News and Photo Date: 04--11--2017

News and Photo Date: 04--11--2017 - ಹಲೋ ಸ್ನೇಹಿತ ರಾಷ್ಟ್ರೀಯ ಲೇಟೆಸ್ಟ್ ಮಾಹಿತಿ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಬಾರಿ ಓದಲು News and Photo Date: 04--11--2017, ಈ ಲೇಖನದಲ್ಲಿ ನೀವು ಓದಲು ಮತ್ತು ಅದರೊಡನೆ ಮಾಹಿತಿಯನ್ನು ಡೌನ್ಲೋಡ್ ಚೆನ್ನಾಗಿ ಸಿದ್ಧಪಡಿಸಿರುವಿರಿ. ಆಶಾದಾಯಕವಾಗಿ ಪೋಸ್ಟ್ಗಳನ್ನು ತುಂಬಲು ಲೇಖನ ಆರೋಗ್ಯ, ಲೇಖನ ಆರ್ಥಿಕ, ಲೇಖನ ಲೇಟೆಸ್ಟ್ ಮಾಹಿತಿ, ಲೇಖನ ಶಿಕ್ಷಣ, ಲೇಖನ ಸಾಮಾನ್ಯ, ನಾವು ಬರೆಯಲು ಅರ್ಥಮಾಡಿಕೊಳ್ಳಬಹುದು. ಸರಿ, ಹ್ಯಾಪಿ ಓದುವ.

ಶೀರ್ಷಿಕೆ : News and Photo Date: 04--11--2017
ಲಿಂಕ್ : News and Photo Date: 04--11--2017

ಓದಿ


News and Photo Date: 04--11--2017

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಸಚಿವರ ಪ್ರವಾಸ
*********************************************
ಕಲಬುರಗಿ,ನ.04,(ಕ.ವಾ)-ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ|| ಶರಣಪ್ರಕಾಶ ಪಾಟೀಲ ಅವರು ಹೈದ್ರಾಬಾದಿನಿಂದ ರಸ್ತೆ ಮೂಲಕ ನವೆಂಬರ್ 6ರಂದು ಮಧ್ಯಾಹ್ನ 1 ಗಂಟೆಗೆ ಕಲಬುರಗಿಗೆ ಆಗಮಿಸುವರು.
ಸಚಿವರು ಅಂದು ಮಧ್ಯಾಹ್ನ 2 ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಏರ್ಪಡಿಸಿರುವ ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತಿ ಆಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ನಂತರ ಅಂದು ರಾತ್ರಿ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣಿಸುವರು.
ಸೇಡಂ ಪಟ್ಟಣ 24x7 ಕುಡಿಯುವ ನೀರು ಕಾಮಗಾರಿ ವಿಳಂಬ: ವರದಿ ನೀಡಲು
*********************************************************************
ಸೂಚನೆ
**********
ಕಲಬುರಗಿ,ನ.04.(ಕ.ವಾ.)-ಸೇಡಂ ಪಟ್ಟಣದಲ್ಲಿ 24x7 ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಬೃಹತ್ ನೀರು ಪೂರೈಕೆಗೆ ಟೆಂಡರ್ ಮಾಡಿ ಎರಡು ವರ್ಷವಾದರು ಕಾಮಗಾರಿ ಮುಗಿದಿಲ್ಲ. ವಿಳಂಬಕ್ಕೆ ಕಾರಣರಾದ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಿ ಸಮಗ್ರ ವರದಿ ನೀಡುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳೀಯ ಕಾರ್ಯನಿರ್ವಾಹಕ ಇಂಜಿನೀಯರ್ ಅವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಸೂಚಿಸಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ(ಕೆ.ಡಿ.ಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಸೇಡಂ ಪಟ್ಟಣದ ನಿರಂತರ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ತಿಳಿಸಿದರು.
