೇಲ್ಕಂಡ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿದೆ. ಪರೀಕ್ಷೆಗೆ ಮುನ್ನ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಉತ್ತೀರ್ಣ ಫಲಿತಾಂಶ ಪತ್ರ, ಗುರುತಿನ ಚೀಟಿ ಹಾಗೂ ಕರೆ ಪತ್ರವನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷೆಗೆ ಕರೆ ಪತ್ರ, ಗುರುತಿನ ಚೀಟಿ ಮತ್ತು ಪೆನ್ ಗಳನ್ನು ಹೊರತುಪಡಿಸಿ ಪೇಪರ್, ಮೊಬೈಲ್, ಲ್ಯಾಪ್‍ಟಾಪ್, ಕ್ಯಾಲ್ಕುಲೇಟರ್ ಇತ್ಯಾದಿ ಸಾಮಗ್ರಿಗಳನ್ನು ಪರೀಕ್ಷಾ ಕೇಂದ್ರದಲ್ಲಿ ತರುವುದನ್ನು ನಿಷೇಧಿಸಲಾಗಿದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 3ರಂದು ಸ್ವಚ್ಛ ಸರ್ವೇಕ್ಷಣ ಕುರಿತು ಅರಿವು ಮೂಡಿಸಲು ಪಾದಯಾತ್ರೆ
********************************************************************
ಕಲಬುರಗಿ,ನ.28.(ಕ.ವಾ.)-ಮಹಾನಗರ ಪಾಲಿಕೆಯಿಂದ “ಸ್ವಚ್ಛ ಸರ್ವೇಕ್ಷಣಾ-2018”ರಡಿ ಸಾರ್ವಜನಿಕರಲ್ಲಿ ಸ್ವಚ್ಚ ಸರ್ವೇಕ್ಷಣದ ಕುರಿತು ಅರಿವು ಮೂಡಿಸಲು 2017ರ ಡಿಸೆಂಬರ್ 3ರಂದು ಬೆಳಿಗ್ಗೆ 9.30 ಗಂಟೆಗೆ ಕಲಬುರಗಿ ನಗರದ ಜಗತ್ತ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ ಅವರು ತಿಳಿಸಿದ್ದಾರೆ.
ನಗರದ ಹಲವು ಸಂಘಟನೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಮಹಾನಗರ ಪಾಲಿಕೆಯ ಎಲ್ಲ ಸಿಬ್ಬಂದಿಗಳು ಸ್ವಚ್ಛ ಸರ್ವೇಕ್ಷಣ-2018 ಒಂದು ನಡಿಗೆ ಕುರಿತ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 29ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
************************************************
ಕಲಬುರಗಿ,ನ.28.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ ನವೆಂಬರ್ 29ರಂದು 11 ಸಿದ್ದೇಶ್ವರ ಫೀಡರ್ ವ್ಯಾಪ್ತಿಯಲ್ಲಿ ಯು.ಜಿ. ಕೇಬಲ ಕಾರ್ಯಕೈಗೊಳ್ಳುವ ಪ್ರಯುಕ್ತ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.
11ಕೆ.ವಿ. ಸಿದ್ದೇಶ್ವರ ಫೀಡರ್: ಸ್ವಸ್ತಿಕ ನಗರ, ಬಸವೇಶ್ವರ ಆಸ್ಪತ್ರೆ ಏರಿಯಾ ಎದುರುಗಡೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.