ಶಹಬಾದ ಪಟ್ಟಣದಲ್ಲಿ ಕೆ.ಯು.ಐ.ಎಫ್.ಡಿ.ಸಿ. ಯಿಂದ ಅನುಷ್ಠಾನಗೊಳ್ಳುತ್ತಿರುವ 24x7 ಕುಡಿಯುವ ನೀರು ಸರಬರಾಜು ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಮುಗಿಸಿ ಜನವರಿ-2018ಕ್ಕೆ ಜನರ ಸೇವೆಗೆ ಬಳಕೆಗೆ ಬರಬೇಕು. ಶಹಬಾದ ಅಧಿಸೂಚಿತ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ಸೇರಿ ಪರಿಹಾರ ಕಂಡುಕೊಳ್ಳಬೇಕೆಂದು ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕರಿಗೆ ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಮುಗಿದಿದ್ದು, ಚಿತ್ತಾಪುರ ಮತ್ತು ಸೇಡಂ ಪಟ್ಟಣದಲ್ಲಿ ಕಾಮಗಾರಿ ಪ್ರಗತಿಯ ಹಂತದಲ್ಲಿವೆ ಎಂದು ಡಿ.ಯು.ಡಿ.ಸಿ ಯೋಜನಾ ನಿರ್ದೇಶಕರು ಸಭೆಗೆ ತಿಳಿಸಿದರು. ಜೇವರ್ಗಿ ಪಟ್ಟಣದಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಬಗ್ಗೆ ಟೆಂಡದಲ್ಲಿನ ಷರತ್ತಿನನ್ವಯ ಕಾಮಗಾರಿ ಗುಣಮಟ್ಟದಿಂದ ಮಾಡಲಾಗಿದಿಯೆ, ಕಾರ್ಯಾಚರಣೆಗೆ ಇನ್ನು ಏನೆಲ್ಲ ಕೆಲಸಗಳು ಬಾಕಿ ಇವೆ ಎಂಬುದರ ಕುರಿತು 15 ದಿನದೊಳಗೆ ವರದಿ ನೀಡಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳೀಯ ಕಾರ್ಯನಿರ್ವಾಹಕ ಇಂಜಿನೀಯರ್ ಅವರಿಗೆ ಸಚಿವರು ಸೂಚಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅನುದಾನ ದುರ್ಬಳಕೆ ಮಾಡಿಕೊಂಡ ಶಹಾಬಾದ ನಗರಸಭೆಯ ನೌಕರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಕೂಡಲೆ ಇಲಾಖಾ ತನಿಖೆ ಪ್ರಾರಂಭಿಸಿ ಸಂಬಂಧಿಸಿದವರ ಮೇಲೆ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಿದ ಸಚಿವರು ಇದರಲ್ಲಿ ಭಾಗಿಯಾದ ಗುತ್ತಿಗೆದಾರರನ್ನು ಸಹ ಕಪ್ಪು ಪಟ್ಟಿಯಲ್ಲಿ ಸೇರಿಸಬೇಕು. ಜಿಲ್ಲೆಯಲ್ಲಿ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುತ್ತಿದ್ದು, ಯಾವುದೇ ಕಾರಣಕ್ಕು ಭ್ರಷ್ಠಾಚಾರ ಸಹಿಸಲಾಗದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕಲಬುರಗಿ ಪಾಲಿಕೆ ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳು ಕಳೆದ ಸಾಲಿನ ಬಾಕಿ ಸೇರಿದಂತೆ 2017-18ನೇ ಸಾಲಿಗೆ ಎಸ್.ಎ.ಎಸ್. ತೆರಿಗೆ 629.73 ಲಕ್ಷ ರೂ. ಬೇಡಿಕೆ ಇದ್ದು, ಅಕ್ಟೋಬರ್ ಅಂತ್ಯಕ್ಕೆ 354.45 ಲಕ್ಷ ರೂ. ಸಂಗ್ರಹಿಸಲಾಗಿದೆ. ಅದರಂತೆ ಉದ್ದಿಮೆದಾರರಿಂದ ಪ್ರಸಕ್ತ ಸಾಲಿನಲ್ಲಿ 26.12 ಲಕ್ಷ ರೂ. ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹ ನಿರೀಕ್ಷಿಸಿದ್ದು, ಅಕ್ಟೋಬರ್ ಅಂತ್ಯಕ್ಕೆ 5.16 ಲಕ್ಷ ತೆರಿಗೆ ಸಂಗ್ರಹಿಸಲಾಗಿದೆ. 22.44 ಲಕ್ಷ ರೂ. ನೀರಿನ ತೆರಿಗೆ ಬೇಡಿಕೆ ಪೈಕಿ ಅಕ್ಟೋಬರ್ ಅಂತ್ಯದ ವರೆಗೆ 61.07 ಲಕ್ಷ ರೂ., ಜಾಹೀರಾತು ತೆರಿಗೆಯ 3.74 ಲಕ್ಷ ರೂ.ಗಳ ಬೇಡಿಕೆ ಪೈಕಿ ಅಕ್ಟೋಬರ್ ಅಂತ್ಯದ ವರೆಗೆ 1.20 ಲಕ್ಷ ರೂ. ಸಂಗ್ರಹಿಸಲಾಗಿದೆ. 2011-12ನೇ ಸಾಲಿನ ಎಸ್.ಎಫ್.ಸಿ ಅನ್‍ಟೈಡ್ ಅನುದಾನದಡಿ 151 ಕಾಮಗಾರಿಗಳ ಪೈಕಿ 147, 2012-13ನೇ ಸಾಲಿನ 229 ಕಾಮಗಾರಿಗಳ ಪೈಕಿ 229, 2013-14ನೇ ಸಾಲಿನ 160 ಕಾಮಗಾರಿಗಳ ಪೈಕಿ 159, 2014-15ನೇ ಸಾಲಿನ 466 ಕಾಮಗಾರಿಗಳ ಪೈಕಿ 465, 2015-16ನೇ ಸಾಲಿನ 435 ಕಾಮಗಾರಿಗಳ ಪೈಕಿ 409, 2016-17ನೇ ಸಾಲಿನ 398 ಕಾಮಗಾರಿಗಳ ಪೈಕಿ 301 ಕಾಮಗಾರಿ ಪೂರ್ಣಗೊಳಿಸಲಾಗಿದೆ. 2017-18ನೇ ಸಾಲಿಗೆ 1524.64 ಅನುದಾನ ಹಂಚಿಕೆಯಾಗಿದ್ದು, 165 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಅಕ್ಟೋಬರ್ ಅಂತ್ಯಕ್ಕೆ 46 ಕಾಮಗಾರಿ ಪೂರ್ಣಗೊಳಿಸಿದ್ದು, 217.99 ಲಕ್ಷ ರೂ.. ಖರ್ಚು ಮಾಡಲಾಗಿದೆ ಎಂದು ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಸಾಜಿದ್ ಅಹ್ಮದ್ ಮುಲ್ಲಾ ಸಭೆಗೆ ತಿಳಿಸಿದರು.
ಎಸ್.ಎಫ್.ಸಿ. ಅನುದಾನದಡಿ 2011-12 ರಿಂದ 2016-17ರ ವರೆಗೆ ಕ್ರಿಯಾ ಯೋಜನೆ ಅನುಮೋದಿತ ಎಲ್ಲಾ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸಬೇಕು, ಕಾಮಗಾರಿ ಅನುಷ್ಟಾನಕ್ಕೆ ಸ್ಥಳದ ಸಮಸ್ಯೆಗಳಿದಲ್ಲಿ ಬೇರೆ ಕಡೆ ಕಾಮಗಾರಿ ಪ್ರಾರಂಭಿಸಬೇಕು. ಇದರ ಅನುಷ್ಠಾನಕ್ಕೆ ಇಂಜಿನೀಯರ್‍ಗಳು ಲಭ್ಯವಿಲ್ಲದಿದ್ದಲ್ಲಿ ಬೇರೆ ಕಡೆಯಿಂದ ನಿಯೋಜನೆ ಪಡೆದು ನಿಗದಿತ ಅವಧಿಯಲ್ಲಿ ಕಾರ್ಯ ಮುಗಿಸಬೇಕೆಂದು ಹಾಗೂ ಕರ ವಸೂಲಾತಿ ಹೆಚ್ಚಿನ ಗಮನಹರಿಸಬೇಕು ಹಾಗೂ ಸ್ವಯಂ ಘೋಷಿತ ಆಸ್ಥಿ ತೆರಿಗೆಯಲ್ಲಿ ಜನರು ಸರಿಯಾಗಿ ಹಣ ಪಾವತಿಸಿದರೆ ಎಂಬುದರ ಬಗ್ಗೆ ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸಚಿವರು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಲಬುರಗಿ ಮಹಾನಗರ ಪಾಲಿಕೆಯಿಂದ ಗೃಹ ಭಾಗ್ಯ ಯೋಜನೆಯಡಿ 214 ಪೌರ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಳ್ಳಲು ಅನುಮೋದನೆ ನೀಡಲಾಗಿ, ಪ್ರತಿ ಪೌರ ಕಾರ್ಮಿಕರಿಗೆ 1 ಲಕ್ಷ ರೂ. ದಂತೆ ಅನುದಾನ ಸಹ ಬಿಡುಗಡೆ ಮಾಡಲಾಗಿದೆ. 2017-18ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ 1047 ಗುರಿ ಹೊಂದಲಾಗಿದ್ದು, ಇದರಲ್ಲಿ ಇದೂವರಗೆ 290 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ ಕೆಸರಟಗಿಯಲ್ಲಿ 780 ಮನೆ ನಿರ್ಮಾಣಕ್ಕೆ ಹಾಗೂ ಜಾಫರಾಬಾದ, ಪಲ್ಲಾಪುರ ಮತ್ತು ಶೇಖ ರೋಜಾ ದಲ್ಲಿನ 652 ಮನೆ ನಿರ್ಮಾಣಕ್ಕೆ ರಾಜೀವ ಗಾಂಧಿ ವಸತಿ ನಿಗಮದಿಂದ ಸಾಲ ನೀಡವಲ್ಲಿ ವಿಳಂಬವಾಗುತ್ತಿರುವುದರಿಂದ ಮನೆ ನಿರ್ಮಾನ ಕಾರ್ಯ ಮತ್ತು ಹಂಚಿಕೆ ನಿಯಮಿತವಾಗಿ ಆಗುತ್ತಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ಸಂಬಂಧ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಿದ ಸಚಿವರು ವಿವಿಧ ವಿಧಾನಸಭಾ ಕ್ಷೇತ್ರವಾರು 2017-18ನೇ ಸಾಲಿಗೆ ದೇವರಾಜ ಅರಸು ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸಂಬಂಧಿಸಿದ ಶಾಸಕರ ಗಮನಕ್ಕೆ ತಂದು ಆಯ್ಕೆ ಮಾಡಬೇಕು ಎಂದರು.
ಕಲಬುರಗಿ ನಗರದಲ್ಲಿನ ಅನ್ನಪೂರ್ಣ ಕ್ರಾಸ್-ಖರ್ಗೆ ಪೆಟ್ರೋಲ್ ಪಂಪ್ ರಸ್ತೆ ಅಗಲೀಕರಣ ಮತ್ತು ಒಳಚರಂಡಿ ಕಾಮಗಾರಿ, ಹುಮ್ನಾಬಾದ ಬೇಸ್-ಮರಗಮ್ಮ ದೇವಸ್ಥಾನ ಸೇರಿದಂತೆ ನಗರದಲ್ಲಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗಳಿಗೆ ಭೂಸ್ವಾಧೀನ ಮಾಡಿಕೊಳ್ಳಬೇಕಾದಂತಹ ಇತರೆ ಎಲ್ಲಾ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆಯ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಲಬುರಗಿ ಪಾಲಿಕೆಗೆ ಕಳೆದ ಸಾಲಿನ 195 ಲಕ್ಷ ರೂ. ಸೇರಿದಂತೆ 2017-18ನೇ ಸಾಲಿಗೆ 2100 ಲಕ್ಷ ರೂ. ತೆರಿಗೆ ಬೇಡಿಕೆ ಇದ್ದು, ಅಕ್ಟೊಬರ್ ಅಂತ್ಯದವರೆಗೆ 1579.12 ಲಕ್ಷ ರೂ. ತೆರಿಗೆ ಸಂಗ್ರಹಿಸಲಾಗಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ 189.44 ಲಕ್ಷ ರೂ. ಉದ್ದಿಮೆ ಪರವಾನಗಿ ಶುಲ್ಕ ತೆರಿಗೆ ಸಂಗ್ರಹ ನಿರೀಕ್ಷಿಸಿದ್ದು, ಅಕ್ಟೋಬರ್ ಅಂತ್ಯಕ್ಕೆ 55.06 ಲಕ್ಷ ತೆರಿಗೆ ಸಂಗ್ರಹಿಸಲಾಗಿದೆ.