ಕಾಣೆಯಾದ ಮಹಿಳೆಯ ಪತ್ತೆಗೆ ಮನವಿ
**********************************
ಕಲಬುರಗಿ,ನ.28.(ಕ.ವಾ)-ಕಲಬುರಗಿ ಜಿಲ್ಲೆಯ ಜೇವರ್ಗಿ ಶಾಸ್ತ್ರಿ ಚೌಕ್‍ನಲ್ಲಿರುವ ಫರೀದ ಅಹ್ಮದ್ ಬಿಸಿವಾಲೆ ಇವರ 22 ವರ್ಷದ ಮಗಳಾದ ರುಕ್ಸಾರ ಬೇಗಂ ಇವಳು 2017ರ ನವೆಂಬರ್ 22ರಂದು ರಾತ್ರಿ 1.30 ಗಂಟೆಗೆ ಮನೆಯಿಂದ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋಗಿರುತ್ತಾಳೆ. ಈ ಕುರಿತು ಎಲ್ಲ ಕಡೆ ಹುಡಿಕಿದರೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ 2017ರ ನವೆಂಬರ್ 24ರಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದ ಮಹಿಳೆಯು 4.2 ಅಡಿ ಎತ್ತರ., ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ, ಹಿಂದಿ ಮತ್ತು ಉರ್ದು ಭಾಷೆಗಳನ್ನು ಮಾತನಾಡುತ್ತಾಳೆ. ಬಲಗಡೆ ತೊಳಿನ ಮೇಲೆ ಕಪ್ಪು ಮಚ್ಚೆ ಗುರುತು ಇದ್ದು, ಕಪ್ಪು ಬಣ್ಣದ ಚೂಡಿದಾರ ಮತ್ತು ಕಪ್ಪು ಬಣ್ಣದ ಓಡಣಿ ಧರಿಸಿರುತ್ತಾಳೆ. ಈ ಕುರಿತು ಮಾಹಿತಿ ತಿಳಿದು ಬಂದಲ್ಲಿ ಜೇವರ್ಗಿ ಪೊಲೀಸ್ ಠಾಣೆಯ ಅರಕ್ಷಕ ಉಪ ನಿರೀಕ್ಷಕರನ್ನು ಸಂಪರ್ಕಿಸಲು ಕೋರಲಾಗಿದೆ.
ಡಿಸೆಂಬರ್ 3ರಂದು ವಿಶ್ವ ಅಂಗವಿಕಲ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆಗಳು
ಕಲಬುರಗಿ,ನ.28.(ಕ.ವಾ)-ಪ್ರಸಕ್ತ 2017-18ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಅಭಿಯಾದ ಚಟುವಟಿಕೆ ಅಡಿಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಡಿಸೆಂಬರ್ 3ರಂದು ಬೆಳಿಗ್ಗೆ 9 ಗಂಟೆಗೆ ಕಲಬುರಗಿ ಹೈಕೋರ್ಟ್ ಪೀಠದ ಎದುರುಗಡೆಯಿರುವ ಅಕ್ಕ ಮಹಾದೇವಿ ಕಾಲೋನಿಯಲ್ಲಿರುವ ಪರಿವರ್ತನ ಬುದ್ದಿಮಾಂದ್ಯ ಶಾಲೆಯಲ್ಲಿ ಏರ್ಪಡಿಸಲಾಗಿದೆ.
ದಿನಾಚರಣೆ ಅಂಗವಾಗಿ ಕಲಬುರಗಿ ದಕ್ಷಿಣ ವಲಯದ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ಮಕ್ಕಳಿಗಾಗಿ ಕ್ರೀಡಾಕೂಟ, ಭಾಷಣ, ಜನಪದ ಗೀತೆ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ವಿತರಿಸಲಾಗುತ್ತಿದೆ. ಕಲಬುರಗಿ ದಕ್ಷಿಣ ವಲಯದ ಎಲ್ಲ ಶಾಲೆಗಳ ಮುಖ್ಯಗುರುಗಳು ಅಂಗವಿಕಲ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕಲಬುರಗಿ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮುಖ್ಯ ಕರ್ತವ್ಯ
****************************************************************
ಕಲಬುರಗಿ,ನ.28.(ಕ.ವಾ)-ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮುಖ್ಯ ಕರ್ತವ್ಯವಾಗಿದೆ ಎಂದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ತಿಳಿಸಿದರು.
ಅವರು ಕಲಬುರಗಿಯ ಶರಣಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಶರಣಬಸವೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜು ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸಂವಿಧಾನವು ಪ್ರಜಾಸತಾತ್ಮಕ ವ್ಯವಸ್ಥೆಯನ್ನು ಕಾಪಾಡಲು ರೂಪಿಸಲ್ಪಟ್ಟಿದೆ. 1949ರ ನವೆಂಬರ್ 26ರಂದು ಈ ಸಂವಿಧಾನವನ್ನು ಭಾರತ ದೇಶವು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ 2015ರಿಂದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಯಾವುದೇ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿ ಹಾಗೂ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವಂತೆ ರೂಪಿಸಿದ್ದಲ್ಲಿ ಅಂತಹ ಕಾನೂನನ್ನು ಅಸಂವಿಧಾನಿಕ ಎಂದು ಘೋಷಿಸಲು ಸರ್ವೋಚ್ಚ ಹಾಗೂ ಉಚ್ಚ ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದರು.