ಮಹಾನಗರ ಪಾಲಿಕೆಗೆ ನಗರೋಥ್ಥಾನ ಯೋಜನೆಯಡಿ ಮೊದಲನೆ ಹಂತದಲ್ಲಿ ಬಿಡುಗಡೆಯಾದ 100 ಕೋಟಿ ಅನುದಾನದಲ್ಲಿ 95.52 ಕೋಟಿ ಖರ್ಚು ಮಾಡಲಾಗಿದ್ದು, 33ರ ಪೈಕಿ 32 ಕಾಮಗಾರಿ ಪೂರ್ಣಗೊಳಿಸಿದೆ. ಅದರಂತೆ ಎರಡನೇ ಹಂತದಲ್ಲಿ ಹಂಚಿಕೆಯಾದ 100 ಕೋಟಿ ಅನುದಾನದಲ್ಲಿ 96.19 ಕೋಟಿ ಬಿಡುಗಡೆಯಾಗಿದ್ದು, 138ರ ಪೈಕಿ 132 ಕಾಮಗಾರಿ ಪೂರ್ಣಗೊಳಿಸಿದ್ದು, 88.36 ಕೋಟಿ ರೂ ಖರ್ಚು ಮಾಡಲಾಗಿದೆ. ಮೂರನೇ ಹಂತದಲ್ಲಿ 100 ಕೋಟಿ ರೂ ಪೈಕಿ 36.5 ಕೋಟಿ ಮಾತ್ರ ಅನುದಾನ ಬಿಡುಗಡೆಯಾಗಿದ್ದು, 31.66 ಕೋಟಿ ಖರ್ಚು ಮಾಡಲಾಗಿದೆ. 34 ಕಾಮಗರಿಗಳ ಪೈಕಿ 20 ಪೂರ್ಣಗೊಂಡಿದ್ದು, 14 ಪ್ರಗತಿಯ ಹಂತದಲ್ಲಿವೆ ಎಂದು ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತ ಆರ್.ಪಿ.ಜಾಧವ ಸಭೆಗೆ ಮಾಹಿತಿ ನಿಡಿದರು. ಮೂರನೇ ಹಂತದ ನಗರೋಥ್ಥಾನ ಯೋಜನೆಯಡಿ ಕೆ.ಯು.ಐ.ಎಫ್.ಡಿ.ಸಿ ಸಂಸ್ಥೆಯ ಕುಡಿಯುವ ನೀರಿನ ಕಾಮಗಾರಿಗೆ 40 ಕೋಟಿ ಮೀಸಲಿರಿಸಲಾಗಿದ್ದು, ಸದರಿ ಸಂಸ್ಥೆ ಈಗಾಗಲೆ ಟೆಂಡರ್ ಕರೆದಿರುವುದರಿಂದ ಅವರಿಗೆ ಅನುದಾನ ನೀಡಬೇಕಾಗುತ್ತಿದೆ. ಹೀಗಾಗಿ ಉಳಿದ ಹಣ ಮಂಜೂರಾತಿಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ್, ಮಹಾನಗರ ಪಾಲಿಕೆಯ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಸಗರ್ ಚುಲ್ ಬುಲ್, ಮಹಾನಗರ ಪಾಲಿಕೆಯ ಆಯುಕ್ತ ಸುನೀಲ ಕುಮಾರ.ಪಿ. ಸೇರಿದಂತೆ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
ನವೆಂಬರ್ 6ರಂದು ಪ್ರಾಪರ್ಟಿ ಎಕ್ಸಪೋ ಉದ್ಘಾಟನೆ
**********************************************
ಕಲಬುರಗಿ,04.ನ..(ಕ.ವಾ.)-ಕರ್ನಾಟಕ ಗೃಹ ಮಂಡಳಿಯಿಂದ ಕರ್ನಾಟಕ ರಾಜ್ಯೋತ್ಸವದ ವಿಶೇಷ ಕೊಡುಗೆಯಾಗಿ ಪ್ಲಾಟ್‍ಗಳ ಮಾರಾಟ ಮೇಳ “ಕೆಹೆಚ್‍ಬಿ-ಗ್ರೀನ್ ಪಾರ್ಕ್ ವಸತಿ ಯೋಜನೆಯ ಪ್ರಾಪರ್ಟಿ ಎಕ್ಸ್‍ಪೋ” ಕಲಬುರಗಿಯ ಶೇಖ್ ರೋಜಾದ ಗ್ರೀನ್ ಪಾರ್ಕ್‍ನಲ್ಲಿ ನವೆಂಬರ್ 6, 7 ಹಾಗೂ 8 ರಂದು ಏರ್ಪಡಿಸಲಾಗಿದೆ.
ನವೆಂಬರ್ 6ರಂದು ಬೆಳಿಗ್ಗೆ 10.30 ಗಂಟೆಗೆ ಅಫಜಲಪುರ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ವ್ಹಿ. ಗುತ್ತೇದಾರ್ ಅವರು ಈ ಪ್ರಾಪರ್ಟಿ ಎಕ್ಸ್‍ಪೋ ಸಮಾರಂಭವನ್ನು ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಶರಣಪ್ರಕಾಶ ಪಾಟೀಲ ಹಾಗೂ ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರ ಘನ ಉಪಸ್ಥಿತಿಯಲ್ಲಿ ಕಲಬುರಗಿ ದಕ್ಷಿಣ ವಿಧಾನಸಭಾ ಶಾಸಕ ದತ್ತಾತ್ರೇಯ ಸಿ. ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯಸಭಾ ಸದಸ್ಯ ಡಾ. ಬಸವರಾಜ ಪಾಟೀಲ ಸೇಡಂ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಚಿಂಚೊಳಿ ಶಾಸಕ ಡಾ|| ಉಮೇಶ ಜಾಧವ, ವಿಧಾನಸಭಾ ಶಾಸಕರುಗಳಾದ, ಜಿ. ರಾಮಕೃಷ್ಣ, ಬಿ.ಆರ್. ಪಾಟೀಲ, ಡಾ|| ಅಜಯಸಿಂಗ್, ವಿಧಾನ ಪರಿಷತ್ ಶಾಸಕರುಗಳಾದ ಕೆ.ಬಿ. ಶಾಣಪ್ಪ, ಬಿ.ಜಿ. ಪಾಟೀಲ, ಅಮರನಾಥ ಪಾಟೀಲ, ಇಕ್ಬಾಲ್ ಅಹ್ಮದ್ ಸರಡಗಿ, ಶರಣಪ್ಪ ಮಟ್ಟೂರ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣಕುಮಾರ ಮೋದಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ್ ಚುಲಬುಲ್ ಹಾಗೂ ಕರ್ನಾಟಕ ಗೃಹ ಮಂಡಳಿ ಸದಸ್ಯ ಅನೀಲಸಿಂಗ್ ಅತಿಥಿಗಳಾಗಿ ಆಗಮಿಸುವರು.