ಎಸ್.ಎಸ್. ಲಾಹೋಟಿ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಕೆ.ಎಸ್. ಬಗಾಲೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಾತನಾಡಿದರು. ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶರಣಬಸವೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರದ್ಧಾ ಹಲಕಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಸರ್ಕಾರಿ ನೌಕರರು ಕಡ್ಡಾಯವಾಗಿ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಆದೇಶ
***********************************************************************
ಕಲಬುರಗಿ,ನ.28(ಕ.ವಾ.)-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ನೌಕರರು ಕಡ್ಡಾಯವಾಗಿ ಜಿಲ್ಲಾ ಆಸ್ಪತ್ರೆಗಳ ಮೂಲಕವೇ ಆರೋಗ್ಯ ಸೇವೆ ಪಡೆಯಬೇಕೆಂಬ ಆದೇಶ ಶೀಘ್ರ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ ಕುಮಾರ ತಿಳಿಸಿದರು.
ಅವರು ಮಂಗಳವಾರ ಕಲಬುರಗಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸರ್ಕಾರಿ ನೌಕರರಿಗೆ ಯಾವುದೇ ಆರೋಗ್ಯ ತೊಂದರೆಯಾದಾಗ ಮೊದಲು ಜಿಲ್ಲಾ ಆಸ್ಪತ್ರೆಗೆ ಅಥವಾ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ನೌಕರರಿಗಿರುವ ಅನಾರೋಗ್ಯಕ್ಕೆ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆ ದಾಖಲಾಗಬಹುದಾಗಿದೆ ಎಂದರು.
ಸರ್ಕಾರಿ ನೌಕರರಿಗೆ ಅಘಾತಕಾರಿ ಕಾಯಿಲೆಗಳಾದ ಹೃದಯಘಾತಗಳಂತಹ ತುರ್ತು ಚಿಕಿತ್ಸೆ ಅವಶ್ಯಕತೆಯಿದ್ದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕಾಯಿಲೆ ಸುಧಾರಣೆಗೊಂಡಾಗ ರೋಗಿಗಳು ಪುನ: ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗಬೇಕು. ಇನ್ನು ಮುಂದೆ ಆರೋಗ್ಯ ಚಿಕಿತ್ಸೆಗಾಗಿ ವೆಚ್ಚ ಮಾಡುವ ಖರ್ಚನ್ನು ಇಲಾಖೆಗಳು ಹಿಂತಿರುಗಿಸುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಡಾ|| ಉಮೇಶ ಜಾಧವ, ಶಾಸಕ ಡಾ|| ಅಜಯಸಿಂಗ್ ಪಾಲ್ಗೊಂಡಿದ್ದರು.