ಕೆ.ಹೆಚ್.ಬಿ ಗ್ರೀನ್ ಪಾರ್ಕ್ ಬಡಾವಣೆಯು ಕಲಬುರಗಿ ಬಸ್‍ನಿಲ್ದಾಣದಿಂದ ಕೇವಲ 2.5 ಕಿ.ಮೀ. ದೂರದಲ್ಲಿದೆ. ಈ ಗ್ರೀನ್ ಪಾರ್ಕ್ ಬಾಡಾವಣೆಯಲ್ಲಿ 2 ಬಿ.ಹೆಚ್.ಕೆ 448 ಪ್ಲಾಟ್‍ಗಳು ಹಾಗೂ 2.5 ಬಿ.ಹೆಚ್.ಕೆ 384 ಪ್ಲಾಟ್‍ಗಳು ಲಭ್ಯವಿರುತ್ತದೆ. 2 ಬಿಹೆಚ್‍ಕೆ ಪ್ಲಾಟ್‍ಗಳ ಮೊತ್ತ 15,22,880 ರೂ ಹಾಗೂ 2.5 ಬಿಹೆಚ್‍ಕೆ ಪ್ಲಾಟ್‍ಗಳ ಮೊತ್ತ 20,38,800ರೂ. ಗಳನ್ನು ನಿಗದಿಪಡಿಸಲಾಗಿದೆ. ಎಕ್ಸಪೋ ದಿನಾಂಕಗಳಂದು ಶೇ.2ರಷ್ಟು ವಿಶೇಷ ರಿಯಾಯಿತಿ ಇರುತ್ತದೆ. ಎಕ್ಸ್‍ಪೋ ಸ್ಥಳದಲ್ಲಿ 50 ಸಾವಿರ ರೂ.ಗಳನ್ನು ನಗದು/ಡಿ.ಡಿ. ಮುಖಾಂತರ ಪಾವತಿಸಿ ಮೂಲ ಹಂಚಿಕೆ ಪತ್ರವನ್ನು ಪಡೆಯಬಹುದು. ಬಾಕಿ ಉಳಿದ ಆರಂಭಿಕ ಠೇವಣಿ (2ಬಿಹೆಚ್‍ಕೆ 50,000ರೂ. ಹಾಗೂ 2.5 ಬಿಹೆಚ್‍ಕೆಗೆ 1 ಲಕ್ಷ ರೂ.) ಹಣವನ್ನು ನವೆಂಬರ್ 23ರೊಳಗಾಗಿ ಮಂಡಳಿಗೆ ಪಾವತಿಸಿ ಶೇ. 2ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.
ಹಂಚಿಕೆದಾರರು/ಅರ್ಜಿದಾರರು ಬ್ಯಾಂಕ್ ಸಾಲದ ಮುಖಾಂತರ ಪ್ಲಾಟ್ ಖರೀದಿಸಿದಲ್ಲಿ ಸಿ.ಎಲ್.ಎಸ್.ಎಸ್. ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಎಲ್ಲ ಬ್ಯಾಂಕ್‍ಗಳಲ್ಲಿ ಗರಿಷ್ಠ 2.30 ಲಕ್ಷ ರೂ. ದಿಂದ 2.35 ಲಕ್ಷ ರೂ.ದವರೆಗೆ ವಿಶೇಷ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಅರ್ಜಿಗಳನ್ನು ಸ್ಥಳದಲ್ಲಿ ಲಭ್ಯವಿರುವ ಬ್ಯಾಂಕ್‍ಗಳಿಂದಲೂ ಸಹ ಪಡೆದು ಅದೇ ಬ್ಯಾಂಕ್‍ನಲ್ಲಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಮೇಲೆ ತಿಳಿಸಿದ ನೋಂದಣಿ ಶುಲ್ಕ ಮತ್ತು ಮುಂಗಡ ಠೇವಣಿಯನ್ನು ಗೃಹ ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಕಾವೇರಿ ಭವನ ಬೆಂಗಳೂರು ಇವರ ಹೆಸರಿನಲ್ಲಿ ಡಿ.ಡಿ. ಪಡೆದು ಸಲ್ಲಿಸಬೇಕು.
ಮನೆಗಳ ಹಂಚಿಕೆಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಹಾಗೂ ಹಣ ಸಹ ಪಾವತಿ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಮಂಡಳಿಯ ತಿತಿತಿ.ಞಚಿಡಿಟಿಚಿಣಚಿಞಚಿhousiಟಿg.ಛಿom ಹಾಗೂ ತಿತಿತಿ.ಞhbಛಿusಣomeಡಿiಟಿಜಿo.ಛಿom ವೆಬ್‍ಸೈಟ್‍ನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಗೃಹ ಮಂಡಳಿ ಬೆಂಗಳೂರಿನ ಉಪ ಪ್ರಧಾನ ವ್ಯವಸ್ಥಾಪಕರ (ಗ್ರಾಹಕರ ಸೇವೆ) ಕಚೇರಿ ದೂರವಾಣಿ ಸಂಖ್ಯೆ 080-22273511 ಮತ್ತು ಮೊಬೈಲ್ ಸಂಖ್ಯೆ 9448423643. ಕಂದಾಯ ಅಧಿಕಾರಿಗಳ ಮೊಬೈಲ್ ಸಂಖ್ಯೆ 9986588460, ಕರ್ನಾಟಕ ಗೃಹ ಮಂಡಳಿ ಕಲಬುರಗಿಯ ಕಾರ್ಯಪಾಲಕ ಇಂಜಿನೀಯರವರ ದೂರವಾಣಿ ಸಂಖ್ಯೆ 08472-254010, ಮೊಬೈಲ್ ಸಂ. 9448060225, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೊಬೈಲ್ ಸಂಖ್ಯೆ 9448378699, ಸಹಾಯಕ ಕಂದಾಯ ಅಧಿಕಾರಿಗಳ ಮೊಬೈಲ್ ಸಂ. 9902448004 ಗಳನ್ನು ಸಂಪರ್ಕಿಸಬಹುದಾಗಿದೆ.
ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ
****************************************************
ಕಲಬುರಗಿ,ನ.04,(ಕ.ವಾ)-ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ರಾಜ್ಯ ವಲಯದ ಈ ಕೆಳಕಂಡ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಯುವ ಚೈತನ್ಯ ಯೋಜನೆಯಡಿ ನೊಂದಾಯಿತ ಯುವಕ/ಯುವತಿಯರ ಸಂಘಗಳಿಗೆ ತಲಾ 40,000 ರೂ.ಗಳ ಮೊತ್ತದ ಕ್ರೀಡಾ ಸಾಮಗ್ರಿ ನೀಡಲಾಗುತ್ತಿದೆ. ಆಧಾರ ಕಾರ್ಡ್ ಹೊಂದಿರುವ ಹಾಗೂ ಒಂದು ಸಂಘದಲ್ಲಿ ಕನಿಷ್ಠ 25 ಸದಸ್ಯರಿರುವ ಸಂಘಗಳು ಅರ್ಜಿ ಸಲ್ಲಿಸಬಹುದಾಗಿದೆ.
“ಸಹಸ್ರ ಕ್ರೀಡಾಪಟು” ಯೋಜನೆಯಡಿ 19 ವರ್ಷದೊಳಗಿನ ಕಲಬುರಗಿ ಜಿಲ್ಲೆಯಿಂದ ಅಂತರರಾಷ್ಪ್ರ/ರಾಷ್ಪ್ರಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತರಿಗೆ ಹಾಗೂ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ ಇನ್ನು ಹೆಚ್ಚಿನ ಸಾಧನೆ ಮಾಡಲು ತಲಾ 1,00,000 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಎಸ್.ಎಸ್.ಎಲ್.ಸಿ ಉತ್ತೀರ್ಣ/ಅನುತ್ತೀರ್ಣ ಹೊಂದಿದ ಯುವಕ/ ಯುವತಿಯರಿಗಾಗಿ ಬೆಂಗಳೂರಿನಲ್ಲಿ “ಕೌಶಲ್ಯ, ಉದ್ಯೋಗ ಮತ್ತು ಸ್ವಯಂ ಉದ್ಯೋಗ” ಉಚಿತ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಅವಧಿಯಲ್ಲಿ ಒಂದು ವಾರದ ತರಬೇತಿ ನೀಡಲಾಗುವುದು. ಆಧಾರ ಕಾರ್ಡ್ ಹೊಂದಿದ ಯುವಜನರು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ನವೆಂಬರ್ 18 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-268637 ಮತ್ತು ಮೊಬೈಲ್ ಸಂಖ್ಯೆ 9535530173 ಗಳನ್ನು ಸಂಪರ್ಕಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ಶೌಚಾಲಯ ಕಟ್ಟಿಕೊಂಡ ಫಲಾನುಭವಿಗಳಿಗೆ ಪ್ರೋತ್ಸಾಹಧನ
ಕಲಬುರಗಿ,ನ.04,(ಕ.ವಾ)-ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಕುಟುಂಬಗಳಿಗೆ ಪ್ರೋತ್ಸಾಹಧನದ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇದುವರೆಗೆ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳದೇ ಇರುವ ಗ್ರಾಮೀಣ ಪ್ರದೇಶದ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಕಲಬುರಗಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತರನ್ನಾಗಿ ಮಾಡಲು ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
ಜೇವರ್ಗಿ: ಪೇಟ್ರೋಲ್ ಪಂಪ್‍ಗಳಲ್ಲಿ ಉಚಿತವಾಗಿ ಶೌಚಾಲಯ
******************************************************
ಬಳಸಿಕೊಳ್ಳಲು ಅವಕಾಶ
**********************
ಕಲಬುರಗಿ,ನ.04,(ಕ.ವಾ)-ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದಂತೆ ಜೇವರ್ಗಿ ಪಟ್ಟಣದ ವ್ಯಾಪ್ತಿಗೆ ಒಳಪಡುವ ಪೆಟ್ರೋಲ್ ಪಂಪ್‍ಗಳಲ್ಲಿ ಇರುವಂತಹ ಶೌಚಾಲಯವನ್ನು ಸಾರ್ವಜನಿಕರು ಉಚಿತವಾಗಿ ಬಳಸಿಕೊಂಡು ಪಟ್ಟಣದ ಸ್ವಚ್ಛತೆ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಉದ್ಯಮಶೀಲತಾ ತರಬೇತಿ ಕಾರ್ಯಾಗಾರ: ಹೆಸರು ನೋಂದಣಿಗೆ ನವೆಂಬರ್ 10 ಕೊನೆಯ ದಿನ
ಕಲಬುರಗಿ,ನ.04,(ಕ.ವಾ)-ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೂತನ ಜವಳಿ ನೀತಿ-2013-18 ಅಡಿಯಲ್ಲಿ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಉದ್ಯಮಶೀಲತಾ ತರಬೇತಿ ಕಾರ್ಯಾಗಾರವನ್ನು ನವೆಂಬರ್ 13ರಿಂದ 18ರವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 5.30 ಗಂಟೆಯವರೆಗೆ ಕಲಬುರಗಿಯ ಗುಲಬರ್ಗಾ ಉದ್ದಿಮೆ ವಸಾಹತು ಉತ್ಪಾದಕರ ಸಂಘದಲ್ಲಿ ಏರ್ಪಡಿಸಲಾಗಿದೆ ಎಂದು ಕಲಬುರಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸಣ್ಣ ಮಧ್ಯಮ ಮತ್ತು ಬೃಹತ್ ಜವಳಿ ಉದ್ದಿಮೆ ಸ್ಥಾಪಿಸಲು ಆಸಕ್ತಿಯುಳ್ಳ ಉದ್ದಿಮೆದಾರರು ಹಾಗೂ ಹಾಲಿ ಜವಳಿ ಉದ್ದಿಮೆ ಹಾಗೂ ಪೂರಕ ಉದ್ದಿಮೆಯಲ್ಲಿ ತೊಡಗಿರುವ ಉದ್ದಿಮೆದಾರರು, ಬಂಡವಾಳ ಹೂಡಿಕೆದಾರರು, ಜವಳಿ ಉದ್ದಿಮೆಯಲ್ಲಿ ಅನುಭವ ಹೊಂದಿರುವವರು ಫಲಾನುಭವಿಗಳು ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತಿಯುಳ್ಳ ಶಿಬಿರಾರ್ಥಿಗಳು ನವೆಂಬರ್ 10ರೊಳಗಾಗಿ ಕಲಬುರಗಿ ಜೇವರ್ಗಿ ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಕಟ್ಟಡದಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-278629ನ್ನು ಸಂಪರ್ಕಿಸಲು ಕೋರಲಾಗಿದೆ.