ಜಂಟಿ ಸಮೀಕ್ಷೆ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ
-******************************************
ಕಲಬುರಗಿ,ನ.28(ಕ.ವಾ.)-ಕಲಬುರಗಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಕಲ್ಲೂರ ಬ್ರಿಜ್-ಕಂ-ಬ್ಯಾರೇಜಿನ ಪಕ್ಕದ ಜಮೀನುಗಳ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳು ಹಾಗೂ ತಹಶೀಲ್ದಾರರು ಜಂಟಿಯಾಗಿ ಸಮೀಕ್ಷೆ ಕೈಗೊಂಡು ಜಮೀನು ಹಾನಿಯಾಗಿರುವ ವರದಿಯನ್ನು ಎರಡು ದಿನದೊಳಗಾಗಿ ನೀಡುವಂತೆ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರು ಅಧಿಕಾರಿಗಳಿಗೆ ಸೂಚಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಜೇವರ್ಗಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದ ವಿವಿಧ ಬೇಡಿಕೆಗಳನ್ನು ಪರಿಶೀಲಿಸಿ, ಕಲ್ಲೂರ ಬ್ಯಾರೇಜಿನ ಪಕ್ಕದಲ್ಲಿ ಹಾನಿಗೊಳಗಾಗಿರುವ ಸರ್ಕಾರಿ ಮತ್ತು ರೈತರ ಜಮೀನಿನ ಸಂಪೂರ್ಣ ವಿವರ ಸಮೀಕ್ಷೆ ಕೈಗೊಳ್ಳಬೇಕು. ರೈತರ ಜಮೀನು ಹಾಳಾಗಿದ್ದಲ್ಲಿ ಅಂತಹ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳಲು ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗಾಗಿ ಈಗಾಗಲೇ 132 ತೊಗರಿ ಖರೀದಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ತೊಗರಿ ಖರೀದಿಸಲಾಗುವುದು. ಈ ನಿಟ್ಟಿನಲ್ಲಿ ಒಂದು ಹಂತದ ತರಬೇತಿ ಸಹಿತ ಆಯೋಜನೆ ಮಾಡಲಾಗಿದೆ. ಕೇಂದ್ರ ಸರ್ಕಾರವು 5450ರೂ.ಗಳ ಬೆಂಬಲ ಬೆಲೆಯನ್ನು ಘೋಷಿಸಿದ್ದು, ಖರೀದಿಗೆ ಆದೇಶ ದೊರೆತ ತಕ್ಷಣ ತೊಗರಿ ಖರೀದಿ ಪ್ರಾರಂಭಿಸಲಾಗುವುದು. ಇನ್ನುಳಿದ ಬೇಡಿಕೆಗಳು ಸರ್ಕಾರ ಮಟ್ಟದಲ್ಲಿ ಕೈಗೊಳ್ಳಬೇಕಾದ ನಿರ್ಣಯಗಳಾಗಿವೆ ಎಂದರು.
ಜೇವರ್ಗಿ ತಾಲೂಕಿನ ಮಲ್ಲಾಬಾದ ಏತ ನೀರಾವರಿಯಲ್ಲಿ ಜೇವರ್ಗಿ, ಮುಡಬಾಳ ಹಾಗೂ ಶಹಾಪುರ ಕೆನಾಲ್‍ಗಳಂಬ ಮೂರು ಏತ ನೀರಾವರಿಗಳಿದ್ದು, ಜೇವರ್ಗಿ ಮತ್ತು ಮುಡಬಾಳ ಏತ ನೀರಾವರಿ ಜೇವರ್ಗಿ ತಾಲೂಕಿಗೆ ಸಂಬಂಧಿಸಿವೆ. ಜೇವರ್ಗಿ ಏತ ನೀರಾವರಿಯಲ್ಲಿ ಜೇವರ್ಗಿ ತಾಲೂಕಿನ 21, ಶಹಾಪುರ-07 ಹಾಗೂ ಸುರಪುರ-02 ಗ್ರಾಮಗಳು ಬರುತ್ತವೆ. ಮುಡಬಾಳ ಏತ ನೀರಾವರಿಯಲ್ಲಿ ಜೇವರ್ಗಿ ತಾಲೂಕಿನ 29 ಹಾಗೂ ಶಹಾಪುರ ತಾಲೂಕಿನ 02 ಗ್ರಾಮಗಳು ಬರುತ್ತವೆ. ಜೇವರ್ಗಿ ಏತ ನೀರಾವರಿ ಯೋಜನೆಯಡಿ ಈಗಾಗಲೇ 3026 ಹೆಕ್ಟೇರ್ ಪ್ರದೇಶಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಮುಡಬಾಳ ಏತ ನೀರಾವರಿಯಲ್ಲಿ ಮುಖ್ಯ ಕ್ಯಾನಲ್ ಕೆಲಸ ಮುಗಿದಿದ್ದು, ಹೊಲಗಾಲುವೆ ಮತ್ತು ಉಪಕಾಲುವೆ ಕೆಲಸ ಪ್ರಾರಂಭಿಸಲು ಆಡಳಿತಾತ್ಮಕ ಮಂಜೂರಾತಿ ದೊರೆತಿರುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.
ಹಾನಿಗೊಳಗಾದ ಕಲ್ಲೂರ ಬ್ರಿಜ್-ಕಂ-ಬ್ಯಾರೇಜ್ ಸುಧಾರಣೆಗಾಗಿ 4 ಕ್ರಿಯಾ ಯೋಜನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕೆಲವು ಕ್ರಿಯಾ ಯೋಜನೆಗಳಿಗೆ ಅನುದಾನ ಮಂಜೂರಾಗಿದ್ದು, ಆಡಳಿತಾತ್ಮಕ ಮಂಜೂರಾತಿಯು ಸಚಿವ ಸಂಪುಟ ಸಭೆಯಲ್ಲಿ ದೊರೆಯಬೇಕಾಗಿದೆ. ಈ ಕಾಮಗಾರಿಗಳು ಕೈಗೊಳ್ಳುವುದರಿಂದ ಮುಂದೆ ಯಾವುದೇ ತೊಂದರೆ ಸಂಭವಿಸುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.
ಕೆ.ಬಿ.ಜೆ.ಎನ್.ಎಲ್.ದಿಂದ ವಾರ ಬಂದಿ ಪದ್ದತಿಯಲ್ಲಿ ನೀರು ಬಿಡುವ ನಿರ್ಣಯವನ್ನು ಜಲಾಶಯವಿರುವ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿಯು ಕೈಗೊಳ್ಳುವುದು. ಈಗಾಗಲೇ ಮುಂಗಾರು ಹಂಗಾಮಿನಲ್ಲಿ ನವೆಂಬರ್ 24ರವರೆಗೆ ನೀರು ಬಿಡಬೇಕಾಗಿದ್ದನ್ನು 28ರವರೆಗೆ ವಿಸ್ತರಿಸಲಾಗಿದೆ. ಹಿಂಗಾರು ಹಂಗಾಮಿಗೆ ಡಿಸೆಂಬರ್ 10ರಿಂದ 2018ರ ಮಾರ್ಚ್ 21ರವರೆಗೆ ನೀರು ಹರಿಸಲಾಗುವುದು. ಜಲಾಶಯದಿಂದ ಪ್ರತಿ 10 ದಿನದ ನಂತರ 12 ದಿನಗಳವರೆಗೆ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಸೇಡಂ ಸಹಾಯಕ ಆಯುಕ್ತೆ ಡಾ|| ಬಿ. ಸುಶೀಲಾ, ಐಎಎಸ್ ಪ್ರೊಬೇಷನರಿ ಅಧಿಕಾರಿ ಅಕೃತಿ ಸಾಗರ, ಕಲಬುರಗಿ ಸಹಾಯಕ ಆಯುಕ್ತ ರಾಚಪ್ಪ, ಜೇವರ್ಗಿ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
***********************************************************************
ಕಲಬುರಗಿ,ನ.28(ಕ.ವಾ.)-ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಜವಾಹರ ನವೋದಯ ವಿದ್ಯಾಲಯ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡಲು 2017-18ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 2ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಿತಿತಿ.ಟಿvshq.oಡಿg ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅಥವಾ ಅರ್ಜಿಗಳನ್ನು ನೇರವಾಗಿ ಸಂಬಂಧಪಟ್ಟ ನವೋದಯ ವಿದ್ಯಾಲಯದಲ್ಲಿ ಸಲ್ಲಿಸಬೇಕು. ಕೋರವಾರ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಸೇಡಂ, ಚಿಂಚೋಳಿ, ಚಿತ್ತಾಪೂರ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಕಲಬುರಗಿ ನಗರದ ಪೊಲೀಸ್ ಗ್ರೌಂಡಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ ಪ್ರವೇಶಕ್ಕಾಗಿ ಆಳಂದ, ಅಫಜಲಪುರ, ಜೇವರ್ಗಿ, ಗುಲಬರ್ಗಾ ಬ್ಲಾಕ್ ಮಟ್ಟದ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











ಹೀಗಾಗಿ ಲೇಖನಗಳು News and photo date: 28---11---2017

ಎಲ್ಲಾ ಲೇಖನಗಳು ಆಗಿದೆ News and photo date: 28---11---2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and photo date: 28---11---2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-28-11-2017.html

Subscribe to receive free email updates:

0 Response to "News and photo date: 28---11---2017"

ಕಾಮೆಂಟ್‌‌ ಪೋಸ್ಟ್‌ ಮಾಡಿ