ನವೆಂಬರ್ 7ರಿಂದ ಮಾನಸಿಕ ರೋಗಿಗಳ ತಪಾಸಣಾ ಶಿಬಿರ
****************************************************
ಕಲಬುರಗಿ,ನ.04(ಕ.ವಾ): ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಿಂದ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ ಆಸ್ಪತ್ರೆಗಳಲ್ಲಿ ಮಾನಸಿಕ ರೋಗಿಗಳ ತಪಾಸಣಾ ಶಿಬಿರವನ್ನು ಕೆಳಕಂಡ ವಾರ ಮತ್ತು ದಿನಾಂಕಗಳಂದು ನಡೆಸಲಾಗುವುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕು ಆಸ್ಪತ್ರೆÉ ಜರುಗುವ ಶಿಬಿರದ ದಿನಾಂಕ, ವಾರ ಹಾಗೂ ಪಾಲ್ಗೊಳ್ಳುವ ತಜ್ಞ ಮನೋವೈದ್ಯರುಗಳ ವಿವರ ಇಂತಿದೆ.
ಮೊದಲನೇ ಮಂಗಳವಾರ: ನವೆಂಬರ್ 07ರಂದು ಆಳಂದÀ ತಾಲೂಕು ಆಸ್ಪತ್ರೆ-ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮನೋವೈದ್ಯ ಡಾ|| ಚಂದ್ರಶೇಖರ ಹೂಡೇದ್. ಎರಡನೇ ಶುಕ್ರವಾರ : ನವೆಂಬರ್ 10ರಂದು ಅಫಜಲಪೂರ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ. ವಿಜಯೇಂದ್ರ ಎಂ.ಡಿ ಎರಡನೇ ಮಂಗಳವಾರ: ನವೆಂಬರ್ 14ರಂದು ಚಿಂಚೋಳಿ ತಾಲೂಕು ಆಸ್ಪತ್ರೆ-ಕಲಬುರಗಿ ಜಿಲ್ಲಾ ಆಸ್ಪತ್ರೆಯ ಮನೋವೃದ್ಯ ಡಾ. ವಿಜಯೇಂದ್ರ. ಮೂರನೇ ಶುಕ್ರವಾರ: ನವೆಂಬರ್ 17ರಂದು ಜೇವರ್ಗಿ ತಾಲೂಕು ಆಸ್ಪತ್ರೆ- ಕೆ.ಬಿ.ಎನ್ ಆಸ್ಪತ್ರೆಯ ಮನೋವೃದ್ಯ ಡಾ|| ಅಮೋಲ ಪತಂಗೆ ಮೂರನೇ ಮಂಗಳವಾರ: ನವೆಂಬರ್ 21ರಂದು ಚಿತ್ತಾಪೂರ ತಾಲೂಕು ಆಸ್ಪತ್ರೆ-ಕಲಬುರಗಿ ಮನೋವೈದ್ಯರು ಡಾ. ಮಹ್ಮದ್ ಇರ್ಫಾನ್ ನಾಲ್ಕನೇ ಮಂಗಳವಾರ: ನವೆಂಬರ್ 28ರಂದು ಸೇಡಂ ತಾಲೂಕು ಆಸ್ಪತ್ರೆ-ಸರ್ಕಾರಿ ಮನೋವೈದ್ಯರು ಭೇಟಿ ನೀಡುವರು.
ಮೇಲ್ಕಂಡ ದಿನಾಂಕಗಳಂದು ಮನೋವೈದ್ಯರು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಬಹಳ ಮಂಕಾಗಿರುವ, ಯಾರ ಜೊತೆಗೂ ಸೇರದಿರುವ, ಬೇರೆಯವರಿಗೆ ಕಾಣಿಸದ ದೃಶ್ಯ ತಮಗೆ ಕಾಣಿಸುತ್ತದೆ ಹಾಗೂ ಕೇಳಿಸದ ಧ್ವನಿ ತನಗೆ ಕೇಳಿಸುತ್ತದೆ ಎನ್ನುವ, ಎಲ್ಲರ ಬಗ್ಗೆ ಸಂಶಯ ಪಡುವ, ಆತ್ಮಹತ್ಯೆ ಬಗ್ಗೆ ಆಲೋಚಿಸುವ, ಮೂರ್ಛೆರೋಗ, ಬುದ್ಧಿಮಾಂದ್ಯರು ಮುಂತಾದ ಮಾನಸಿಕ ತೊಂದರೆ ಅಥವಾ ಮಾನಸಿಕ ರೋಗದಿಂದ ಬಳಲುತ್ತಿರುವವರು ಸದರಿ ದಿನದಂದು ಮನೋವೈದ್ಯರ ಹತ್ತಿರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನವೆಂಬರ್ 7ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
***********************************************
ಕಲಬುರಗಿ,ನ.04,(ಕ.ವಾ)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಕಲಬುರಗಿ ಕಾರ್ಯ ಮತ್ತು ಪಾಲನೆ ನಗರ ವಿಭಾಗದಿಂದ 11ಕೆ.ವಿ. ಸಪ್ನಾ ಬೇಕರಿ ಮತ್ತು 11ಕೆ.ವಿ. ಆಳಂದ ಕಾಲೋನಿ ಫೀಡರಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ, 11ಕೆ.ವಿ. ಸಿದ್ದೇಶ್ವರ ಫೀಡರ ವ್ಯಾಪ್ತಿಯಲ್ಲಿ ಭೂಗತ ಮಾರ್ಗವನ್ನು ವಿದ್ಯುತ್ತೀಕರಣಗೊಳಿಸುವ ಕಾರ್ಯಕೈಗೊಳ್ಳುವ ಪ್ರಯುಕ್ತ ಹಾಗೂ 11ಕೆ.ವಿ. ಶಾಂತಿನಗರ ಹಾಗೂ 11ಕೆ.ವಿ. ಗೋದುತಾಯಿ ಫೀಡರುಗಳ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಳ್ಳುವ ಪ್ರಯುಕ್ತ ನವೆಂಬರ್ 7ರಂದು ಮಂಗಳವಾರದಂದು ಕೆಳಕಂಡ ಸಮಯಗಳಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
11 ಕೆ.ವಿ ಸಪ್ನಾ ಬೇಕರಿ ಫೀಡರ್: ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಜಂ ಕಾಲೋನಿ, ಸಿಟಿ ಸ್ಕೂಲ್ ಏರಿಯಾ, ತಬೇಲಾ, ಮಡ್ ಏರಿಯಾ, ಸೋನಿಯಾ ಗಾಂಧಿ ಕಾಲೋನಿ, ಅಮಾನ್ ನಗರ, ಇತಿಹಾದ್ ಕಾಲೋನಿ, ರೆಹಮತ್ ನಗರ , ಗುಲ್ಶನ್ ಅರಾಫತ್ ಕಾಲೋನಿ, ಅಬುಬಕರ ಕಾಲೋನಿ, ಸಹಾರಾ ಸ್ಕೂಲ್ ಕಾಲೋನಿ, ಗರಿಬ್ ನವಾಜ್ ಕಾಲೋನಿ, ನವಾಬ ಮೊಹಲ್ಲಾ, ಎಂ.ಕೆ. ನಗರ, ಆರೀಫಖಾನ್ ಲೇಔಟ್, ಸುಗಂಧಿ ಲೇಔಟ್, ಹಾಗರಗಾ ಕ್ರಾಸ್ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಆಳಂದ ಕಾಲೋನಿ ಫೀಡರ್: ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಚಿಂಚೋಳಿ ಲೇಔಟ್, ಚೋರ್ ಬಜಾರ್, ಫಿಲ್ಟರ್ ಬೆಡ್, ಚೆಕ್ ಪೋಸ್À್ಟ, ಶಿವಾದಾಲ್ ಮಿಲ್, ರಾಮತೀರ್ಥ, ರಾಣೇಶಪೀರ್ ದರ್ಗಾ, ವಿಶ್ವರಾಥ್ಯ ಮಂದಿರ, ಸಿದ್ದರಾಮೇಶ್ವರ ನಗರ, ಆಯೋಧ್ಯಾ ನಗರ, ಲಕ್ಷ್ಮೀ ನಗರ, ಎಂ.ಜಿ.ಟಿ.ಟಿ. ಆಶ್ರಯ ಕಾಲೋನಿ, ದುಬೈ ಕಾಲೋನಿ, ಅಹ್ಮದ್ ನಗರ ಪಿ.ಎಫ್. ಕಚೇರಿ, ಆಳಂದ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕಸ್ತೂರಿ ನಗರ, ಖಾದ್ರಿ ಚೌಕ್, ಸ್ವರ್ಗೇಶ ನಗರ, ಕಡಗಂಚಿ ಮಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11ಕೆ.ವಿ ಸಿದ್ದೇಶ್ವರ ಫೀಡರ್: ಅಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂತ್ರಾಸವಾಡಿ ಜಿ.ಡಿ.ಎ. ಲೇಔಟ್, ದರ್ಶನಾಪೂರ ಲೇಔಟ್, ಲುಕಮಾನ್ ಕಾಲೇಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ. ಶಾಂತಿ ನಗರ ಫೀಡರ್: ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಎಂ.ಎಸ್.ಕೆ. ಮಿಲ್ ಗೇಟ್, ಅಶೋಕನಗರ, ಶಾಂತಿನಗರ, ವಿದ್ಯಾನಗರ, ಕೆ.ಹೆಚ್.ಬಿ. ಕಾಂಪ್ಲೆಕ್ಸ್, ಪೊಲೀಸ್ ಕ್ವಾರ್ಟರ್ಸ್, ಕೆ.ಎಸ್.ಆರ್.ಟಿ.ಸಿ.ಕ್ವಾರ್ಟರ್ಸ್, ಬೋರಾಬಾಯಿ ನಗರ, ಬಸವ ನಗರ, ಹೀರಾ ನಗರ, ಹೀರಾಪೂರ, ಭೀಮನಗರ, ಮಿಸಬಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
11 ಕೆ.ವಿ ಗೋದುತಾಯಿ ಫೀಡರ್: ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಿ.ಐ.ಬಿ. ಕಾಲೋನಿ, ಶಕ್ತಿ ನಗರ, ಭಾಗ್ಯವಂತಿ ನಗರ, ಜಿ.ಡಿ.ಎ. ಲೇಔಟ್, ಘಾಟಗೆ ಲೇಔಟ್, ಧರಿಯಾಪೂರ, ರೆಹಮತ್ ನಗರ, ಪಿ.ಡಬ್ಲ್ಯೂಡಿ. ಕ್ವಾರ್ಟರ್ಸ್, ಎನ್.ಜಿ.ಓ. ಕಾಲೋನಿ (ರೈಲ್ವೆ ಟ್ರಾಕ್), ದತ್ತ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.


ಹೀಗಾಗಿ ಲೇಖನಗಳು News and Photo Date: 04--11--2017

ಎಲ್ಲಾ ಲೇಖನಗಳು ಆಗಿದೆ News and Photo Date: 04--11--2017 ಈ ಸಮಯ, ಆಶಾದಾಯಕವಾಗಿ ನೀವು ಎಲ್ಲಾ ಲಾಭಗಳನ್ನು ಒದಗಿಸಬಹುದು. ಸರಿ, ಇನ್ನೊಂದು ಲೇಖನ ಪೋಸ್ಟ್ ನಿಮ್ಮನ್ನು ನೋಡಲು.

ನೀವು ಈಗ ಲೇಖನ ಓದುತ್ತಿದ್ದಲ್ಲಿ News and Photo Date: 04--11--2017 ಲಿಂಕ್ ವಿಳಾಸ https://dekalungi.blogspot.com/2017/11/news-and-photo-date-04-11-2017.html

Subscribe to receive free email updates:

0 Response to "News and Photo Date: 04--11--2017"

ಕಾಮೆಂಟ್‌‌ ಪೋಸ್ಟ್‌ ಮಾಡಿ